Home Uncategorized GHIBLI ART: ಘಿಬ್ಲಿನಲ್ಲಿ ಫೋಟೋಗಳನ್ನು ಅಪ್ಲೋಡ್‌ ಮಾಡುವ ಮುನ್ನ ಎಚ್ಚರ..! ಡಿಜಿಟಲ್ ಗೌಪ್ಯತೆಯ ಬಗ್ಗೆ ಕಳವಳ...

GHIBLI ART: ಘಿಬ್ಲಿನಲ್ಲಿ ಫೋಟೋಗಳನ್ನು ಅಪ್ಲೋಡ್‌ ಮಾಡುವ ಮುನ್ನ ಎಚ್ಚರ..! ಡಿಜಿಟಲ್ ಗೌಪ್ಯತೆಯ ಬಗ್ಗೆ ಕಳವಳ ?

ನವದೆಹಲಿ : ಕಳೆದೆರಡು ದಿನಗಳಿಂದ ಸೋಶಿಯಲ್‌ ಮೀಡಿಯಾದಲ್ಲಿ ಘಿಬ್ಲಿ ಇಮೇಜ್‌ಗಳದ್ದೇ ಹವಾ. ಜನಸಾಮಾನ್ಯರಿಂದ ಹಿಡಿದು ಫಿಲ್ಮ್‌ ಸ್ಟಾರ್‌ಗಳವರೆಗೆ ಎಲ್ಲರೂ ತಮ್ಮ ತಮ್ಮ ಫೋಟೋಗಳನ್ನು ChatGPT ಗೆ ಹಾಕಿ ಫೋಟೋವನ್ನು ಸ್ಟುಡಿಯೋ ಘಿಬ್ಲಿ ಶೈಲಿಯ AI ಚಿತ್ರಗಳಾಗಿ ಕನ್ವರ್ಟ್‌ ಮಾಡಿ ಆನ್‌ಲೈನ್‌ನಲ್ಲಿ ಅಪ್ಲೋಡ್‌ ಮಾಡುತ್ತಿದ್ದಾರೆ. ಆದರೆ ಇದೀಗ ಘಿಬ್ಲಿ ಇಮೇಜ್ ​​ಜನರೇಟರ್​​​ ಬಗ್ಗೆ ವಿಮರ್ಶಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಹೌದು.. OpenAIನ ಘಿಬ್ಲಿಯ AI ಆರ್ಟ್ ಜನರೇಟರ್ ವಿಚಾರವಾಗಿ ಜನ ಡಿಜಿಟಲ್ ಗೌಪ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಲು ಪ್ರಾರಂಭಿಸಿದ್ದಾರೆ. ಇದು AI ತರಬೇತಿಗಾಗಿ ಸಾವಿರಾರು ವೈಯಕ್ತಿಕ ಫೋಟೋಗಳನ್ನು ಸಂಗ್ರಹಿಸಲು ಮಾಡುತ್ತಿರುವ ಒಂದು ತಂತ್ರವಾಗಿರಬಹುದು ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಎಲ್ಲರೂ ಟ್ರೆಂಡ್​ ಸೆಟ್​​ ಮಾಡಲು ತಮ್ಮ ತಮ್ಮ ವೈಯಕ್ತಿಕ ಫೋಟೋಗಳನ್ನು ಘಿಬ್ಲಿ- ಸ್ಟುಡಿಯೋಗೆ ಹಾಕಿ ಜನರೇಟ್​​ ಮಾಡಿಕೊಳ್ಳುತ್ತಿದ್ದಾರೆ. ಆದರೆ ಬಳಕೆದಾರರು ತಮಗೆ ತಿಳಿಯದೆಯೇ OpenAI ಗೆ ವಿಶಿಷ್ಟವಾದ ಮುಖದ ಡೇಟಾವನ್ನು ನೀಡುತ್ತಿದ್ದಾರೆ ಎಂದು ಕೆಲ ವಿಮರ್ಶಕರು ಹೇಳಿದ್ದಾರೆ. ಇದು ಅವರ ಗೌಪ್ಯತೆಯನ್ನು ಅಪಾಯಕ್ಕೆ ಸಿಲುಕಿಸಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಹಾಗಾದರೆ ಎದುರಾಗುವ ಅಪಾಯಗಳೇನು?
1. ಬಳಕೆದಾರರ ಫೋಟೋಗಳನ್ನು ಅವರ ಅನುಮತಿಯಿಲ್ಲದೆ ವಿವಿಧ ಉದ್ದೇಶಗಳಿಗಾಗಿ ಬಳಸಬಹುದು. ಈ ಮೂಲಕ ಗೌಪ್ಯತೆಯ ಉಲ್ಲಂಘನೆ ಮಾಡಬಹುದು.
2. ನಕಲಿ ಫೋಟೋಗಳನ್ನು ಸೃಷ್ಟಿಸಿ ಪ್ರೊಫೈಲ್‌ಗಳನ್ನು ರಚಿಸುವ ಮೂಲಕ ಫೋಟೋಗಳ ದುರುಪಯೋಗ ಮಾಡಿಕೊಳ್ಳಬಹುದು.
3. ಫೋಟೋಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಯಾರೊಬ್ಬರ ಗುರುತನ್ನು ಸುಲಭವಾಗಿ ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳಿವೆ.
4. ಬಳಕೆದಾರರ ಮಾಹಿತಿಯು ಸುರಕ್ಷಿತವಾಗಿರದೇ ಇರಬಹುದು ಮತ್ತು ಹ್ಯಾಕಿಂಗ್‌ಗೆ ಬಲಿಯಾಗಬಹುದು.
5. ಬಳಕೆದಾರರ ಫೋಟೋಗಳ ಅನಧಿಕೃತ ಬಳಕೆಯು ಕಾನೂನು ಸಮಸ್ಯೆಗಳನ್ನು ಉಂಟುಮಾಡಬಹುದು.

You cannot copy content of this page

Exit mobile version