ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
81 ಲಕ್ಷಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನ ಹರಾಜು!ಡಿಸಿ ಪಿಎ ಚಾಟ್ ಪ್ರಕರಣದಲ್ಲಿ ಸತ್ಯಾ ಹೊರಬರಲಿ – ಎಚ್.ಡಿ. ಕುಮಾರಸ್ವಾಮಿನಿಖಿಲ್‌ಗೆ ದೇವಾಲಯ ಪ್ರವೇಶ ವಿಚಾರ – ಕಾಂಗ್ರೆಸ್‌ಗೆ ಬುದ್ಧಿ ಕಲಿಸಲಿದ್ದಾರೆ ಜನ – ಎಚ್.ಡಿ. ಕುಮಾರಸ್ವಾಮಿಮೀಸಲಾತಿ ಹೆಚ್ಚಳಕ್ಕೆ ಕೇಂದ್ರದ ಮಧ್ಯಪ್ರವೇಶ ಮಾಡಲಿ – ಜಿ. ಪರಮೇಶ್ವರ್ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಭೀತಿ: ನವೆಂಬರ್ 16ರ ವೇಳೆಗೆ ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆ; ಮೀನುಗಾರರಿಗೆ ಎಚ್ಚರಿಕೆಅಮೆರಿಕದಲ್ಲಿ ಒಂದೇ ದಿನ ಸರಣಿ ಅವಘಡಗಳು: ವಿಮಾನ ಹಾರಾಟ ಸ್ಥಗಿತ, ಹಡಗು ಅಪಘಾತ, SpaceX ಬೂಸ್ಟರ್ ಸ್ಫೋಟ!ತಮಿಳುನಾಡಿನ ವಿರೋಧಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ, ಮೇಕೆದಾಟಿಗೆ ಅಣೆಕಟ್ಟು ಕಟ್ಟುವುದು ನಮ್ಮ ಹಕ್ಕು ಸಿ ಎಮ್‌ ಡಿ ಕೆ ಶಿವಕುಮಾರ್ಸೌಜನ್ಯಾ ಕೊಲೆ ಪ್ರಕರಣದ ಮರುತನಿಖೆ ಚುರುಕು: ಐವರು ಪ್ರಮುಖ ಸಾಕ್ಷಿಗಳ ವಿಚಾರಣೆಮಹದೇವ್ ಬೆಟ್ಟಿಂಗ್ ಆಯಪ್ ಜಾಲಕ್ಕೆ ಸಿಬಿಐ ಶಾಕ್; 6 ರಾಜ್ಯಗಳ 33 ಕಡೆ ದಾಳಿಆರ್‌ಎಸ್‌ಎಸ್‌ ನಂಟಿನ ಆರೋಪ: ನಿಗಮ ಮಂಡಳಿ ಹುದ್ದೆಗಳಿಗೆ ರಾಜೀನಾಮೆ ನೀಡಲು ಸೂಚನೆKPS ಶಾಲೆಗಳ ಬಲವರ್ಧನೆ – ಕರಡು ಪ್ರಕಟಿಸಿದ ರಾಜ್ಯ ಸರ್ಕಾರಸೋನಿಯಾ ಗಾಂಧಿ ವಿರುದ್ಧ ಆಕ್ಷೇಪಾರ್ಹ ಪೋಸ್ಟ್; ವಿವಾದಾತ್ಮಕ ನಟಿ ಕಂಗನಾ ರಣಾವತ್ ವಿರುದ್ಧ ಎಫ್‌ಐಆರ್ ದಾಖಲುಮಕ್ಕಳಿಗೆ ಹೆಚ್ಚಿದ ಓದಿನ ಒತ್ತಡ – 1 ರಿಂದ 9ನೇ ತರಗತಿವರೆಗೆ ಟ್ಯೂಷನ್‌ಗೆ ಬ್ರೇಕ್ಮೇಕೆದಾಟು ಯೋಜನೆಗೆ ವಿರೋಧ ರಾಜಕೀಯ ಪ್ರೇರಿತ: ದೆಹಲಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯಲು ಪ್ರಧಾನಿ ಒಪ್ಪಿಗೆಪ್ರಧಾನಿ ಮೋದಿ ಭೇಟಿ ವೇಳೆ ಮಾಂಸದಂಗಡಿ ಬಂದ್ ಮಾಡುವ ಅವಶ್ಯಕತೆ ಏನಿತ್ತು – ನಿ. ನ್ಯಾ. ನಾಗಮೋಹನ್‌ನಾಳೆಯಿಂದ ತುಂಗಭದ್ರಾ ಕಾಲುವೆ ನಾಳೆಯಿಂದ ಬಂದ್ – ರೈತರಿಂದ ತೀವ್ರ ಆಕ್ರೋಶಇಡಿಯಿಂದ 580 ಪುಟಗಳ ಚಾರ್ಜ್‌ಶೀಟ್, ಕೆಪಿಎಸ್‌ಸಿ ಹಗರಣದಲ್ಲಿ 4 ಜನರ ಪಟ್ಟಿ ಬಿಡುಗಡೆಮಧುಮೇಹ ಪತ್ತೆಯಲ್ಲಿನ ವಿಳಂಬ ಆತಂಕಕಾರಿ; ಆರಂಭಿಕ ತಪಾಸಣೆಗೆ WHO ಕರೆವಿಶ್ವ ಬಾಕ್ಸ್ ಆಫೀಸ್‌ನಲ್ಲಿ ₹1,110 ಕೋಟಿ ಗಳಿಸಿದ ‘ರಾಮಾಯಣ’; ಯಶ್‌ಗೆ ಮತ್ತೊಂದು 1,000 ಕೋಟಿ ದಾಖಲೆ!ಋತುಬಂಧದ ಮಹಿಳೆಯರ ಆರೋಗ್ಯ ರಕ್ಷಣೆಗೆ ‘ಋತುತಾರೆ’ ಯೋಜನೆ ಜಾರಿ; ನಟಿ, ಮಾಜಿ ಸಂಸದೆ ರಮ್ಯಾ ರಾಯಭಾರಿ

