ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ರಾಜಕರಣಿಗಳ ಖರ್ಚುಗಳಿಗೆ ಹಣವಿದೆ, ನಮಗ್ಯಾಕಿಲ್ಲ – ಧರಣಿ ಮುಂದುವರಿಸಿದ ಆಶಾ ಕಾರ್ಯಕರ್ತೆಯರುಹೊಸಪೇಟೆ ರೈಲು ನಿಲ್ದಾಣದಲ್ಲಿ ಗಾಂಜಾ ಸಾಗಾಟಕ್ಕೆ ಯತ್ನ – 8.25 ಲಕ್ಷ ಮೌಲ್ಯದ 8.5 ಕೆಜಿ ಗಾಂಜಾ ಸೀಜ್ಬಯಲು ಸಂತೆಯ ಮೌನ – 4: ನಾನು ಕ್ಷೇಮ, ನೀನು ಕ್ಷೇಮ?ಯುವಜನ ರಾಜಕಾರಣದ ಚರ್ಚೆಗೆ ಮಂಗಳೂರಿನಲ್ಲಿ ‘ಜನನುಡಿ–2026’ ವೇದಿಕೆ; ನ.28ರಿಂದ ಎರಡು ದಿನಗಳ ಸಮಾವೇಶಏಕಸ್ವಾಮ್ಯದಿಂದ ಉದ್ಯೋಗ ಹೆಚ್ಚಾಗುವುದಿಲ್ಲ, ಬೆಲೆ ಹೆಚ್ಚಳವಾಗುತ್ತದೆ: ಮೋದಿಯನ್ನು ಗುರಿಯಾಗಿಸಿಕೊಂಡು ಅದಾನಿಯನ್ನು ಟೀಕಿಸಿದ ರಾಹುಲ್‌ ಗಾಂಧಿಮಂಗಳೂರು: ವೈದ್ಯಕೀಯ ವಿದ್ಯಾರ್ಥಿನಿಯನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದ ಕುಟುಂಬಸ್ಥರು; ವಿಡಿಯೋ ವೈರಲ್ ಬೆನ್ನಲ್ಲೇ ಪ್ರಕರಣ ದಾಖಲುಸೋನಿಯಾ ಗಾಂಧಿ ಆತ್ಮಚರಿತ್ರೆಯಲ್ಲಿ ಸಾವರ್ಕರ್ ಉಲ್ಲೇಖ: ಕಾನೂನು ಕ್ರಮಕ್ಕೆ ಮುಂದಾದ ಸತ್ಯಕಿ ಸಾವರ್ಕರ್ಹಿರಿಯೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಒಟ್ಟಾಗಿ ಸೋಲಿಸುವುದೇ ನಮ್ಮ ಗುರಿ: ಕುಮಾರಸ್ವಾಮಿರೋಹಿಂಗ್ಯಾ ನರಮೇಧ: ಮ್ಯಾನ್ಮಾರ್ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯದ ಐತಿಹಾಸಿಕ ತೀರ್ಪು; ಪರಿಹಾರಕ್ಕೂ ಆದೇಶಮೋದಿ ಸರ್ಕಾರದ ಆರ್ಥಿಕ ನೀತಿಗಳಿಂದ ಆರ್ಥಿಕತೆ ಸಂಕಷ್ಟಕ್ಕೆ ಸಿಲುಕಿದೆ: ಮಲ್ಲಿಕಾರ್ಜುನ ಖರ್ಗೆ ಟೀಕೆರದ್ದಾದ ನೀಟ್ ಪರೀಕ್ಷೆಯ ಮೊಬೈಲ್ ಆರೋಪ: ಹಾವೇರಿ ವಿದ್ಯಾರ್ಥಿನಿಗೆ ಹೈಕೋರ್ಟ್‌ನಿಂದ ನ್ಯಾಯ, ವೈದ್ಯಕೀಯ ಸೀಟು ಭದ್ರPF ನಿಯಮ ಬದಲಾವಣೆ 2026: 12 ತಿಂಗಳ ಕಾಯುವಿಕೆ ಇನ್ನು 2 ತಿಂಗಳುಕಾಂಗ್ರೆಸ್‌ ಶಾಸಕರಿಗೆ ಹುಚ್ಚು ನಾಯಿ ಕಚ್ಚಿದೆ – ಸ್ವಪಕ್ಷ ನಾಯಕರ ವಿರುದ್ದವೇ ರೇವಂತ್‌ ರೆಡ್ಡಿ ಗರಂಗೃಹಲಕ್ಷ್ಮಿ ಯೋಜನೆಯ ಹಣದಲ್ಲಿ ಪಾಲು ನಿರಾಕರಿಸಿದ್ದಕ್ಕೆ ಅಜ್ಜಿಯ ಕೊಲೆ: 20 ವರ್ಷದ ಮೊಮ್ಮಗನ ಬಂಧನಪರಮಾಣು ಯುದ್ಧಕ್ಕೆ ದೊಡ್ಡ ಬ್ರೇಕ್‌ – ಮಹತ್ವದ ನಿರ್ಧಾರಕ್ಕೆ ಟ್ರಂಪ್, ಜಿನ್ ಪಿಂಗ್ ,ಪುಟಿನ್ ಸಹಿಬೆಂಗಳೂರು ಟೆಕ್ ಸಮಿಟ್‌ 2026: ಕರ್ನಾಟಕದ ಡೀಪ್‌ಟೆಕ್‌ ಸ್ಟಾರ್ಟ್‌ಅಪ್‌ಗಳಲ್ಲಿ ₹1,050 ಕೋಟಿ ಹೂಡಿಕೆ ಘೋಷಣೆಬಸವಣ್ಣ ಮತ್ತು ಲಿಂಗಾಯತ ಪರಂಪರೆಯನ್ನು ಅವಹೇಳನ ಮಾಡುವ ಪ್ರಯತ್ನವನ್ನು ಸಹಿಸುವುದಿಲ್ಲ: ಪ್ರಿಯಾಂಕ್ ಖರ್ಗೆಬಸವ ಮಂಟಪ ಪುಸ್ತಕವನ್ನು ನಿಷೇಧಿಸಿದ ರಾಜ್ಯ ಸರ್ಕಾರ: ಲೇಖಕ ರವಿ ಹಂಜ್‌, ಪ್ರಕಾಶಕ ವಿಶ್ವೇಶ್ವರ ಭಟ್‌ ವಿರುದ್ಧ ಕಾನೂನು ಕ್ರಮಕ್ಕೆ ಸಂಪುಟ ನಿರ್ಧಾರಹೊಸ ಬಿಎಸ್‌-6 ಖಾಸಗಿ ವಾಹನಗಳಿಗೆ ಇನ್ನು ಪ್ರತಿವರ್ಷ ಮಾಲಿನ್ಯ ಪರೀಕ್ಷೆ ಕಡ್ಡಾಯವಲ್ಲ; ಪಿಯುಸಿ ಪ್ರಮಾಣಪತ್ರದ ಅವಧಿ ಪರಿಷ್ಕರಣೆನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡಾನೆಗೆ ಕಲ್ಲು ತೂರಾಟ: ಇಬ್ಬರು ಬೈಕ್ ಸವಾರರಿಗೆ ತಲಾ ₹10 ಸಾವಿರ ದಂಡ

ಯುವಜನ ರಾಜಕಾರಣದ ಚರ್ಚೆಗೆ ಮಂಗಳೂರಿನಲ್ಲಿ ‘ಜನನುಡಿ–2026’ ವೇದಿಕೆ; ನ.28ರಿಂದ ಎರಡು ದಿನಗಳ ಸಮಾವೇಶ

PPeepal Media Desk

Peepal Media Desk ವಿಶೇಷ

• 2 ನಿಮಿಷದ ಓದು

ಯುವಜನ ರಾಜಕಾರಣದ ಚರ್ಚೆಗೆ ಮಂಗಳೂರಿನಲ್ಲಿ ‘ಜನನುಡಿ–2026’ ವೇದಿಕೆ; ನ.28ರಿಂದ ಎರಡು ದಿನಗಳ ಸಮಾವೇಶ

ಪ್ರಕಾಶ್ ರೈ, ಶರಣ್ಯ ವರ್ಮ ಸೇರಿದಂತೆ ಹಲವು ಗಣ್ಯರ ಭಾಗಿ; ಸಂವಿಧಾನ, ಸಾಮಾಜಿಕ ನ್ಯಾಯ, ಆರ್ಥಿಕತೆ ಹಾಗೂ ಪ್ರಜಾಪ್ರಭುತ್ವದ ಕುರಿತು ವಿಚಾರಮಂಥನ

ಮಂಗಳೂರು: ಯುವಜನರ ರಾಜಕೀಯ ಭಾಗವಹಿಸುವಿಕೆ, ಸಾಮಾಜಿಕ ಹೊಣೆಗಾರಿಕೆ ಮತ್ತು ದೇಶದ ಭವಿಷ್ಯದ ಕುರಿತು ಚರ್ಚೆ ನಡೆಸುವ ಉದ್ದೇಶದಿಂದ ಆಯೋಜಿಸಿರುವ ‘ಜನನುಡಿ–2026’ ಎರಡು ದಿನಗಳ ಸಮಾವೇಶ ನವೆಂಬರ್ 28 ಮತ್ತು 29ರಂದು ಮಂಗಳೂರಿನ ಬಲ್ಮಠದಲ್ಲಿರುವ ಕೆಟಿಸಿ ಕ್ಯಾಂಪಸ್‌ನಲ್ಲಿ ನಡೆಯಲಿದೆ.

‘ಯುವಜನ ರಾಜಕಾರಣ: ದಿಕ್ಕು–ಭವಿಷ್ಯ–ಸವಾಲು’ ಎಂಬ ಕೇಂದ್ರ ವಿಷಯದಡಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ರಾಜಕೀಯ, ಆರ್ಥಿಕತೆ, ಶಿಕ್ಷಣ, ಸಾಮಾಜಿಕ ನ್ಯಾಯ, ರಾಷ್ಟ್ರೀಯತೆ, ಡಿಜಿಟಲ್ ಮಾಧ್ಯಮ ಹಾಗೂ ಪ್ರಜಾಪ್ರಭುತ್ವದ ಸಮಕಾಲೀನ ಸವಾಲುಗಳ ಕುರಿತು ವಿವಿಧ ಗೋಷ್ಠಿಗಳು ಮತ್ತು ಸಂವಾದಗಳು ನಡೆಯಲಿವೆ.

ಸಂವಿಧಾನಿಕ ಮೌಲ್ಯಗಳು, ಪ್ರಜಾಸತ್ತಾತ್ಮಕ ವ್ಯವಸ್ಥೆ, ಸಮಾನತೆ ಮತ್ತು ಬಹುತ್ವದ ಕುರಿತು ಸಾರ್ವಜನಿಕ ಚರ್ಚೆಗಳಿಗೆ ವೇದಿಕೆ ಕಲ್ಪಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಉದ್ಯೋಗಾವಕಾಶಗಳ ಕೊರತೆ, ಆರ್ಥಿಕ ಅಸಮಾನತೆ, ಶಿಕ್ಷಣದ ವ್ಯಾಪಾರೀಕರಣ, ಜಾತಿ ತಾರತಮ್ಯ, ಕೋಮುವಾದ ಹಾಗೂ ಡಿಜಿಟಲ್ ವೇದಿಕೆಗಳಲ್ಲಿ ಹರಡುತ್ತಿರುವ ಸುಳ್ಳು ಮಾಹಿತಿ ಸೇರಿದಂತೆ ಯುವಜನರ ಬದುಕಿನ ಮೇಲೆ ಪರಿಣಾಮ ಬೀರುವ ವಿಚಾರಗಳು ಸಮಾವೇಶದಲ್ಲಿ ಚರ್ಚೆಗೆ ಬರಲಿವೆ.

ನ.28ರಂದು ಉದ್ಘಾಟನೆ, ಹಲವು ವಿಚಾರಗೋಷ್ಠಿಗಳು

ಮೊದಲ ದಿನ ಬೆಳಿಗ್ಗೆ 9 ಗಂಟೆಗೆ ಪುಸ್ತಕ ಮೇಳದ ಉದ್ಘಾಟನೆಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಹಿರಿಯ ಹೋರಾಟಗಾರ ಬಸವರಾಜ ಸೂಳಿಭಾವಿ ಪುಸ್ತಕ ಮೇಳ ಉದ್ಘಾಟಿಸಲಿದ್ದು, ಅನಿಲ್ ಹೊಸಮನಿ ಉಪಸ್ಥಿತರಿರಲಿದ್ದಾರೆ. ಡಾ. ಗಣನಾಥ ಎಕ್ಕಾರು ಅಧ್ಯಕ್ಷತೆ ವಹಿಸಲಿದ್ದಾರೆ.

ಬೆಳಿಗ್ಗೆ 10 ಗಂಟೆಗೆ ನಡೆಯುವ ಜನನುಡಿ ಉದ್ಘಾಟನಾ ಗೋಷ್ಠಿಯನ್ನು ಪ್ರೊ. ರಹಮತ್ ತರೀಕೆರೆ ಉದ್ಘಾಟಿಸಲಿದ್ದಾರೆ. ದೆಹಲಿ ವಿದ್ಯಾರ್ಥಿ ಚಳವಳಿಯ ಪ್ರತಿನಿಧಿ ಶರಣ್ಯ ವರ್ಮ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ವಿಶೇಷ ಮಾತುಗಳನ್ನಾಡಲಿದ್ದಾರೆ. ಮೂಡ್ನಾಕೂಡು ಚಿನ್ನಸ್ವಾಮಿ ಅಧ್ಯಕ್ಷತೆ ವಹಿಸಲಿದ್ದು, ಮನೋಜ್ ವಾಮಂಜೂರು ನಿರೂಪಿಸಲಿದ್ದಾರೆ.

ಬಳಿಕ ‘ಭವಿಷ್ಯದ ಭಾರತ: ಆರ್ಥಿಕತೆ ಮತ್ತು ಜೀವನೋಪಾಯ’ ವಿಷಯದ ಗೋಷ್ಠಿಯಲ್ಲಿ ಶಿವಸುಂದರ್ ವಿಷಯ ಮಂಡಿಸಲಿದ್ದಾರೆ. ನಂದಕುಮಾರ್ ಕುಂಬ್ರಿಉಬ್ಬು ಪ್ರತಿಕ್ರಿಯಿಸಲಿದ್ದು, ಕಾನೂನು ವಿದ್ಯಾರ್ಥಿ ಅಶ್ಫಕ್ ಎಂ.ಜಿ. ಕೊಪ್ಪಳ ಜೆನ್ ಝಿ ಯುವಜನರ ದೃಷ್ಟಿಕೋನವನ್ನು ಹಂಚಿಕೊಳ್ಳಲಿದ್ದಾರೆ. ಡಾ. ಸಬಿತಾ ಬನ್ನಾಡಿ ಅಧ್ಯಕ್ಷತೆ ವಹಿಸಲಿದ್ದಾರೆ.

ಮಧ್ಯಾಹ್ನ 3 ಗಂಟೆಗೆ ಡಿಂಗ್ರಿ ಭರತ್ ಅವರ ಮಾತು ಮತ್ತು ಹಾಡಿನ ಮೂಲಕ ‘ಅಸಮಾನತೆಯ ಹಾಡು-ಪಾಡು’ ಕಾರ್ಯಕ್ರಮ ನಡೆಯಲಿದೆ. ನಂತರ ‘ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ’ ಗೋಷ್ಠಿಯಲ್ಲಿ ಬಿ. ಶ್ರೀಪಾದ ಭಟ್ ಹಾಗೂ ವಿಕಾಸ್ ಮೌರ್ಯ ವಿಷಯ ಮಂಡಿಸಲಿದ್ದು, ಡಾ. ಶಭಾನ ಮೈಸೂರು ಯುವಜನರ ಪ್ರತಿಕ್ರಿಯೆ ನೀಡಲಿದ್ದಾರೆ. ಚಂದ್ರಶೇಖರ ಗೊರಬಾಳ್ ಅಧ್ಯಕ್ಷತೆ ವಹಿಸಲಿದ್ದಾರೆ.

ಸಂಜೆ 5.30ಕ್ಕೆ ಬಹುಭಾಷಾ ನಟ ಪ್ರಕಾಶ್ ರೈ ಅವರೊಂದಿಗೆ ವಿಶೇಷ ಸಂವಾದ ನಡೆಯಲಿದ್ದು, ಡಾ. ನಾಗೇಗೌಡ ಕೆ.ಎಸ್. ಮಾತುಕತೆ ನಡೆಸಿಕೊಡಲಿದ್ದಾರೆ. ಸಂಜೆ 6.30ರಿಂದ ಡಿಂಗ್ರಿ ಭರತ್ ಅವರ ಹಲ್ಗಿ ನಾದ ತಂಡ ಹಾಗೂ ಕರಾವಳಿಯ ನಿರ್ದಿಗಂತ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.

ಎರಡನೇ ದಿನ ಕವಿಗೋಷ್ಠಿ, ರಾಷ್ಟ್ರೀಯತೆ ಮತ್ತು ಪ್ರಜಾಪ್ರಭುತ್ವದ ಚರ್ಚೆ

ನವೆಂಬರ್ 29ರಂದು ಬೆಳಿಗ್ಗೆ ‘ಪ್ರತಿರೋಧದ ಕವಿತೆ’ ಶೀರ್ಷಿಕೆಯಡಿ ಕವಿಗೋಷ್ಠಿ ನಡೆಯಲಿದೆ. ವಿಲ್ಸನ್ ಕಟೀಲ್ ಅಧ್ಯಕ್ಷತೆ ವಹಿಸಲಿದ್ದು, ಶಂಕರ ಕೆಂಚನೂರು ಆಶಯ ನುಡಿಗಳನ್ನಾಡಲಿದ್ದಾರೆ. ರಾಜ್ಯದ ವಿವಿಧ ಭಾಗಗಳ ಕವಿಗಳು ಕವಿತೆಗಳನ್ನು ವಾಚಿಸಲಿದ್ದಾರೆ.

ನಂತರ ‘ರಾಷ್ಟ್ರೀಯತೆ, ಅಸ್ಮಿತೆ ಮತ್ತು ಡಿಜಿಟಲ್ ರಾಜಕಾರಣ’ ವಿಷಯದ ಗೋಷ್ಠಿಯಲ್ಲಿ ಪತ್ರಕರ್ತ ಜಿ. ವಿಷ್ಣು ಹಾಗೂ ಜೆಎನ್‌ಯು ಸಂಶೋಧನಾ ವಿದ್ಯಾರ್ಥಿ ವಸಂತ ಕಲಾಲ್ ವಿಷಯ ಮಂಡಿಸಲಿದ್ದಾರೆ. ಶಾಲಿಕಾ ಎಕ್ಕಾರು ಜೆನ್ ಝಿ ಪ್ರತಿಕ್ರಿಯೆ ನೀಡಲಿದ್ದು, ಹಿರಿಯ ಪತ್ರಕರ್ತ ಎನ್.ಎ.ಎಂ. ಇಸ್ಮಾಯಿಲ್ ಅಧ್ಯಕ್ಷತೆ ವಹಿಸಲಿದ್ದಾರೆ.

ಮಧ್ಯಾಹ್ನ ‘ಕೋಮುವಾದ ಮತ್ತು ಕ್ರೋನಿ ಕ್ಯಾಪಿಟಲಿಸಂ ಮೈತ್ರಿ: ಸವಾಲು’ ಎಂಬ ವಿಷಯದಡಿ ನಡೆಯುವ ಗೋಷ್ಠಿಯಲ್ಲಿ ಡಾ. ಮೀನಾಕ್ಷಿ ಬಾಳಿ, ಎ. ನಾರಾಯಣ ಹಾಗೂ ಬಿ. ಸುರೇಶ ಮಾತನಾಡಲಿದ್ದಾರೆ. ಡಾ. ಕಿರಣ್ ಗಾಜನೂರು ಸಮನ್ವಯ ಮಾಡಲಿದ್ದಾರೆ.

