ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಆಶಾ ಕಾರ್ಯಕರ್ತೆಯರ ಹೋರಾಟದ ತೀವ್ರತೆ, ಮಾನವ ಸರಪಳಿ ನಿರ್ಮಿಸಿ – ಸರ್ಕಾರದ ವಿರುದ್ಧ ಕಿಡಿಗೋಧ್ರಾ ಹತ್ಯಾಕಾಂಡ ಕೇಸ್, ಅಪರಾಧಿಯ ಜೀವಾವಧಿ – ಶಿಕ್ಷೆ ರದ್ದುಗೊಳಿಸಿದ ಸುಪ್ರೀಂ ಕೋರ್ಟ್ಶಾಸನಗಳ ಅಧ್ಯಯನಕ್ಕೆ ಶ್ರೀನಿವಾಸ್ ವೈ.ಸಿ.ಗೆ ಪಿಎಚ್‌ಡಿ ಪದವಿಬೆಂಗಳೂರು ಜಾತ್ರೆಗೆ ಕ್ಷಣಗಣನೆ : ಇಡೀ ನಗರವೇ ಸಾಂಸ್ಕೃತಿಕ ಸಂಭ್ರಮವಾಗಲಿದೆ – ಕೃಷ್ಣ ಬೈರೇಗೌಡಕಾಡಾನೆಗಳ ಹಾವಳಿ ಮಡಿಗೆರೆಯಲ್ಲಿ 50ಕ್ಕೂ ಹೆಚ್ಚು ಗ್ರಾಮಗಳಲ್ಲಿ – ನಿಷೇಧಾಜ್ಞೆ ಜಾರಿಸಿದ್ದರಾಮಯ್ಯ ಚುನಾವಣೆಗೆ ನಿಲ್ಲಲ್ಲ ಎಂಬ ಮಾತು ಕಾಂಗ್ರೆಸ್​​​​ಗೆ​​​​​​​​​ ದೊಡ್ಡ ಪೆಟ್ಟು – ರಾಜಣ್ಣಆರ್.ಡಿ. ವೀರಪ್ಪ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಡಿ.3 ರಂದು ರಾಜನಹಳ್ಳಿಯಿಂದ ಹಾಸನ ಎಸ್.ಪಿ. ಕಚೇರಿ ಎಸ್.ಪಿ. ಕಚೇರಿ ಮುತ್ತಿಗೆ – ಜನಪರ ಸಂಘಟನೆಗಳ ಒಕ್ಕೂಟಪ್ರೇಮದ ಊರಲಿ: ಕನ್ನಡಿಗರು ಇನ್ನೂ ಧಾರಾವಾಹಿಗಳ ಪ್ರೇಕ್ಷಕರೇ? ಒಂದು ಸಿನಿಮಾ ಗೆದ್ದ ಕಥೆಯ ಹಿಂದಿರುವ ಅಸಲಿ ಕಾರಣಗಳೇನು?ಕರ್ನಾಟಕದಲ್ಲಿ 1,712 ಬಾಲ್ಯವಿವಾಹ ಪ್ರಕರಣಗಳು ನ್ಯಾಯಾಲಯಗಳಲ್ಲಿ ಬಾಕಿ: ಹೈಕೋರ್ಟ್ ನ್ಯಾಯಮೂರ್ತಿ ಕಳವಳಆರನೇ ದಿನವೂ ಮುಂದುವರಿದ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಹೋರಾಟ ; 18 ತಿಂಗಳಾದರೂ ಈಡೇರದ ಸರ್ಕಾರದ ಭರವಸೆಮಣಿಪುರದಲ್ಲಿ ಕಳ್ಳಭಟ್ಟಿ ದುರಂತಕ್ಕೆ 17 ಬಲಿ: 228 ಮಂದಿ ಆಸ್ಪತ್ರೆಗೆ ದಾಖಲು; 6 ಜನರ ಬಂಧನಹೈದರಾಬಾದ್‌ಗೆ ಉಗ್ರರ ದಾಳಿ ಬೆದರಿಕೆ: ನವೆಂಬರ್ 26ಕ್ಕೆ ಮುಂಬೈ ದಾಳಿ ಮಾದರಿಯ ಎಚ್ಚರಿಕೆ ಸಂದೇಶ!ಬಿಸ್ಲೆರಿ ಕುಡಿಯುವ ನೀರು ಅಸುರಕ್ಷಿತ: ಕಾನೂನು ಕ್ರಮಕ್ಕೆ ಅನುಮತಿ ನೀಡಿದ ಎಫ್‌ಎಸ್‌ಎಸ್‌ಎಐಬಸವೇಶ್ವರರು ಪ್ರತಿಪಾದಿಸಿದ ಜಾತಿರಹಿತ ಸಮಾಜದ ನೆಲೆ ಇರುವುದು ಆರ್‌ಎಸ್‌ಎಸ್‌ನಲ್ಲಿ ಮಾತ್ರ: ಬಿ.ವೈ. ವಿಜಯೇಂದ್ರವರ್ತೂರು ಅಕ್ರಮ ವಲಸಿಗರ ವದಂತಿ: ವೈರಲ್ ವಿಡಿಯೋದಲ್ಲಿನ ಆರೋಪಗಳನ್ನು ತಳ್ಳಿಹಾಕಿದ ಪೊಲೀಸರುಸೋನಾ ಮಸೂರಿ ಅಕ್ಕಿ ಬೆಲೆಯಲ್ಲಿ ಭಾರಿ ಇಳಿಕೆ: ಕೆ.ಜಿಗೆ ₹20 ಕಡಿತ, ಗ್ರಾಹಕರಿಗೆ ತುಸು ನಿರಾಳ!ಚಿನ್ನದ ಬೆಲೆ ಇಳಿಕೆಗೆ ತಮ್ಮ ಮನವಿಯೇ ಕಾರಣ ಎಂದ ಪ್ರಧಾನಿ ಮೋದಿಗೆ ಜನಸಾಮಾನ್ಯರ ಕೆಲವು ಪ್ರಶ್ನೆಗಳುಸುಪ್ರೀಂಕೋರ್ಟ್ ನ್ಯಾಯಮೂರ್ತಿಗೆ ನೀಡಬೇಕಿದ್ದ ಗೌರವ ವಂದನೆ ಓವೈಸಿಗೆ ಸಲ್ಲಿಕೆ; ಉತ್ತರ ಪ್ರದೇಶ ಪೊಲೀಸರಿಂದ ತನಿಖೆಗೆ ಆದೇಶಸರ್ಕಾರಕ್ಕೆ ಶಾಕ್: ಮೂವರು ಕಾಂಗ್ರೆಸ್ ಶಾಸಕರಿಂದ ರಾಜೀನಾಮೆ ಎಚ್ಚರಿಕೆ!ಚರಿತ್ರೆಯ ಮೌನ ಸಾಕ್ಷಿಗಳು: ಭಾಷೆಗಳ ಗಡಿ ದಾಟಿದ ರೂಮಿ; ಪರ್ಷಿಯನ್‌ನಿಂದ ವಿಶ್ವದ ಹೃದಯಗಳವರೆಗೆ ಒಂದು ಪ್ರೇಮಯಾನ

