ನೆಲಮಂಗಲ : ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ನೆಲಮಂಗಲ ತಾಲೂಕಿನ ಡಾಬಸ್ ಪೇಟೆಯಲ್ಲಿ (Crime) ಹಾಡಹಗಲೇ ಭೀಕರ ದರೋಡೆ (Robbery) ಯತ್ನ ನಡೆದಿದ್ದು, ಚಿನ್ನದ ಅಂಗಡಿ ಮಾಲೀಕನ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಡಾಬಸ್ ಪೇಟೆಯ ಪ್ರಸಿದ್ಧ ಪ್ರೇಮ್ ಶಿವ ಜೂವೆಲರ್ಸ್ ಬಳಿ ಈ ಘಟನೆ ನಡೆದಿದ್ದು, ಅಂಗಡಿ ಮಾಲೀಕರಾದ ಕುನ್ನಾರಾಮ್ ಅವರ ಬಲಗಾಲಿಗೆ ಗುಂಡೇಟು ಬಿದ್ದಿದೆ.
ಚಿನ್ನಾಭರಣ ದೋಚಲು ಯತ್ನಿಸಿದ ಗುಂಪು
ಕಾರಿನಲ್ಲಿ ಬಂದಿದ್ದ ಸಶಸ್ತ್ರ ದುಷ್ಕರ್ಮಿಗಳ ಗುಂಪು ಏಕಾಏಕಿ ಪ್ರೇಮ್ ಶಿವ ಜೂವೆಲರ್ಸ್ ಅಂಗಡಿಗೆ ನುಗ್ಗಿ ಚಿನ್ನಾಭರಣ ದೋಚಲು ಯತ್ನಿಸಿದೆ. ಈ ವೇಳೆ ಜಾಗರೂಕರಾದ ಅಂಗಡಿ ಮಾಲೀಕ ಕುನ್ನಾರಾಮ್ ಅವರು ಧೈರ್ಯದಿಂದ ದರೋಡೆಕೋರರನ್ನು ತಡೆಯಲು ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಕಳ್ಳರು ತಕ್ಷಣ ತಮ್ಮಲ್ಲಿದ್ದ ಬಂದೂಕಿನಿಂದ ಅವರ ಕಾಲಿಗೆ ಗುಂಡು ಹಾರಿಸಿದ್ದಾರೆ. ಕಳ್ಳರ ಕೃತ್ಯದಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿದ್ದ ಕುನ್ನಾರಾಮ್ ಅವರಿಗೆ ಗುಂಡೇಟು ಬಿದ್ದರೂ, ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಎರಡು ಜೀವಂತ ಗುಂಡುಗಳು ಪತ್ತೆ
ಗುಂಡು ಹಾರುತ್ತಿದ್ದಂತೆ ಗಾಬರಿಗೊಂಡ ದರೋಡೆಕೋರರು ಕಳ್ಳತನ ಯತ್ನ ಕೈಬಿಟ್ಟು ಬಂದಿದ್ದ ಕಾರಿನಲ್ಲೇ ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನಾ ಸ್ಥಳ ಪರಿಶೀಲನೆ ನಡೆಸಿದ ವೇಳೆ ಎರಡು ಜೀವಂತ ಗುಂಡುಗಳು ಪತ್ತೆಯಾಗಿವೆ. ದಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪರಾರಿಯಾಗಿರುವ ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಚುರುಕುಗೊಳಿಸಿದ್ದಾರೆ.
ಬೆಂಗಳೂರಿನಲ್ಲಿ ಟೆಕ್ಕಿಯಿಂದ ಫೈರಿಂಗ್ ಡ್ರಾಮಾ: ಸೆಕ್ಯೂರಿಟಿ ಗಾರ್ಡ್‌ಗಳಿಗೆ ಏರ್ ಗನ್‌ನಿಂದ ಶೂಟ್ ಮಾಡಿದ ಆರೋಪಿ ಪೊಲೀಸ್ ವಶಕ್ಕೆ!
