ಹಾಸನ: ಹಾಸನ ನಗರದಲ್ಲಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಜ. 24 ರಂದು ಆಯೋಜಿಸಲಾಗಿದೆ ಎಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಲಿಂಗೇಶ್ ಅವರು ತಿಳಿಸಿದರು.
ಅವರು ಮಾತನಾಡಿ, ಜೆಡಿಎಸ್ ಕಾರ್ಯಕರ್ತರ ಸಮಾವೇಶವನ್ನು ಹೆಚ್ ಡಿ ರೇವಣ್ಣ ಅವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ನಡೆಸಲಾಗುತ್ತದೆ ಎಂದರು.
ಸಮಾವೇಶದಲ್ಲಿ ಹಾಲಿ ರಾಜ್ಯ ಸಭಾ ಸದಸ್ಯ ದೇವೇಗೌಡ, ಹೆಚ್ ಡಿ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಹಾಗೂ ರಾಜ್ಯಮಟ್ಟದ ಮುಖಂಡರು, ಕಾರ್ಯಕರ್ತರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ವಿವಿಧ ಜಿಲ್ಲೆಯ ಅಧ್ಯಕ್ಷರು, ಕಾರ್ಯಕರ್ತರು ಎಲ್ಲರೂ ಭಾಗವಹಿಸುತ್ತಾರೆ ಎಂದು ತಿಳಿಸಿದರು. ಸುಮಾರು 2 ಲಕ್ಷ ಜನ ಸೇರುವ ನಿರೀಕ್ಷೆಯನ್ನು ವ್ಯಕ್ತಪಡಿಸಿದರು.
ತಾಲೂಕು ಕೇಂದ್ರಗಳ ಪೂರ್ವಭಾವಿ ಸಭೆಯನ್ನು ರೇವಣ್ಣ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದೆ ಎಂದರು.
ಜ. 11 ರಂದು ಬೇಲೂರಿನ ಚೆನ್ನಕೇಶ್ವರ ದೇವಾಲದಲ್ಲಿ ಪೂಜೆಯನ್ನು ಮಾಡಿ ನಂತರ ಬೇಲೂರಿನಲ್ಲಿ ಸಭೆ, ಮಧ್ಯಾನ 3 ಗಂಟೆಗೆ ದಂಡಿಗನಹಳ್ಳಿಯಲ್ಲಿ ಸಭೆ ಆಯೋಜಿಸಲಾಗಿದೆ.
ಜ. 12 ರಂದು ಬೆಳಗ್ಗೆ 10 ಗಂಟೆಗೆ ಹೊಳೆನರಸೀಪುರದಲ್ಲಿ ಸಭೆ, ಮಧ್ಯಾನ 2 ಗಂಟೆಗೆ ಸಕಲೇಶಪುರದಲ್ಲಿ ಸಭೆ ಆಯೋಜಿಸಲಾಗಿದೆ.
ಜ.13 ರಂದು ಬೆಳಗ್ಗೆ 10 ಗಂಟೆಗೆ ಆಲೂರಿನಲ್ಲಿ ಸಭೆ ಆಯೋಜನೆ.
ಜ. 17 ರಂದು ಬೆಳಗ್ಗೆ 10 ಗಂಟೆಗೆ ಅರಕಲಗೂಡು ಸಭೆ, ಮದ್ಯಾನ 3 ಗಂಟೆಗೆ ಅರಸೀಕೆರೆಯಲ್ಲಿ ಸಭೆ ಆಯೋಜನೆ.
ಜ.19 ರಂದು ಮಧ್ಯಾನ 12.15 ಕ್ಕೆ ಹಾಸನದಲ್ಲಿ ತಾಲೂಕು ಮುಖಂಡರ ಕಾರ್ಯಕರ್ತರ ಸಭೆಯನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