ಆಶಾ ಕಾರ್ಯಕರ್ತೆಯರ ಹೋರಾಟದ ತೀವ್ರತೆ, ಮಾನವ ಸರಪಳಿ ನಿರ್ಮಿಸಿ – ಸರ್ಕಾರದ ವಿರುದ್ಧ ಕಿಡಿ

ಆಶಾ ಕಾರ್ಯಕರ್ತೆಯರ ಹೋರಾಟದ ತೀವ್ರತೆ, ಮಾನವ ಸರಪಳಿ ನಿರ್ಮಿಸಿ – ಸರ್ಕಾರದ ವಿರುದ್ಧ ಕಿಡಿ

ಬೆಂಗಳೂರು : ಮಾಸಿಕ ಗೌರವಧನವನ್ನು ₹15,000ಕ್ಕೆ ಹೆಚ್ಚಿಸುವುದು ಸೇರಿದಂತೆ ವಿವಿಧ ಹಕ್ಕೊತ್ತಾಯಗಳ ಈಡೇರಿಕೆಗೆ ಆಗ್ರಹಿಸಿ ನಗರದ ಫ್ರೀಡಂ (Bengaluru) ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು (Asha Workers) ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ (Protest) ಹಗಲು-ರಾತ್ರಿ ಪ್ರತಿಭಟನೆ ಸೋಮವಾರ ಏಳನೇ ದಿನವನ್ನು ತಲುಪಿದೆ. ರಾಜ್ಯದ ವಿವಿಧ ಭಾಗಗಳಿಂದ ಬಂದಿರುವ ಸಾವಿರಾರು ಆಶಾ ಕಾರ್ಯಕರ್ತೆಯರು ಫ್ರೀಡಂ ಪಾರ್ಕ್ ಹಾಗೂ ಸುತ್ತಮುತ್ತಲ ರಸ್ತೆಗಳಲ್ಲಿ ಮಾನವ ಸರಪಳಿ ನಿರ್ಮಿಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಲಿಖಿತ ಆದೇಶವಿಲ್ಲದೆ ಹೋರಾಟ ಅಂತ್ಯವಿಲ್ಲವೆಂಬ ಪಟ್ಟು
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸರ್ಕಾರದ ಪ್ರಮುಖರು ಮಾತುಕತೆ ನಡೆಸಿ, ಬೇಡಿಕೆಗಳ ಪರಿಶೀಲನೆಗೆ ಸ್ವಲ್ಪ ಸಮಯ ನೀಡುವಂತೆ ಕೋರಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದ್ದಾರೆ. ಆದರೆ ಬರೀ ಮಾತುಗಳು ಮತ್ತು ಮೌಖಿಕ ಭರವಸೆಗಳನ್ನು ನಂಬಲು ಸಿದ್ಧವಿಲ್ಲದ ಕಾರ್ಯಕರ್ತೆಯರು, ಸರ್ಕಾರದಿಂದ ಅಧಿಕೃತ ಲಿಖಿತ ಆದೇಶ ಹೊರಬೀಳುವವರೆಗೂ ಧರಣಿಯನ್ನು ಹಿಂಪಡೆಯುವುದಿಲ್ಲ ಎಂದು ಕಡ್ಡಿಮುರಿದಂತೆ ಹೇಳಿದ್ದಾರೆ.

