ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಕರ್ನಾಟಕದ ನೆಲದಲ್ಲಿ ಮಹಾರಾಷ್ಟ್ರ ಪೊಲೀಸರ ತನಿಖೆಗೆ ಹೈಕೋರ್ಟ್ ಬ್ರೇಕ್: ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ ಕಾರ್ಯಾಚರಣೆ ನಡೆಸುವಂತಿಲ್ಲಸರ್ಕಾರಿ ಯೋಜನೆಗಳಿಗೆ ಆಧಾರ್ ಬದಲು ವೋಟರ್ ಐಡಿ ಬಳಕೆ? ಕೇಂದ್ರ ಸಚಿವ ಲಲನ್ ಸಿಂಗ್ ಹೇಳಿಕೆಬಸ್ ದರ | ಕಾಂಗ್ರೆಸ್ ಸರ್ಕಾರ ಒಂದು ಕೈಯಲ್ಲಿ ಗ್ಯಾರಂಟಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿದೆ: ಬಿ ವೈ ವಿಜಯೇಂದ್ರಸ್ಟಿಂಗ್ ಆಪರೇಷನ್ ಪರಿಣಾಮ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದೆ – ಆರ್. ಅಶೋಕ್ಸಾಲು ಸಮಸ್ಯೆಗಳು ದತ್ತಾಂಶ ಹಂಚಿಕೊಳ್ಳದ ಕೇಂದ್ರ ಚುನಾವಣಾ ಆಯೋಗ – GBA ಚುನಾವಣೆ ಇನ್ನಷ್ಟು ವಿಳಂಬಬಿಜೆಪಿಯ ಫಾರಿನ್‌ ಫಂಡ್‌ ಕಥೆರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯ 5000 ಕೋಟಿ ಹಣವನ್ನು ಮಂಗಮಾಯ ಮಾಡಿದೆ: ಜೆಡಿಎಸ್‌ ಆರೋಪಎರಡು ಮಕ್ಕಳ ನೀತಿಗೆ ಸುಪ್ರೀಂ ಕೋರ್ಟ್ ಮರುಪರಿಶೀಲನೆಯ ಅಸ್ತು: ಜನಸಂಖ್ಯೆ ಇಳಿಯುತ್ತಿರುವಾಗ ಹಳೆಯ ಕಾನೂನುಗಳಿಗೇಕೆ ಶಿಕ್ಷೆ?ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ತನಿಖೆಗೆ ಕೇರಳ ಸರ್ಕಾರ ಆದೇಶ – 2006ರ ಹಳೆಯ ಕೇಸ್ ಮರುಜೀವಟಿಕೆಟ್ ದರ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಅಸ್ತು; ಇಂದು ಮಧ್ಯರಾತ್ರಿಯಿಂದಲೇ ಜಾರಿಯಾರು ಸೂಳೆಯರು? : ದೇಹ, ಸಮ್ಮತಿ ಮತ್ತು ದ್ವಂದ್ವ ನೈತಿಕತೆಯ ಸುತ್ತಬೊಗಸೆಗೆ ದಕ್ಕಿದ್ದು-99 : ಸರ್ವಾಧಿಕಾರಿ ದೇಶದಲ್ಲಿ ಭಟ್ಟಂಗಿಗಳು ‘ಕ್ಲಿಕ್’; ಎದುರಾಡಿದರೆ ‘ಕಿಕ್’!ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಪಾದಚಾರಿಗಳಿಗೆ ಕೊನೆಗೂ ಸುರಕ್ಷತೆಯ ಆಸರೆ: ಮೂರು ಜಂಕ್ಷನ್‌ಗಳಲ್ಲಿ ₹60 ಲಕ್ಷದ ಕಾಮಗಾರಿಟ್ರಂಪ್‌ಗೆ ಅಮೆರಿಕದ ಜನರ ರಾಜಕೀಯ ಏಟು: ಭಾರತದ ಮೇಲೆ ಇದರ ಪರಿಣಾಮವೇನು?ಕರ್ನಾಟಕದಲ್ಲಿ 25 ಸಾವಿರಕ್ಕೂ ಹೆಚ್ಚು ಪ್ರಿಸ್ಕೂಲ್‌ಗಳು ಮುಚ್ಚುವ ಭೀತಿ: 4 ಲಕ್ಷ ಮಹಿಳೆಯರ ಉದ್ಯೋಗಕ್ಕೆ ಕುತ್ತುಅಮೆರಿಕ ಮಧ್ಯಂತರ ಚುನಾವಣೆ: ಸೋಲೊಪ್ಪಿಕೊಂಡು ಡೆಮಾಕ್ರಟ್‌ಗಳಿಗೆ ಅಭಿನಂದನೆ ಸಲ್ಲಿಸಿದ ಟ್ರಂಪ್ರಾಹುಲ್ ಗಾಂಧಿ ಜಾರ್ಜ್ ಸೋರೋಸ್‌ನಿಂದ ಹಣ ಪಡೆದು ಪ್ರಜಾಪ್ರಭುತ್ವ ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ: ಬಸವರಾಜ ಬೊಮ್ಮಾಯಿ ಆರೋಪಕಾಂಗ್ರೆಸ್‌ನದ್ದು ‘ಸ್ಟಿಂಗ್ ಕರ್ನಾಟಕ ಮಾಡೆಲ್’: ಜೆಡಿಎಸ್ ವಾಗ್ದಾಳಿಎಂಎಲ್‌ಸಿ ಸೋಲಿನ ಹೊಣೆ ಹೊತ್ತು 26 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಲಿ: ಕೆ.ಎನ್. ರಾಜಣ್ಣಹಿರಿಯೂರು ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ: ಎಚ್‌ಡಿಕೆ

