ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಹಾಸನ ವಿಮಾನ ನಿಲ್ದಾಣದ 542.96 ಕೋಟಿ ಪರಿಷ್ಕೃತ ವೆಚ್ಚಕ್ಕೆ ಸಂಪುಟ ಒಪ್ಪಿಗೆ – ಸಚಿವ ಕೆ. ಎಂ. ಶಿವಲಿಂಗೇಗೌಡಎಲ್‌ಕೆಜಿಯಿಂದ 12ನೇ ತರಗತಿವರೆಗೆ ಫ್ರೀ ನೋಟ್‌ಬುಕ್ – ಸಚಿವ ಮಧು ಬಂಗಾರಪ್ಪರಾಜಕರಣಿಗಳ ಖರ್ಚುಗಳಿಗೆ ಹಣವಿದೆ, ನಮಗ್ಯಾಕಿಲ್ಲ – ಧರಣಿ ಮುಂದುವರಿಸಿದ ಆಶಾ ಕಾರ್ಯಕರ್ತೆಯರುಹೊಸಪೇಟೆ ರೈಲು ನಿಲ್ದಾಣದಲ್ಲಿ ಗಾಂಜಾ ಸಾಗಾಟಕ್ಕೆ ಯತ್ನ – 8.25 ಲಕ್ಷ ಮೌಲ್ಯದ 8.5 ಕೆಜಿ ಗಾಂಜಾ ಸೀಜ್ಬಯಲು ಸಂತೆಯ ಮೌನ – 4: ನಾನು ಕ್ಷೇಮ, ನೀನು ಕ್ಷೇಮ?ಯುವಜನ ರಾಜಕಾರಣದ ಚರ್ಚೆಗೆ ಮಂಗಳೂರಿನಲ್ಲಿ ‘ಜನನುಡಿ–2026’ ವೇದಿಕೆ; ನ.28ರಿಂದ ಎರಡು ದಿನಗಳ ಸಮಾವೇಶಏಕಸ್ವಾಮ್ಯದಿಂದ ಉದ್ಯೋಗ ಹೆಚ್ಚಾಗುವುದಿಲ್ಲ, ಬೆಲೆ ಹೆಚ್ಚಳವಾಗುತ್ತದೆ: ಮೋದಿಯನ್ನು ಗುರಿಯಾಗಿಸಿಕೊಂಡು ಅದಾನಿಯನ್ನು ಟೀಕಿಸಿದ ರಾಹುಲ್‌ ಗಾಂಧಿಮಂಗಳೂರು: ವೈದ್ಯಕೀಯ ವಿದ್ಯಾರ್ಥಿನಿಯನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದ ಕುಟುಂಬಸ್ಥರು; ವಿಡಿಯೋ ವೈರಲ್ ಬೆನ್ನಲ್ಲೇ ಪ್ರಕರಣ ದಾಖಲುಸೋನಿಯಾ ಗಾಂಧಿ ಆತ್ಮಚರಿತ್ರೆಯಲ್ಲಿ ಸಾವರ್ಕರ್ ಉಲ್ಲೇಖ: ಕಾನೂನು ಕ್ರಮಕ್ಕೆ ಮುಂದಾದ ಸತ್ಯಕಿ ಸಾವರ್ಕರ್ಹಿರಿಯೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಒಟ್ಟಾಗಿ ಸೋಲಿಸುವುದೇ ನಮ್ಮ ಗುರಿ: ಕುಮಾರಸ್ವಾಮಿರೋಹಿಂಗ್ಯಾ ನರಮೇಧ: ಮ್ಯಾನ್ಮಾರ್ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯದ ಐತಿಹಾಸಿಕ ತೀರ್ಪು; ಪರಿಹಾರಕ್ಕೂ ಆದೇಶಮೋದಿ ಸರ್ಕಾರದ ಆರ್ಥಿಕ ನೀತಿಗಳಿಂದ ಆರ್ಥಿಕತೆ ಸಂಕಷ್ಟಕ್ಕೆ ಸಿಲುಕಿದೆ: ಮಲ್ಲಿಕಾರ್ಜುನ ಖರ್ಗೆ ಟೀಕೆರದ್ದಾದ ನೀಟ್ ಪರೀಕ್ಷೆಯ ಮೊಬೈಲ್ ಆರೋಪ: ಹಾವೇರಿ ವಿದ್ಯಾರ್ಥಿನಿಗೆ ಹೈಕೋರ್ಟ್‌ನಿಂದ ನ್ಯಾಯ, ವೈದ್ಯಕೀಯ ಸೀಟು ಭದ್ರPF ನಿಯಮ ಬದಲಾವಣೆ 2026: 12 ತಿಂಗಳ ಕಾಯುವಿಕೆ ಇನ್ನು 2 ತಿಂಗಳುಕಾಂಗ್ರೆಸ್‌ ಶಾಸಕರಿಗೆ ಹುಚ್ಚು ನಾಯಿ ಕಚ್ಚಿದೆ – ಸ್ವಪಕ್ಷ ನಾಯಕರ ವಿರುದ್ದವೇ ರೇವಂತ್‌ ರೆಡ್ಡಿ ಗರಂಗೃಹಲಕ್ಷ್ಮಿ ಯೋಜನೆಯ ಹಣದಲ್ಲಿ ಪಾಲು ನಿರಾಕರಿಸಿದ್ದಕ್ಕೆ ಅಜ್ಜಿಯ ಕೊಲೆ: 20 ವರ್ಷದ ಮೊಮ್ಮಗನ ಬಂಧನಪರಮಾಣು ಯುದ್ಧಕ್ಕೆ ದೊಡ್ಡ ಬ್ರೇಕ್‌ – ಮಹತ್ವದ ನಿರ್ಧಾರಕ್ಕೆ ಟ್ರಂಪ್, ಜಿನ್ ಪಿಂಗ್ ,ಪುಟಿನ್ ಸಹಿಬೆಂಗಳೂರು ಟೆಕ್ ಸಮಿಟ್‌ 2026: ಕರ್ನಾಟಕದ ಡೀಪ್‌ಟೆಕ್‌ ಸ್ಟಾರ್ಟ್‌ಅಪ್‌ಗಳಲ್ಲಿ ₹1,050 ಕೋಟಿ ಹೂಡಿಕೆ ಘೋಷಣೆಬಸವಣ್ಣ ಮತ್ತು ಲಿಂಗಾಯತ ಪರಂಪರೆಯನ್ನು ಅವಹೇಳನ ಮಾಡುವ ಪ್ರಯತ್ನವನ್ನು ಸಹಿಸುವುದಿಲ್ಲ: ಪ್ರಿಯಾಂಕ್ ಖರ್ಗೆಬಸವ ಮಂಟಪ ಪುಸ್ತಕವನ್ನು ನಿಷೇಧಿಸಿದ ರಾಜ್ಯ ಸರ್ಕಾರ: ಲೇಖಕ ರವಿ ಹಂಜ್‌, ಪ್ರಕಾಶಕ ವಿಶ್ವೇಶ್ವರ ಭಟ್‌ ವಿರುದ್ಧ ಕಾನೂನು ಕ್ರಮಕ್ಕೆ ಸಂಪುಟ ನಿರ್ಧಾರ

