ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
81 ಲಕ್ಷಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನ ಹರಾಜು!ಡಿಸಿ ಪಿಎ ಚಾಟ್ ಪ್ರಕರಣದಲ್ಲಿ ಸತ್ಯಾ ಹೊರಬರಲಿ – ಎಚ್.ಡಿ. ಕುಮಾರಸ್ವಾಮಿನಿಖಿಲ್‌ಗೆ ದೇವಾಲಯ ಪ್ರವೇಶ ವಿಚಾರ – ಕಾಂಗ್ರೆಸ್‌ಗೆ ಬುದ್ಧಿ ಕಲಿಸಲಿದ್ದಾರೆ ಜನ – ಎಚ್.ಡಿ. ಕುಮಾರಸ್ವಾಮಿಮೀಸಲಾತಿ ಹೆಚ್ಚಳಕ್ಕೆ ಕೇಂದ್ರದ ಮಧ್ಯಪ್ರವೇಶ ಮಾಡಲಿ – ಜಿ. ಪರಮೇಶ್ವರ್ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಭೀತಿ: ನವೆಂಬರ್ 16ರ ವೇಳೆಗೆ ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆ; ಮೀನುಗಾರರಿಗೆ ಎಚ್ಚರಿಕೆಅಮೆರಿಕದಲ್ಲಿ ಒಂದೇ ದಿನ ಸರಣಿ ಅವಘಡಗಳು: ವಿಮಾನ ಹಾರಾಟ ಸ್ಥಗಿತ, ಹಡಗು ಅಪಘಾತ, SpaceX ಬೂಸ್ಟರ್ ಸ್ಫೋಟ!ತಮಿಳುನಾಡಿನ ವಿರೋಧಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ, ಮೇಕೆದಾಟಿಗೆ ಅಣೆಕಟ್ಟು ಕಟ್ಟುವುದು ನಮ್ಮ ಹಕ್ಕು ಸಿ ಎಮ್‌ ಡಿ ಕೆ ಶಿವಕುಮಾರ್ಸೌಜನ್ಯಾ ಕೊಲೆ ಪ್ರಕರಣದ ಮರುತನಿಖೆ ಚುರುಕು: ಐವರು ಪ್ರಮುಖ ಸಾಕ್ಷಿಗಳ ವಿಚಾರಣೆಮಹದೇವ್ ಬೆಟ್ಟಿಂಗ್ ಆಯಪ್ ಜಾಲಕ್ಕೆ ಸಿಬಿಐ ಶಾಕ್; 6 ರಾಜ್ಯಗಳ 33 ಕಡೆ ದಾಳಿಆರ್‌ಎಸ್‌ಎಸ್‌ ನಂಟಿನ ಆರೋಪ: ನಿಗಮ ಮಂಡಳಿ ಹುದ್ದೆಗಳಿಗೆ ರಾಜೀನಾಮೆ ನೀಡಲು ಸೂಚನೆKPS ಶಾಲೆಗಳ ಬಲವರ್ಧನೆ – ಕರಡು ಪ್ರಕಟಿಸಿದ ರಾಜ್ಯ ಸರ್ಕಾರಸೋನಿಯಾ ಗಾಂಧಿ ವಿರುದ್ಧ ಆಕ್ಷೇಪಾರ್ಹ ಪೋಸ್ಟ್; ವಿವಾದಾತ್ಮಕ ನಟಿ ಕಂಗನಾ ರಣಾವತ್ ವಿರುದ್ಧ ಎಫ್‌ಐಆರ್ ದಾಖಲುಮಕ್ಕಳಿಗೆ ಹೆಚ್ಚಿದ ಓದಿನ ಒತ್ತಡ – 1 ರಿಂದ 9ನೇ ತರಗತಿವರೆಗೆ ಟ್ಯೂಷನ್‌ಗೆ ಬ್ರೇಕ್ಮೇಕೆದಾಟು ಯೋಜನೆಗೆ ವಿರೋಧ ರಾಜಕೀಯ ಪ್ರೇರಿತ: ದೆಹಲಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯಲು ಪ್ರಧಾನಿ ಒಪ್ಪಿಗೆಪ್ರಧಾನಿ ಮೋದಿ ಭೇಟಿ ವೇಳೆ ಮಾಂಸದಂಗಡಿ ಬಂದ್ ಮಾಡುವ ಅವಶ್ಯಕತೆ ಏನಿತ್ತು – ನಿ. ನ್ಯಾ. ನಾಗಮೋಹನ್‌ನಾಳೆಯಿಂದ ತುಂಗಭದ್ರಾ ಕಾಲುವೆ ನಾಳೆಯಿಂದ ಬಂದ್ – ರೈತರಿಂದ ತೀವ್ರ ಆಕ್ರೋಶಇಡಿಯಿಂದ 580 ಪುಟಗಳ ಚಾರ್ಜ್‌ಶೀಟ್, ಕೆಪಿಎಸ್‌ಸಿ ಹಗರಣದಲ್ಲಿ 4 ಜನರ ಪಟ್ಟಿ ಬಿಡುಗಡೆಮಧುಮೇಹ ಪತ್ತೆಯಲ್ಲಿನ ವಿಳಂಬ ಆತಂಕಕಾರಿ; ಆರಂಭಿಕ ತಪಾಸಣೆಗೆ WHO ಕರೆವಿಶ್ವ ಬಾಕ್ಸ್ ಆಫೀಸ್‌ನಲ್ಲಿ ₹1,110 ಕೋಟಿ ಗಳಿಸಿದ ‘ರಾಮಾಯಣ’; ಯಶ್‌ಗೆ ಮತ್ತೊಂದು 1,000 ಕೋಟಿ ದಾಖಲೆ!ಋತುಬಂಧದ ಮಹಿಳೆಯರ ಆರೋಗ್ಯ ರಕ್ಷಣೆಗೆ ‘ಋತುತಾರೆ’ ಯೋಜನೆ ಜಾರಿ; ನಟಿ, ಮಾಜಿ ಸಂಸದೆ ರಮ್ಯಾ ರಾಯಭಾರಿ