ಬಿಜೆಪಿಯ ಫಾರಿನ್‌ ಫಂಡ್‌ ಕಥೆ

CCharan Aivarnad

Charan Aivarnad ಅಂಕಣ

• 5 ನಿಮಿಷದ ಓದು

ಬಿಜೆಪಿಯ ಫಾರಿನ್‌ ಫಂಡ್‌ ಕಥೆ
ಕೆಲವು ಕಡೆ ಬಿಜೆಪಿ ಮತ್ತು ಕಾಂಗ್ರೇಸಿನ ಲವ್‌ ಅಫೇರ್‌ ಇಟ್ಟುಕೊಂಡಿದ್ದವು, 2014 ರಲ್ಲಿ ದೆಹಲಿ ಹೈಕೋರ್ಟ್‌ ಈ ಎರಡೂ ಪಕ್ಷಗಳ ವಿರುದ್ದ ತೀರ್ಪನ್ನು ನೀಡಿತ್ತು, ಫಾರಿನ್‌ ಕಂಪನಿಯೊಂದರ ಭಾರತೀಯ ಅಂಗಸಂಸ್ಥೆಯಿಂದ ಬಿಜೆಪಿ ಮತ್ತು ಕಾಂಗ್ರೇಸ್‌ ಎರಡೂ ಪಕ್ಷಗಳು ದೇಣಿಗೆ ತೆಗೆದುಕೊಂಡಿದ್ದವು. ಅದು ಭಾರತದ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯ (FCRA) ಉಲ್ಲಂಘನೆ ಎಂದು ಡೆಲ್ಲಿ ಹೈಕೋರ್ಟ್‌ ತೀರ್ಪು ನೀಡಿತು, ತಕ್ಷಣವೇ, ಈ ಎರಡೂ ಪಕ್ಷಗಳು ಒಂದಾಗಿ ಸಂಸತ್ತಿನಲ್ಲಿ ಈ ಕಾಯ್ದೆಗೆ ತಿದ್ದುಪಡಿ ತಂದವು. ಈ ರೀತಿ ದೇಣಿಗೆ ಸ್ವೀಕರಿಸಲು ಸಾಧ್ಯವಾಗುವಂತೆ ಕಾನೂನನ್ನು ಬದಲಿಸಿದವು

ಎಸ್‌ಐಆರ್‌ನಿಂದ ಈಗಾಗಲೇ 13 ಕೋಟಿ ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ. ಇದರ ವಿರುದ್ದ ದೇಶದಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದಾವೆ. ಈ ಪ್ರತಿಭಟನೆಗಳಿಗೆ ವಿದೇಶದಿಂದ ಫಂಡ್‌ ಬರುತ್ತಿದೆ ಎಂಬುದು ಬಿಜೆಪಿಯ ಆರೋಪ. ಕಾಂಗ್ರೆಸ್‌ Red-Green Ecosystem ಜೊತೆ ಕೈ ಜೋಡಿಸಿದೆ ಎಂಬ ದೊಡ್ಡ ಆರೋಪವನ್ನು ಬಿಜೆಪಿ ಮಾಡಿದೆ. ಈ ಜಾಲವನ್ನು ಫಾಕ್ಸ್‌ ನ್ಯೂಸ್‌ ಕೆಯಾಸ್‌ ಇಂಕ್‌ (Chaos Inc) ಎಂದು ಕರೆದಿದೆ. ಈ ಸಂಘಟನೆಗಳು ಬೇರೆ ಬೇರೆ ದೇಶಗಳಲ್ಲಿ ಅಶಾಂತಿ ಸೃಷ್ಟಿಸಿ ಅಲ್ಲಿ ಸರ್ಕಾರ ಬದಲಿಸುವ ಸಂಚು ರೂಪಿಸುತ್ತಿವೆ ಎಂಬುದು ಬಿಜೆಪಿಯ ಆರೋಪ.

