Home ಜನ-ಗಣ-ಮನ ಯುವ ನೋಟ ದಿ ಅನ್ ಟ್ಯಾಪ್ಡ್ ರಿಸರ್ವಾಯರ್ಸ್

ದಿ ಅನ್ ಟ್ಯಾಪ್ಡ್ ರಿಸರ್ವಾಯರ್ಸ್

0

ಅವಳ ಜೀವನದಲ್ಲಿ ಅದೊಂದು ದಿನ ಬರುತ್ತದೆ ಅಂತ ಯೋಚಿಸಿಯೂ ಇರಲಿಲ್ಲ! ಒಂದಿನ ಅವನಿಗೆ ಅದೇನನ್ನಿಸಿತ್ತೋ, ಬೆಳಕರಿಯುವ ಹೊತ್ತಿಗೆ ಮನೆ ಬಿಟ್ಟು ಹೊರ ನಡೆದಿದ್ದ…ಮುಂದೆ ಓದಿ-ಕಾವ್ಯಶ್ರೀಯವರ ಟೆಕ್ಕಿ ಡೈರೀಸ್ ನ ನಾಲ್ಕನೇ ಕಂತು.

Man is defined as a human being and a woman as a female — whenever she behaves as a human being she is said to imitate the male.

Simone de Beauvoir

1. ನೀವು ನಿಮ್ಮ ಸಹೋದ್ಯೋಗಿಯ preferred name ಮತ್ತು pronoun ತಿಳಿಯದೆ ಇದ್ದರೆ ಕೇಳಿ ತಿಳಿದುಕೊಳ್ಳಿ – ಒಂದು ವೇಳೆ ನೀವು ತಪ್ಪಾಗಿ ಸಂಬೋಧಿಸಿದಲ್ಲಿ, ಕ್ಷಮೆಯಾಚಿಸಿ, ಮುಂದುವರಿಯಿರಿ ಮತ್ತು ಮುಂದಿನ ಬಾರಿ ಅದನ್ನು ಪುನರಾವರ್ತಿಸಿದೇ ಪ್ರಜ್ಞಾಪೂರ್ವಕವಾಗಿ ನಡೆದುಕೊಳ್ಳಿ.

2. ಅವರ gender identity ಬಗ್ಗೆ ಮುಂಚಿತವಾಗಿ ತೀರ್ಮಾನಕ್ಕೆ ಹೋಗಬೇಡಿ.

3. ಬಣ್ಣ, ಬಟ್ಟೆ, ಮಾತು ಮುಂತಾದವುಗಳ ಬಗ್ಗೆ ಎಚ್ಚರವಿರಲಿ.

ಮುಖ್ಯವಾಗಿ marginalise ಮಾಡುವಂತಹ slang ಗಳ ಬಳಕೆ ಸಲ್ಲದು.

ಹೀಗೆ….

ಹೌದಲಾ ನಮ್ಮನ್ನ ಹೇಗೆ identify ಮಾಡ್ಬೇಕು ಹೇಗೆ ಕರೀಬೇಕು ಅನ್ನುವ ತೀರ್ಮಾನ ನಮ್ಮದು..

ಇವನ್ನೆಲ್ಲಾ ನಾವು ಓದಿ, ಟ್ರೈನಿಂಗ್ ತಗೊಂಡು ಕಲೀಬೇಕಾ, ಅಷ್ಟರ ಮಟ್ಟಿಗೆ ನಾವು ಹಿಂದುಳಿದಿದ್ದೀವ??

ತಾನ್ಯಾ ಹಾಗೂ ಡೆರಿಕ್ ರು ಬಂದಿಳಿದಿದ್ದರು.

ತಾನ್ಯಾ ರ ಜೊತೆ ಮಾತಾಡುವಾಗ ಕೇಳಿದ್ದೆ how do you prefer me to address you ಅಂತ.

ಅವರು they them ಅಂತ ಹೇಳಿದ್ದರು.

ಅವರ ಜೊತೆ ಮಾತಾಡುವಾಗ ಅವ್ರ confidence ಗಮನ ಸೆಳೆದಿತ್ತು.

ನಮ್ಮ ಸಿನಿಮಾ ಗಳಲ್ಲಿ ತೋರಿಸುವಂತಹ ಯಾವುದೇ manarism ಕಾಣಲಿಲ್ಲ.

ಇದೇ ತೆರನಾದ ಹಲವು eye opener ಗಳು..

“ಮಗಾ ಅವ್ಳು ಅದಂತೆ ಕಣೋ! ಗೊತ್ತೇ ಆಗಲ್ಲ ನೋಡು!!”

ಕೆಫೆಟೇರಿಯಾದಲ್ಲಿ ಕಿವಿಗೆ ಬಿದ್ದ ಮಾತುಗಳು.

ಇವು ನೆಟ್ಟುಗಾಗಕ್ಕೆ ಇನ್ನ ಯಾವ್ ಕಾಲ ಬೇಕೋ! 

ಡೆರಿಕ್ ರ ಮುಂದೆ ಸಣ್ಣದಾಗಿ ಪಿಸುಗುಡುವಂತಿರಲಿಲ್ಲ. ಒಬ್ಬರಿಗೊಬ್ಬರು ಮುಖ ನೋಡಿ ಸನ್ನೆಯಲ್ಲಿ ಮಾತಾನಾಡಿಕೊಳ್ಳುವಂತಿರಲಿಲ್ಲ, ಕಿವಿಯಲ್ಲಿ ಮಾತಾಡ್ಕೊಳೋ ಹಾಗಿರಲಿಲ್ಲ, ಹೀಗೆ ಹತ್ತು ಹಲವು ವಿಷಯಗಳು.

ಹೀಗೆ ಯೋಚಿಸುತ್ತಲೇ, ಧ್ವನಿ ನೆನಪಾದಳು. ಅಬ್ಬಾ ಕಾಲಗಳಿಂದಲು ನಾವು ಗಳು race, caste, class, gender ಗಳ ಹೆಸರಲ್ಲಿ ಅದೆಷ್ಟು marginalize ಮಾಡಿದ್ದೇವೆ ಅಂತ ಅಂದ್ರೆ ಅವ್ರಿಗೆ ಎಲ್ಲರಂತೆ ಬೆರೆಯಲು ಕಷ್ಟ ಪಡುವಷ್ಟು, ಅದೆಷ್ಟು ಸೆನ್ಸಿಟಿವ್ ಗಳಾಗಿ ಮಾಡಿದ್ದೇವೆ…

ಆಗಲೇ ಮೊಬೈಲಿಗೆ ಕರೆ ಬಂದಿತ್ತು ಅದು ನೇಹಾಳ ಬಾಯ್ ಫ್ರೆಂಡ್ ಶ್ರೀಮಾನ್ ನದ್ದಾಗಿತ್ತು.

ನೇಹಾ gym ನಲ್ಲಿ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಳು. 

ನಾನು ಆಕಾಂಕ್ಷ ಇಬ್ಬರೂ ಆಸ್ಪತ್ರೆಗೆ ಓಡಿದ್ದೆವು. ಧ್ವನಿ ಅದಾಗಲೇ ಅಲ್ಲಿ ಬಂದಿದ್ದಳು.

ನೇಹಾ ಗೋಡೆಯ ಕಡೆ ಶೂನ್ಯ ನೋಟ ಬೀರುತ್ತಾ ಕೂತಿದ್ದಳು. 

“ನೇಹಾ? ಹೇಗಾಯ್ತು?” ಕೇಳಿದೆ…

“Ligament tear ಆಗಿದೆ ಹಿತಾ ಸ್ಲಿಪ್ ಆದೆ”, ದೃಷ್ಟಿ ಗೋಡೆಯಿಂದ ಆಚೆ ತೆಗೆಯಲಿಲ್ಲ.

“ಏನಾಗಲ್ಲ ಹುಷಾರಾಗ್ತಿಯ ಬೇಗ”, ಆಕಾಂಕ್ಷ ಹೆಗಲು ಮುಟ್ಟಿದಳು 

“I don’t have much time ಆಕಾಂಕ್ಷ! Competition ಗೆ ಇನ್ನ ಎರಡೇ ತಿಂಗಳು ಬಾಕಿ ಇರೋದು”

“ನೋಡಿ ಹಿತಾ, ಆಗ್ಲಿಂದ ನಾನು ಧ್ವನಿ ಇಬ್ರೂ ಹೇಳ್ತಾ ಇದೀವಿ ಅಷ್ಟು ಹೊತ್ತಿಗೆ ಸರಿ ಹೋಗ್ತೀಯ ಇಲ್ಲ ಅಂದ್ರೆ it’s ok next year try ಮಾಡುವಿಯಂತೆ ಅಂತ ಹೇಳಿದ್ರೆ ಕೇಳ್ತಾ ಇಲ್ಲ ಒಂದೇ ಸಮ ಅಳ್ತಾ ಇದಾಳೆ ” ಶ್ರೀಮಾನ್ ನ ದೂರು.

