ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಎನ್‌ವಿಡಿಯಾದಲ್ಲಿ ನಾಯಕತ್ವದ ಪಲ್ಲಟಕ್ಕೆ ಸಿದ್ಧತೆ; ಜೆನ್ಸನ್ ಹುವಾಂಗ್ ಮರುಪ್ರವೇಶಕ್ಕೆ ಮಸ್ಕ್ ಬೆಂಬಲಅಡಿಕೆ, ತೆಂಗಿನ ತೋಟಗಳ ರಕ್ಷಣೆಗೆ ಭದ್ರಾ ಜಲಾಶಯದಿಂದ ನೀರು ಬಿಡುಗಡೆಹಿರಿಯೂರು ಉಪಚುನಾವಣೆ ಕಣಕ್ಕೆ ಪೂರ್ಣಿಮಾ ಶ್ರೀನಿವಾಸ್ ಆಸಕ್ತಿ; ಕಾಂಗ್ರೆಸ್ ಟಿಕೆಟ್‌ಗೆ ಅರ್ಜಿ ಸಲ್ಲಿಕೆನವೆಂಬರ್ 16ರ ಸಹಿಷ್ಣುತೆ ದಿನ ಆಚರಿಸುವ ನೈತಿಕ ಅರ್ಹತೆ ಜಗತ್ತಿಗಿದೆಯೇ?ಬಹ್ರೇನ್‌ನ ಅಮೆರಿಕ ಸೇನಾ ನೆಲೆಗೆ ಇರಾನ್‌ನಿಂದ ಡ್ರೋನ್ ದಾಳಿ ಯತ್ನಬ್ರಿಟನ್ ಪೌರತ್ವ ಪಡೆದ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ; 2010ರಿಂದ ಭಾರತದಿಂದ ಹೊರಗೆ ವಾಸ, ದೇಶ ತೊರೆದವರ ಪಟ್ಟಿಗೆ ಮತ್ತೊಂದು ಸೇರ್ಪಡೆಪಶ್ಚಿಮ ಬಂಗಾಳ: ಪೊಲೀಸರ ಗುಂಡಿನ ದಾಳಿಗೆ ಆರೋಪಿ ಸಾವು; ಆರು ತಿಂಗಳಲ್ಲಿ ಐದನೇ ಎನ್‌ಕೌಂಟರ್ಉತ್ತರ ಪ್ರದೇಶ: ಡಿಜೆ ಸದ್ದಿಗೆ 20 ದಿನದ ಮಗು ಸಾವು; ಕುಟುಂಬದ ದೂರಿನ ಮೇರೆಗೆ ಡಿಜೆ ಉಪಕರಣ ವಶಕ್ಕೆಅಧಿಕಾರ ಸಿಗದ ಸಿಗದ ಹತಾಶೆಯಲ್ಲಿ ಕಾಂಗ್ರೆಸ್‌ ತನ್ನ ಕಾರ್ಯಕ್ರಮಗಳಿಗೆ ವಿದೇಶಿ ಎಡಪಂಥೀಯರನ್ನು ಆಹ್ವಾನಿಸುತ್ತಿದೆ: ಅಮಿತ್‌ ಶಾ ಆರೋಪದೆಹಲಿ ವಾಯುಮಾಲಿನ್ಯ: ಕೇಂದ್ರ ಸಚಿವ ಭೂಪೇಂದ್ರ ಯಾದವ್ ಕಚೇರಿಗೆ ತೆರಳಲು ಎಐಎಸ್ಎ ಅಧ್ಯಕ್ಷೆ ನೇಹಾ ಬೋರಾ ನಿರ್ಧಾರಮತದಾರರ ಪಟ್ಟಿ ಅಕ್ರಮ, ಎಸ್‌ಐಆರ್‌ ವಿರುದ್ಧ ನವೆಂಬರ್ 26ರಂದು ದೇಶಾದ್ಯಂತ ಸಂವಿಧಾನ ರಕ್ಷಾ ಪಾದಯಾತ್ರೆ: ಕಾಂಗ್ರೆಸ್ ಘೋಷಣೆದೇವಸ್ಥಾನದ ಆಸ್ತಿಗಳ ಮೇಲೆ ಅರ್ಚಕರಿಗೆ ಮಾಲೀಕತ್ವದ ಹಕ್ಕಿಲ್ಲ: ಕೇರಳ ಹೈಕೋರ್ಟ್ರಾಜಸ್ಥಾನದ ರೈಲು ಹಳಿ ಸ್ಫೋಟ ಪ್ರಕರಣ: ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕ ಶಂಕೆ; ಮಹಕ್‌ದೀಪ್ ಕೌರ್, ದವೀಂದರ್ ಸಿಂಗ್ ಬಂಧನನೀವೊಬ್ಬ ಸಂಸದರು, ಗ್ರಂಥಾಲಯಕ್ಕೆ ಹೋಗಿ ಇತಿಹಾಸದ ಬಗ್ಗೆ ಓದಿ – ಕಂಗನಾ ವಿರುದ್ಧ ರಮ್ಯಾ ಕಿಡಿದಾವಣಗೆರೆಯಲ್ಲಿ ಅಮಾನವೀಯ ಘಟನೆ ಸಾಲದ ಕಾರಣ ಕುಟುಂಬವನ್ನು – ಮನೆಯಿಂದ ಹೊರಹಾಕಿದ ಮೈಕ್ರೋಫೈನಾನ್ಸ್ ಸಂಸ್ಥೆKPSC ಹಗರಣ ED ದಾಳಿ ವೇಳೆ 1.22 ಕೋಟಿ – ಮೌಲ್ಯದ ಆಸ್ತಿ ಜಪ್ತಿಬೈಕಿಗೆ KSRTC ಬಸ್ ಡಿಕ್ಕಿ, ಭೀಕರ ಅಪಘಾತದಲ್ಲಿ – ಇಬ್ಬರ ಅಂತ್ಯವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ವೆಂಬರ್ 17ರಿಂದ ಆಶಾ ಕಾರ್ಯಕರ್ತೆಯರ – ಅನಿರ್ದಿಷ್ಟಾವಧಿ ಮುಷ್ಕರಮಂಗಳೂರಿನಲ್ಲಿ ಸಚಿವ ಸಂಪುಟ ಸಭೆಗೆ 3.83 ಕೋಟಿ ಖರ್ಚು – ಒಂದೇ ದಿನಕ್ಕೆ ಇಷ್ಟು ಖರ್ಚಾ ?ತುರ್ಕಿಯಿಂದ ಹೈದರಾಬಾದಿಗೆ ಬಂದ ರಾಜಕುಮಾರಿಯರು: ನಿಜಾಮರೊಂದಿಗೆ ಬೆಸೆದ ಉಸ್ಮಾನಿಯಾ ಖಿಲಾಫತ್ತಿನ ಸಂಬಂಧ