ಹಾಸನ ವಿಮಾನ ನಿಲ್ದಾಣದ 542.96 ಕೋಟಿ ಪರಿಷ್ಕೃತ ವೆಚ್ಚಕ್ಕೆ ಸಂಪುಟ ಒಪ್ಪಿಗೆ – ಸಚಿವ ಕೆ. ಎಂ. ಶಿವಲಿಂಗೇಗೌಡ

ಹಾಸನ ವಿಮಾನ ನಿಲ್ದಾಣದ 542.96 ಕೋಟಿ ಪರಿಷ್ಕೃತ ವೆಚ್ಚಕ್ಕೆ ಸಂಪುಟ ಒಪ್ಪಿಗೆ – ಸಚಿವ ಕೆ. ಎಂ. ಶಿವಲಿಂಗೇಗೌಡ

ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಂ. ಶಿವಲಿಂಗೇಗೌಡರ ನಿರಂತರ ಪ್ರಯತ್ನಕ್ಕೆ ಫಲ ಭೂಸ್ವಾಧೀನಕ್ಕೆ ₹122 ಕೋಟಿ, ಹೆಚ್ಚುವರಿ ಕಾಮಗಾರಿ ಮತ್ತು ಕಾರ್ಯಾಚರಣಾ ಸೌಲಭ್ಯಗಳಿಗೆ ₹227.31 ಕೋಟಿ

ವಿಧಾನಸೌಧ, ಬೆಂಗಳೂರು : ಹಾಸನ ಜಿಲ್ಲೆಯ ಬಹುನಿರೀಕ್ಷಿತ ವಿಮಾನ ನಿಲ್ದಾಣ ಯೋಜನೆಗೆ ರಾಜ್ಯ ಸಚಿವ ಸಂಪುಟ ₹542.96 ಕೋಟಿ ಪರಿಷ್ಕೃತ ವೆಚ್ಚಕ್ಕೆ ಒಪ್ಪಿಗೆ ನೀಡಿದೆ. ಇದರಿಂದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗೆ ಮಹತ್ವದ ಮುನ್ನಡೆ ಸಿಕ್ಕಂತಾಗಿದೆ.