“ನೇಹಾ you have ample amount of time, what are you trying to prove by hurting yourself?” ಎಂದೆ 

” I want to prove to the male world ” ಶ್ರೀಮಾನ್ ನತ್ತ ತೀಕ್ಷ್ಣ ನೋಟ ಬೀರಿ ಹೇಳಿದ್ದಳು ನೇಹಾ

“Prove what?” ಆಕಾಂಕ್ಷ ಅಸಹನೆಯಿಂದ ಕೇಳಿದ್ದಳು.

“ಹೆಣ್ಣು ಸಾಧನೆಗೆ ಅಡ್ಡಿ ಅಲ್ಲ ಅಂತ”

“ಅಡ್ಡಿ ಅಂದವರು ಯಾರು ಈಗ?” ಧ್ವನಿ ಡಿಮ್ಯಾಂಡ್ ಕಡಿಮೆಯಾಗಲಿಲ್ಲ.

“ಹೆಣ್ಣು ಅಂದ್ರೆ, disturbance, ಮಾಯೆ, ಸಾಧನೆಗೆ ಅಡ್ಡಿ ಅನ್ನೋ ಈ ಜಗತ್ತು”

ನೇಹಾಳದ್ದು ಒಂದು ವಿಚಿತ್ರ ಕತೆ.

ತಂದೆ ಸೇನೆಯಲ್ಲಿದ್ದ ಕಾರಣ ಇವಳು ಹಲವಾರು ರಾಜ್ಯಗಳಲ್ಲಿ ಬೆಳೆಯ ಬೇಕಾಯಿತು. 

ಕಡೆಗೆ Engineering ಮಾಡಲು ಬಂದಿದ್ದು ಮಂಗಳೂರಿಗೆ. 

ನಂತರ ಅಪ್ಪನ ಸಹೋದ್ಯೋಗಿಯ ಮಗನನ್ನ ಪ್ರೀತಿಸಿ ಮದುವೆಯಾಗಿದ್ದಳು.

ಏಳು ವರ್ಷಗಳ ಕಾಲ ಅವಳಿಗೆ ಯಾವುದಕ್ಕೂ ಕೊರತೆಯಿರಲಿಲ್ಲ. ಆರು ಮತ್ತು ನಾಲ್ಕು ವರ್ಷಗಳ ಇಬ್ಬರು ಹೆಣ್ಣು ಮಕ್ಕಳು. ನೋಡಿದ್ರೆ ಯಾರಿಗೂ ಅವಳು ಎರಡು ಮಕ್ಕಳ ತಾಯಿ ಅಂತ ಅನಿಸುವುದೇ ಇಲ್ಲ.

ಹೀಗಿದ್ದ ಅವಳ ಜೀವನದಲ್ಲಿ ಅದೊಂದು ದಿನ ಬರುತ್ತದೆ ಅಂತ ಯೋಚಿಸಿಯೂ ಇರಲಿಲ್ಲ!

ಮೊದಲಿಗೆ ಅವಳಿಗೆ ಕಾದಿದ್ದ ಶಾಕ್ ಎಂದರೆ ಅವಳ ಗಂಡ bi sexual ಎಂಬುದಾಗಿತ್ತು.

ಅದರಲ್ಲಿ ಶಾಕಿಂಗ್ ಏನೂ ಇರಲಿಲ್ಲ. ಆದ್ರೆ ಆಗಸ್ಟೇ postnatal ನಲ್ಲಿದ್ದ ನೇಹಾಳಿಗೆ ಇದು ನುಂಗಲಾರದ ತುತ್ತಾಗಿತ್ತು. ಈ discovery ಹೊಸದಾಗಿದ್ದಲ್ಲ, ವರ್ಷಗಳ ಕಾಲ ಇದನ್ನ ನೇಹಾಳಿಂದ ಮುಚ್ಚಿಟ್ಟಿದ್ದ. ಬೆನ್ನ ಹಿಂದೆ ನಡೆಯುತ್ತಿದ್ದ ವಿಷಯ ಅದೊಂದು ದಿನ ಅವಳ ಕಿವಿಗೆ ಬಿದ್ದಾಗ ಸಹಜವಾಗಿ ಶಾಕ್ ಗೆ ಒಳಗಾಗಿದ್ದಳು. ಅದನ್ನ digest ಮಾಡಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡಿದ್ದಳು. ಎರಡು ದಿನಗಳ ಕಾಲ ಮೌನದ ಮೊರೆ ಹೋಗಿದ್ದಳಷ್ಟೆ.

