ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಬಸವಣ್ಣನವರನ್ನು ಅವಮಾನಿಸುವ “ಬಸವ ಮಂಟಪ” ಕೃತಿಗೆ ಕಾಂಗ್ರೆಸ್ ನಾಯಕರ ಆಪ್ತ ವಿಶ್ವೇಶ್ವರ ಭಟ್ ಪ್ರಕಾಶಕ! ಭಟ್ಟರ ಮೇಲೆ ಕ್ರಮಕ್ಕೆ ಬಿಜೆಪಿ ನಾಯಕರ ಮೌನವೇಕೆ?ಓದೋಣ ಬಾ ಗುರು – ‘ನಾಗೇಶಿ ದ್ವಿಪದಿಗಳು’ : ಸಮಾಜದ ಓರೆಕೋರೆಗೆ ಹಿಡಿದ ಕನ್ನಡಿಸೈಫ್ ಅಲಿ ಖಾನ್‌ಗೆ ಜೀವ ಬೆದರಿಕೆ; ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದ ಆರೋಪಿ ಜೀಶನ್ ಅಖ್ತರ್ ಹೆಸರು ಪ್ರಸ್ತಾಪ!ಬಾಂಗ್ಲಾದೇಶದಲ್ಲಿ ರಾಜಕೀಯ ಬಿಕ್ಕಟ್ಟಿಗೆ ಹಿಂಸಾತ್ಮಕ ತಿರುವು: ಮೊಹಮ್ಮದ್ ಯೂನಸ್ ಕುಟುಂಬಕ್ಕೆ ಸೇರಿದ ಮನೆ ಗುರಿ, 37 ಬ್ಯಾಂಕ್ ಕಚೇರಿಗಳ ಮೇಲೆ ದಾಳಿಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ; ವಯಸ್ಸಿನ ಕಾರಣ ನೀಡಿದ ಸಿದ್ದರಾಮಯ್ಯ‘ಈ ದಬ್ಬಾಳಿಕೆ ಹೆಚ್ಚು ದಿನ ಮುಂದುವರೆಯದು’, ಚುನಾವಣಾ ಆಯೋಗದ ಒಳಗಿನಿಂದಲೇ ಮಾಹಿತಿ ಬರುತ್ತಿದೆ: ರಾಹುಲ್ ಗಾಂಧಿಆ್ಯಂಟಿಬಯಾಟಿಕ್‌ಗಳಿಗೂ ಬಗ್ಗದ ಬ್ಯಾಕ್ಟೀರಿಯಾಗಳು; ನವಜಾತ ಶಿಶುಗಳು, ಐಸಿಯು ರೋಗಿಗಳಿಗೆ ಹೆಚ್ಚಿದ ಅಪಾಯ: ಐಸಿಎಂಆರ್ ವರದಿರಕ್ಷಣಾ ವೇದಿಕೆ ಪ್ರತಿಭಟನೆ ಬೆನ್ನಲ್ಲೇ 71ನೇ ಕನ್ನಡ ರಾಜ್ಯೋತ್ಸವ ಆಚರಿಸಿ ಸಂಭ್ರಮಿಸಿದ ನ್ಯಾಕ್‌; ಕನ್ನಡ ಭಾಷೆ, ಸಂಸ್ಕೃತಿಗೆ ಗೌರವಯುಪಿಎ ಸರ್ಕಾರದ ಅವಧಿಯಲ್ಲಿ ಮೋದಿ ವಿರುದ್ಧದ ತನಿಖೆಯನ್ನು ಕಾಂಗ್ರೆಸ್ ನಾಯಕರೇ ತಡೆದಿದ್ದರು: ವೀರಪ್ಪ ಮೊಯ್ಲಿ ಆರೋಪಎರಡೇ ವಾರಗಳಲ್ಲಿ ₹1000 ಕೋಟಿ ಗಡಿ ದಾಟಿದ ‘ರಾಮಾಯಣ’; ವಿಶ್ವದಾದ್ಯಂತ ಗಳಿಕೆಯಲ್ಲಿ ₹1500 ಕೋಟಿಯ ದಾಖಲೆಹೋರ್ಮುಜ್ ಜಲಸಂಧಿ ಸಮೀಪ ತೈಲ ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿ: ಮೂವರು ಭಾರತೀಯ ನಾವಿಕರು ಸುರಕ್ಷಿತಸಂಸತ್ತಿನ ಚಳಿಗಾಲದ ಅಧಿವೇಶನ ವಿಳಂಬ: ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಬಹುಮತ ಕ್ರೋಡೀಕರಣದ ಪ್ರಯತ್ನಬೆಳಗಾವಿ ಅಧಿವೇಶನದಲ್ಲಿ ಮೀಸಲಾತಿ ಅಸ್ತ್ರ ಪ್ರಯೋಗಕ್ಕೆ ಬಿಜೆಪಿ ಸಿದ್ಧತೆ; ಎಸ್‌ಸಿಪಿ–ಟಿಎಸ್‌ಪಿ ಅನುದಾನ ಬಳಕೆ ಪ್ರಶ್ನಿಸಲು ನಿರ್ಧಾರಬೆಂಗಳೂರು ಪಾಲಿಕೆ ಚುನಾವಣೆ: ಹಳೆಯ ಮತದಾರರ ಪಟ್ಟಿಯನ್ನೇ ಬಳಸಲು ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರ ಮನವಿಟ್ರಾನ್ಸ್‌ಜೆಂಡರ್ ಹಕ್ಕುಗಳ ಕಾಯ್ದೆಗೆ ತಿದ್ದುಪಡಿ: ಸ್ವಯಂ ಗುರುತಿಸುವಿಕೆ ಬದಲು ವೈದ್ಯಕೀಯ ಅನುಮೋದನೆಗೆ ಆದ್ಯತೆ; ದೇಶಾದ್ಯಂತ ಚರ್ಚೆಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಆರ್. ಹಿತೇಂದ್ರ ನೇಮಕ: ಸೀಮಂತ್ ಕುಮಾರ್ ಸಿಂಗ್‌ಗೆ ಅಗ್ನಿಶಾಮಕ ದಳದ ಎಡಿಜಿಪಿ ಹೊಣೆಭದ್ರತಾ ಆತಂಕದ ಹಿನ್ನೆಲೆ : ಸೌದಿ ಅರೇಬಿಯಾಗೆ ಇಂಡಿಗೋ ವಿಮಾನಗಳ ಹಾರಾಟ ನ.30ರವರೆಗೆ ರದ್ದು‘ರಾಮಾಯಣ’ ಎದುರು ಸಣ್ಣ ಸಿನಿಮಾ ‘ಪೈರ್’ಗೆ ಅನ್ಯಾಯ? ಪ್ರದರ್ಶನ ಕಡಿತದ ಬಗ್ಗೆ ತನಿಖೆಗೆ AICWA ಆಗ್ರಹಸೋನಿಯಾ ಗಾಂಧಿ ಪುಸ್ತಕ ಬಿಡುಗಡೆಗೆ ಗೈರು: ಆಹ್ವಾನ ಪತ್ರ ಬಂದಿರಲಿಲ್ಲ ಎಂದ ಸ್ಟಾಲಿನ್; ಮೇಕೆದಾಟು ವಿಚಾರದಲ್ಲಿ ವಿಜಯ್ ವಿರುದ್ಧ ವಾಗ್ದಾಳಿಪ್ರೀತಿಯ ಅನುಭೂತಿ ಪಡೆಯದ ಗಂಡಸರು!