ಗೋದಿ ಮೀಡಿಯಾ ಕೂಡ ಈ ರೀತಿಯ ಆರೋಪಗಳನ್ನು ಅತಿರೇಕ ಮಟ್ಟದಲ್ಲಿ ಮಾಡುತ್ತಿವೆ. ದೇಶದಲ್ಲಿ ಪ್ರತಿಭಟನೆ ನಡೆಸುವ “ದೇಶದ್ರೋಹಿಗಳಿಗೆ” ಅಮೆರಿಕದ ‘ಡೀಪ್ ಸ್ಟೇಟ್‌’, ಚೀನಾ, ಪಾಕಿಸ್ತಾನದಿಂದ ಹಿಡಿದು ಜಾರ್ಜ್ ಸೊರೊಸ್, ಗ್ರೇಟಾ ಥನ್‌ಬರ್ಗ್ ಮತ್ತು ಎಲಾನ್ ಮಸ್ಕ್‌ವರೆಗೆ ಎಲ್ಲರೂ ಕಾಸು ಕೊಡುತ್ತಿದ್ದಾರೆ ಎಂದು ಯಾವ ಆಧಾರವೂ ಇಲ್ಲದೆ ಮಾಧ್ಯಮಗಳು ಪುಂಕಾನುಪುಂಕವಾಗಿ ಸುಳ್ಳು ಹೇಳುತ್ತಿವೆ.

ಯುರೋಪ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಗಳು ಹೆಚ್ಚುತ್ತಿರುವುದನ್ನು ಈ ಆರೋಪಗಳಿಗೆ ಪೂರಕವಾಗಿ ಬಿಜೆಪಿ ಉಲ್ಲೇಖಿಸುತ್ತಿದೆ. ಇವರ ಪ್ರಶ್ನೆ ಒಂದೇ: ಈ ಪ್ರತಿಭಟನೆಗಳಿಗೆ ಹಣ ಎಲ್ಲಿಂದ ಬರುತ್ತಿದೆ? ಆದರೆ ಅವರದೇ ಬಿಜೆಪಿಯ ಸರ್ಕಾರ ಸಿಜೆಪಿ ಪ್ರತಿಭಟನೆಗೆ ಫಾರಿನ್‌ ಫಂಡ್‌ ಬಂದಿರುವ ಯಾವ ಮಾಹಿತಿಯೂ ತಮ್ಮಲ್ಲಿ ಇಲ್ಲ ಎಂದು ಹೇಳುತ್ತಿದೆ.

ಫಾರಿನ್‌ ಫಂಡ್‌ ವಿಚಾರದಲ್ಲಿ ತಾನು ತುಂಬಾ ಸಾಚ, ತಮ್ಮ ಹಣಕಾಸಿನ ವ್ಯವಹಾರಗಳು ಹಾಲಿನಷ್ಟು ಶುದ್ದವಾಗಿದೆ ಎಂಬಂತೆ ಬಿಜೆಪಿ ವರ್ತಿಸುತ್ತಿದೆ. ರಾಜಕೀಯ ಪಕ್ಷಗಳಿಗೆ ಬರುವ ಫಂಡ್‌ ವಿಚಾರದಲ್ಲಿ ಅಪಾರದರ್ಶಕತೆಯನ್ನು ಇನ್ನಷ್ಟಿ ಬಲಪಡಿಸಿದ್ದು, ಅದಕ್ಕೆ ಕಾನೂನುಬದ್ಧ ಮಾನ್ಯತೆ ನೀಡಿದ್ದು ಇದೇ ಮೋದಿ ಸರ್ಕಾರ. ಎಲೆಕ್ಟೋರಲ್‌ ಬಾಂಡ್‌ ಮೂಲಕ ಯಾವ ಮಿತಿಯೂ ಇಲ್ಲದೆ ರಾಜಕೀಯ ಪಕ್ಷಗಳು ದೇಣಿಗೆ ಸಂಗ್ರಹಿಸಲು ಮತ್ತು ದೇಣಿಗೆ ನೀಡಿದವರ ಹೆಸರು ಬಹಿರಂಗವಾದಂತೆ ಕಾನೂನು ರೂಪಿಸಿದ್ದು ಇದೇ ಬಿಜೆಪಿ. ಇಲ್ಲಿ ವಿದೇಶಿ ಸಂಸ್ಥೆಗಳಿಗೂ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಅವಕಾಶ ಇತ್ತು.

ಇಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಗೂ ಅನುಕೂಲ ಇದ್ದರೂ, ಇದರ ಎಲ್ಲಾ ಲಾಭವನ್ನು ಪಡೆದಿದ್ದು ಬಿಜೆಪಿ. ನೀರಿನಂತೆ ಲೆಕ್ಕವಿಲ್ಲದ ಹಣ ಬಿಜೆಪಿಗೆ ಹರಿದು ಬಂತು. ಇಡೀ ಚುನಾವಣಾ ಬಾಂಡ್‌ನ ಮೂಲಕ ಬಂದ ಹಣದಲ್ಲಿ 95% ಹಣ ಹೋಗಿದ್ದು ಬಿಜೆಪಿಯ ಖಜಾನೆಗೆ. 2024ರಲ್ಲಿ ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್‌ಗಳ ವ್ಯವಸ್ಥೆಗೆ ನಿಷೇಧ ಹೇರುವ ವರೆಗೆ ಬಿಜೆಪಿ ಕೋಟಿ ಕೋಟಿ ಹಣವನ್ನು ಕಬಳಿಸಿತ್ತು.

ಈ ರೀತಿ ಅಕ್ರಮ ಮತ್ತು ಅನ್ಯಾಯದಿಂದ ಸಂಗ್ರಹಿಸಿದ ಹಣವನ್ನೇ ಬಳಸಿ ಬಿಜೆಪಿ ಹಿಂದಿಗಿಂತ ಹಲವು ಪಟ್ಟು ಹೆಚ್ಚು ಖರ್ಚು ಮಾಡಿ ಚುನಾವಣಾ ಪ್ರಚಾರ ಮಾಡಿದ್ದು. 2024-25 ರಲ್ಲಿ ಚುನಾವಣಾ ಪ್ರಚಾರಕ್ಕೆ ಕಾಂಗ್ರೆಸ್ 896 ಕೋಟಿ ರುಪಾಯಿ ಖರ್ಚು ಮಾಡಿತ್ತು. ಆದರೆ ಬಿಜೆಪಿ ಖರ್ಚು ಮಾಡಿದ್ದು ಬರೋಬ್ಬರಿ 3,355 ಕೋಟಿ ರುಪಾಯಿ!

ನಮ್ಮ ದೇಶದಲ್ಲಿ ರಾಜಕೀಯ ಪಕ್ಷಗಳ ಹಣದ ವ್ಯವಹಾರದಲ್ಲಿ ಪಾರದರ್ಶಕತೆ ಇಲ್ಲ. ಇವರಿಗೆ ಆದಾರ ತೆರಿಗೆಯಲ್ಲೂ ವಿನಾಯಿತಿ ಇದೆ. ಪಕ್ಷಗಳ ನಿಜವಾದ ಆದಾಯ ಎಷ್ಟು ಎಂದು ತಿಳಿದುಕೊಳ್ಳುವುದು ಸಾಧ್ಯವೇ ಇಲ್ಲದಷ್ಟು ಕಷ್ಟ. ಆಡಿಟ್‌ ಮಾಡಿ, ಅದರ ವರದಿಯನ್ನು ಪ್ರಕಟ ಮಾಡಬೇಕು ಎಂಬ ನಿಯಮವಿದೆ. ಆದರೆ ಇವರು ತಮಗೆ ಬೇಕಾದ ಆಡಿಟರ್‌ಗಳನ್ನು ನೇಮಿಸಿಕೊಳ್ಳುತ್ತಾರೆ. ಹೆಚ್ಚು ಮಾಹಿತಿ ಇಲ್ಲದ ಸಂಕ್ಷಿಪ್ತ ವರದಿಗಳನ್ನು ಪ್ರಕಟಿಸುತ್ತಾರೆ. ಇಲ್ಲಿ ಚುನಾವಣಾ ಆಯೋಗಕ್ಕಾಗಲೀ, ನಮ್ಮಂತ ಜನಸಾಮಾನ್ಯರಿಗಾಗಲಿ ಈ ಲೆಕ್ಕಪತ್ರಗಳನ್ನು ಆಳವಾಗಿ ಪರಿಶೀಲಿಸಲು ಆವಕಾಶವೇ ಇಲ್ಲ.

