ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಬಲಪ್ರಯೋಗದಿಂದ ಜನಧ್ವನಿ ಅಡಗಿಸಲಾಗದು: ಸಿಎಂ ಮನೆಗೆ ಮುತ್ತಿಗೆ ಯತ್ನಿಸಿದ ಬಿ.ವೈ. ವಿಜಯೇಂದ್ರ ಸೇರಿ ಹಲವು ಬಿಜೆಪಿ ನಾಯಕರ ಬಂಧನ!ಸೋನಿಯಾ ಗಾಂಧಿ ಆತ್ಮಚರಿತ್ರೆ ಹೇಳಿಕೆಗೆ ಅಣ್ಣಾ ಹಜಾರೆ ಪ್ರತಿಕ್ರಿಯೆ: ಸಂಕುಚಿತ ಮನಸ್ಥಿತಿ ಬಿಡಿ ಎಂದ ಗಾಂಧಿವಾದಿಕುಲಗಾಂ ದಾಳಿ | ಅಮಿತ್‌ ಶಾ ಗೃಹಮಂತ್ರಿಯಾಗಿ ಮುಂದುವರೆಯಲು ಯೋಗ್ಯರಲ್ಲ: ಪವನ್‌ ಖೇರಾಹಬ್ಬದ ಹೆಸರಲ್ಲಿ ಬೆಂಗಳೂರಿನಲ್ಲಿ ಪೂಲ್ ಪಾರ್ಟಿ, ಗಾಂಜಾ MDMA ವಶ – ಮೂವರ ಬಂಧನಅರ್ಹ ಪ್ರತಿಯೊಬ್ಬ ರೈತನಿಗೂ 5,000 ರೂ. ಬರ ಪರಿಹಾರ – ಡಿ ಕೆ ಶಿವಕುಮಾರ್KSRTC ಲಗೇಜ್ ಶುಲ್ಕವೂ ದುಪ್ಪಟ್ಟು – ಪ್ರಯಾಣಿಕರು ಹಾಗೂ ಸಣ್ಣ ವ್ಯಾಪಾರಿಗಳ ಜೇಬಿಗೆ ಕತ್ತರಿಇ-ಕೆವೈಸಿ ಗಡುವು ನ.30ರವರೆಗೆ ವಿಸ್ತರಣೆ – ಮೊಬೈಲ್‌ನಲ್ಲೇ ಮಾಡುವುದು ಇನ್ನಷ್ಟು ಸುಲಭಮಾಲಿನ್ಯ ನಿಯಂತ್ರಿಸುವಲ್ಲಿ ಕೇಂದ್ರ ಮೋದಿ ಸರ್ಕಾರ ವಿಫಲ – ಮಲ್ಲಿಕಾರ್ಜುನ ಖರ್ಗೆಶರಣೆ ಸತ್ಯಕ್ಕನ ನೇಮಬೆಂಗಳೂರು ಕೃಷಿ ಮೇಳನಿಗದಿ ನ.16ರಿಂದ 18ವರೆಗೆ – 3 ಹೊಸ ಬೆಳೆ ತಳಿಗಳ ಬಿಡುಗಡೆಹಾಸನಾಂಬೆಯ ಗರ್ಭಗುಡಿಯ ‘ನಂದಾದೀಪ’ ಪವಾಡವೇ? ಶಬರಿಮಲೆ ಮಕರಜ್ಯೋತಿಗೂ ಹಾಸನಾಂಬೆಯ ‘ನಂದಾದೀಪ’ಕ್ಕೂ ಇರುವ ಸಾಮ್ಯತೆಗಳಿವುನ.13ರಂದು ಮೋದಿ ಕರ್ನಾಟಕ ಪ್ರವಾಸ: ಬೆಂಗಳೂರು ಮೆಟ್ರೋ ನಿಲ್ದಾಣ ಉದ್ಘಾಟನೆ, ಮೈಸೂರಿನಲ್ಲಿ ವಿಶ್ವದ ಮೊದಲ ಟಿಲ್ಟೆಡ್ ಎಲ್‌ಇಡಿ ತಾರಾಲಯ ಉದ್ಘಾಟನೆಉತ್ತರ ಪ್ರದೇಶ ಚುನಾವಣೆಗೆ ಬಿಜೆಪಿಯ ಹೊಸ ಲೆಕ್ಕಾಚಾರ: ಹಿರಿಯ ನಾಯಕರಿಗೆ ಅಖಾಡಕ್ಕಿಳಿಯುವ ಸೂಚನೆ; ಹಾಲಿ ಶಾಸಕರಲ್ಲಿ ಹೆಚ್ಚಿದ ಆತಂಕ!ಭಾರತದ ಪ್ರಜಾಪ್ರಭುತ್ವ ಸ್ವಾತಂತ್ರ್ಯದಲ್ಲಿ ಮತ್ತೆ ಒಂದು ಅಂಕ ಕುಸಿತ: “ಫ್ರೀಡಂ ಹೌಸ್” ವರದಿಯಲ್ಲಿ 62 ಅಂಕಶೇಖ್ ಹಸೀನಾ ಪಾಲಿಗೆ ಪಾಸ್‌ಪೋರ್ಟ್ ಬಾಗಿಲು ಬಂದ್! ಮರಣದಂಡನೆ ತೀರ್ಪೇ ಅಂತಿಮ ಎಂದ ಬಾಂಗ್ಲಾದೇಶದ ಅಭಿಯೋಜಕಪೌರತ್ವ ಸಾಬೀತಿಗೆ ಪ್ಯಾನ್, ವೋಟರ್ ಐಡಿ ಸಾಲದು: ಗೌಹಾಟಿ ಹೈಕೋರ್ಟ್ ಆದೇಶಅಸ್ಸಾಂನಲ್ಲಿ ಹಳಿ ತಪ್ಪಿದ ಕೋಲ್ಕತ್ತಾ-ಸೈರಾಂಗ್ ಎಕ್ಸ್‌ಪ್ರೆಸ್: ಅದೃಷ್ಟವಶಾತ್ ತಪ್ಪಿದ ಅನಾಹುತಆ್ಯಪ್‌ಗಳ ಕಪಿಮುಷ್ಠಿಯಲ್ಲಿ ಗಿಗ್ ಕಾರ್ಮಿಕರ ಬದುಕು: ಕಾರ್ಪೊರೇಟ್ ಬೆಳವಣಿಗೆಯ ನಡುವೆ ಅತಂತ್ರವಾದ ಕಾರ್ಮಿಕ ಹಕ್ಕುಗಳುಬಾಬರಿ ಮಸೀದಿ ಧ್ವಂಸದ ಬಗ್ಗೆ ಸೋನಿಯಾ ಗಾಂಧಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ: ವಿಎಚ್‌ಪಿ ನಾಯಕ ಸುರೇಂದ್ರ ಜೈನ್2026ರ ಮೊದಲ 9 ತಿಂಗಳಲ್ಲಿ ಮುಸ್ಲಿಮರು, ಕ್ರೈಸ್ತರ ವಿರುದ್ಧ 322 ದ್ವೇಷ ಅಪರಾಧ: 54 ಮಂದಿ ಸಾವು, 83 ದ್ವೇಷ ಭಾಷಣ ದಾಖಲು – ಎಪಿಸಿಆರ್ ವರದಿ