ನಿಗದಿತ ಮಾಸಿಕ ಗೌರವಧನವನ್ನು ₹15,000ಕ್ಕೆ ಏರಿಸಬೇಕು, ಜನವರಿ 2025ರಲ್ಲಿ ನೀಡಿದ್ದ ₹10,000 ಭರವಸೆಯನ್ನು ಜಾರಿಗೆ ತರಬೇಕು, ಕೇಂದ್ರದ ಬಾಕಿ ₹1,500 ಪ್ರೋತ್ಸಾಹಧನವನ್ನು ಹೆಚ್ಚಿಸಬೇಕು ಹಾಗೂ ಬಾಕಿ ಇರುವ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂಬುದು ಆಶಾ ಕಾರ್ಯಕರ್ತೆಯರ ಪ್ರಮುಖ ಆಗ್ರಹವಾಗಿದೆ. ಇದರ ಜೊತೆಗೆ ಆರು ತಿಂಗಳ ವೇತನ ಸಹಿತ ಹೆರಿಗೆ ರಜೆ ಮತ್ತು ನಿವೃತ್ತಿ ಸಂದರ್ಭದಲ್ಲಿ ₹5 ಲಕ್ಷದವರೆಗೆ ಸೌಲಭ್ಯ ಕಲ್ಪಿಸಬೇಕು ಎಂಬ ಬೇಡಿಕೆಗಳನ್ನೂ ಅವರು ಮುಂದಿಟ್ಟಿದ್ದಾರೆ.

ಚಳಿ, ಅನಾರೋಗ್ಯದಿಂದ 17 ಮಂದಿ ಆಸ್ಪತ್ರೆಗೆ ದಾಖಲು
ಒಂದೆಡೆ ನಿರಂತರ ಧರಣಿ, ಮತ್ತೊಂದೆಡೆ ಚಳಿಯ ವಾತಾವರಣದ ನಡುವೆ ಜ್ವರ, ಅಸ್ತಮಾ ಮತ್ತು ವಾಂತಿಯಂತಹ ಆರೋಗ್ಯ ಸಮಸ್ಯೆಗಳಿಗೆ ಒಳಗಾದ 17 ಆಶಾ ಕಾರ್ಯಕರ್ತೆಯರನ್ನು ನಗರದ ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಫ್ರೀಡಂ ಪಾರ್ಕ್ ಆವರಣದಲ್ಲಿ ಕುಡಿಯುವ ನೀರು, ಶೌಚಾಲಯ ಮತ್ತು ವಿಶ್ರಾಂತಿಗೆ ಅಗತ್ಯ ಸೌಲಭ್ಯಗಳ ಕೊರತೆ ಇರುವ ಬಗ್ಗೆಯೂ ಪ್ರತಿಭಟನಾಕಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಕಾರ್ಯಕರ್ತೆಯರು ಮುಖ್ಯಮಂತ್ರಿಗಳ ಮಾತಿಗೆ ಬೆಲೆ ಕೊಡಬೇಕು, ಸಿಎಂ ನೀಡಿರುವ ಭರವಸೆಯನ್ನು ನಂಬಬೇಕು ಎಂದು ಹೇಳಿದ್ದಾರೆ. ನವೆಂಬರ್ 25ರ ಸಂಜೆ ಮುಖ್ಯಮಂತ್ರಿಗಳು ಬೆಂಗಳೂರಿಗೆ ಮರಳಿದ ಬಳಿಕ ಈ ವಿಚಾರವಾಗಿ ಒಂದು ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಆದರೂ, ಹಿಂದಿನ ಭರವಸೆಗಳಿಂದ ಬೇಸತ್ತಿರುವ ಕಾರ್ಯಕರ್ತೆಯರು, ಆರೋಗ್ಯ ಸಚಿವರು ಸ್ಥಳಕ್ಕೆ ಬಂದು ಮನವಿ ಮಾಡಿದರೂ ಹಾಗೂ ಸ್ವತಃ ಸಿಎಂ ಭರವಸೆ ನೀಡಿದರೂ ಒಪ್ಪಿಲ್ಲ. ಆದೇಶದ ಪ್ರತಿ ಕೈಸೇರಿದ ಬಳಿಕವೇ ಸ್ಥಳದಿಂದ ಕದಲುವುದಾಗಿ ಪಟ್ಟು ಹಿಡಿದು ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ.

ಇದನ್ನೊಮ್ಮ ಓದಿ – https://peepalmedia.com/breaking-news/godhra-massacre-case-supreme-court-quashes-life-sentence-of-a-convict/

ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌

Peepal Media · ಬ್ರೇಕಿಂಗ್ ಸುದ್ದಿ ವಿಭಾಗ

ಸಂಬಂಧಿತ ಸುದ್ದಿಗಳು