ಹೀಗಾಗಿ ಹಣ ಅಕ್ರಮವಾಗಿ ರಾಜಕೀಯ ಪಕ್ಷಗಳ, ಅದರಲ್ಲೂ ಬಿಜೆಪಿಯ ಖಜಾನೆಗೆ ಬಂದು ರಾಶಿ ಬೀಳುತ್ತದೆ. ನಕಲಿ ಕಂಪನಿಗಳು ಮತ್ತು ಕಾಗದದ ಮೇಲೆ ಹೆಸರಿಗೆ ಮಾತ್ರ ಇರುವ ರಾಜಕೀಯ ಪಕ್ಷಗಳು ದೇಣಿಗೆ ಸಂಗ್ರಹಿಸಿ, ತೆರಿಗೆ ವಿನಾಯಿತಿ ಪಡೆದು, ಯಾವುದೇ ಹೆಚ್ಚಿನ ಪರಿಶೀಲನೆಯಿಲ್ಲದೆ ಕಪ್ಪುಹಣವನ್ನು ಮರುಚಲಾವಣೆಗೆ ತರಲಾಗಿದೆ. ಈ ಪಕ್ಷಗಳು ನೋಂದಾಯಿತವಾಗಿರುತ್ತವೆ, ಆದರೆ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳು. ಇವು ಚುನಾವಣೆಯಲ್ಲಿ ಕನಿಷ್ಟ ಮತಗಳನ್ನೂ ಗಳಿಸಿರುವುದಿಲ್ಲ, ಸ್ಥಾನಗಳನ್ನು ಪಡೆದಿರುವುದಿಲ್ಲ, ಹಾಗಾಗಿ ಮಾನ್ಯತೆಯೂ ಸಿಕ್ಕಿರುವುದಿಲ್ಲ. ಆದರೆ ಈ ಪಕ್ಷಗಳ ನೋಂದಣಿಯನ್ನು ಕಾನೂನು ಪ್ರಕಾರ ರದ್ದು ಮಾಡುವುದು ಸುಲಭವಲ್ಲ.

ಇಂತಹ 3,200ಕ್ಕೂ ಹೆಚ್ಚು ಪಕ್ಷಗಳು 2022 ರಿಂದ 2024ರವರೆಗಿನ ಎರಡು ವರ್ಷಗಳಲ್ಲಿ 10,000 ಕೋಟಿ ರೂಪಾಯಿಗೂ ಅಧಿಕ ಚುನಾವಣಾ ದೇಣಿಗೆ ಪಡೆದಿವೆ. ಈ ಮೂಲಕ ಒಟ್ಟು ಬಿಜೆಪಿ ಮತ್ತು ಕಾಂಗ್ರೆಸ್‌ಗಿಂತಲೂ ಹೆಚ್ಚಿನ ಹಣವನ್ನು ಸಂಗ್ರಹಿಸಿವೆ.  ಈ ದೇಶದಲ್ಲಿ ಹಣವನ್ನು ಅಕ್ರಮವಾಗಿ ವರ್ಗಾಯಿಸಲು ರಾಜಕೀಯ ಪಕ್ಷಗಳು ಹುಟ್ಟಿರುವುದು ವಿಪರ್ಯಾಸ. ಇಂತಹ ವ್ಯವಸ್ಥೆಯಲ್ಲಿ ಬಿಜೆಪಿ ಜನರು ನಡೆಸುವ ಪ್ರತಿಭಟನೆಗೆ ಹಣ ಎಲ್ಲಿಂದ ಬರುತ್ತಿದೆ ಎಂದು ಕೇಳುತ್ತಿದೆ!

