ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಎನ್‌ವಿಡಿಯಾದಲ್ಲಿ ನಾಯಕತ್ವದ ಪಲ್ಲಟಕ್ಕೆ ಸಿದ್ಧತೆ; ಜೆನ್ಸನ್ ಹುವಾಂಗ್ ಮರುಪ್ರವೇಶಕ್ಕೆ ಮಸ್ಕ್ ಬೆಂಬಲಅಡಿಕೆ, ತೆಂಗಿನ ತೋಟಗಳ ರಕ್ಷಣೆಗೆ ಭದ್ರಾ ಜಲಾಶಯದಿಂದ ನೀರು ಬಿಡುಗಡೆಹಿರಿಯೂರು ಉಪಚುನಾವಣೆ ಕಣಕ್ಕೆ ಪೂರ್ಣಿಮಾ ಶ್ರೀನಿವಾಸ್ ಆಸಕ್ತಿ; ಕಾಂಗ್ರೆಸ್ ಟಿಕೆಟ್‌ಗೆ ಅರ್ಜಿ ಸಲ್ಲಿಕೆನವೆಂಬರ್ 16ರ ಸಹಿಷ್ಣುತೆ ದಿನ ಆಚರಿಸುವ ನೈತಿಕ ಅರ್ಹತೆ ಜಗತ್ತಿಗಿದೆಯೇ?ಬಹ್ರೇನ್‌ನ ಅಮೆರಿಕ ಸೇನಾ ನೆಲೆಗೆ ಇರಾನ್‌ನಿಂದ ಡ್ರೋನ್ ದಾಳಿ ಯತ್ನಬ್ರಿಟನ್ ಪೌರತ್ವ ಪಡೆದ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ; 2010ರಿಂದ ಭಾರತದಿಂದ ಹೊರಗೆ ವಾಸ, ದೇಶ ತೊರೆದವರ ಪಟ್ಟಿಗೆ ಮತ್ತೊಂದು ಸೇರ್ಪಡೆಪಶ್ಚಿಮ ಬಂಗಾಳ: ಪೊಲೀಸರ ಗುಂಡಿನ ದಾಳಿಗೆ ಆರೋಪಿ ಸಾವು; ಆರು ತಿಂಗಳಲ್ಲಿ ಐದನೇ ಎನ್‌ಕೌಂಟರ್ಉತ್ತರ ಪ್ರದೇಶ: ಡಿಜೆ ಸದ್ದಿಗೆ 20 ದಿನದ ಮಗು ಸಾವು; ಕುಟುಂಬದ ದೂರಿನ ಮೇರೆಗೆ ಡಿಜೆ ಉಪಕರಣ ವಶಕ್ಕೆಅಧಿಕಾರ ಸಿಗದ ಸಿಗದ ಹತಾಶೆಯಲ್ಲಿ ಕಾಂಗ್ರೆಸ್‌ ತನ್ನ ಕಾರ್ಯಕ್ರಮಗಳಿಗೆ ವಿದೇಶಿ ಎಡಪಂಥೀಯರನ್ನು ಆಹ್ವಾನಿಸುತ್ತಿದೆ: ಅಮಿತ್‌ ಶಾ ಆರೋಪದೆಹಲಿ ವಾಯುಮಾಲಿನ್ಯ: ಕೇಂದ್ರ ಸಚಿವ ಭೂಪೇಂದ್ರ ಯಾದವ್ ಕಚೇರಿಗೆ ತೆರಳಲು ಎಐಎಸ್ಎ ಅಧ್ಯಕ್ಷೆ ನೇಹಾ ಬೋರಾ ನಿರ್ಧಾರಮತದಾರರ ಪಟ್ಟಿ ಅಕ್ರಮ, ಎಸ್‌ಐಆರ್‌ ವಿರುದ್ಧ ನವೆಂಬರ್ 26ರಂದು ದೇಶಾದ್ಯಂತ ಸಂವಿಧಾನ ರಕ್ಷಾ ಪಾದಯಾತ್ರೆ: ಕಾಂಗ್ರೆಸ್ ಘೋಷಣೆದೇವಸ್ಥಾನದ ಆಸ್ತಿಗಳ ಮೇಲೆ ಅರ್ಚಕರಿಗೆ ಮಾಲೀಕತ್ವದ ಹಕ್ಕಿಲ್ಲ: ಕೇರಳ ಹೈಕೋರ್ಟ್ರಾಜಸ್ಥಾನದ ರೈಲು ಹಳಿ ಸ್ಫೋಟ ಪ್ರಕರಣ: ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕ ಶಂಕೆ; ಮಹಕ್‌ದೀಪ್ ಕೌರ್, ದವೀಂದರ್ ಸಿಂಗ್ ಬಂಧನನೀವೊಬ್ಬ ಸಂಸದರು, ಗ್ರಂಥಾಲಯಕ್ಕೆ ಹೋಗಿ ಇತಿಹಾಸದ ಬಗ್ಗೆ ಓದಿ – ಕಂಗನಾ ವಿರುದ್ಧ ರಮ್ಯಾ ಕಿಡಿದಾವಣಗೆರೆಯಲ್ಲಿ ಅಮಾನವೀಯ ಘಟನೆ ಸಾಲದ ಕಾರಣ ಕುಟುಂಬವನ್ನು – ಮನೆಯಿಂದ ಹೊರಹಾಕಿದ ಮೈಕ್ರೋಫೈನಾನ್ಸ್ ಸಂಸ್ಥೆKPSC ಹಗರಣ ED ದಾಳಿ ವೇಳೆ 1.22 ಕೋಟಿ – ಮೌಲ್ಯದ ಆಸ್ತಿ ಜಪ್ತಿಬೈಕಿಗೆ KSRTC ಬಸ್ ಡಿಕ್ಕಿ, ಭೀಕರ ಅಪಘಾತದಲ್ಲಿ – ಇಬ್ಬರ ಅಂತ್ಯವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ವೆಂಬರ್ 17ರಿಂದ ಆಶಾ ಕಾರ್ಯಕರ್ತೆಯರ – ಅನಿರ್ದಿಷ್ಟಾವಧಿ ಮುಷ್ಕರಮಂಗಳೂರಿನಲ್ಲಿ ಸಚಿವ ಸಂಪುಟ ಸಭೆಗೆ 3.83 ಕೋಟಿ ಖರ್ಚು – ಒಂದೇ ದಿನಕ್ಕೆ ಇಷ್ಟು ಖರ್ಚಾ ?ತುರ್ಕಿಯಿಂದ ಹೈದರಾಬಾದಿಗೆ ಬಂದ ರಾಜಕುಮಾರಿಯರು: ನಿಜಾಮರೊಂದಿಗೆ ಬೆಸೆದ ಉಸ್ಮಾನಿಯಾ ಖಿಲಾಫತ್ತಿನ ಸಂಬಂಧ

