ನವದೆಹಲಿ: ಈ ಸಲದ ಲೋಕಸಭೆ ಚುನಾವಣೆಯಲ್ಲಿ 64.2 ಕೋಟಿ ಮತದಾರರು ಭಾಗವಹಿಸಿ ಮತದಾನ ಮಾಡಿದ್ದಾರೆ. ಇದು ವಿಶ್ವದಲ್ಲಿಯೇ ಅತಿಹೆಚ್ಚು ಮತದಾನ ನಡೆದ ಪ್ರಕರಣವಾಗಿದ್ದು, ಭಾರತ ವಿಶ್ವ ದಾಖಲೆ ನಿರ್ಮಿಸಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸೋಮವಾರ ಹೇಳಿದರು.
ದೆಹಲಿಯಲ್ಲಿ ಸೋಮವಾರ ಮಧ್ಯಾಹ್ನ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 31.2 ಕೋಟಿ ಮತದಾನ ಮಾಡಿದ್ದಾರೆ ಎಂದು ತಿಳಿಸಿದರು.
68,000 ಮೇಲ್ವಿಚಾರಣಾ ತಂಡಗಳು ಮತ್ತು 1.5 ಕೋಟಿ ಮತದಾನ ಮತ್ತು ಭದ್ರತಾ ಸಿಬ್ಬಂದಿ ವಿಶ್ವದ ಅತಿದೊಡ್ಡ ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸುಮಾರು ನಾಲ್ಕು ಲಕ್ಷ ವಾಹನಗಳು, 135 ವಿಶೇಷ ರೈಲುಗಳು ಮತ್ತು 1,692 ಏರ್ ಬಳಸಲಾಗಿದೆ. ಬಳಸಲಾಗಿದೆ. ಇಷ್ಟೊಂದು ಮಹಾ ಮತದಾನ ನಡೆದಿದ್ದು ವಿಶ್ವದಲ್ಲೇ ದಾಖಲೆಯಾಗಿದೆ ಎಂದರು.
ಚುನಾವಣಾ ಆಯುಕ್ತರನ್ನು ‘ಲಾಪತಾ ಜಂಟಲ್‌ಮೆನ್ ಕಾಣೆಯಾಗಿದ್ದಾರೆ’ ಎಂದು ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡಲಾಯಿತು. ಆದರೆ, “ನಾವು ಯಾವಾಗಲೂ ಇಲ್ಲಿಯೇ ನಮ್ಮ ಕೆಲಸಗಳಲ್ಲಿ ಮಗ್ನರಾಗಿದ್ದೇವೆ. ಎಂದಿಗೂ ಕಾಣೆಯಾಗಲಿಲ್ಲ. ಈಗ ‘ಲಾಪತಾ ಜಂಟಲ್‌ಮೆನ್ ಮರಳಿದ್ದಾರೆ ಎಂದು ಟ್ರೋಲ್ ಮಾಡಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.
“2019 ರಲ್ಲಿ 540 ಮರುಮತದಾನಗಳು ನಡೆದಿದ್ದವು. ಆದರೆ, ಈ ಸಲದ 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಕೇವಲ 39 ಮರುಮತದಾನಗಳು ನಡೆದಿವೆ. ಜಮ್ಮು ಮತ್ತು ಕಾಶ್ಮೀರವು ನಾಲ್ಕು ದಶಕಗಳಲ್ಲಿ ಒಟ್ಟಾರೆ ಶೇಕಡಾ 58.58 ಮತ್ತು ಕಣಿವೆಯಲ್ಲಿ ಶೇಕಡಾ 51.05 ರಷ್ಟು ಮತದಾನವಾಗಿದೆ.
2024 ರ ಚುನಾವಣೆಯಲ್ಲಿ ನಗದು, ಉಚಿತ ವಸ್ತುಗಳು, ಡ್ರಗ್ಸ್ ಮತ್ತು ಮದ್ಯ ಸೇರಿದಂತೆ ₹10,000 ಕೋಟಿ ವಶಪಡಿಸಿಕೊಳ್ಳಲಾಗಿದೆ. 2019 ರಲ್ಲಿ ₹3,500 ಕೋಟಿಯಷ್ಟು ವಶಪಡಿಸಿಕೊಳಳಲಾಗಿತ್ತು ಎಂದು ಅವರು ಮಾಹಿತಿ ನೀಡಿದರು.