ಹಾಸನ DC ಹುದ್ದೆಯಲ್ಲಿ ಮುಂದುವರಿಯಲು ₹75 ಲಕ್ಷ ಲಂಚ – ತನಿಖೆಗೆ HDK ಒತ್ತಾಯ

ಹಾಸನ DC ಹುದ್ದೆಯಲ್ಲಿ ಮುಂದುವರಿಯಲು ₹75 ಲಕ್ಷ ಲಂಚ – ತನಿಖೆಗೆ HDK ಒತ್ತಾಯ

ಹಾಸನ: ಹಾಸನ ಜಿಲ್ಲಾಡಳಿತದಲ್ಲಿ ಭಾರಿ ಲಂಚದ ದಂಧೆ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ಜಿಲ್ಲಾಧಿಕಾರಿ (DC) ಕಚೇರಿಯ 15 ಪುಟಗಳ ವಾಟ್ಸಾಪ್ ಚಾಟ್ ಸಂಭಾಷಣೆಯನ್ನು ಬಿಡುಗಡೆ ಮಾಡಿ ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.

ಹಾಸನದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್‌ಡಿಕೆ, ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಅವರ ಆಪ್ತ ಸಹಾಯಕ (PA) ಶಶಿಕಿರಣ್ ಹಾಗೂ ಮಧ್ಯವರ್ತಿಯೊಬ್ಬರ ನಡುವೆ ನಡೆದಿದೆ ಎನ್ನಲಾದ ಮೊಬೈಲ್ ಸಂಭಾಷಣೆಯ ಪ್ರತಿಗಳನ್ನು ಬಹಿರಂಗಪಡಿಸಿದರು.ಈ ಪ್ರಕರಣದ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕ ಮತ್ತು ಪೊಲೀಸ್ ಮಹಾನಿರೀಕ್ಷಕ (ಡಿಜಿ ಮತ್ತು ಐಜಿಪಿ) ಎಂ.ಎ. ಸಲೀಂ ಅವರು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಈ ವಾಟ್ಸ್‌ಆ್ಯಪ್ ಸಂಭಾಷಣೆಯಲ್ಲಿ ಹಾಸನ ಜಿಲ್ಲಾಧಿಕಾರಿಯಾಗಿ ಲತಾ ಕುಮಾರಿ ಅವರನ್ನು ಮುಂದುವರಿಸಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರಿಗೆ 75 ಲಕ್ಷ ರೂ. ನೀಡಬೇಕೆಂಬ ಪ್ರಸ್ತಾಪವಿದೆ. ರಾಜ್ಯ ಸರ್ಕಾರದ ಅಧಿಕಾರಿಯೊಬ್ಬರು ಮುಖಕ್ಕೆ ಟವೆಲ್ ಕಟ್ಟಿಕೊಂಡು ಬಂದು ಈ ಸಂಭಾಷಣೆಯ ಪ್ರತಿಯನ್ನು ತಮಗೆ ನೀಡಿ ತೆರಳಿದ್ದಾರೆ ಎಂದು ಹೇಳಿದ್ದಾರೆ.ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಉತ್ತಮ ಆಡಳಿತ ನೀಡುತ್ತಿದ್ದು, ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಹಾಸನಾಂಬೆ ದೇವಿಯ ದರ್ಶನ ಪಡೆದ ಬಳಿಕ ಹಾಸನದಲ್ಲಿ ಮಾತನಾಡಿದ ಅವರು, ಪ್ರತಿಪಕ್ಷದ ನಾಯಕರು ಮಾಡುವ ಟೀಕೆಗಳಿಗೆ ಆಡಳಿತ ಪಕ್ಷದ ನಾಯಕರು ವಿಚಲಿತರಾಗಬಾರದು ಅಥವಾ ತಾಳ್ಮೆ ಕಳೆದುಕೊಳ್ಳಬಾರದು ಎಂದು ತಿಳಿಸಿದ್ದಾರೆ.

ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌

Peepal Media · ಬ್ರೇಕಿಂಗ್ ಸುದ್ದಿ ವಿಭಾಗ

ಸಂಬಂಧಿತ ಸುದ್ದಿಗಳು