ನಾಳೆಯಿಂದ ತುಂಗಭದ್ರಾ ಕಾಲುವೆ ನಾಳೆಯಿಂದ ಬಂದ್ – ರೈತರಿಂದ ತೀವ್ರ ಆಕ್ರೋಶ

ನಾಳೆಯಿಂದ ತುಂಗಭದ್ರಾ ಕಾಲುವೆ ನಾಳೆಯಿಂದ ಬಂದ್ – ರೈತರಿಂದ ತೀವ್ರ ಆಕ್ರೋಶ

ಬೆಂಗಳೂರು : ತುಂಗಭದ್ರಾ(Tungabhadra) ಜಲಾಶಯದಲ್ಲಿ ನೀರಿನ ಸಂಗ್ರಹ(Water storage) ಗಣನೀಯವಾಗಿ ಕುಸಿದಿರುವ ಹಿನ್ನೆಲೆಯಲ್ಲಿ, ನಿಗದಿತ ಅವಧಿಗಿಂತ ಐದು ದಿನ ಮುಂಚಿತವಾಗಿಯೇ ಅಂದರೆ ನವೆಂಬರ್ 15ರಿಂದ ಎಡದಂಡೆ ಕಾಲುವೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಅಧಿಕಾರಿಗಳ ಈ ದಿಢೀರ್ ನಿರ್ಧಾರದಿಂದ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಸುಮಾರು 12.6 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿರುವ ಭತ್ತದ ಬೆಳೆ ಒಣಗುವ ಆತಂಕ ಎದುರಾಗಿದೆ.ತುಂಗಭದ್ರಾ ಯೋಜನೆ ವೃತ್ತದ ಅಧೀಕ್ಷಕ ಎಂಜಿನಿಯರ್ ಎಸ್.ಬಿ. ಮಲ್ಲಿಗವಾಡ ಅವರು ನವೆಂಬರ್ 15ರಿಂದ ನೀರು ಬಿಡುಗಡೆ ಸ್ಥಗಿತಗೊಳಿಸುವ ನಿರ್ಧಾರವನ್ನು ಖಚಿತಪಡಿಸಿದ್ದಾರೆ. ಆದರೆ, ಕೊಪ್ಪಳ, ವಿಜಯನಗರ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳ ರೈತ ಸಂಘಟನೆಗಳು ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಟಾವು ಹಂತದಲ್ಲಿರುವ ಬೆಳೆಗಳನ್ನು ಉಳಿಸಿಕೊಳ್ಳಲು ಕನಿಷ್ಠ ನವೆಂಬರ್ 30ರವರೆಗೆ ನೀರು ಹರಿಸಬೇಕು ಎಂದು ಪಟ್ಟು ಹಿಡಿದಿವೆ.

10 ದಿನಗಳ ನೀರು ಅತ್ಯಗತ್ಯ ಎಂದ ರೈತರು

ನೀರಾವರಿ ಸಲಹಾ ಸಮಿತಿಯು (ICC) ಆರಂಭದಲ್ಲಿ 90 ದಿನಗಳ ಕಾಲ ಕಾಲುವೆಗೆ ನೀರು ಹರಿಸಲು ತೀರ್ಮಾನಿಸಿತ್ತು. ಬಳಿಕ ರೈತರ ಒತ್ತಾಯದ ಮೇರೆಗೆ 10 ದಿನ ವಿಸ್ತರಿಸಿ ನವೆಂಬರ್ 20ರವರೆಗೆ ನೀರು ಪೂರೈಸಲು ನಿಗದಿಪಡಿಸಲಾಗಿತ್ತು. ಆದರೆ, ಭತ್ತದ ಬೆಳೆಗೆ ಕನಿಷ್ಠ 120 ದಿನಗಳ ನೀರಾವರಿ ಅಗತ್ಯವಿದ್ದು, ಬೆಳೆ ಕಟಾವಿಗೆ ಬರಲು ಇನ್ನೂ 10 ದಿನಗಳ ನೀರು ಬೇಕೇ ಬೇಕು ಎಂದು ರೈತರು ವಾದಿಸುತ್ತಿದ್ದಾರೆ.

ಜಲಾಶಯದಲ್ಲಿ ನೀರಿನ ಮಟ್ಟ ತೀವ್ರ ಕುಸಿತ

105.7 ಟಿಎಂಸಿ ಅಡಿ ಒಟ್ಟು ಸಾಮರ್ಥ್ಯದ ತುಂಗಭದ್ರಾ ಜಲಾಶಯದಲ್ಲಿ ಶುಕ್ರವಾರ ಕೇವಲ 31.4 ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹವಿತ್ತು. ಇದರಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಪಾಲಿನ ನೀರೂ ಸೇರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ 76.3 ಟಿಎಂಸಿ ಅಡಿ ನೀರಿತ್ತು. ಪ್ರಸ್ತುತ ಎಡ ಮತ್ತು ಬಲದಂಡೆ ಕಾಲುವೆಗಳ ಮೂಲಕ ಒಟ್ಟು 8,668 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದ್ದು, ಜಲಾಶಯಕ್ಕೆ ಒಳಹರಿವು ಸಂಪೂರ್ಣವಾಗಿ ನಿಂತಿದೆ.ಮತ್ತೊಂದೆಡೆ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಭಾಗಗಳಲ್ಲಿ ಮಳೆ ಕೊರತೆಯಿಂದ ಭದ್ರಾ ಜಲಾಶಯಕ್ಕೂ ಒಳಹರಿವು ತಗ್ಗಿದೆ. ಮುಂದಿನ ವರ್ಷದ ಜೂನ್‌ವರೆಗೆ ಕುಡಿಯುವ ನೀರಿನ ಅಗತ್ಯವನ್ನು ಪೂರೈಸಬೇಕಾಗಿರುವುದರಿಂದ, ಲಭ್ಯವಿರುವ ಸೀಮಿತ ನೀರನ್ನು ಸಂರಕ್ಷಿಸಬೇಕಾದ ಅನಿವಾರ್ಯತೆ ಅಧಿಕಾರಿಗಳಿಗೆ ಎದುರಾಗಿದೆ.

ಹೆದ್ದಾರಿ ತಡೆ, ಅಣೆಕಟ್ಟು ಮುತ್ತಿಗೆಗೆ ರೈತರ ಎಚ್ಚರಿಕೆ

ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಕರ್ನಾಟಕದ ಪಾಲಿನ 7 ಟಿಎಂಸಿ ಅಡಿ ನೀರನ್ನು ನವೆಂಬರ್ 20ರವರೆಗೆ ಕಾಲುವೆಗಳಿಗೆ ಹರಿಸಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೆ, ರೈತರ ಹಿತದೃಷ್ಟಿಯಿಂದ ನೀರು ಬಿಡುಗಡೆ ಅವಧಿಯನ್ನು ನವೆಂಬರ್ 30ರವರೆಗೆ ವಿಸ್ತರಿಸುವ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಆಂಧ್ರಪ್ರದೇಶ ಸಿಎಂ ಎನ್. ಚಂದ್ರಬಾಬು ನಾಯ್ಡು ಅವರೊಂದಿಗೆ ಚರ್ಚಿಸಿ ಪ್ರಯತ್ನಿಸಲಾಗುತ್ತಿದೆ ಎಂದಿದ್ದಾರೆ.

ಆದರೆ, ಸಚಿವರ ಭರವಸೆಯಿಂದ ರೈತರು ಸಮಾಧಾನಗೊಂಡಿಲ್ಲ. ನವೆಂಬರ್ 30ರವರೆಗೆ ನೀರು ಹರಿಸುವ ಬಗ್ಗೆ ಅಧಿಕೃತ ಆದೇಶ ಹೊರಬರದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಪುರುಷೋತ್ತಮಗೌಡ ಎಚ್ಚರಿಸಿದ್ದಾರೆ. ತಕ್ಷಣವೇ ಬೇಡಿಕೆ ಈಡೇರದಿದ್ದರೆ ಅಣೆಕಟ್ಟಿಗೆ ಮುತ್ತಿಗೆ ಹಾಕುವುದು ಹಾಗೂ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸುವುದಾಗಿ ರೈತ ಸಂಘಟನೆಗಳು ಎಚ್ಚರಿಕೆ ನೀಡಿವೆ.

ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌

Peepal Media · ಬ್ರೇಕಿಂಗ್ ಸುದ್ದಿ ವಿಭಾಗ

ಸಂಬಂಧಿತ ಸುದ್ದಿಗಳು