ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ವಾಟ್ಸ್‌ಆ್ಯಪ್‌ ವೆಬ್ ಬಳಕೆ ಬಗ್ಗೆ ಕೇಂದ್ರ ಗೃಹ ಸಚಿವಾಲಯದಿಂದ ಎಚ್ಚರಿಕೆ; ಪ್ರತಿ ಸೆಷನ್‌ ಬಳಿಕ ಲಾಗ್‌ಔಟ್‌ ಮಾಡಲು ಸೂಚನೆಕಾಡಾನೆ ಸ್ಥಳಾಂತರ ವಿರೋಧಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಯನಾ ಮೋಟಮ್ಮಬಿಸ್ಲೆರಿ ನೀರು ಕುಡಿಯಲು ಯೋಗ್ಯ; ಎಫ್‌ಎಸ್‌ಎಸ್‌ಎಐ ಕ್ರಮದ ಕುರಿತು ಕಂಪನಿಯಿಂದ ಸ್ಪಷ್ಟನೆಫೇರ್‌ನೆಸ್‌ ಕ್ರೀಮ್‌ ಬಳಕೆಯಿಂದ ಕಿಡ್ನಿಗೆ ಹಾನಿ? 17 ವರ್ಷದ ಬಾಲಕಿಗೆ ಗಂಭೀರ ಮೂತ್ರಪಿಂಡ ಕಾಯಿಲೆ ಪತ್ತೆಇಸ್ರೇಲ್‌–ಪ್ಯಾಲೆಸ್ತೀನ್‌ ಸಂಘರ್ಷದ ಕುರಿತು ರಾಹುಲ್‌ ಗಾಂಧಿ ನಿಲುವು ಸರಿಯಾಗಿದೆ: ಶಶಿ ತರೂರ್‌ ಸಮರ್ಥನೆ‘ಬಸವ ಮಂಟಪ’ ಪುಸ್ತಕ ವಿವಾದ: ರವಿ ಹಂಜ್‌ಗೆ ಡಿಸಿಎಂ ಪರಮೇಶ್ವರ್ ತಿರುಗೇಟು; “ನೆಲದ ಕಾನೂನಿನ ಬಗ್ಗೆ ತಿಳಿಸುವ ಕೆಲಸ ಮಾಡುತ್ತೇವೆ”ಆಶಾ ಕಾರ್ಯಕರ್ತೆಯರ ಹೋರಾಟದ ತೀವ್ರತೆ, ಮಾನವ ಸರಪಳಿ ನಿರ್ಮಿಸಿ – ಸರ್ಕಾರದ ವಿರುದ್ಧ ಕಿಡಿಗೋಧ್ರಾ ಹತ್ಯಾಕಾಂಡ ಕೇಸ್, ಅಪರಾಧಿಯ ಜೀವಾವಧಿ – ಶಿಕ್ಷೆ ರದ್ದುಗೊಳಿಸಿದ ಸುಪ್ರೀಂ ಕೋರ್ಟ್ಶಾಸನಗಳ ಅಧ್ಯಯನಕ್ಕೆ ಶ್ರೀನಿವಾಸ್ ವೈ.ಸಿ.