ಓದೋಣ ಬಾ ಗುರು – ‘ನಾಗೇಶಿ ದ್ವಿಪದಿಗಳು’ : ಸಮಾಜದ ಓರೆಕೋರೆಗೆ ಹಿಡಿದ ಕನ್ನಡಿ

PPeepal Media Desk

Peepal Media Desk ಅಂಕಣ

• 1 ನಿಮಿಷದ ಓದು

ಓದೋಣ ಬಾ ಗುರು – ‘ನಾಗೇಶಿ ದ್ವಿಪದಿಗಳು’ : ಸಮಾಜದ ಓರೆಕೋರೆಗೆ ಹಿಡಿದ ಕನ್ನಡಿ

“..ಸಮಾಜದ ಓರೆಕೋರೆಗಳಿಗೆ ಎದುರಾಗುವ ಧೈರ್ಯ ಕವಿಯಾದವನಿಗೆ ಇರಲೇ ಬೇಕು. ನಾಗೇಶ್ ನಾಯಕ್ ಅವರು ಇಲ್ಲಿ ತಮ್ಮ ಭಾವ ಕೋಶವದ ಸೂಕ್ಷ್ಮ ಸಂಗತಿಗಳನ್ನು ಸಮರ್ಥವಾಗಿ ಪ್ರಶ್ನಿಸುತ್ತಾರೆ..” ಲೇಖಕಿ ಶಿಲ್ಪಾ ಮ್ಯಾಗೇರಿಯವರ ಪುಸ್ತಕ ವಿಮರ್ಶೆ

ಮಾತಿನಿಂ ನಗೆ-ನುಡಿಯು,
ಮಾತಿನಿಂ ಹಗೆ ಕೊಲೆಯು,
ಮಾತಿನಿಂ ಸರ್ವ ಸಂಪದವು ಲೋಕಕ್ಕೆ,
ಮಾತೆ ಮಾಣಿಕವು ಸರ್ವಜ್ಞ.