ಪ್ರಧಾನಿ ಮೋದಿ ಭೇಟಿ ವೇಳೆ ಮಾಂಸದಂಗಡಿ ಬಂದ್ ಮಾಡುವ ಅವಶ್ಯಕತೆ ಏನಿತ್ತು – ನಿ. ನ್ಯಾ. ನಾಗಮೋಹನ್‌

ಪ್ರಧಾನಿ ಮೋದಿ ಭೇಟಿ ವೇಳೆ ಮಾಂಸದಂಗಡಿ ಬಂದ್ ಮಾಡುವ ಅವಶ್ಯಕತೆ ಏನಿತ್ತು – ನಿ. ನ್ಯಾ. ನಾಗಮೋಹನ್‌

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ವೇಳೆ ಮಾಂಸದಂಗಡಿಗಳನ್ನು ಮುಚ್ಚುವಂತೆ ಆದೇಶಿಸಿರುವುದನ್ನು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ತೀವ್ರವಾಗಿ ಖಂಡಿಸಿದ್ದಾರೆ. ಇಂತಹ ನಿರ್ದೇಶನಗಳು ಸರ್ವಾಧಿಕಾರದ ಅಭಿವ್ಯಕ್ತಿಯಾಗಿದ್ದು, ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅವರು ಟೀಕಿಸಿದ್ದಾರೆ.

ಪ್ರಧಾನಿ ಮೋದಿ ಅವರ ಭೇಟಿ ಹಿನ್ನೆಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಬೆಂಗಳೂರು ನಗರ ಜಿಲ್ಲೆಯ ಉಪ ಆಯುಕ್ತರು ಆನೇಕಲ್ ತಾಲ್ಲೂಕಿನ ಕೆಲವು ಪ್ರದೇಶಗಳಲ್ಲಿನ ಮಾಂಸದಂಗಡಿಗಳನ್ನು ಮುಚ್ಚುವಂತೆ ಆದೇಶಿಸಿದ್ದರು. ಈ ಆದೇಶದ ಬೆನ್ನಲ್ಲೇ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಹೇಳಿಕೆ ಹೊರಬಿದ್ದಿದೆ. ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗ ನಿನ್ನೆ ಗಾಂಧಿ ಭವನದ ಮಹದೇವ ದೇಸಾಯಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ವಿಕೇಂದ್ರೀಕರಣ ಮತ್ತು ಯೋಜಿತ ಅಭಿವೃದ್ಧಿ’ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಹಾರವನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದೆ ಎಂದು ನ್ಯಾಯಮೂರ್ತಿ ದಾಸ್ ಪ್ರತಿಪಾದಿಸಿದರು. ಪ್ರಧಾನಿ ಅವರ ಭೇಟಿ ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದ್ದರೂ, ಅದನ್ನು ಜನರ ಆಹಾರದ ಆಯ್ಕೆಯ ಮೇಲಿನ ನಿರ್ಬಂಧಗಳಿಗೆ ತಳುಕು ಹಾಕುವುದು ಒಪ್ಪುವಂತಹದ್ದಲ್ಲ ಎಂದು ಹೇಳಿದರು.

ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌

Peepal Media · ಬ್ರೇಕಿಂಗ್ ಸುದ್ದಿ ವಿಭಾಗ

ಸಂಬಂಧಿತ ಸುದ್ದಿಗಳು