ಅಡಿಕೆ, ತೆಂಗಿನ ತೋಟಗಳ ರಕ್ಷಣೆಗೆ ಭದ್ರಾ ಜಲಾಶಯದಿಂದ ನೀರು ಬಿಡುಗಡೆ

PPeepal Media Desk

Peepal Media Desk ರಾಜ್ಯ

• 1 ನಿಮಿಷದ ಓದು

ಅಡಿಕೆ, ತೆಂಗಿನ ತೋಟಗಳ ರಕ್ಷಣೆಗೆ ಭದ್ರಾ ಜಲಾಶಯದಿಂದ ನೀರು ಬಿಡುಗಡೆ

ಶಿವಮೊಗ್ಗ: ಬಿಸಿಲಿನ ತೀವ್ರತೆಯಿಂದ ನೀರಿನ ಅಭಾವ ಎದುರಿಸುತ್ತಿರುವ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ನೆರವಿಗೆ ಧಾವಿಸಿರುವ ಭದ್ರಾ ಜಲಾಶಯದಿಂದ ಬಲದಂಡೆ ಹಾಗೂ ಎಡದಂಡೆ ನಾಲೆಗಳಿಗೆ ನೀರು ಹರಿಸಲು ನಿರ್ಧರಿಸಲಾಗಿದೆ. ಸೋಮವಾರದಿಂದ ಮುಂದಿನ 10 ದಿನಗಳ ಕಾಲ ಪ್ರತಿದಿನ 1,500 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ.

ಮಳೆಯ ಕೊರತೆ ಹಾಗೂ ಹೆಚ್ಚುತ್ತಿರುವ ಬಿಸಿಲಿನ ಪರಿಣಾಮ ಅಡಿಕೆ, ತೆಂಗು ಸೇರಿದಂತೆ ತೋಟಗಾರಿಕಾ ಬೆಳೆಗಳು ಒಣಗುವ ಆತಂಕ ಎದುರಾಗಿದೆ. ಬೆಳೆಗಳ ಸಂರಕ್ಷಣೆಗಾಗಿ ನಾಲೆಗಳಿಗೆ ನೀರು ಹರಿಸುವಂತೆ ರೈತರು ಹಲವು ದಿನಗಳಿಂದ ಒತ್ತಾಯಿಸುತ್ತಿದ್ದರು.

ರೈತರ ಬೇಡಿಕೆಯನ್ನು ಪರಿಗಣಿಸಿ ಎರಡೂ ನಾಲೆಗಳಿಗೆ ನೀರು ಹರಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಭಾನುವಾರ ಸರ್ಕಾರಿ ರಜೆ ಇದ್ದ ಹಿನ್ನೆಲೆಯಲ್ಲಿ ಅಧಿಕೃತ ಆದೇಶ ಸೋಮವಾರ ಪ್ರಕಟಗೊಂಡಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ಅವರು ಶಿವಮೊಗ್ಗದಲ್ಲಿ ತಿಳಿಸಿದ್ದಾರೆ.

ಹತ್ತು ದಿನಗಳ ಕಾಲ ನಡೆಯಲಿರುವ ನೀರು ಪೂರೈಕೆಯಿಂದ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ರೈತರ ಅಡಿಕೆ ಮತ್ತು ತೆಂಗಿನ ತೋಟಗಳಿಗೆ ಅಗತ್ಯ ನೀರಾವರಿ ಸೌಲಭ್ಯ ದೊರೆಯುವ ನಿರೀಕ್ಷೆಯಿದೆ. ಬೇಸಿಗೆಯ ಬಿಸಿಲಿನ ಹೊಡೆತದಿಂದ ತೋಟಗಾರಿಕಾ ಬೆಳೆಗಳನ್ನು ಉಳಿಸಿಕೊಳ್ಳಲು ಎದುರು ನೋಡುತ್ತಿದ್ದ ರೈತರಿಗೆ ಈ ನಿರ್ಧಾರ ತುಸು ನೆಮ್ಮದಿ ತಂದಿದೆ.

PPeepal Media Desk

Peepal Media Desk

Peepal Media · ರಾಜ್ಯ ವಿಭಾಗ

ಸಂಬಂಧಿತ ಸುದ್ದಿಗಳು