ಎಂಬ ಸರ್ವಜ್ಞನ ವಚನ ನೆನಪಿಸುವ ‘ಅರಿಯದೆ ಆಡಿದ ಒಂದು ಮಾತು ಮನಸುಗಳ ಮಧ್ಯೆ ಬಿರುಕು ಮೂಡಿಸಬಹುದು.
ನಾಲಿಗೆಗೆ ನಯವಂತಿಕೆ ಕಲಿಸುವುದೇ ಇಂದಿನ ತುರ್ತು’
ಪ್ರಸ್ತುತ ಸಾಲುಗಳು ನಾಗೇಶ್ ನಾಯಕ್ ಅವರ ‘ನಾಗೇಶಿ ದ್ವಿಪದಿಗಳು’ ಎಂಬ ದ್ವಿಪದಿಗಳ ಸಂಕಲನದ ಸಾಲುಗಳು.

ಗಜಲ್ ಮತ್ತು ಕವಿತೆಗಳ ಮೂಲಕ ನಾಡಿನ ಉದ್ದಗಲಕ್ಕೂ ಪರಿಚಿತರಾಗಿರುವ ಕವಿ ನಾಗೇಶ್ ನಾಯಕ್ ಅವರ ಎರಡೇ ಪಾದದ ಅಪಾರ ಅರ್ಥದ ದ್ವಿಪದಿಗಳನ್ನು ಇಲ್ಲಿ ನೋಡಬಹುದು.

ಕಟ್ಟುವ ಮತ್ತು ಕೆಡವುವ ಎರಡು ಭಿನ್ನ ಕಾಯಕವಿದೆ ಜಗದಲ್ಲಿ
ಒಂದು ರುಚಿಸಿದವರಿಗೆ ಇನ್ನೊಂದು ರುಚಿಸದು
‘ಜೋಡಿಸುವುದರಲ್ಲಿ ಇರುವ ಖುಷಿ ಅವನಿಗೆ ಹೇಗೆ ಗೊತ್ತಾಗಬೇಕು’ ಹೀಗೆ ಹೇಳುವಲ್ಲಿ ಕಟ್ಟುಗಾರಿಕೆಯ ಕಸರತ್ತು ಎಂತಹುದು ಎಂದು ಗಮನಿಸಬಹುದು.

‘ಅವಳಷ್ಟು ನಗುತ್ತಿದ್ದಾಳೆಂದರೆ ಯಾವುದೋ ನೋವು ಮುಚ್ಚಿಡುತ್ತಿದ್ದಾಳೆಂದೇ ಅರ್ಥ ನಾಗೇಶಿ ನಿವಾರಿಸಲಾಗದಿದ್ದರೂ ನೋವು ನೇವರಿಸಿ ಸಂತೈಸು ಒಮ್ಮೆ ದುಃಖ ಕೆನ್ನೆಗಿಳಿದೀತು’ ಹರಳುಗಟ್ಟಿದ ನೋವುಗಳಿಗೆ ಮಾತಿನ ಮದ್ದು ಬೇಕಿಲ್ಲ ಬೆಚ್ಚನೆಯ ಭಾವದ ಸಾಂಗತ್ಯ ಸಾಕು ನನ್ನದೆನ್ನುವ ಹೆಗಲು ಸಾಕು ನೂರು ಮಾತನಾಡದೆ ಸುಮ್ಮನೆ ಜೊತೆನಿಲ್ಲುವುದು ಮಹತ್ವದ ಸಂಗತಿ.

‘ಜೀವಗಳ ಬೇರೆಯಾಗಿಸುವ ಧರ್ಮಗಳ ಗೊಡವೆ ನಮಗೆ ಬೇಡ ನಾಗೇಶಿ’ ಮನುಷ್ಯತ್ವ ಶ್ರೇಷ್ಠವೆಂಬ ಸತ್ಯದ ಜೊತೆಗೆ ಕವಿಯ ಪ್ರಜ್ಞಾಪೂರ್ವಕ ನಿಲುವು ಇಲ್ಲಿದೆ.

