Home ಆರೋಗ್ಯ ದಿನಾ ವಾಕ್‌ ಮಾಡಿದ್ರೆ ಸಾವು ಕೂಡಾ ದೂರ ಇರುತ್ತೆ, ದಿನಕ್ಕೆ ಎಷ್ಟು ದೂರ ನಡೆದ್ರೆ ಒಳ್ಳೇದು?

ದಿನಾ ವಾಕ್‌ ಮಾಡಿದ್ರೆ ಸಾವು ಕೂಡಾ ದೂರ ಇರುತ್ತೆ, ದಿನಕ್ಕೆ ಎಷ್ಟು ದೂರ ನಡೆದ್ರೆ ಒಳ್ಳೇದು?

0

ವಾ ಕಿಂಗ್ ಆರೋಗ್ಯಕ್ಕೆ ಒಳ್ಳೆಯದೆಂದು ನಮಗೆಲ್ಲ ಗೊತ್ತು. ಆದರೆ ದಿನಕ್ಕೆ ಎಷ್ಟು ಹೆಜ್ಜೆ ನಡೆಯಬೇಕು ಎನ್ನುವುದರ ಕುರಿತೇ ಎಲ್ಲರಿಗೂ ಗೊಂದಲ. ಕೆಲವರು ಐದರಿಂದ ಆರು ಸಾವಿರ ಹೆಜ್ಜೆಗಳನ್ನು ನಡೆದರೆ, ಇನ್ನೂ ಕೆಲವರು 10,000 ಹೆಜ್ಜೆಗಳಷ್ಟು ದೂರ ವಾಕ್‌ ಮಾಡುತ್ತಾರೆ.

ಆದರೆ ಹೊಸ ಅಧ್ಯಯನದ ಪ್ರಕಾರ, ದಿನಕ್ಕೆ ಕನಿಷ್ಠ 4,000 ಹೆಜ್ಜೆಗಳನ್ನು ನಡೆಯುವುದು ನಾವು ಹೆಚ್ಚು ಕಾಲ ಬದುಕಲು ಸಹಾಯ ಮಾಡುತ್ತದೆ. ಇದರಿಂದ ಅಕಾಲಿಕ ಮರಣದ ಅಪಾಯವು ಬಹಳ ಕಡಿಮೆಯಾಗುತ್ತದೆ ಎಂದಿದೆ. ದಿನಕ್ಕೆ ಕನಿಷ್ಠ 2,337 ಹೆಜ್ಜೆಗಳನ್ನು ನಡೆಯುವುದರಿಂದ ಹೃದಯರಕ್ತನಾಳದ ಕಾಯಿಲೆಯಿಂದ ಸಾಯುವ ಅಪಾಯವನ್ನು ಕಡಿಮೆ ಮಾಡಬಹುದು. ಹೆಚ್ಚು ನಡೆದಷ್ಟೂ ಒಳ್ಳೆಯದು ಎನ್ನುತ್ತಾರೆ ಸಂಶೋಧಕರು.

ಹೆಚ್ಚು ಎಂದರೆ ಎಷ್ಟು?

ಪೋಲೆಂಡ್‌ ದೇಶದ ಲೋಡ್ಜ್‌ನ ವೈದ್ಯಕೀಯ ವಿಶ್ವವಿದ್ಯಾಲಯದ ಸಂಶೋಧಕರು ಪ್ರತಿದಿನ ಎಷ್ಟು ವಾಕಿಂಗ್ ಮಾಡಬೇಕು ಎಂಬುದನ್ನು ತನಿಖೆ ಮಾಡಲು ಬಯಸಿದ್ದರು. ಇದಕ್ಕಾಗಿ ಹೃದ್ರೋಗಶಾಸ್ತ್ರದ ಪ್ರೊಫೆಸರ್ ಮಸಿಜ್ ಬನಾಚ್ ನೇತೃತ್ವದ ಸಂಶೋಧಕರು ಹಲವಾರು ದೇಶಗಳಲ್ಲಿ 2,26,889 ಜನರನ್ನು ಅಧ್ಯಯನ ಮಾಡಿದರು. ಹಿಂದಿನ 17 ಅಧ್ಯಯನಗಳಿಂದಲೂ ಸಾಕಷ್ಟು ವಿವರಗಳನ್ನು ಅವರು ಸಂಗ್ರಹಿಸಿದರು. ವಿವಿಧ ದೈನಂದಿನ ಚಟುವಟಿಕೆಗಳ ಆರೋಗ್ಯದ ಪರಿಣಾಮಗಳನ್ನು ನಿರ್ಣಯಿಸಲು ಏಳು ವರ್ಷಗಳ ಅಧ್ಯಯನವನ್ನು ನಡೆಸಲಾಯಿತು.