ಮೋದಿ ಅಧಿಕಾರಕ್ಕೆ ಬರುವ ಒಂದು ವರ್ಷ ಮೊದಲು, 2013 ರಲ್ಲಿ ಕೇಂದ್ರ ಮಾಹಿತಿ ಆಯೋಗವು ಆರು ರಾಷ್ಟ್ರೀಯ ರಾಜಕೀಯ ಪಕ್ಷಗಳನ್ನು ಮಾಹಿತಿ ಹಕ್ಕು ಕಾಯ್ದೆಯ (RTI) ಅಡಿಯಲ್ಲಿ ‘ಸಾರ್ವಜನಿಕ ಪ್ರಾಧಿಕಾರಗಳು’ ಎಂದು ಪರಿಗಣಿಸಬೇಕು ಎಂದು ಘೋಷಿಸಿತ್ತು. ಇತರ ಶಾಸನಬದ್ಧ ಸಂಸ್ಥೆಗಳಂತೆ ಈ ಪಕ್ಷಗಳೂ ಪ್ರಮುಖ ಮಾಹಿತಿಗಳನ್ನು ಬಹಿರಂಗಪಡಿಸಬೇಕು ಎಂದು ಆದೇಶಿಸಿತ್ತು.

ಆದರೆ ಸಿಪಿಎಂ ಸೇರಿದಂತೆ ಆರೂ ರಾಜಕೀಯ ಪಕ್ಷಗಳು ಈ ಆದೇಶವನ್ನು ವಿರೋಧಿಸಿದವು. ಆಗ ಅಧಿಕಾರದಲ್ಲಿ ಇದ್ದ ಕಾಂಗ್ರೇಸ್‌ ಕೂಡ ಇದನ್ನು ವಿರೋಧಿಸಿ, ಇದರಿಂದ ಪ್ರಜಾಸತ್ತಾತ್ಮಕ ಸಂಸ್ಥೆಗಳಿಗೆ ಹಾನಿಯಾಗಲಿದೆ ವಾದ ಮಾಡಿತ್ತು. ಈ ವಿಚಾರದಲ್ಲಿ ಎಲ್ಲಾ ಪಕ್ಷಗಳು ಒಂದಾಗಿದ್ದವು. ಆಮೇಲೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅದೇ ಕೇಂದ್ರ ಮಾಹಿತಿ ಆಯೋಗ ಈ ವಿಚಾರಕ್ಕೆ ಎಳ್ಳು ನೀರು ಬಿಟ್ಟಿತು.

ಹೀಗೆ, ಕೆಲವು ಕಡೆ ಬಿಜೆಪಿ ಮತ್ತು ಕಾಂಗ್ರೇಸಿನ ಲವ್‌ ಅಫೇರ್‌ ಇಟ್ಟುಕೊಂಡಿದ್ದವು, 2014 ರಲ್ಲಿ ದೆಹಲಿ ಹೈಕೋರ್ಟ್‌ ಈ ಎರಡೂ ಪಕ್ಷಗಳ ವಿರುದ್ದ ತೀರ್ಪನ್ನು ನೀಡಿತ್ತು, ಫಾರಿನ್‌ ಕಂಪನಿಯೊಂದರ ಭಾರತೀಯ ಅಂಗಸಂಸ್ಥೆಯಿಂದ ಬಿಜೆಪಿ ಮತ್ತು ಕಾಂಗ್ರೇಸ್‌ ಎರಡೂ ಪಕ್ಷಗಳು ದೇಣಿಗೆ ತೆಗೆದುಕೊಂಡಿದ್ದವು. ಅದು ಭಾರತದ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯ (FCRA) ಉಲ್ಲಂಘನೆ ಎಂದು ಡೆಲ್ಲಿ ಹೈಕೋರ್ಟ್‌ ತೀರ್ಪು ನೀಡಿತು, ತಕ್ಷಣವೇ, ಈ ಎರಡೂ ಪಕ್ಷಗಳು ಒಂದಾಗಿ ಸಂಸತ್ತಿನಲ್ಲಿ ಈ ಕಾಯ್ದೆಗೆ ತಿದ್ದುಪಡಿ ತಂದವು. ಈ ರೀತಿ ದೇಣಿಗೆ ಸ್ವೀಕರಿಸಲು ಸಾಧ್ಯವಾಗುವಂತೆ ಕಾನೂನನ್ನು ಬದಲಿಸಿದವು.   

