ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
81 ಲಕ್ಷಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನ ಹರಾಜು!ಡಿಸಿ ಪಿಎ ಚಾಟ್ ಪ್ರಕರಣದಲ್ಲಿ ಸತ್ಯಾ ಹೊರಬರಲಿ – ಎಚ್.ಡಿ. ಕುಮಾರಸ್ವಾಮಿನಿಖಿಲ್‌ಗೆ ದೇವಾಲಯ ಪ್ರವೇಶ ವಿಚಾರ – ಕಾಂಗ್ರೆಸ್‌ಗೆ ಬುದ್ಧಿ ಕಲಿಸಲಿದ್ದಾರೆ ಜನ – ಎಚ್.ಡಿ. ಕುಮಾರಸ್ವಾಮಿಮೀಸಲಾತಿ ಹೆಚ್ಚಳಕ್ಕೆ ಕೇಂದ್ರದ ಮಧ್ಯಪ್ರವೇಶ ಮಾಡಲಿ – ಜಿ. ಪರಮೇಶ್ವರ್ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಭೀತಿ: ನವೆಂಬರ್ 16ರ ವೇಳೆಗೆ ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆ; ಮೀನುಗಾರರಿಗೆ ಎಚ್ಚರಿಕೆಅಮೆರಿಕದಲ್ಲಿ ಒಂದೇ ದಿನ ಸರಣಿ ಅವಘಡಗಳು: ವಿಮಾನ ಹಾರಾಟ ಸ್ಥಗಿತ, ಹಡಗು ಅಪಘಾತ, SpaceX ಬೂಸ್ಟರ್ ಸ್ಫೋಟ!ತಮಿಳುನಾಡಿನ ವಿರೋಧಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ, ಮೇಕೆದಾಟಿಗೆ ಅಣೆಕಟ್ಟು ಕಟ್ಟುವುದು ನಮ್ಮ ಹಕ್ಕು ಸಿ ಎಮ್‌ ಡಿ ಕೆ ಶಿವಕುಮಾರ್ಸೌಜನ್ಯಾ ಕೊಲೆ ಪ್ರಕರಣದ ಮರುತನಿಖೆ ಚುರುಕು: ಐವರು ಪ್ರಮುಖ ಸಾಕ್ಷಿಗಳ ವಿಚಾರಣೆಮಹದೇವ್ ಬೆಟ್ಟಿಂಗ್ ಆಯಪ್ ಜಾಲಕ್ಕೆ ಸಿಬಿಐ ಶಾಕ್; 6 ರಾಜ್ಯಗಳ 33 ಕಡೆ ದಾಳಿಆರ್‌ಎಸ್‌ಎಸ್‌ ನಂಟಿನ ಆರೋಪ: ನಿಗಮ ಮಂಡಳಿ ಹುದ್ದೆಗಳಿಗೆ ರಾಜೀನಾಮೆ ನೀಡಲು ಸೂಚನೆKPS ಶಾಲೆಗಳ ಬಲವರ್ಧನೆ – ಕರಡು ಪ್ರಕಟಿಸಿದ ರಾಜ್ಯ ಸರ್ಕಾರಸೋನಿಯಾ ಗಾಂಧಿ ವಿರುದ್ಧ ಆಕ್ಷೇಪಾರ್ಹ ಪೋಸ್ಟ್; ವಿವಾದಾತ್ಮಕ ನಟಿ ಕಂಗನಾ ರಣಾವತ್ ವಿರುದ್ಧ ಎಫ್‌ಐಆರ್ ದಾಖಲುಮಕ್ಕಳಿಗೆ ಹೆಚ್ಚಿದ ಓದಿನ ಒತ್ತಡ – 1 ರಿಂದ 9ನೇ ತರಗತಿವರೆಗೆ ಟ್ಯೂಷನ್‌ಗೆ ಬ್ರೇಕ್ಮೇಕೆದಾಟು ಯೋಜನೆಗೆ ವಿರೋಧ ರಾಜಕೀಯ ಪ್ರೇರಿತ: ದೆಹಲಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯಲು ಪ್ರಧಾನಿ ಒಪ್ಪಿಗೆಪ್ರಧಾನಿ ಮೋದಿ ಭೇಟಿ ವೇಳೆ ಮಾಂಸದಂಗಡಿ ಬಂದ್ ಮಾಡುವ ಅವಶ್ಯಕತೆ ಏನಿತ್ತು – ನಿ. ನ್ಯಾ. ನಾಗಮೋಹನ್‌ನಾಳೆಯಿಂದ ತುಂಗಭದ್ರಾ ಕಾಲುವೆ ನಾಳೆಯಿಂದ ಬಂದ್ – ರೈತರಿಂದ ತೀವ್ರ ಆಕ್ರೋಶಇಡಿಯಿಂದ 580 ಪುಟಗಳ ಚಾರ್ಜ್‌ಶೀಟ್, ಕೆಪಿಎಸ್‌ಸಿ ಹಗರಣದಲ್ಲಿ 4 ಜನರ ಪಟ್ಟಿ ಬಿಡುಗಡೆಮಧುಮೇಹ ಪತ್ತೆಯಲ್ಲಿನ ವಿಳಂಬ ಆತಂಕಕಾರಿ; ಆರಂಭಿಕ ತಪಾಸಣೆಗೆ WHO ಕರೆವಿಶ್ವ ಬಾಕ್ಸ್ ಆಫೀಸ್‌ನಲ್ಲಿ ₹1,110 ಕೋಟಿ ಗಳಿಸಿದ ‘ರಾಮಾಯಣ’; ಯಶ್‌ಗೆ ಮತ್ತೊಂದು 1,000 ಕೋಟಿ ದಾಖಲೆ!ಋತುಬಂಧದ ಮಹಿಳೆಯರ ಆರೋಗ್ಯ ರಕ್ಷಣೆಗೆ ‘ಋತುತಾರೆ’ ಯೋಜನೆ ಜಾರಿ; ನಟಿ, ಮಾಜಿ ಸಂಸದೆ ರಮ್ಯಾ ರಾಯಭಾರಿ

