ಹೈದರಾಬಾದ್ : ಬಡ್ತಿ ಮತ್ತು ವೇತನ ಪರಿಷ್ಕರಣೆ ಆಯೋಗ ಜಾರಿ ಒತ್ತಾಯಿಸಿ ತೆಲಂಗಾಣ ವಿಧಾನಸಭೆ ಮುಂದೆ ಆವರಿಸಿದ್ದ ಜನರ ಮೇಲೆ ಅಲ್ಲಿನ ಪೋಲಿಸರು ಲಾಠಿ ಚಾರ್ಜ್ ಮಾಡಿದ್ದಾರೆ.
ಬಡ್ತಿ ಮತ್ತು ವೇತನ ಪರಿಷ್ಕರಣೆ ಆಯೋಗ (ಪಿಆರ್‌ಸಿ) ಜಾರಿ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿ ಅಲ್ಲಿನ ಗ್ರಾಮ ಕಂದಾಯ ಸಹಾಯಕರು(ವಿಆರ್‌ಎ) ಸೇರಿ ತೆಲಂಗಾಣ ವಿಧಾನಸಭೆ ಬಳಿ ಪ್ರತಿಭಟನೆ ಮಾಡುತಿದ್ದರು. ಈ ವೇಳೆ ಅಲ್ಲಿನ ಪೋಲೀಸರು ವಿಧಾನಸಭೆಯ ಮುಂದೆ ಜಮಾಯಿಸಿದ್ದ ಜನರ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ.