ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಭದ್ರಾ ಅರಣ್ಯಕ್ಕೆ 56 ಕಾಡಾನೆಗಳ ಸ್ಥಳಾಂತರಕ್ಕೆ ವಿರೋಧ: ಪ್ರಸ್ತಾವನೆ ಕೈಬಿಡುವಂತೆ ಅರಣ್ಯ ಸಚಿವರಿಗೆ ಶಾಸಕ ರಾಜೇಗೌಡ ಮನವಿಹಾಸನದ ಬೇಲೂರಿನಲ್ಲಿ ಕಾಡಾನೆ ಸೆರೆ – ಸ್ಥಳಾಂತರ ಕಾರ್ಯಾಚರಣೆಗೆ ಚಾಲನೆಅನುದಿನದ ಅಂತರಂಗ: ತುಳಿದಷ್ಟೂ ಬೆಳೆಯುತ್ತೇನೆ ತಿಳಿದಿರಲಿ ನಿಮಗೆಬೊಗಸೆಗೆ ದಕ್ಕಿದ್ದು-101 : ಮೇಲ್ವರ್ಗದ ರಕ್ಷಣೆ, ಕೆಳವರ್ಗದ ಗುಲಾಮಿಯೇ ಸರ್ವಾಧಿಕಾರದ ಗುರಿ!SIR ಮತದಾರರ ಪಟ್ಟಿ ಪರಿಷ್ಕರಣೆ ವಿವಾದ ಸುಪ್ರೀಂ ಕೋರ್ಟ್ ಅಂಗಳಕ್ಕೆ!ಹಾಸನದಲ್ಲಿ ಕಾಡಾನೆ ಕಾರ್ಯಾಚರಣೆಗೆ ಸಿದ್ಧತೆ: 300ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆಕೇಂದ್ರದ ವಿರುದ್ಧ ಸುಪ್ರೀಂ ದೂರು – ರಾಜ್ಯ ಬರಬೇಕಾದ 2186 ಕೋಟಿ ರೂ. ಬಾಕಿಕೋಲಾರ : ಆಟೋಗೆ ಸ್ಕೊಡಾ ಕಾರಿನ ನಡುವೆ ಬೀಕರ ಅಪಘಾತ – ಇಬ್ಬರು ದುರ್ಮರಣಎಂಎಸ್ ಧೋನಿ ಐಪಿಎಲ್ ನಿವೃತ್ತಿ: 2027ರಿಂದ CSK ಮೆಂಟರ್ಶಾಸಕ ಹರೀಶ್ ಪೂಂಜಾ ವಿರುದ್ಧ ಕಾನೂನು ಕ್ರಮ – ಮಧು ಬಂಗಾರಪ್ಪಸಾತನೂರು: ಜನರಲ್ಲಿ ಆತಂಕ ಮೂಡಿಸಿದ್ದ ಚಿರತೆ; ಬೋನಿಗೆ.ಸೋನಿಯಾ ಗಾಂಧಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯಗೆ ಐದನೇ ಸಾಲಿನ ಆಸನ! ಕರ್ನಾಟಕದಲ್ಲಿ ಕಾಂಗ್ರೆಸ್ ತನ್ನ ತಲೆ ಮೇಲೆ ತಾನೇ ಕಲ್ಲು ಎಳೆದುಕೊಂಡಿದೆ ಎಂಬ ಚರ್ಚೆಧರ್ಮಸ್ಥಳದ ಪ್ರತಿಭಟನೆಗೆ ಪ್ರಚಾರ, ಸೌಜನ್ಯಳ ನ್ಯಾಯದ ಪ್ರಶ್ನೆಗಳಿಗೆ ಇಲ್ಲ ಉಪಚಾರ!ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣ: ಇಬ್ಬರು ಅಪರಾಧಿಗಳಿಗೆ ಜಾಮೀನು ನೀಡಿದ ಸುಪ್ರೀಂಕೋರ್ಟ್ನಮ್ಮ ಕುಟುಂಬದ ಬಗ್ಗೆ ಹರಡಿರುವ ಬಹುತೇಕ ಕಥೆಗಳು ಸತ್ಯಕ್ಕೆ ದೂರ: ಆತ್ಮಕಥೆ ಬರೆಯಲು ಕಾರಣ ತಿಳಿಸಿದ ಸೋನಿಯಾ ಗಾಂಧಿಸ್ಥಳೀಯ ಸಂಸ್ಥೆಗಳ ಚುನಾವಣಾ ಮೀಸಲಾತಿ ಹಂಚಿಕೆ ಹಕ್ಕು ಸರ್ಕಾರದ್ದು, ಜನರದ್ದಲ್ಲ: ಸುಪ್ರೀಂಕೋರ್ಟ್ಮತದಾರರ ಪಟ್ಟಿಯಿಂದ ಹೆಸರು ತೆಗೆದರೆ ದೇಶದಿಂದಲೇ ಗಡಿಪಾರು ಭೀತಿ: ಮುಸ್ಲಿಂ ಕುಟುಂಬಗಳಲ್ಲಿ ಹೆಚ್ಚಿದ ಪೌರತ್ವ ಕಳೆದುಕೊಳ್ಳುವ ಆತಂಕಶಿವಮೊಗ್ಗ ವಿಮಾನ ನಿಲ್ದಾಣ: ಮಲೆನಾಡಿಗೆ ಕಿರೀಟವಾಗಬೇಕಿದ್ದದ್ದು, “ಕಪ್ಪುಚುಕ್ಕೆ” ಆದ ಬಗೆತಿಂಗಳಿಗೆ ₹15 ಸಾವಿರ ಸಂಬಳ ಪಡೆಯುವ ಯುವಕನ ಹೆಸರಿನಲ್ಲಿ ₹350 ಕೋಟಿ ಜಿಎಸ್‌ಟಿ ವಹಿವಾಟು!ಕೆಪಿಎಸ್‌ಸಿ ನೇಮಕಾತಿ ಅಕ್ರಮ: ಅಮಾನತುಗೊಂಡ ಅಧ್ಯಕ್ಷರಿಂದ ₹4.17 ಕೋಟಿ ಅಕ್ರಮ ಹಣ ವರ್ಗಾವಣೆ ಆರೋಪ