ಹಿರಿಯೂರು ಉಪಚುನಾವಣೆ ಕಣಕ್ಕೆ ಪೂರ್ಣಿಮಾ ಶ್ರೀನಿವಾಸ್ ಆಸಕ್ತಿ; ಕಾಂಗ್ರೆಸ್ ಟಿಕೆಟ್‌ಗೆ ಅರ್ಜಿ ಸಲ್ಲಿಕೆ

PPeepal Media Desk

Peepal Media Desk ರಾಜಕೀಯ, ರಾಜ್ಯ

• 1 ನಿಮಿಷದ ಓದು

ಹಿರಿಯೂರು ಉಪಚುನಾವಣೆ ಕಣಕ್ಕೆ ಪೂರ್ಣಿಮಾ ಶ್ರೀನಿವಾಸ್ ಆಸಕ್ತಿ; ಕಾಂಗ್ರೆಸ್ ಟಿಕೆಟ್‌ಗೆ ಅರ್ಜಿ ಸಲ್ಲಿಕೆ

ಡಿ. ಸುಧಾಕರ್ ಪುತ್ರನಿಗೆ ಅವಕಾಶ ಸಿಗದಿದ್ದರೆ ತಮ್ಮನ್ನು ಪರಿಗಣಿಸುವಂತೆ ಮನವಿ; ಪಕ್ಷದ ತೀರ್ಮಾನಕ್ಕೆ ಬದ್ಧ ಎಂದ ಮಾಜಿ ಶಾಸಕಿ

ಹಿರಿಯೂರು: ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಚುರುಕುಗೊಳ್ಳುತ್ತಿರುವ ಬೆನ್ನಲ್ಲೇ, ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕೂಡ ಟಿಕೆಟ್ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿರುವುದು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭ್ಯರ್ಥಿ ಆಯ್ಕೆಯಲ್ಲಿ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರವೇ ಅಂತಿಮವಾಗಿದ್ದು, ಅದಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಸ್ಪಷ್ಟಪಡಿಸಿದರು.