ಇದರ ನಂತರ ದೆಹಲಿ ವಿದ್ಯಾರ್ಥಿ ಚಳವಳಿಯ ಪ್ರತಿನಿಧಿ ಶರಣ್ಯ ವರ್ಮ ಅವರೊಂದಿಗೆ ವಿಶೇಷ ಸಂವಾದ ನಡೆಯಲಿದೆ.

ಸಂಜೆಯ ಗೋಷ್ಠಿಯಲ್ಲಿ ‘ಪ್ರಜಾಪ್ರಭುತ್ವದ ಅಳಿವು ಉಳಿವು–ಸಿದ್ಧಾಂತಗಳ ಪಾತ್ರ’ ಎಂಬ ವಿಷಯದ ಕುರಿತು ಚರ್ಚೆ ನಡೆಯಲಿದೆ. ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಸಿಪಿಐಎಂ ಕಾರ್ಯದರ್ಶಿ ಡಾ. ಕೆ. ಪ್ರಕಾಶ್ ಹಾಗೂ ಸಿಪಿಐ ಕಾರ್ಯದರ್ಶಿ ಸಾತಿ ಸುಂದರೇಶ್ ವಿಚಾರ ಮಂಡಿಸಲಿದ್ದಾರೆ. ಹಿರಿಯ ಚಿಂತಕ ಡಾ. ಬಿ.ಆರ್. ಮಂಜುನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ.

ಪ್ರಕಾಶ್ ರೈ ಅಧ್ಯಕ್ಷತೆಯಲ್ಲಿ ಸಮಾರೋಪ

ಸಂಜೆ 5 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಖ್ಯಾತ ಲೇಖಕಿ ಕೆ. ನೀಲಾ ಹಾಗೂ ಡಾ. ಎಚ್.ಎಸ್. ಅನುಪಮ ಸಮಾರೋಪದ ಮಾತುಗಳನ್ನಾಡಲಿದ್ದಾರೆ. ಡಾ. ಸುಬ್ಬು ಹೊಲೆಯಾರ್, ಡಾ. ಇಸ್ಮಾಯಿಲ್ ಹಾಗೂ ಮಂಜುನಾಥ ಅದ್ದೆ ಉಪಸ್ಥಿತರಿರಲಿದ್ದಾರೆ. ಬಹುಭಾಷಾ ನಟ ಪ್ರಕಾಶ್ ರೈ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ಎರಡು ದಿನಗಳ ಕಾಲ ನಡೆಯುವ ವಿಚಾರಗೋಷ್ಠಿ, ಸಂವಾದ, ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಯುವಜನರಲ್ಲಿ ರಾಜಕೀಯ ಮತ್ತು ಸಾಮಾಜಿಕ ಪ್ರಜ್ಞೆ ಬೆಳೆಸುವುದು, ಸಂವಿಧಾನಿಕ ಆಶಯಗಳ ಕುರಿತು ಚರ್ಚೆ ವಿಸ್ತರಿಸುವುದು ಹಾಗೂ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯದ ಕುರಿತ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಚಿಂತನೆ ನಡೆಸುವುದು ಸಮಾವೇಶದ ಆಶಯವಾಗಿದೆ.

ರಾಜ್ಯದ ವಿವಿಧ ಜಿಲ್ಲೆಗಳಿಂದ ಲೇಖಕರು, ಕಲಾವಿದರು, ವಿದ್ಯಾರ್ಥಿಗಳು, ಯುವಜನರು, ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಅಭಿಮತ ಬಳಗ ಮತ್ತು ಭಗತ್ ಸಿಂಗ್ ಮೆಮೋರಿಯಲ್ ಕಲ್ಚರಲ್ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿವೆ.

ವಿಷಯಗಳು: #jananudi 2026
PPeepal Media Desk

Peepal Media Desk

Peepal Media · ವಿಶೇಷ ವಿಭಾಗ

ಸಂಬಂಧಿತ ಸುದ್ದಿಗಳು