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಾಸನ ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನೆಯ ವೆಚ್ಚವನ್ನು ₹193.65 ಕೋಟಿಯಿಂದ ₹542.96 ಕೋಟಿಗೆ ಪರಿಷ್ಕರಿಸಲು ನಿರ್ಧರಿಸಲಾಯಿತು. ಯೋಜನೆಗೆ ಅಗತ್ಯವಿರುವ ಹೆಚ್ಚುವರಿ ₹349.31 ಕೋಟಿ ಅನುದಾನ ಹಾಗೂ ಹೆಚ್ಚುವರಿ ಜಮೀನು ಸ್ವಾಧೀನಕ್ಕೂ ಸಂಪುಟ ಒಪ್ಪಿಗೆ ನೀಡಿದೆ.

ಹೆಚ್ಚುವರಿ ಅನುದಾನದಲ್ಲಿ ₹122 ಕೋಟಿಯನ್ನು ಹೆಚ್ಚುವರಿ ಭೂಸ್ವಾಧೀನಕ್ಕೆ ಮತ್ತು ₹227.31 ಕೋಟಿಯನ್ನು ಹೆಚ್ಚುವರಿ ಕಾಮಗಾರಿಗಳು ಹಾಗೂ ವಿಮಾನ ನಿಲ್ದಾಣದ ಕಾರ್ಯಾಚರಣೆಗೆ ಅಗತ್ಯವಿರುವ ಸೌಲಭ್ಯಗಳ ಅಭಿವೃದ್ಧಿಗೆ ಬಳಸಲು ನಿರ್ಧರಿಸಲಾಗಿದೆ.

ಅಬಕಾರಿ ಸಚಿವ ಕೆ. ಎಂ. ಶಿವಲಿಂಗೇಗೌಡ ಅವರು ಹಾಸನ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡ ಬಳಿಕ ವಿಮಾನ ನಿಲ್ದಾಣ ಯೋಜನೆಗೆ ಚುರುಕು ನೀಡಿದ್ದರು. ಕಾಮಗಾರಿಯ ಪ್ರಗತಿಗೆ ಅಡ್ಡಿಯಾಗಿದ್ದ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಹಲವು ಸಭೆಗಳನ್ನು ನಡೆಸಿದ್ದರು. ಎರಡು ವರ್ಷಗಳೊಳಗೆ ಹಾಸನದಿಂದ ವಿಮಾನ ಸೇವೆ ಆರಂಭಿಸುವ ಗುರಿ ಹೊಂದಿದ್ದ ಅವರು, ತಮ್ಮ ಅಧಿಕಾರಾವಧಿ ಮುಗಿಯುವ ಮುನ್ನ ವಿಮಾನ ನಿಲ್ದಾಣಕ್ಕೆ ಚಾಲನೆ ನೀಡುವುದಾಗಿ ಹೇಳಿದ್ದರು. ಇದೀಗ ಭೂಸ್ವಾಧೀನ ಮತ್ತು ಹೆಚ್ಚುವರಿ ಕಾಮಗಾರಿಗಳಿಗೆ ಅಗತ್ಯ ಅನುದಾನ ಒದಗಿಸಲು ಸಂಪುಟದ ಒಪ್ಪಿಗೆ ದೊರೆತಿರುವುದು ಅವರ ಪ್ರಯತ್ನಕ್ಕೆ ಫಲ ನೀಡಿದೆ.

ವಿಮಾನ ನಿಲ್ದಾಣ ಕಾರ್ಯಾರಂಭಿಸಿದ ಬಳಿಕ ಹಾಸನದ ಸಂಪರ್ಕ ವ್ಯವಸ್ಥೆ ವಿಸ್ತರಿಸಲಿದ್ದು, ಜಿಲ್ಲೆಯ ಪ್ರವಾಸೋದ್ಯಮ, ವ್ಯಾಪಾರ ಮತ್ತು ಕೈಗಾರಿಕಾ ಚಟುವಟಿಕೆಗಳಿಗೆ ಉತ್ತೇಜನ ಸಿಗುವ ನಿರೀಕ್ಷೆಯಿದೆ. ಇಷ್ಟು ವರ್ಷ ಕಾದಿದ್ದ ಹಾಸನದ ಜನತೆಗೆ, ತಮ್ಮ ಜಿಲ್ಲೆಯಿಂದಲೇ ವಿಮಾನ ಹಾರಾಟ ಆರಂಭವಾಗುವ ದಿನಗಳು ಈಗ ಇನ್ನಷ್ಟು ಹತ್ತಿರವಾಗಿವೆ.

ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌

Peepal Media · ಬ್ರೇಕಿಂಗ್ ಸುದ್ದಿ ವಿಭಾಗ

ಸಂಬಂಧಿತ ಸುದ್ದಿಗಳು