ಸೌಜನ್ಯಾ ಕೊಲೆ ಪ್ರಕರಣದ ಮರುತನಿಖೆ ಚುರುಕು: ಐವರು ಪ್ರಮುಖ ಸಾಕ್ಷಿಗಳ ವಿಚಾರಣೆ

PPeepal Media Desk

Peepal Media Desk ರಾಜ್ಯ

• 1 ನಿಮಿಷದ ಓದು

ಸೌಜನ್ಯಾ ಕೊಲೆ ಪ್ರಕರಣದ ಮರುತನಿಖೆ ಚುರುಕು: ಐವರು ಪ್ರಮುಖ ಸಾಕ್ಷಿಗಳ ವಿಚಾರಣೆ

ಧರ್ಮಸ್ಥಳ: ರಾಜ್ಯಾದ್ಯಂತ ಗಮನ ಸೆಳೆದಿರುವ ಸೌಜನ್ಯಾ ಕೊಲೆ ಪ್ರಕರಣದ ಮರುತನಿಖೆಯನ್ನು ವಿಶೇಷ ತನಿಖಾ ದಳ (ಎಸ್‌ಐಟಿ) ತೀವ್ರಗೊಳಿಸಿದೆ. ಪ್ರಕರಣದ ತನಿಖೆಯ ಭಾಗವಾಗಿ, ಘಟನೆ ನಡೆದ ದಿನ ಸೌಜನ್ಯಾಳನ್ನು ಕೊನೆಯದಾಗಿ ಕಂಡಿದ್ದ ಐವರು ಪ್ರಮುಖ ಸಾಕ್ಷಿಗಳನ್ನು ಬುಧವಾರ ವಿಚಾರಣೆ ನಡೆಸಿ, ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ.