ಬೆಂಗಳೂರು: ರಾಜಧಾನಿಯ ಆನೇಕಲ್ ತಾಲೂಕಿನ ಬಂಡಾಪುರ ಬಳಿಯ ಸಿಪಾನಿ ಅಪಾರ್ಟ್‌ಮೆಂಟ್‌ನಲ್ಲಿ ಟೆಕ್ಕಿಯೊಬ್ಬ ತನ್ನ ಏರ್ ಗನ್‌ನಿಂದ ಭದ್ರತಾ (Big News) ಸಿಬ್ಬಂದಿಯ (Crime) ಮೇಲೆ ಸಾಲು ಸಾಲು (Tragedy) ಗುಂಡಿನ ದಾಳಿ ನಡೆಸಿ ತೀವ್ರ ಆತಂಕ ಸೃಷ್ಟಿಸಿದ ಘಟನೆ (Shocking) ನಡೆದಿದೆ. ಸುಮಾರು 45 ನಿಮಿಷಗಳ ಕಾಲ ಕೃತ್ಯವೆಸಗಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ್ದ ಆರೋಪಿ ಅನುರಾಗ್ ತಿವಾರಿಯನ್ನು ಪೊಲೀಸರು ಬಂಧಿಸಿದ್ದಾರೆ.
ಎಂಟು ತಿಂಗಳ ಹಿಂದಷ್ಟೇ ಬಾಡಿಗೆಗೆ ಬಂದಿದ್ದ ಆರೋಪಿ
ಲಭ್ಯವಿರುವ ಮಾಹಿತಿಯ ಪ್ರಕಾರ, ಎಂಟು ತಿಂಗಳ ಹಿಂದಷ್ಟೇ ಈ ಅಪಾರ್ಟ್‌ಮೆಂಟ್‌ಗೆ ಬಾಡಿಗೆಗೆ ಬಂದಿದ್ದ ಈತ, ಘಟನೆಯ ದಿನ ಮೊಬೈಲ್‌ನಲ್ಲಿ ಮಾತನಾಡುತ್ತಾ ಜೋರಾಗಿ ಕಿರುಚಾಡಲು ಪ್ರಾರಂಭಿಸಿದ್ದಾನೆ. ತದನಂತರ ದಿಢೀರನೆ ತನ್ನ ಫ್ಲಾಟ್‌ನ ಬಾಲ್ಕನಿಯಿಂದ ಏರ್ ಗನ್ ಬಳಸಿ ಹೊರಗೆ ಗುಂಡು ಹಾರಿಸಲು ಶುರುಮಾಡಿದ್ದಾನೆ. ಇದನ್ನು ತಡೆಯಲು ಮುಂದಾದ ಸೆಕ್ಯೂರಿಟಿ ಗಾರ್ಡ್‌ಗಳ ಮೇಲೆಯೂ ಆತ ನೇರವಾಗಿ ಫೈರಿಂಗ್ ನಡೆಸಿದ್ದಾನೆ. ಇದರಿಂದ ಅಪಾರ್ಟ್‌ಮೆಂಟ್ ನಿವಾಸಿಗಳು ತೀವ್ರ ಭಯಭೀತರಾಗಿದ್ದರು.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸೂರ್ಯನಗರ ಪೊಲೀಸ್ ಠಾಣೆಯ ಸಿಬ್ಬಂದಿ, ಕಾರ್ಯಾಚರಣೆ ನಡೆಸಿ ಟೆಕ್ಕಿ ಅನುರಾಗ್ ತಿವಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಸ್ತುತ ಆತನಿಂದ ಏರ್ ಗನ್ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದ್ದು, ಈ ರೀತಿ ಅಸಹಜವಾಗಿ ವರ್ತಿಸಲು ಕಾರಣವೇನು ಎಂಬುದರ ಕುರಿತು ವಿಚಾರಣೆ ನಡೆಸಲಾಗುತ್ತಿದೆ.