ವಿಚಿತ್ರವೆಂದರೆ ಈಗ ಅದೇ ನಿಯಮಗಳನ್ನು ಎನ್‌ಜಿಒ ಮತ್ತು ಸಿವಿಲ್‌ ಸೊಸೈಟಿ ಆರ್ಗನೇಸೇಷನ್‌ ಮೇಲೆ ಕಠಿಣ ನಿರ್ಬಂಧ ಹೇರಳು ಬಳಸಲಾಗಿದೆ. ಆರಂಭದಲ್ಲಿ ರಾಜಕೀಯ ಪಕ್ಷಗಳು ವಿದೇಶಿ ದೇಣಿಗೆ ಬಳಸುವುದನ್ನು ತಡೆಯಲು ಮಾತ್ರ ಅನ್ವಯವಾಗುತ್ತಿದ್ದ ಎಫ್‌ಸಿಆರ್‌ಎ ನಿಯಮಗಳನ್ನು, ವಿದೇಶಿ ಹಣ ಪಡೆಯುವ ಎಲ್ಲ ರೀತಿಯ ಎನ್‌ಜಿಒಗಳನ್ನೂ ನಿಯಂತ್ರಿಸುವಂತೆ ವಿಸ್ತರಿಸಿದ್ದು ಹಿಂದಿನ ಕಾಂಗ್ರೆಸ್ ಸರ್ಕಾರ. 2014ರಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಈ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಿತು.

ಮೋದಿ ಸರ್ಕಾರ ನಿಯಮಗಳನ್ನು ಬಿಗಿಗೊಳಿಸಿದ ಪರಿಣಾಮ, ಯಾವ ಎನ್‌ಜಿಒಗಳಿಗೆ ವಿದೇಶಿ ದೇಣಿಗೆ ಸಿಗಬೇಕು, ಯಾವುದಕ್ಕೆ ಸಿಗಬಾರದು ಎಂಬುದನ್ನು ನಿರ್ಧರಿಸುವ ಅಧಿಕಾರ ಮಾತ್ರವಲ್ಲದೆ, ವಿದೇಶಿ ದೇಣಿಗೆ ಪಡೆಯಲು ಅನುಮತಿ ಹೊಂದಿರುವ ಎನ್‌ಜಿಒಗಳು ಆ ಹಣವನ್ನು ಹೇಗೆ ಖರ್ಚು ಮಾಡಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರವೂ ಸರ್ಕಾರದ ಕೈಗೆ ಬಂದಿದೆ. ಇದರ ಪರಿಣಾಮವಾಗಿ ಸಾವಿರಾರು ಎನ್‌ಜಿಒಗಳು ಕೆಲಸ ನಿಲ್ಲಿಸಿವೆ. ಅವುಗಳ ಕೈಯಲ್ಲಿ ಕೆಲಸ ಮಾಡಲು ಹಣ ಕಮ್ಮಿಯಾಗಿದೆ. ಈ ಎನ್‌ಜಿಒಗಳು ಬಡವರ, ಸಮಾಜದ ಅಂಚಿನಲ್ಲಿರುವ ಜನರ ಕೆಲಸ ಮಾಡುತ್ತಿದ್ದವು. ಸರ್ಕಾರಗಳ ಈ ಕುತಂತ್ರಕ್ಕೆ ಜನಸಾಮಾನ್ಯರು ಬೆಲೆ ತೆರುವಂತೆ ಆಗಿದೆ.  

ಇಲ್ಲಿ ಇನ್ನೊಂದು ವಿಚಿತ್ರ ಇದೆ. ಬಿಜೆಪಿಯ ಅಡುಗೆ ಮನೆ ಆರ್‌ಎಸ್‌ಎಸ್‌, ಎನ್‌ಜಿಒಗಳಿಗೆ ಅನ್ವಯವಾಗುವ ಯಾವ ನಿಯಮಗಳೂ ಇದಕ್ಕೆ ಅಪ್ಲೈ ಆಗಲ್ಲ. ಬಹುಶಃ ಇಡೀ ದೇಶದಲ್ಲಿ ಕಾಸು ಮಾಡುವ ಲಾಭರಹಿತ ಸಂಘಟನೆ ಇದ್ದರೆ ಅದು ಆರ್‌ಎಸ್‌ಎಸ್‌. ಇದು ಫಾರಿನ್‌ನಲ್ಲಿ ಇರುವ ತನ್ನ ಅಂಗಸಂಸ್ಥೆಗಳ ಮೂಲಕ ಡಾಲರ್‌ನಲ್ಲಿ ಹಣ ಸಂಗ್ರಹಿಸುತ್ತಿದೆ ಎಂಬ ವರದಿಗಳಿವೆ. ಆದರೂ ಆರ್‌ಎಸ್‌ಎಸ್‌ ಇನ್ನೂ ರಿಜಿಸ್ಟರ್‌ ಆಗಿಲ್ಲ. ಹೀಗಾಗಿ ಹಣ ಮತ್ತು ಅಡಿಟ್‌ ಮತ್ತು ಹಣಕಾಸಿಗೆ ಸಂಬಂಧಿಸಿದ ಯಾವ ಕಾನೂನಿಗೂ ಈ ಸಂಸ್ಥೆ ಒಳಪಟ್ಟಿಲ್ಲ.