ಸೋನಿಯಾ ಗಾಂಧಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯಗೆ ಐದನೇ ಸಾಲಿನ ಆಸನ! ಕರ್ನಾಟಕದಲ್ಲಿ ಕಾಂಗ್ರೆಸ್ ತನ್ನ ತಲೆ ಮೇಲೆ ತಾನೇ ಕಲ್ಲು ಎಳೆದುಕೊಂಡಿದೆ ಎಂಬ ಚರ್ಚೆ

PPeepal Media Desk

Peepal Media Desk ರಾಜಕೀಯ

• 2 ನಿಮಿಷದ ಓದು

ಸೋನಿಯಾ ಗಾಂಧಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯಗೆ ಐದನೇ ಸಾಲಿನ ಆಸನ! ಕರ್ನಾಟಕದಲ್ಲಿ ಕಾಂಗ್ರೆಸ್ ತನ್ನ ತಲೆ ಮೇಲೆ ತಾನೇ ಕಲ್ಲು ಎಳೆದುಕೊಂಡಿದೆ ಎಂಬ ಚರ್ಚೆ

ನವದೆಹಲಿ: ಕಾಂಗ್ರೆಸ್‌ನ ರಾಷ್ಟ್ರೀಯ ರಾಜಕಾರಣ ಮತ್ತು ಕರ್ನಾಟಕದ ಪ್ರಾದೇಶಿಕ ನಾಯಕತ್ವದ ನಡುವಿನ ಅಂತರ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕಥನ ‘Belonging: A Journey of Love’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಎರಡನೇ ಸಾಲಿನಲ್ಲಿ ಆಸನ ಕಲ್ಪಿಸಲಾಗಿದ್ದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದನೇ ಸಾಲಿನಲ್ಲಿ ಕುಳಿತಿರುವುದು ಅವರ ಅಭಿಮಾನಿಗಳೇ ತಮ್ಮ ನಾಯಕನನ್ನು ದುರ್ಬೀನು ಹಾಕಿ ಹುಡುಕುವ ಸ್ಥಿತಿ ಎದುರಾಗಿದೆ.