ಅವನನ್ನ ದೂರ ಅಂತೂ ಮಾಡಿರಲಿಲ್ಲ. ಅಲ್ಲಿ ಇದ್ದದ್ದು ಇವನ non – transparency ಯ ಬಗೆಗಿನ ಅಸಮಾಧಾನವಷ್ಟೇ. ಆದ್ರೆ ಅವನಿಗೆ ಅದೇನನ್ನಿಸಿತ್ತೋ, ಬೆಳಕರಿಯುವ ಹೊತ್ತಿಗೆ ಮನೆ ಬಿಟ್ಟು ಹೊರ ನಡೆದಿದ್ದ. ಅವಳು ಎದ್ದು ಹಾಲಿಗೆ ಬಂದಾಗ ಟೇಬಲ್ ನ ಮೇಲೆ ಅವನ ಪತ್ರವೊಂದು ಕಾದಿತ್ತು. ಜೀವನದ ಬಗ್ಗೆ ವಿರಕ್ತಿ ಹೊಂದಿ ಎಲ್ಲವನ್ನೂ ತ್ಯಜಿಸಿ ಸನ್ಯಾಸಿಯಾಗಲು ಹೋಗಿದ್ದಾನಂತೆ….

“ಹೇಡಿ ಜೊತೆಗಿದ್ದು ಬದುಕುವ ಯೋಗ್ಯತೆ ಇಲ್ಲದವ” ಎಂದಿದ್ದಳು.

ಮನೆಯವರೆಲ್ಲ ನಾಲ್ಕಾರು ತಿಂಗಳು ಹುಡುಕಿದ ಮೇಲೆ ಕೊನೆಗೆ ಅವನು ಪ್ರಯಾಗದಲ್ಲಿ ಸಿಕ್ಕಿದ್ದ. ಮಕ್ಕಳ ಮುಖ ನೋಡಿಯಾದರೂ ತಿರುಗಿ ಬಾ ಎಂದು ಕೇಳಿದ್ದೆ ಬಂತು. ಅವನು ಇವರ ಮುಖವನ್ನೂ ನೋಡದೆ ಹೋಗಿದ್ದ. ಆಗಿನ್ನೂ ಎರಡನೇ ಮಗಳಿಗೆ ಒಂದು ವರ್ಷ. ಅಪ್ಪ ಅಮ್ಮ ಬಂದು ಇವಳನ್ನ ತಮ್ಮೊಡನೆ ದೆಹಲಿಗೆ ಕರೆದರು. ಇವಳು ಹೋಗಲಿಲ್ಲ. ಕಡೆಗೆ ಎಲ್ಲರೂ ಕೇಳಿದ್ದ ಮೇಲೆ ಮಕ್ಕಳಿಬ್ಬರನ್ನ ಕಳಿಸಿದ್ದಳು. 

ಹೆಚ್ಚು ಕಡಿಮೆ ಹತ್ತು ವರ್ಷಗಳ career break! ಆಗ ಇವಳಿಗೆ ನೆರವಿಗೆ ಬಂದಿದ್ದೇ classical dance. ಕಥಕ್ ನರ್ತಕಿಯಾಗಿದ್ದ ನೇಹಾ online ಕ್ಲಾಸ್ ಮೂಲಕ ಕಥಕ್ ನೃತ್ಯ ಹೇಳಿಕೊಡಲು ಶುರು ಮಾಡಿದ್ದಳು. ಅಲ್ಲಿಂದ ಹಾಗೆ zumba, ಮತ್ತೆ ಫಿಟ್ನೆಸ್ ಟ್ರೈನಿಂಗ್.  ಆಗ ಪರಿಚಯವಾಗಿದ್ದೇ HR manager ಆರತಿ. ಆರತಿಯ ಸಹಕಾರದಿಂದ ನೇಹಾ ಮತ್ತೆ ಕಾರ್ಪೊರೇಟ್ ಉದ್ಯೋಗಿಯಾದಳು.