ದಿವಂಗತ ಡಿ. ಸುಧಾಕರ್ ಅವರ ಪುತ್ರನಿಗೆ ಪಕ್ಷದ ಟಿಕೆಟ್ ನೀಡಿದರೆ ಅವರ ಗೆಲುವಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಲಿದ್ದಾರೆ. ಒಂದು ವೇಳೆ ಪಕ್ಷದ ಮಾನದಂಡಗಳ ಅನ್ವಯ ಅವರಿಗೆ ಟಿಕೆಟ್ ನೀಡಲು ಸಾಧ್ಯವಾಗದಿದ್ದರೆ, ಕ್ಷೇತ್ರದ ಮಾಜಿ ಶಾಸಕಿಯಾಗಿ ತಮ್ಮ ಹೆಸರನ್ನೂ ಪರಿಗಣಿಸಬೇಕು ಎಂಬ ಉದ್ದೇಶದಿಂದ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದರು.

ಶಾಸಕಿಯಾಗಿದ್ದ ಐದು ವರ್ಷಗಳ ಅವಧಿಯಲ್ಲಿ ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕ ಹೊಂದಿದ್ದು, ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಬಹುತೇಕ ಭರವಸೆಗಳನ್ನು ಈಡೇರಿಸಿದ್ದೇನೆ. ವಿಧಾನಸಭೆಯಲ್ಲಿಯೂ ಕ್ಷೇತ್ರದ ಜನರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪ್ರಸ್ತಾಪಿಸಿದ್ದೇನೆ. ಪೂರ್ಣಗೊಳ್ಳದೆ ಉಳಿದಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಮುಂದಿನ ದಿನಗಳಲ್ಲಿಯೂ ಕಾಂಗ್ರೆಸ್ ಆದ್ಯತೆ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷಕ್ಕೆ ಎದುರಾದ ಸೋಲನ್ನು ಹಿರಿಯೂರು ಉಪಚುನಾವಣೆಯೊಂದಿಗೆ ತಳುಕು ಹಾಕುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟ ಅವರು, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಲ್ಲಿನ ಟಿಕೆಟ್ ಹಂಚಿಕೆ ಗೊಂದಲಗಳು ಕಾಂಗ್ರೆಸ್‌ಗೆ ಸವಾಲಾಗುವುದಿಲ್ಲ. ಮೈತ್ರಿ ಪಕ್ಷಗಳನ್ನು ಎದುರಿಸಲು ಕಾಂಗ್ರೆಸ್ ಸನ್ನದ್ಧವಾಗಿದ್ದು, ಹಿರಿಯೂರಿನಲ್ಲಿ ಗೆಲುವು ಸಾಧಿಸುವ ನಿರೀಕ್ಷೆಯಿದೆ ಎಂದರು.

ಇದೇ ವೇಳೆ 2028ರ ವಿಧಾನಸಭಾ ಚುನಾವಣೆಯಲ್ಲಿ ಕೆ.ಆರ್. ಪುರಂ ಅಥವಾ ಹಿರಿಯೂರು ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಕೇಳಲಾದ ಪ್ರಶ್ನೆಗೆ, ಈ ನಿರ್ಧಾರವನ್ನು ಪಕ್ಷದ ನಾಯಕತ್ವವೇ ಕೈಗೊಳ್ಳಲಿದೆ ಎಂದು ಉತ್ತರಿಸಿದರು. ಕ್ಷೇತ್ರ ಪುನರ್ವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಜಾರಿಯಾದ ಬಳಿಕ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿ ಮುಂದಿನ ಹೆಜ್ಜೆ ಇಡುವುದಾಗಿ ತಿಳಿಸಿದರು.

PPeepal Media Desk

Peepal Media Desk

Peepal Media · ರಾಜಕೀಯ ವಿಭಾಗ

ಸಂಬಂಧಿತ ಸುದ್ದಿಗಳು