ನವೆಂಬರ್ 16ರಂದು ನವದೆಹಲಿಯ ಐಟಿಸಿ ಮೌರ್ಯ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ನ ಪ್ರಮುಖ ನಾಯಕರು ಮಾತ್ರವಲ್ಲದೆ, ವಿವಿಧ ವಿರೋಧ ಪಕ್ಷಗಳ ಮುಖಂಡರೂ ಆಗಮಿಸಿದ್ದರು. ಸಮಾರಂಭದ ಆಸನ ವ್ಯವಸ್ಥೆಯ ಚಿತ್ರಗಳು ಮತ್ತು ವಿಡಿಯೊಗಳು ಬಹಿರಂಗವಾಗುತ್ತಿದ್ದಂತೆ ಸಿದ್ದರಾಮಯ್ಯ ಅವರಿಗೆ ನೀಡಲಾದ ಸ್ಥಾನಮಾನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆರಂಭವಾಗಿದೆ.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಸಂಸದೆ ಡಿಂಪಲ್ ಯಾದವ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಹಾಗೂ ಅವರ ಪತ್ನಿ ಕಲ್ಪನಾ ಸೊರೇನ್ ಸೇರಿದಂತೆ ಹಲವು ಗಣ್ಯರಿಗೆ ಮೊದಲ ಸಾಲಿನಲ್ಲಿ ಆಸನ ವ್ಯವಸ್ಥೆ ಮಾಡಲಾಗಿತ್ತು. ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಹಾಗೂ ಪ್ರಸ್ತುತ ಬಿಜೆಪಿ ನಾಯಕ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕೂಡ ಮೊದಲ ಸಾಲಿನಲ್ಲಿ ಕಾಣಿಸಿಕೊಂಡಿದ್ದರು.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಹಲವು ಪ್ರಮುಖ ನಾಯಕರು ಮುಂಭಾಗದ ಸಾಲಿನಲ್ಲಿ ಆಸೀನರಾಗಿದ್ದರು.

ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಎರಡನೇ ಸಾಲಿನಲ್ಲಿ ಸ್ಥಾನ ಕಲ್ಪಿಸಲಾಗಿತ್ತು. ಆದರೆ ಕರ್ನಾಟಕದ ರಾಜಕಾರಣದಲ್ಲಿ ಪ್ರಮುಖ ಪ್ರಭಾವ ಹೊಂದಿರುವ, ಅಹಿಂದ ವರ್ಗದ ಅನಭಿಷಿಕ್ತ ನಾಯಕ ಎಂದೇ ತಮ್ಮ ಅಭಿಮಾನಿಗಳಿಂದ ಕರೆಸಿಕೊಳ್ಳುವ ಸಿದ್ದರಾಮಯ್ಯ ಅವರು ಐದನೇ ಸಾಲಿನಲ್ಲಿ ಕುಳಿತಿರುವುದು ವಿಶೇಷವಾಗಿ ಗಮನ ಸೆಳೆದಿದೆ.

ಇದೇ ಈಗ ಕರ್ನಾಟಕ ಕಾಂಗ್ರೆಸ್‌ನೊಳಗಿನ ನಾಯಕತ್ವದ ಗೌರವ ಮತ್ತು ಪ್ರಾತಿನಿಧ್ಯದ ಕುರಿತ ಚರ್ಚೆಗೆ ಕಾರಣವಾಗಿದೆ. ಅಹಿಂದ ರಾಜಕಾರಣದ ಪ್ರಮುಖ ಮುಖವಾಗಿರುವ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಕಾಂಗ್ರೆಸ್‌ನ ಸಂಘಟನಾತ್ಮಕ ಬೆಳವಣಿಗೆ ಹಾಗೂ ಚುನಾವಣಾ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ನಾಯಕ. ಇಂತಹ ನಾಯಕನಿಗೆ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮವೊಂದರಲ್ಲಿ ನೀಡಲಾದ ಆಸನ ವ್ಯವಸ್ಥೆ ಪಕ್ಷದೊಳಗಿನ ರಾಜಕೀಯ ಸಂದೇಶವೇ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.

ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಸಂದರ್ಭದಲ್ಲಿ ಅವರಿಗೆ ಸೂಕ್ತ ಗೌರವ ಮತ್ತು ರಾಜಕೀಯ ಸ್ಥಾನಮಾನ ನೀಡುವ ಕುರಿತು ಪಕ್ಷದ ನಾಯಕತ್ವ ಭರವಸೆ ನೀಡಿತ್ತು ಎಂಬ ಮಾತುಗಳು ಈ ಹಿಂದಿನಿಂದಲೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಆದರೆ ದೆಹಲಿಯ ಕಾರ್ಯಕ್ರಮದ ಆಸನ ವ್ಯವಸ್ಥೆಯು ಆ ಭರವಸೆಯ ಅನುಷ್ಠಾನದ ಬಗ್ಗೆಯೂ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಇದನ್ನು ಕೇವಲ ಕಾರ್ಯಕ್ರಮದ ಆಸನ ವ್ಯವಸ್ಥೆಯಾಗಿ ನೋಡಬೇಕೇ ಅಥವಾ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕತ್ವದ ಆದ್ಯತೆಗಳ ಪ್ರತಿಬಿಂಬವಾಗಿ ಪರಿಗಣಿಸಬೇಕೇ ಎಂಬ ಚರ್ಚೆ ಇದೀಗ ಮುನ್ನೆಲೆಗೆ ಬಂದಿದೆ. ಆಸನ ಹಂಚಿಕೆಯ ಹಿಂದೆ ನಿರ್ದಿಷ್ಟ ರಾಜಕೀಯ ಉದ್ದೇಶವಿತ್ತು ಎಂಬುದಕ್ಕೆ ಸದ್ಯಕ್ಕೆ ಯಾವುದೇ ಅಧಿಕೃತ ಸ್ಪಷ್ಟನೆ ಇಲ್ಲ.

ಆದರೆ ಕರ್ನಾಟಕದಲ್ಲಿ ಪಕ್ಷದ ಸಾಮಾಜಿಕ ಮತ್ತು ರಾಜಕೀಯ ನೆಲೆ ವಿಸ್ತರಣೆಯಲ್ಲಿ ಸಿದ್ದರಾಮಯ್ಯ ಅವರ ಪಾತ್ರ, ಅಹಿಂದ ಸಮುದಾಯಗಳೊಂದಿಗಿನ ಅವರ ರಾಜಕೀಯ ಸಂಬಂಧ ಹಾಗೂ ಪಕ್ಷದ ಭವಿಷ್ಯದ ನಾಯಕತ್ವದ ಪ್ರಶ್ನೆಗಳು ಈ ಘಟನೆಯ ಹಿನ್ನೆಲೆಯಲ್ಲಿ ಮತ್ತೆ ಚರ್ಚೆಯಾಗುತ್ತಿವೆ.

ಒಟ್ಟಿನಲ್ಲಿ, ಸೋನಿಯಾ ಗಾಂಧಿ ಅವರ ಪುಸ್ತಕ ಬಿಡುಗಡೆ ಸಮಾರಂಭವು ರಾಷ್ಟ್ರಮಟ್ಟದಲ್ಲಿ ವಿರೋಧ ಪಕ್ಷಗಳ ನಾಯಕರ ಸಮಾಗಮಕ್ಕೆ ವೇದಿಕೆಯಾಗಿದ್ದರೂ, ಕರ್ನಾಟಕದ ಮಟ್ಟದಲ್ಲಿ ಮಾತ್ರ ಸಿದ್ದರಾಮಯ್ಯ ಅವರಿಗೆ ಕಲ್ಪಿಸಲಾದ ಆಸನ ವ್ಯವಸ್ಥೆಯೇ ರಾಜಕೀಯ ಚರ್ಚೆಯ ಕೇಂದ್ರಬಿಂದುವಾಗಿದೆ.

PPeepal Media Desk

Peepal Media Desk

Peepal Media · ರಾಜಕೀಯ ವಿಭಾಗ

ಸಂಬಂಧಿತ ಸುದ್ದಿಗಳು