ಅಯೋಗ್ಯರ ಮಾತಿಗಿಂತ ಯೋಗ್ಯರ ಮೌನ ಹೆಚ್ಚು ಹಾಳು ಮಾಡುತ್ತದೆ ಎಂಬಂತೆ ‘ಪ್ರೀತಿಸುವುದಕ್ಕಷ್ಟೇ ಅಲ್ಲ, ದ್ವೇಷಿಸುವುದಕ್ಕೂ ಅರ್ಹತೆಗಳಿರಬೇಕು ನಾಗೇಶಿ
‘ಯಾವುದಕ್ಕೂ ಸಲ್ಲದವರಿಗೆ ದಿವ್ಯ ನಿರ್ಲಕ್ಷ್ಯವೇ ಮದ್ದು’
ವರ್ತಮಾನಕ್ಕೆ ಮುಖಾಮುಖಿಯಾಗುವ ಅದೆಷ್ಟೊ ಸಾಲುಗಳಿವೆ ಸಂಕಲನದುದ್ದಕ್ಕೂ ಬದುಕಿನ ತಲ್ಲಣಗಳಿಗೆ ಎದೆಯೊಡ್ಡಿದ ಹಲವು ಸಂಕಟಗಳನ್ನು ಇಲ್ಲಿ ಕಾಣಬಹುದು. ‘ಸೀತೆಗೆ ಒಮ್ಮೆ ಅಗ್ನಿಪರೀಕ್ಷೆಯಾದರೆ ಈ ನೆಲದ ಹೆಣ್ಣಿಗೋ ನಿತ್ಯ ಅಗ್ನಿ ಕುಂಡ’

‘ಜಗದಲಿ ಯಾವ ನೆಮ್ಮದಿಯ ತಾಣಗಳೂ ಇಲ್ಲ ನಾಗೇಶಿ ಅವ್ವನ ಮಡಿಲ ವಿನಹ’

‘ಬಾಯಾರಿಕೆಯೆಂದು ಬೊಗಸೆಯೊಡ್ಡಿದರೂ ಕುಲ ಜಾತಿ ಕೇಳುತ್ತಿದೆ ಲೋಕ’

ಸಮತೆಯ ಮಂತ್ರ ಪಠಿಸುತ್ತಿರುವವರೇ ಬಾಗಿಲಲ್ಲಿ ಬಾಕು ಹಿಡಿದು ಹಣಿಯಲು ಕೂತಿದ್ದಾರೆ’

‘ಗಾಂಧಿ, ಬುದ್ಧ, ಬಸವನನ್ನೂ ಇಷ್ಟ ಪಡದ ಮನಸುಗಳಿದ್ದವು’

ಸಮಾಜದ ಓರೆಕೋರೆಗಳಿಗೆ ಎದುರಾಗುವ ಧೈರ್ಯ ಕವಿಯಾದವನಿಗೆ ಇರಲೇ ಬೇಕು. ನಾಗೇಶ್ ನಾಯಕ್ ಅವರು ಇಲ್ಲಿ ತಮ್ಮ ಭಾವ ಕೋಶವದ ಸೂಕ್ಷ್ಮ ಸಂಗತಿಗಳನ್ನು ಸಮರ್ಥವಾಗಿ ಪ್ರಶ್ನಿಸುತ್ತಾರೆ.

ಈ ಜಗದ ಎಲ್ಲಕ್ಕಿಂತ ಸುಂದರ ಭಾವವೊಂದಿದ್ದರೆ ಅದು ಕೃತಜ್ಞತೆ ಪ್ರತಿಯೊಬ್ಬದಲ್ಲೂ ಇರಬೇಕಾರ ಮೂಲಭೂತ ಅಂಶವೂ ಇದೇ, ಕವಿ ನಾಗೇಶ್ ನಾಯಕ್ ಅವರು ಒಂದು ದ್ವಿಪದಿಯಲ್ಲಿ ಹೇಳುತ್ತಾರೆ. ‘ಇಂದು ಸಾಧನೆಯ ಕಿರೀಟ ಮುಕುಟವೇರಿದೆ, ಹೋದ ಕಡೆಯಲ್ಲೆಲ್ಲಾ ಚಪ್ಪಾಳೆಗಳ ಸದ್ದು ಇದಕ್ಕೆಲ್ಲ ಕಾರಣವಾದವರಿಗೆ ಹೃದಯ ತುಂಬಿ ಕೃತಜ್ಞತೆ ಸಲ್ಲಿಸಿಬಿಡು ನಾಗೇಶಿ’ ಹೀಗೆ ವಾಸ್ತವರ ಅರಿವು ಧನ್ಯತೆಯ ಭಾವ ಇರುವ ನಾಗೇಶ್ ನಾಯಕ್ ಅವರಿಗೆ ಶುಭಕೋರುತ್ತ ಒಂದು ಒಳ್ಳೆಯ ಸಂಕಲನ ಓದಿನ ಖುಷಿಯಾಗಿ ಒಮ್ಮೆ ನಾಗೇಶಿ ದ್ವಿಪದಿಗಳನ್ನು ಓದಬೇಕು.

PPeepal Media Desk

Peepal Media Desk

Peepal Media · ಅಂಕಣ ವಿಭಾಗ

ಸಂಬಂಧಿತ ಸುದ್ದಿಗಳು