ಗೆ ಪಿಎಚ್‌ಡಿ ಪದವಿಬೆಂಗಳೂರು ಜಾತ್ರೆಗೆ ಕ್ಷಣಗಣನೆ : ಇಡೀ ನಗರವೇ ಸಾಂಸ್ಕೃತಿಕ ಸಂಭ್ರಮವಾಗಲಿದೆ – ಕೃಷ್ಣ ಬೈರೇಗೌಡಕಾಡಾನೆಗಳ ಹಾವಳಿ ಮಡಿಗೆರೆಯಲ್ಲಿ 50ಕ್ಕೂ ಹೆಚ್ಚು ಗ್ರಾಮಗಳಲ್ಲಿ – ನಿಷೇಧಾಜ್ಞೆ ಜಾರಿಸಿದ್ದರಾಮಯ್ಯ ಚುನಾವಣೆಗೆ ನಿಲ್ಲಲ್ಲ ಎಂಬ ಮಾತು ಕಾಂಗ್ರೆಸ್​​​​ಗೆ​​​​​​​​​ ದೊಡ್ಡ ಪೆಟ್ಟು – ರಾಜಣ್ಣಆರ್.ಡಿ. ವೀರಪ್ಪ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಡಿ.3 ರಂದು ರಾಜನಹಳ್ಳಿಯಿಂದ ಹಾಸನ ಎಸ್.ಪಿ. ಕಚೇರಿ ಎಸ್.ಪಿ. ಕಚೇರಿ ಮುತ್ತಿಗೆ – ಜನಪರ ಸಂಘಟನೆಗಳ ಒಕ್ಕೂಟಪ್ರೇಮದ ಊರಲಿ: ಕನ್ನಡಿಗರು ಇನ್ನೂ ಧಾರಾವಾಹಿಗಳ ಪ್ರೇಕ್ಷಕರೇ? ಒಂದು ಸಿನಿಮಾ ಗೆದ್ದ ಕಥೆಯ ಹಿಂದಿರುವ ಅಸಲಿ ಕಾರಣಗಳೇನು?ಕರ್ನಾಟಕದಲ್ಲಿ 1,712 ಬಾಲ್ಯವಿವಾಹ ಪ್ರಕರಣಗಳು ನ್ಯಾಯಾಲಯಗಳಲ್ಲಿ ಬಾಕಿ: ಹೈಕೋರ್ಟ್ ನ್ಯಾಯಮೂರ್ತಿ ಕಳವಳಆರನೇ ದಿನವೂ ಮುಂದುವರಿದ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಹೋರಾಟ ; 18 ತಿಂಗಳಾದರೂ ಈಡೇರದ ಸರ್ಕಾರದ ಭರವಸೆಮಣಿಪುರದಲ್ಲಿ ಕಳ್ಳಭಟ್ಟಿ ದುರಂತಕ್ಕೆ 17 ಬಲಿ: 228 ಮಂದಿ ಆಸ್ಪತ್ರೆಗೆ ದಾಖಲು; 6 ಜನರ ಬಂಧನಹೈದರಾಬಾದ್‌ಗೆ ಉಗ್ರರ ದಾಳಿ ಬೆದರಿಕೆ: ನವೆಂಬರ್ 26ಕ್ಕೆ ಮುಂಬೈ ದಾಳಿ ಮಾದರಿಯ ಎಚ್ಚರಿಕೆ ಸಂದೇಶ!ಬಿಸ್ಲೆರಿ ಕುಡಿಯುವ ನೀರು ಅಸುರಕ್ಷಿತ: ಕಾನೂನು ಕ್ರಮಕ್ಕೆ ಅನುಮತಿ ನೀಡಿದ ಎಫ್‌ಎಸ್‌ಎಸ್‌ಎಐಬಸವೇಶ್ವರರು ಪ್ರತಿಪಾದಿಸಿದ ಜಾತಿರಹಿತ ಸಮಾಜದ ನೆಲೆ ಇರುವುದು ಆರ್‌ಎಸ್‌ಎಸ್‌ನಲ್ಲಿ ಮಾತ್ರ: ಬಿ.ವೈ. ವಿಜಯೇಂದ್ರ

