ಮಕ್ಕಳಿಂದ ಹಿಡಿದು ವಯಸ್ಕರ ವರೆಗೆ ಮೂಗಿಗೆ ಬೆರಳು ಹಾಕುವ ಅಭ್ಯಾಸವಿರುತ್ತದೆ. ಮೂಗಿಗೆ ಬೆರಳು ಹಾಕಿ ಕೆದಕುತ್ತಾ ಕೂರುತ್ತಾರೆ. ಇತತರ ಮುಂದೆ ಈ ಮಾಡುವುದರಿಂದ ಅವರು ಅಸಹ್ಯ ಪಟ್ಟುಕೊಂಡು ಅವಮಾನ ಮಾಡುವ ಸಾಧ್ಯತೆಯೂ ಇರುತ್ತದೆ. ಇದಕ್ಕೂ ಮೇಲಾಗಿ ಮೂಗಿಗೆ ಬೆರಳು ಹಾಕುವುದರಿಂದ ಅಲ್ಝೈಮರ್ ಕಾಯಿಲೆ ಬರುವ ಸಾಧ್ಯತೆ ಹೆಚ್ಚಿದೆ ಎಂದು ಇತ್ತೀಚಿನ ಸಂಶೋಧನೆಯೊಂದು ಹೇಳಿದೆ.
Neuroinflammation in Alzheimer’s Disease: A Potential Role of Nose-Picking in Pathogen Entry via the Olfactory System? ಎಂಬ ಈ ಸಂಶೋಧನೆಯ ವರದಿ ಮೂಗಿನೊಳಗೆ ಕೈಹಾಕುವುದು ಮತ್ತು ಅಲ್ಝೈಮರ್‌ಗೆ ಖಾಯಿಲೆಗೆ ಸಂಬಂಧ ಇದೆ ಎಂದು ಹೇಳಿದೆ. ಅಲ್ಝೈಮರ್ ಬರಲು ಬಿಟಾ ಅಮಿಲಾಯ್ಡ್ ಎನ್ನುವ ಪ್ರೋಟೀನ್ ಪ್ರಮುಖ ಪಾತ್ರ ವಹಿಸುತ್ತದೆ. ಮೂಗಿನೊಳಗೆ ಕೈ ಹಾಕುವುದರಿಂದ ಉತ್ಪತ್ತಿಯಾಗುವಂತಹ ರೋಗಕಾರಕಗಳು ಬಿಟಾ ಅಮಿಲಾಯ್ಡ್‌ನ್ನು ಮೆದುಳಿನಲ್ಲಿ ಉತ್ಪಾದಿಸುತ್ತದೆ. ಅಲ್ಝೈಮರ್ ತಡೆಯಲು ಮೂಗಿನ ಶುಚಿತ್ವ ಅಗತ್ಯ ಎಂದು ಈ ವರದಿ ಹೇಳಿದೆ.
ಆಸ್ಟ್ರೇಲಿಯಾ ಸಂಶೋಧಕರು ಇಲಿಗಳ ಮೇಲೆ ಅಧ್ಯಯನ ನಡೆಸಿ ಮೂಗಿನ ಮೂಲಕವಾಗಿ ರೋಗಕಾರಕ ಬ್ಯಾಕ್ಟೀರಿಯಾಗಳು ಹೇಗೆ ಮೆದುಳನ್ನು ಪ್ರವೇಶ ಮಾಡುತ್ತದೆ ಎಂಬುದನ್ನು ಕಂಡುಹಿಡಿದಿದ್ದಾರೆ.
ಅಲ್ಝೈಮರ್ ಒಂದು ನರ ಸಂಬಂಧಿ ರೋಗ. ಇದರಲ್ಲಿ ಜ್ಞಾಪಕ ಶಕ್ತಿ ದುರ್ಬಲವಾಗುತ್ತದೆ (ಡಿಮೆನ್ಷಿಯ). ಆಲೋಚಿಸುವ ಮತ್ತು ವಿವೇಚನೆ ಮಾಡುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಇದರಿಂದಾಗಿ ದಿನದ ಕೆಲಸ ಮಾಡಲು ಕಷ್ಟಪಡಬೇಕಾಗುತ್ತದೆ.
ಸದ್ಯ ಇದಕ್ಕೆ ಸರಿಯಾದ ಯಾವುದೇ ಶಾಶ್ವತ ಚಿಕಿತ್ಸೆ ಇಲ್ಲ. ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು. ಮೂಗಿಗೆ ಬೆರಳು ಹಾಕುವಂತಹ ಚಟಗಳನ್ನು ನಿಯಂತ್ರಿಸಿಕೊಂಡು ಸಂಪೂರ್ಣವಾಗಿ ನಿಲ್ಲಿಸಬೇಕು.