Home ವಿದೇಶ ನೊಬೆಲ್ ಶಾಂತಿ ಪುರಸ್ಕಾರವನ್ನು ಡೊನಾಲ್ಡ್ ಟ್ರಂಪ್‌ಗೆ ಅರ್ಪಿಸಿದ ವೆನೆಜುವೆಲಾ ನಾಯಕಿ ಮಚಾಡೊ

ನೊಬೆಲ್ ಶಾಂತಿ ಪುರಸ್ಕಾರವನ್ನು ಡೊನಾಲ್ಡ್ ಟ್ರಂಪ್‌ಗೆ ಅರ್ಪಿಸಿದ ವೆನೆಜುವೆಲಾ ನಾಯಕಿ ಮಚಾಡೊ

0

ವಾಷಿಂಗ್ಟನ್, ಅಕ್ಟೋಬರ್ 11: ಒಂದು ಕಡೆ ನೊಬೆಲ್ ಶಾಂತಿ ಪುರಸ್ಕಾರ ತನ್ನ ಕೈತಪ್ಪಿ ಹೋದ ಕಾರಣಕ್ಕೆ ಡೊನಾಲ್ಡ್ ಟ್ರಂಪ್ ಆಕ್ರೋಶಗೊಂಡಿರುವ ನಡುವೆಯೇ, ಇನ್ನೊಂದೆಡೆ ಪುರಸ್ಕೃತರಾದವರು ತಮ್ಮ ಪ್ರಶಸ್ತಿಯನ್ನು ಟ್ರಂಪ್‌ಗೆ ಅರ್ಪಿಸಿ ಉದಾರತೆ ಮೆರೆದಿದ್ದಾರೆ.

ವೆನೆಜುವೆಲಾದ ವಿರೋಧ ಪಕ್ಷದ ನಾಯಕಿಯಾದ ಮಾರಿಯಾ ಕೊರಿನಾ ಮಚಾಡೊ ಅವರು ಶುಕ್ರವಾರ ತಾವು ಪಡೆದ ನೊಬೆಲ್ ಶಾಂತಿ ಪ್ರಶಸ್ತಿಯನ್ನು ವೆನೆಜುವೆಲಾದ ಜನರಿಗೆ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ತಮ್ಮ ದೇಶದ ಪ್ರಜಾಪ್ರಭುತ್ವ ಪರ ಹೋರಾಟಕ್ಕೆ ನೀಡಿದ ಬೆಂಬಲಕ್ಕಾಗಿ ಸಮರ್ಪಿಸುವುದಾಗಿ ಘೋಷಿಸಿದರು.

ಪ್ರಶಸ್ತಿ ಗೆದ್ದ ನಂತರ ಮಾರಿಯಾ ಅವರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಇದನ್ನು ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಅರ್ಪಿಸಿದರು. ವೆನೆಜುವೆಲಾದ ಜನರ ಪರವಾಗಿ ನಿಂತಿದ್ದಕ್ಕಾಗಿ ಅವರು ಟ್ರಂಪ್ ಅವರನ್ನು ಶ್ಲಾಘಿಸಿದರು.

“ವೆನೆಜುವೆಲಾದ ಹೋರಾಟವನ್ನು ಈಗ ಗುರುತಿಸಲಾಗಿದೆ. ಇದು ಸ್ವಾತಂತ್ರ್ಯದ ಗುರಿಯನ್ನು ಸಾಧಿಸಲು ನಮಗೆ ಸಹಾಯ ಮಾಡುತ್ತದೆ. ನಾವು ವಿಜಯದ ಅಂಚಿನಲ್ಲಿದ್ದೇವೆ ಮತ್ತು ಇಂದು ಅಧ್ಯಕ್ಷ ಟ್ರಂಪ್, ಅಮೆರಿಕದ ಜನರು, ಲ್ಯಾಟಿನ್ ಅಮೆರಿಕದ ಜನರು ಮತ್ತು ವಿಶ್ವದ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ವಿಶ್ವಾಸ ಹೆಚ್ಚಿದೆ. ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವನ್ನು ಪುನಃಸ್ಥಾಪಿಸುವಲ್ಲಿ ಅವರು ನಮ್ಮ ಪ್ರಮುಖ ಮಿತ್ರರಾಗಿದ್ದಾರೆ.

ನಾನು ಈ ಪ್ರಶಸ್ತಿಯನ್ನು ವೆನೆಜುವೆಲಾದ ಜನರಿಗೆ ಮತ್ತು ಈ ಪ್ರಯತ್ನದಲ್ಲಿ ನಮಗೆ ಬೆಂಬಲ ನೀಡಿದ ಅಧ್ಯಕ್ಷ ಟ್ರಂಪ್‌ಗೆ ಅರ್ಪಿಸುತ್ತೇನೆ” ಎಂದು ಮಾರಿಯಾ ಹೇಳಿದರು.

ಪ್ರಶಸ್ತಿ ಘೋಷಣೆಗೂ ಮುನ್ನ ನಾರ್ವೇಜಿಯನ್ ನೊಬೆಲ್ ಸಂಸ್ಥೆಯ ನಿರ್ದೇಶಕ ಕ್ರಿಶ್ಚಿಯನ್ ಬರ್ಗ್ ಅವರು ಮರಿಯಾ ಅವರಿಗೆ ವೈಯಕ್ತಿಕವಾಗಿ ಕರೆ ಮಾಡಿ ಗೆಲುವಿನ ಬಗ್ಗೆ ತಿಳಿಸಿದ್ದರು. ಇದರ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.

ಕ್ರಿಶ್ಚಿಯನ್ ಅವರು ಸ್ವತಃ ಕರೆ ಮಾಡಿ ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿಗೆ ಆಯ್ಕೆಯಾಗಿರುವುದನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಹೇಳಿದಾಗ, ಆಶ್ಚರ್ಯಗೊಂಡ ಮಚಾಡೊ, “ನನಗೆ ನಂಬಲಾಗಲಿಲ್ಲ” ಎಂದರು. “ನಾನು ವೆನೆಜುವೆಲಾದ ಜನರ ಪರವಾಗಿ ಕೃತಜ್ಞನಾಗಿದ್ದೇನೆ. ಇದು ಖಂಡಿತವಾಗಿಯೂ ನಮ್ಮ ಜನರು ಪಡೆಯಬಹುದಾದ ಅತ್ಯಂತ ದೊಡ್ಡ ಗೌರವವಾಗಿದೆ, ಅವರು ನಿಜವಾಗಿಯೂ ಇದಕ್ಕೆ ಅರ್ಹರು,” ಎಂದು ಮಾರಿಯಾ ಹೇಳಿದರು.

You cannot copy content of this page

Exit mobile version