ವಿಠಲ ಗೌಡ, ಕೃಷ್ಣಪ್ಪ, ಪುರಂದರ ಗೌಡ, ಯಶೋಧ ಹಾಗೂ ಅವರ ಪುತ್ರ ಪ್ರತೀಕ್ ಅವರನ್ನು ವಿಚಾರಣೆಗೆ ಒಳಪಡಿಸಿದ ಎಸ್‌ಐಟಿ ಅಧಿಕಾರಿಗಳು, ಅಂದಿನ ಘಟನೆಗಳ ಕುರಿತು ಸುದೀರ್ಘ ಮಾಹಿತಿ ಸಂಗ್ರಹಿಸಿದ್ದಾರೆ. ತನಿಖಾಧಿಕಾರಿ ಲೋಕೇಶ್ ಮತ್ತು ಸಹ ತನಿಖಾಧಿಕಾರಿ ಮನೋಜ್ ನಾಯಕ್ ನೇತೃತ್ವದ ತಂಡವು ಸಾಕ್ಷಿಗಳಿಂದ ವಿವಿಧ ಮಾಹಿತಿಗಳನ್ನು ಪಡೆದುಕೊಂಡಿದೆ.

ಸರ್ಕಾರದಿಂದ ಮರುತನಿಖೆಗೆ ಅನುಮತಿ ದೊರೆತ ಬೆನ್ನಲ್ಲೇ ಕಾರ್ಯಪ್ರವೃತ್ತವಾಗಿರುವ ಎಸ್‌ಐಟಿ, ಈ ಹಿಂದೆ ಪ್ರಕರಣದ ತನಿಖೆ ನಡೆಸಿದ್ದ ಸಂಸ್ಥೆಗಳಿಂದಲೂ ಅಗತ್ಯ ದಾಖಲೆಗಳನ್ನು ಪಡೆದುಕೊಂಡಿದೆ. ಅಲ್ಲದೆ, ಘಟನೆ ನಡೆದ ಸ್ಥಳ ಹಾಗೂ ಮೃತದೇಹ ಪತ್ತೆಯಾದ ಪ್ರದೇಶದಲ್ಲಿ ಸ್ಥಳ ಮಹಜರು ಪ್ರಕ್ರಿಯೆಯನ್ನೂ ಪೂರ್ಣಗೊಳಿಸಿದೆ.

ಪ್ರಕರಣದ ಹಿಂದಿನ ತನಿಖೆಯ ದಾಖಲೆಗಳು, ಸಾಕ್ಷಿಗಳ ಹೇಳಿಕೆಗಳು ಹಾಗೂ ಲಭ್ಯವಿರುವ ಮಾಹಿತಿಗಳನ್ನು ಆಧರಿಸಿ ಎಸ್‌ಐಟಿ ತನಿಖೆ ಮುಂದುವರಿಸಿದೆ. ಹಲವು ವರ್ಷಗಳಿಂದ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟದ ಹಿನ್ನೆಲೆಯಲ್ಲಿ ಮರುತನಿಖೆಯ ಪ್ರತಿಯೊಂದು ಬೆಳವಣಿಗೆಯೂ ಮಹತ್ವ ಪಡೆದುಕೊಂಡಿದೆ.

ಐವರು ಪ್ರಮುಖ ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡಿರುವ ಬೆನ್ನಲ್ಲೇ ಎಸ್‌ಐಟಿಯ ಮುಂದಿನ ತನಿಖಾ ಕ್ರಮಗಳ ಬಗ್ಗೆ ಕುತೂಹಲ ಮೂಡಿದ್ದು, ಪ್ರಕರಣದಲ್ಲಿ ಹೊಸ ಸಾಕ್ಷ್ಯಗಳು ಅಥವಾ ಮಹತ್ವದ ಸುಳಿವುಗಳು ಪತ್ತೆಯಾಗುತ್ತವೆಯೇ ಎಂಬುದನ್ನು ಕಾದುನೋಡಬೇಕಿದೆ.

PPeepal Media Desk

Peepal Media Desk

Peepal Media · ರಾಜ್ಯ ವಿಭಾಗ

ಸಂಬಂಧಿತ ಸುದ್ದಿಗಳು