ಯಾವುದೇ ಕಾರಣದಿಂದ ಸಾಯುವ ಅಪಾಯವನ್ನು ಕಡಿಮೆ ಮಾಡಲು ದಿನಕ್ಕೆ ಕನಿಷ್ಠ 3,967 ಹೆಜ್ಜೆಗಳನ್ನು ಎಂದು ಸಂಶೋಧಕರು ತೀರ್ಮಾನಿಸಿದ್ದಾರೆ. ದಿನಕ್ಕೆ 2,337 ಹೆಜ್ಜೆಗಳನ್ನು ನಡೆಯುವುದರಿಂದ ಹೃದಯರಕ್ತನಾಳದ ಕಾಯಿಲೆಯಿಂದ ಸಾಯುವ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಸಂಶೋಧನೆ ಹೇಳುತ್ತದೆ. ದಿನಕ್ಕೆ ಕನಿಷ್ಠ 1,000 ಹೆಜ್ಜೆಗಳನ್ನು ನಡೆಯುವುದರಿಂದ ಸಾವಿನ ಅಪಾಯವನ್ನು 15%ರಷ್ಟು ಕಡಿಮೆ ಮಾಡಬಹುದು. ಪ್ರತಿದಿನ 500 ಹೆಜ್ಜೆಗಳನ್ನು ನಡೆಯುವುದರಿಂದ ಹೃದಯರಕ್ತನಾಳದ ಕಾಯಿಲೆಯಿಂದ ಸಾಯುವ ಅಪಾಯ ಶೇಕಡಾ 7ರಷ್ಟು ಕಡಿಮೆಯಾಗುತ್ತದೆ.

ದಿನಕ್ಕೆ 5,000 ಹೆಜ್ಜೆಗಳು ನಡೆಯದಿರುವುದು “ಜಡ ಜೀವನಶೈಲಿ” ಎಂದು ಪರಿಗಣಿಸಲಾಗುತ್ತದೆ. ನಾವು ಹೆಚ್ಚು ನಡೆದಷ್ಟು ಉತ್ತಮ ಎಂದು ಅಧ್ಯಯನಗಳು ಹೇಳುತ್ತವೆ. ಇದಕ್ಕೆ ಯಾವುದೇ ವಯಸ್ಸಿನ ಮಿತಿಯಿಲ್ಲ. ಪುರುಷರು ಮತ್ತು ಮಹಿಳೆಯರು ತಾವು ವಾಸಿಸುವ ಪರಿಸರದಲ್ಲಿ ನಡೆಯಬೇಕು. ಪ್ರತಿದಿನ 7,000ರಿಂದ 13,000 ಹೆಜ್ಜೆಗಳ ನಡಿಗೆ ಯುವಜನರ ಆರೋಗ್ಯವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ. 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಕರು 6ರಿಂದ 10 ಸಾವಿರ ಹೆಜ್ಜೆಗಳನ್ನು ನಡೆಯಬೇಕು.

ಇದು ಅಕಾಲಿಕ ಮರಣದ ಅಪಾಯವನ್ನು ಶೇಕಡಾ 42ರಷ್ಟು ಕಡಿಮೆ ಮಾಡುತ್ತದೆ. ಈ ಮಿತಿಗಳನ್ನು ಮೀರಿದರೆ ಯಾವುದೇ ಅಪಾಯವಿಲ್ಲ ಎಂದು ಸಂಶೋಧಕರು ಹೇಳುತ್ತಾರೆ. ದಿನಕ್ಕೆ 20,000 ಹೆಜ್ಜೆಗಳು ಅಥವಾ 14-16 ಕಿಲೋಮೀಟರ್ ನಡೆಯುವುದರಿಂದ ಆರೋಗ್ಯ ಪ್ರಯೋಜನಗಳು ಇನ್ನಷ್ಟು ಹೆಚ್ಚುತ್ತವೆ. ವಾಕಿಂಗ್ ಮತ್ತು ದೈಹಿಕ ಚಟುವಟಿಕೆ ನಿಯಮಿತವಾಗಿದ್ದರೆ ಜನರು ಗಮನಾರ್ಹವಾದ ಆರೋಗ್ಯ ಪ್ರಯೋಜನಗಳನ್ನು ನಿರೀಕ್ಷಿಸಬಹುದು ಮತ್ತು ದೀರ್ಘಕಾಲ ಬದುಕಬಹುದು. ಎಲ್ಲಾ ವ್ಯಾಯಾಮಗಳಲ್ಲಿ ವಾಕಿಂಗ್ ಅತ್ಯಂತ ಕಡಿಮೆ ಮೌಲ್ಯವುಳ್ಳದ್ದು.