ಈಗೆಲ್ಲಾ ಕಂಪನಿ ಗಳಲ್ಲಿ returning women ಅಂದರೆ ಕೆರಿಯರ್ ಬ್ರೇಕ್ ತಗೊಂಡು ಮತ್ತೆ ಉದ್ಯೋಗ ಮಾಡಲು ಇಚ್ಛಿಸುವ ಹೆಣ್ಣು ಮಕ್ಕಳಿಗೆ ವಾಪಾಸಿ, re kindle, ವಾಹಿನಿ ಮುಂತಾದ ಪ್ರೋಗ್ರಾಂ ಗಳ ಮೂಲಕ ಟ್ರೈನಿಂಗ್ ಕೊಟ್ಟು recruit ಮಾಡ್ಕೊಳ್ಳುವ campaign. ಇದರಿಂದ ಇತ್ತೀಚೆಗೆ ಬಹಳಷ್ಟು ಹೆಣ್ಣು ಮಕ್ಕಳಿಗೆ ತಮ್ಮ career ನ್ನ re-start ಮಾಡಿಕೊಳ್ಳಲು ಅವಕಾಶ ಸಿಕ್ಕಿದೆ.

ಆದರೂ ಅವಳದ್ದು ಹಠ. ಹಾಗಾಗಿಯೇ body building ಶುರು ಮಾಡಿದ್ದು. ಈಗಾಗಲೇ “ಮಿಸ್ ಕರ್ನಾಟಕ in body building” ಆಗಿದ್ದ ನೇಹಾಳಿಗೆ ಮುಂದಿನ “ಮಿಸ್ ಸೌತ್ ಇಂಡಿಯಾ body building” ಸ್ಪರ್ಧೆಗೆ ನೇರ ಅವಕಾಶ ಸಿಕ್ಕಿತ್ತು. 

—-

ನೇಹಾಳನ್ನ ಡಿಸ್ಚಾರ್ಜ್ ಮಾಡಿಸಿಕೊಂಡು ಫ್ಲಾಟ್ ಗೆ ಶಿಫ್ಟ್ ಆದೆವು. ಧ್ವನಿ ನೇಹಳಿಗೆ ನೆರವಾಗಲು ಅವಳ ಫ್ಲ್ಯಾಟ್ ಗೆ ಕೆಲ ದಿನಗಳ ಮಟ್ಟಿಗೆ move in ಆದಳು. ಅಕ್ಕ ಪಕ್ಕದ ಫ್ಲಾಟೇ  ಆಗಿದ್ದ ಕಾರಣ ನಾನೂ ಸಹ ಅಲ್ಲಿಯೇ ಇರುತ್ತಿದ್ದೆ.

ಅವತ್ತು ರಾತ್ರಿ ಎಲ್ಲರೂ ಮಾತಾಡ್ತಾ ಇದ್ದಾಗ ವಿರಕ್ತಿ, ಸನ್ಯಾಸ ಇವುಗಳ ವಿಷಯ ಪ್ರಸ್ತಾಪ ವಾಯಿತು.

ಓಶೋ ನ ಈ ಮಾತು ನೆನಪಾಯಿತು

“I define sannyas as living in freedom without bondage, living in freedom from every commandment, from every discipline, from every morality, from every religion.”

Freedom from bondage ಎಂದರೆ ಹೆಂಡ್ತಿ ಮಕ್ಕಳನ್ನ ಬಿಟ್ ಹೋಗು ಅಂತ ಅರ್ಥೈಸಿದವರು ಯಾರೋ? 

Although,  “freedom of bondage” is something where we stop expecting things from the universe and start giving back. However in reality, it’s not easy.

ಧರ್ಮ ಗ್ರಂಥ ಗಳಲ್ಲಿ ಒಂದೋ ಹೆಣ್ಣನ್ನ ದೇವಿ ಶಕ್ತಿ ಅಂತ ಮೆರೆಸ್ತಾರೆ ಇಲ್ಲಾ ಮಾಯೆ, ಚಂಚಲೆ ಅಂತ ತೋರಿಸ್ತಾರೆ.

ಹುಹ್ ಹೆಣ್ಣೆಂದರೆ ವ್ಯಂಜನವಷ್ಟೆ…. 

