ವಿಶ್ವ ಅನುವಾದ ದಿನದ ವಿಶೇಷವಾಗಿ ಬ್ರೆಕ್ಟ್ ಮೂಲ ಬರಹದ ಅನುವಾದ. ಕನ್ನಡಕ್ಕೆ ಶಾ ಬಾಲೂರಾವ್
ಹಾನಿಕಾರಕ ಪುಸ್ತಕಗಳನ್ನು
ಸಾರ್ವಜನಿಕವಾಗಿ ಸುಡಬೇಕೆಂದು
ಸರಕಾರ ಸುಗ್ರೀವಾಜ್ಞೆ ಹೊರಡಿಸಿತ್ತು
ಎಲ್ಲೆಲ್ಲೂ ಪುಸ್ತಕಗಳನ್ನು
ಎತ್ತಿನಗಾಡಿಗಳಲ್ಲಿ ಹೇರಿ
ಸುಡುಕೊಂಡಕ್ಕೆ ಹೊಡೆದುಕೊಂಡು ಹೋಗುತ್ತಿದ್ದರು
ಆಗ ಒಬ್ಬ ಬಹಿಷ್ಕೃತ ಸಾಹಿತಿ,
ಶ್ರೇಷ್ಠರಲ್ಲೊಬ್ಬ,
ಸುಡಲಿರುವ ಪುಸ್ತಕಗಳ ಪಟ್ಟಿಯಲ್ಲಿ
ತನ್ನ ಕೃತಿಗಳ ಹೆಸರಿಲ್ಲದ್ದನ್ನು ನೋಡಿ ಹೌಹಾರಿದ
ತಕ್ಷಣ ಕೋಪದ ಭರದಲ್ಲಿ ಮೇಜಿಗೆ ಧಾವಿಸಿ,
ಪತ್ರ ಗೀಚಿದ: ಸುಡಿ, ನನ್ನನ್ನು ಸುಡಿ!
ಲೇಖನಿ ಹಕ್ಕಿವೇಗದಲ್ಲಿ ಹಾರಿತ್ತು ನನ್ನನ್ನು ಸುಡಿ!
ನನಗೇನೂ ಪರವಾಗಿಲ್ಲ!,
ನನ್ನನ್ನು ಬಿಡಬೇಡಿ!
ನನ್ನ ಪುಸ್ತಕಗಳು
ಯಾವಾಗಲೂ ಸತ್ಯವನ್ನೇ ಸಾರಿಲ್ಲವೇ?
ಈಗ ನಿಮ್ಮಿಂದ ನಾನು ಸುಳ್ಳನ್ನೆನಿಸಿಕೊಳ್ಳಬೇಕೇನು? ಇದು ನನ್ನ ಆಜ್ಞೆ, ನನ್ನನ್ನು ಸುಡಿ!
-ಬ್ರೆಕ್ಟ್
ಅನುವಾದ: ಶಾ ಬಾಲೂರಾವ್