‘ಬಸವ ಮಂಟಪ’ ಪುಸ್ತಕ ವಿವಾದ: ರವಿ ಹಂಜ್‌ಗೆ ಡಿಸಿಎಂ ಪರಮೇಶ್ವರ್ ತಿರುಗೇಟು; “ನೆಲದ ಕಾನೂನಿನ ಬಗ್ಗೆ ತಿಳಿಸುವ ಕೆಲಸ ಮಾಡುತ್ತೇವೆ”

PPeepal Media Desk

Peepal Media Desk ಕಾನೂನು, ರಾಜ್ಯ

• 1 ನಿಮಿಷದ ಓದು

‘ಬಸವ ಮಂಟಪ’ ಪುಸ್ತಕ ವಿವಾದ: ರವಿ ಹಂಜ್‌ಗೆ ಡಿಸಿಎಂ ಪರಮೇಶ್ವರ್ ತಿರುಗೇಟು; “ನೆಲದ ಕಾನೂನಿನ ಬಗ್ಗೆ ತಿಳಿಸುವ ಕೆಲಸ ಮಾಡುತ್ತೇವೆ”

ಬೆಂಗಳೂರು: 12ನೇ ಶತಮಾನದ ವಚನಕಾರ ಬಸವಣ್ಣನವರ ಕುರಿತು ಆಕ್ಷೇಪಾರ್ಹ ವಿಚಾರಗಳನ್ನು ದಾಖಲಿಸಲಾಗಿದೆ ಎಂಬ ಆರೋಪಕ್ಕೆ ಗುರಿಯಾಗಿರುವ ‘ಬಸವ ಮಂಟಪ’ ಪುಸ್ತಕದ ಮುಟ್ಟುಗೋಲು ವಿಚಾರ ಇದೀಗ ರಾಜಕೀಯ ವಲಯದಲ್ಲಿ ಮತ್ತೊಂದು ಸುತ್ತಿನ ಚರ್ಚೆಗೆ ಕಾರಣವಾಗಿದೆ. ಪುಸ್ತಕವನ್ನು ಮುಟ್ಟುಗೋಲು ಹಾಕುವ ಸರ್ಕಾರದ ಕ್ರಮಕ್ಕೆ ಸವಾಲು ಹಾಕಿದ್ದ ಲೇಖಕ ರವಿ ಹಂಜ್ ಅವರಿಗೆ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ಪುಸ್ತಕದ ವಿಚಾರವಾಗಿ ಹಲವು ಸಮುದಾಯಗಳು ಚರ್ಚೆ ನಡೆಸಿದ್ದು, ಸಚಿವ ಸಂಪುಟದಲ್ಲಿಯೂ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿತ್ತು. ಪರಿಶೀಲನೆಯ ಬಳಿಕವೇ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಪುಸ್ತಕದಲ್ಲಿ ಯಾವುದೇ ಆಕ್ಷೇಪಾರ್ಹ ಅಂಶಗಳಿಲ್ಲ ಎಂದು ಲೇಖಕರು ಹೇಳುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಸಂಬಂಧಿತ ವಿಚಾರಗಳನ್ನು ಪರಿಶೀಲಿಸಿದ ನಂತರವೇ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಸುಮ್ಮನೆ ಯಾವುದೇ ಆಧಾರವಿಲ್ಲದೆ ಕ್ರಮ ಕೈಗೊಂಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಕಾನೂನಿನ ಚೌಕಟ್ಟಿನಲ್ಲಿ ಸರ್ಕಾರದ ಕ್ರಮ
ಪುಸ್ತಕ ಮುಟ್ಟುಗೋಲು ಹಾಕುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ರವಿ ಹಂಜ್ ಸವಾಲು ಹಾಕಿರುವ ವಿಚಾರವಾಗಿ ಮಾತನಾಡಿದ ಪರಮೇಶ್ವರ್, ದೇಶದಲ್ಲಿ ಕಾನೂನು ಮತ್ತು ಕಾನೂನುಬದ್ಧ ವ್ಯವಸ್ಥೆಗಳಿವೆ. ಅಮೆರಿಕದಲ್ಲಿ ದೀರ್ಘಕಾಲ ನೆಲೆಸಿರುವ ಕಾರಣ ಅವರಿಗೆ ಇಲ್ಲಿನ ಕಾನೂನುಗಳ ಬಗ್ಗೆ ಮರೆತುಹೋಗಿರಬಹುದು. ಹೀಗಾಗಿ ದೇಶದ ಕಾನೂನು ವ್ಯವಸ್ಥೆಯನ್ನು ಮತ್ತೊಮ್ಮೆ ನೆನಪಿಸಬೇಕಿದೆ ಎಂದು ವ್ಯಂಗ್ಯವಾಡಿದರು.

ಇದೇ ವೇಳೆ, ರವಿ ಹಂಜ್ ಅವರ ಬಳಿ ಅಮೆರಿಕದ ಗ್ರೀನ್ ಕಾರ್ಡ್ ಇದ್ದರೆ ಅವರು ಅಲ್ಲಿನ ಪೌರತ್ವ ಹೊಂದಿರುವ ಸಾಧ್ಯತೆಯಿದೆ ಎಂದು ಹೇಳಿದ ಪರಮೇಶ್ವರ್, ಭಾರತದಲ್ಲಿ ತಮಗೆ ತೊಂದರೆಯಾಗುತ್ತಿದೆ, ರಕ್ಷಣೆ ನೀಡಬೇಕು ಎಂದು ಅವರು ಅಮೆರಿಕದ ರಾಯಭಾರ ಕಚೇರಿಯನ್ನು ಸಂಪರ್ಕಿಸಿರಬಹುದು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದರು.

ಬಸವಣ್ಣನವರ ಕುರಿತ ಬರಹ, ಪುಸ್ತಕದ ಮುಟ್ಟುಗೋಲು ನಿರ್ಧಾರ ಮತ್ತು ಲೇಖಕರ ಪ್ರತಿರೋಧದ ನಡುವಿನ ಸಂಘರ್ಷ ಇದೀಗ ಮತ್ತಷ್ಟು ತೀವ್ರಗೊಳ್ಳುವ ಲಕ್ಷಣಗಳು ಕಾಣುತ್ತಿದ್ದು, ಸರ್ಕಾರದ ಮುಂದಿನ ಕಾನೂನು ಕ್ರಮಗಳ ಕುರಿತು ಕುತೂಹಲ ಮೂಡಿದೆ.

PPeepal Media Desk

Peepal Media Desk

Peepal Media · ಕಾನೂನು ವಿಭಾಗ

ಸಂಬಂಧಿತ ಸುದ್ದಿಗಳು