ವಿಶ್ವಾಮಿತ್ರನಿಗೊಬ್ಬ ಮೇನಕೆಯಂತೆ, 

ಆಡಮ್ ನಿಗೊಬ್ಬ ಈವ್ ಳಂತೆ…!!

ಹಾಗೆ ನೋಡಿದರೆ ಅನುಭವ ಮಂಟಪ ಅಂದಿಗೆ ಸ್ತ್ರೀ ಸಮಾನತೆ ಪ್ರತಿಪಾದಿಸಿದ್ದು.

ಒಮ್ಮೆ ಬಸವಣ್ಣನೂ ಸ್ತ್ರೀವಾದದ ಬಗ್ಗೆ ಪೂರ್ವಗ್ರಹ ಹೊಂದಿ, ಹೆಣ್ಣು ಮಾಯೆಯೆಂದರು.

ಆದರವರು ಹೆಣ್ಣನ್ನು ನಿಂದಿಸಲು ಮಾಯೆ ಎಂದು ಕರೆಯಲಿಲ್ಲ. ಸೃಷ್ಟಿ ಮತ್ತು ಆಸೆಯ ಮನದ ಮೂಲವಾಗಿ ಹೆಣ್ಣನ್ನು ಮಾಯೆಗೆ ಹೋಲಿಸಿದರು.

ಅಲ್ಲಮರು ಅದನ್ನು ಖಂಡಿಸಿ

“ಹೊನ್ನು ಮಾಯೆ ಎಂಬರು

ಹೊನ್ನು ಮಾಯೆಯಲ್ಲ. 

ಹೆಣ್ಣು ಮಾಯೆ ಎಂಬರು

ಹೆಣ್ಣು ಮಾಯೆಯಲ್ಲ. 

ಮಣ್ಣು ಮಾಯೆ ಎಂಬರು

ಮಣ್ಣು ಮಾಯೆಯಲ್ಲ. 

ಮನದ ಮುಂದಣ ಆಸೆಯೇ 

ಮಾಯೆ ಕಾಣಾ ಗುಹೇಶ್ವರ.”

ಎಂದಿದ್ದರು… 

ಆಧ್ಯಾತ್ಮವನ್ನು ಒಪ್ಪಿದ ಮೇಲೆ ಸಂಸಾರಿ ಆಗಿದ್ದರೇನಾದರೂ ತಪ್ಪೇ? ನಂಟಿನ ಬಂಧನಗಳಿಂದ ಕಳಚಿಕೊಳ್ಳಲು ಸನ್ಯಾಸಿಯೇ ಆಗಬೇಕೇ? ಅದು ಬಂಧನದ ವಿಮೋಚನೆಯಲ್ಲ. ಜವಾಬ್ದಾರಿಯಿಂದ ಪಲಾಯನ ಮಾಡುವುದು. 

ಮತ್ತೆ ಇಲ್ಲಿನೂ ಇದ್ದು ಬಿಡಬೇಕು ಶಾರದಾ ಮಾತೆ ಮತ್ತು ರಾಮಕೃಷ್ಣ ಪರಮಹಂಸರಂತೆ…

ಹುಹ್ ಯೋಚನಾಲಹರಿ ಎಲ್ಲೆಲ್ಲಿಗೋ ಹೋಗುತ್ತೆ… stream of consciousness ಅಂತ ಕರೆಯೋದು ಇದಕ್ಕೆ ಅಲ್ವಾ…

ಪುರುಷ ಪ್ರಧಾನ ಸಮಾಜದ ಮಿತಿ ಇದು..

ಮಹಿಳೆಯರಿಗೆ ಅವರು ಕಡಿವಾಣ ಹಾಕಬಹುದು ಆದ್ರೆ ಅವರ ಯೋಚನೆಗಳಿಗಲ್ಲ.

ಮನಸ್ಸಿನಲ್ಲಿ ನಾವು ಕ್ಷಣಕ್ಕೊಂದು ಯೋಚನೆ ಮಾಡಬಹುದು, ಎಲ್ಲಾದರೂ ಹೋಗಬಹುದು. ಅದನ್ನ ಯಾರೂ ತಡೆಯೋಕೆ ಸಾಧ್ಯ ಇಲ್ಲ.

ಕಾವ್ಯಶ್ರೀ

ದೊಡ್ಡಬಳ್ಳಾಪುರದ ಇವರು ಸಾಫ್ಟ್‌ವೇರ್ ಇಂಜಿನಿಯರ್

You cannot copy content of this page

Exit mobile version