ಇದು ಫಿಟ್‌ನೆಸ್ ಹೆಚ್ಚಿಸುತ್ತದೆ, ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ, ಖಿನ್ನತೆ ಮತ್ತು ಆಯಾಸವನ್ನು ನಿವಾರಿಸಬಲ್ಲದು, ಮಾನಸಿಕ ಆರೋಗ್ಯವನ್ನು ಸುಧಾರಿಸುವುದು, ಕೀಲುಗಳ ಮೇಲೆ ಕಡಿಮೆ ಒತ್ತಡವನ್ನು ಸೃಷ್ಟಿಸುವುದು ಮತ್ತು ನೋವನ್ನು ಕಡಿಮೆ ಮಾಡುವುದು, ತೂಕ ಹೆಚ್ಚಾಗುವುದನ್ನು ತಡೆಯುವುದು, ಕ್ಯಾನ್ಸರ್ ಮತ್ತು ಇತರ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುವುದು ಸೇರಿದಂತೆ ಹಲವು ಪ್ರಯೋಜನಗಳನ್ನು ಹೊಂದಿದೆ.

ನಡಿಗೆಯಿಂದ ಆಗುವ ಲಾಭಗಳ ಬಗ್ಗೆ ಸಂಶೋಧನೆ ನಡೆಸುತ್ತಿರುವ ಹಾರ್ವರ್ಡ್ ಸಂಶೋಧಕರು ಕೂಡ ದಿನಕ್ಕೆ ಸುಮಾರು ಒಂದು ಗಂಟೆ ಚುರುಕಾಗಿ ನಡೆಯುವುದು ಒಳ್ಳೆಯದು ಎನ್ನುತ್ತಾರೆ. 15 ನಿಮಿಷಗಳ ನಡಿಗೆ ಸಿಹಿತಿಂಡಿಗಳ ತೀವ್ರವಾದ ಬಯಕೆಯನ್ನು ಹೋಗಲಾಡಿಬಲ್ಲದು ಎನ್ನುತ್ತಾರೆ. ಸಂಧಿವಾತ-ಸಂಬಂಧಿತ ನೋವನ್ನು ಕಡಿಮೆ ಮಾಡಲು ವಾಕಿಂಗ್ ಅನೇಕ ಉತ್ತಮ ಉಪಾಯವೆಂದು ಅಧ್ಯಯನಗಳಲ್ಲಿ ಸಾಬೀತಾಗಿದೆ.

ಕೀಲು ನೋವಿನಿಂದ ಬಳಲುತ್ತಿರುವವರಿಗೂ ವಾಕಿಂಗ್ ಒಳ್ಳೆಯದು. ವಾರಕ್ಕೆ ಐದರಿಂದ ಆರು ಮೈಲುಗಳಷ್ಟು ನಡೆಯುವುದರಿಂದ ಸಂಧಿವಾತವನ್ನು ಮೊದಲ ಹಂತದಲ್ಲೇ ತಡೆಯಬಹುದು. ದೈಹಿಕ ಚಟುವಟಿಕೆ ಬಹಳ ಮುಖ್ಯ. ಕೋವಿಡ್ ಸಾಂಕ್ರಾಮಿಕದ ನಂತರ ದೈಹಿಕ ನಿಷ್ಕ್ರಿಯತೆಯು ವಿಶ್ವದಲ್ಲಿ ಸಾವಿಗೆ ನಾಲ್ಕನೇ ಪ್ರಮುಖ ಕಾರಣವಾಗಿದೆ. ಇದು ವಾರ್ಷಿಕವಾಗಿ 3.2 ಮಿಲಿಯನ್ ಸಾವುಗಳಿಗೆ ಕಾರಣವಾಗುತ್ತಿದೆ. ವಾಕಿಂಗ್ ಶೀತ ಮತ್ತು ಜ್ವರದಿಂದಲೂ ನಮ್ಮನ್ನು ರಕ್ಷಿಸುತ್ತದೆ.

You cannot copy content of this page

Exit mobile version