ನವದೆಹಲಿ : ದೇಶಾದ್ಯಂತ ನೀಲಿ ಚಿತ್ರಗಳನ್ನು (Pornography) ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ತಕ್ಷಣ ಪರಿಗಣಿಸಲು ಸುಪ್ರೀಂ ಕೋರ್ಟ್ (Supreme court), ನಿರಾಕರಿಸಿದೆ.ಈ ವಿಷಯದಲ್ಲಿ ನಾವು ಈಗ ಮಧ್ಯಪ್ರವೇಶಿಸಲು ನಮಗೆ ಆಸಕ್ತಿಯಿಲ್ಲ ಎಂದು ನ್ಯಾಯಾಲಯ ಹೇಳಿದೆ. ಇದೇ ವೇಳೆ ನೇಪಾಳದಲ್ಲಿ (Nepal) ನಡೆದ Gen Z ಪ್ರತಿಭಟನೆಯನ್ನು ನೆನಪಿಸಿದೆ.ನೇಪಾಳದಲ್ಲಿ ನಿಷೇಧದ ಪರಿಣಾಮ ಏನಾಯಿತು ನೋಡಿ ಎಂಬ ಹೇಳಿಕೆಯನ್ನು ನ್ಯಾಯಪೀಠ ಉಲ್ಲೇಖಿಸಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಭುಗಿಲೆದ್ದ ಹಿಂಸಾತ್ಮಕ ಪ್ರತಿಭಟನೆಗಳು ಅಂದಿನ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರ ಸರ್ಕಾರವನ್ನು ಪದಚ್ಯುತಗೊಳಿಸಿದ ಬೃಹತ್ ಸರ್ಕಾರಿ ವಿರೋಧಿ ಪ್ರತಿಭಟನೆಗಳಿಗೆ ಕಾರಣವಾಯಿತು ಎಂದು ನ್ಯಾಯಪೀಠ ಹೇಳಿದೆ.ನಾಲ್ಕು ವಾರಗಳ ನಂತರ ಈ ವಿಷಯವನ್ನು ಮತ್ತೆ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೀಠ ತಿಳಿಸಿದೆ. ರಾಷ್ಟ್ರೀಯ ನೀತಿಯನ್ನು ರೂಪಿಸಲು ಮತ್ತು ಅಶ್ಲೀಲ ವಿಚಾರಗಳು ಅಪ್ರಾಪ್ತ ವಯಸ್ಕರನ್ನು ಸುಲಭವಾಗಿ ತಲುಪುವುದನ್ನು ತಡೆಯಲು ಕ್ರಿಯಾ ಯೋಜನೆಯನ್ನು ರಚಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ನ್ಯಾಯಾಲಯವನ್ನು ಒತ್ತಾಯಿಸಲಾಗಿತ್ತು.
