Home ವಿದೇಶ ನ್ಯಾಟೋದಿಂದ ಅಮೆರಿಕ ಹೊರಬರುವ ಮುನ್ಸೂಚನೆ ಕೊಟ್ಟ ಟ್ರಂಪ್: ಜಾಗತಿಕ ಭದ್ರತೆಗೆ ದೊಡ್ಡ ಹೊಡೆತವೇ?

ನ್ಯಾಟೋದಿಂದ ಅಮೆರಿಕ ಹೊರಬರುವ ಮುನ್ಸೂಚನೆ ಕೊಟ್ಟ ಟ್ರಂಪ್: ಜಾಗತಿಕ ಭದ್ರತೆಗೆ ದೊಡ್ಡ ಹೊಡೆತವೇ?

0

ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತಾರಕಕ್ಕೇರಿರುವ ಬೆನ್ನಲ್ಲೇ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಮತ್ತು ವಿವಾದಾತ್ಮಕ ನಿರ್ಧಾರವೊಂದನ್ನು ಪರಿಗಣಿಸುತ್ತಿರುವುದು ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.

ಅಮೆರಿಕವನ್ನು ಅಂತರಾಷ್ಟ್ರೀಯ ಮಿಲಿಟರಿ ಮೈತ್ರಿಕೂಟವಾದ ನ್ಯಾಟೋ (North Atlantic Treaty Organization) ಯಿಂದ ಹೊರತರುವ ಬಗ್ಗೆ ಟ್ರಂಪ್ ಚಿಂತನೆ ನಡೆಸುತ್ತಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ. ಈ ನಡೆ ಜಗತ್ತಿನ ಭದ್ರತಾ ಸಮೀಕರಣಗಳನ್ನೇ ಬದಲಾಯಿಸಬಹುದಾದ ಬೆಳವಣಿಗೆಯಾಗಿ ಪರಿಗಣಿಸಲಾಗುತ್ತಿದೆ.

ಟ್ರಂಪ್ ಅವರು ಈ ಹಿಂದೆ ನ್ಯಾಟೋ ಸದಸ್ಯ ರಾಷ್ಟ್ರಗಳ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದರು. ಸದಸ್ಯ ರಾಷ್ಟ್ರಗಳು ತಮ್ಮ ರಕ್ಷಣಾ ವೆಚ್ಚದಲ್ಲಿ ಸಮರ್ಪಕ ಕೊಡುಗೆ ನೀಡುತ್ತಿಲ್ಲ ಮತ್ತು ಅಮೆರಿಕದ ಮೇಲೆ ಅನಗತ್ಯ ಆರ್ಥಿಕ ಹೊರೆ ಬೀಳುತ್ತಿದೆ ಎಂಬುದು ಅವರ ಪ್ರಮುಖ ಆಕ್ಷೇಪವಾಗಿದೆ. “America First” ಎಂಬ ನೀತಿಯಡಿಯಲ್ಲಿ, ಅಮೆರಿಕದ ಹಿತಾಸಕ್ತಿಯನ್ನು ಮೊದಲಿಗಾಗಿಸಲು ಈ ರೀತಿಯ ಕ್ರಮಗಳನ್ನು ಕೈಗೊಳ್ಳಲು ಅವರು ಮುಂದಾಗಿದ್ದಾರೆ.

ಪ್ರಸ್ತುತ ಪಶ್ಚಿಮ ಏಷ್ಯಾದ ಯುದ್ಧದ ಪರಿಸ್ಥಿತಿಯಲ್ಲಿ, ಯುರೋಪಿಯನ್ ರಾಷ್ಟ್ರಗಳು ಅಮೆರಿಕದ ನಿಲುವಿಗೆ ಪೂರ್ಣ ಬೆಂಬಲ ನೀಡುತ್ತಿಲ್ಲ ಎಂಬುದು ಟ್ರಂಪ್ ಅವರ ಅಸಮಾಧಾನಕ್ಕೆ ಮತ್ತಷ್ಟು ಎಂಧನ ನೀಡಿದಂತಾಗಿದೆ.

ಒಂದು ವೇಳೆ ಅಮೆರಿಕ ನ್ಯಾಟೋದಿಂದ ಹೊರಬಂದರೆ, ಅದರ ಪರಿಣಾಮಗಳು ದೂರಗಾಮಿ ಆಗುವ ಸಾಧ್ಯತೆ ಇದೆ. ವಿಶೇಷವಾಗಿ ರಷ್ಯಾ ಮತ್ತು ಇತರ ಎದುರಾಳಿ ರಾಷ್ಟ್ರಗಳಿಗೆ ಇದು ತಂತ್ರಾತ್ಮಕ ಲಾಭವನ್ನು ಒದಗಿಸಬಹುದು. ಯುರೋಪಿನ ಭದ್ರತಾ ವ್ಯವಸ್ಥೆಯೇ ದುರ್ಬಲಗೊಳ್ಳುವ ಭೀತಿ ತಜ್ಞರು ವ್ಯಕ್ತಪಡಿಸುತ್ತಿದ್ದಾರೆ.

ಇದಕ್ಕೆ ಮಧ್ಯೆ, ಅಮೆರಿಕದ ಸಂಸತ್ತು ಹಾಗೂ ಟ್ರಂಪ್ ಅವರ ಸ್ವಂತ ಪಕ್ಷದೊಳಗೇ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ನ್ಯಾಟೋ ಅಮೆರಿಕದ ಜಾಗತಿಕ ಪ್ರಭಾವದ ಪ್ರಮುಖ ಆಧಾರವಾಗಿದ್ದು, ಅದನ್ನು ದುರ್ಬಲಗೊಳಿಸುವುದು ದೀರ್ಘಾವಧಿಯಲ್ಲಿ ದೇಶದ ಭದ್ರತೆಗೂ ಹಾನಿಕಾರಕವಾಗಬಹುದು ಎಂಬ ವಾದಗಳು ಕೇಳಿಬರುತ್ತಿವೆ.

You cannot copy content of this page

Exit mobile version