ಈಗ ಈ ಬಿಜೆಪಿ, ಈ ಆರ್‌ಎಸ್‌ಎಸ್‌ ದೇಶದ ಕಾನೂನುಗಳನ್ನು ಧ್ವಂಸ ಮಾಡಿ ದೇಶಪ್ರೇಮಿಗಳಂತೆ ಪೋಸ್‌ ಕೊಡುತ್ತಿವೆ. ಆಂತರಿಕ ಭಿನ್ನಮತ ಮತ್ತು ಪ್ರತಿಭಟನೆಗಳನ್ನು ಅಕ್ರಮವೆಂದು ಕರೆಯುತ್ತಿವೆ. ಸರ್ಬಿಯಾದಲ್ಲಿ ಆಗಿದ್ದೂ ಇದೇ. ಅಲ್ಲಿ ಸ್ಟೂಡೆಂಟ್‌ಗಳ ಗುಂಪು ಎಲೆಕ್ಷನ್‌ನಲ್ಲಿ ಆಡಳಿತ ಪಕ್ಷವನ್ನು ಸೋಲಿಸಿತು. ಈಗ ಅಲ್ಲಿನ ಮಾಜಿ ಲೀಡರ್‌ ಅಲೆಕ್ಸಾಂಡರ್ ವುಸಿಕ್ ಇದೇ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ. ಹೇಳದ ಯುರೋಪಿಯನ್ ರಾಷ್ಟ್ರಗಳು ಮತ್ತು ಅಮೆರಿಕದ ‘ಡೀಪ್ ಸ್ಟೇಟ್‌’ ಕಾರಣ, ಇವು ಕೊಟ್ಟಿರುವ ಪಂಡ್‌ನಿಂದ ಈ ಪ್ರತಿಭಟನೆಗಳು ನಡೆದಿವೆ ಎಂದು ಪಿಳ್ಳೆ ನೆವ ಹೇಳುತ್ತಿದ್ದಾರೆ.

ಮೋದಿಯ ಕತೆಯೂ ಇದೇ. ಮಕ್ಕಳ ಪ್ರತಿಭಟನೆ ಮೋದಿಯವರ ಬೆವರಿಳಿಸಿದೆ. ತಮ್ಮ ಅಧಿಕಾರ ಉಳಿಸಿಕೊಳ್ಳಲು ದೇಶದ ಜನತೆಯನ್ನು ಶತ್ರುಗಳಂತೆ ನೋಡುತ್ತಿದ್ದಾರೆ. ಜನರ ಮೇಲೆ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ.  ಹಠಾತ್ತನೆ ಭುಗಿಲೆದ್ದ ವಿದ್ಯಾರ್ಥಿಗಳ ಪ್ರತಿಭಟನೆಯಿಂದ ಮೋದಿ ಎಷ್ಟರಮಟ್ಟಿಗೆ ವಿಚಲಿತರಾಗಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇನಲ್ಲ. ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಅವರು ಇಲ್ಲದ ಶತ್ರುಗಳನ್ನು ಸೃಷ್ಟಿಸಿ, ಆಧಾರರಹಿತ ಆರೋಪಗಳ ಮೊರೆ ಹೋಗುತ್ತಿರುವುದಕ್ಕೆ ಇದೇ ಕಾರಣವಿರಬಹುದು.

Ref.

ವಿಷಯಗಳು: #bjp #CJP #congress #RSS
CCharan Aivarnad

Charan Aivarnad

Peepal Media · ಅಂಕಣ ವಿಭಾಗ

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದವರು. ಜಾನಪದ, ಇತಿಹಾಸ, ರಾಜಕೀಯ, ಸಾಂಸ್ಕೃತಿಕ ಅಧ್ಯಯನ, ಸಬಾಲ್ಟರ್ನ್‌ ಸ್ಟಡೀಸ್, ಭಾಷೆ, ಸಾಂಸ್ಕೃತಿಕ ರಾಜಕಾರಣ ಇವರ‌ ಆಸಕ್ತಿಯ ಕ್ಷೇತ್ರಗಳು.

ಸಂಬಂಧಿತ ಸುದ್ದಿಗಳು