ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಟರ್ಕಿಯ ಉಕ್ಕಿನ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 16 ಕಾರ್ಮಿಕರು ಸಾವು, ಹಲವರಿಗೆ ಗಾಯಐಫೋನ್ ಬಿಡಿಭಾಗಗಳ ತಯಾರಿಕಾ ಘಟಕದಲ್ಲಿ ದುರಂತ; ವಿಷಕಾರಿ ಅನಿಲ ಸೇವಿಸಿ ಮೂವರು ಕಾರ್ಮಿಕರು ಸಾವು!ಹಾಸನ DC ಹುದ್ದೆಯಲ್ಲಿ ಮುಂದುವರಿಯಲು ₹75 ಲಕ್ಷ ಲಂಚ – ತನಿಖೆಗೆ HDK ಒತ್ತಾಯದೀಪಾವಳಿ ಪಟಾಕಿ ಹಾವಳಿ; ದೆಹಲಿ ವಾಯುಮಾಲಿನ್ಯದ ನಂತರ ಬೆಂಗಳೂರಿನ ಗಾಳಿ ಕಲುಷಿತ!ಮಾಲಿನ್ಯದಲ್ಲಿ ಶೇ.25ರಷ್ಟು ಏರಿಕೆLPG ಕೆ.ಜಿಗೆ 11 ರೂ ಹೆಚ್ಚಳ ಆಟೋ ಚಾಲಕರಿಗೆ – ಗಾಯದ ಮೇಲೆ ಬರೆಐದು ದಶಕಗಳ ಭಾರತದ ಇತಿಹಾಸಕ್ಕೆ ಸಾಕ್ಷಿಯಾದ ಸೋನಿಯಾ ಗಾಂಧಿ ಆತ್ಮಕಥೆ ಬಿಡುಗಡೆ; ಪುಸ್ತಕ ಮಳಿಗೆಗಳಲ್ಲಿ ಓದುಗರ ಆಸಕ್ತಿ!ಅಗತ್ಯ ವಸ್ತುಗಳ ದರ ಏರಿಕೆಗೆ ಸರ್ಕಾರದ ವಿರುದ್ದ – ಹೈಕೋರ್ಟ್ ಗರಂಕಲಬುರ್ಗಿ, ಗೌರಿ ಲಂಕೇಶ್ ಹತ್ಯೆಯ ಹಿಂದೆ ಸಂಘ ಪರಿವಾರ ಕೈವಾಡ – ಪ್ರಿಯಾಂಕ್ ಖರ್ಗೆಎಐ ಯುಗದಲ್ಲಿ ನಕಲಿ ಚಾಟ್ ಸೃಷ್ಟಿಸಿ ಮಾನಹಾನಿ ಮಾಡುವುದು ಕುಮಾರಸ್ವಾಮಿಯವರಿಗೆ ಶೋಭೆಯಲ್ಲ: ಕೆ. ಎಂ. ಶಿವಲಿಂಗೇಗೌಡ44,250 ಸಜೀವ ಗುಂಡುಗಳ ವಶ: ಆರ್‌ಎಸ್‌ಎಸ್‌–ಬಿಜೆಪಿಗೆ 5 ಪ್ರಶ್ನೆಗಳನ್ನು ಮುಂದಿಟ್ಟ ಪ್ರಿಯಾಂಕ್ ಖರ್ಗೆಬೆಂಗಳೂರಿನಲ್ಲಿ ಪಟಾಕಿ ಸಿಡಿತಕ್ಕೆ 50ಕ್ಕೂ ಹೆಚ್ಚು ಜನರ ಕಣ್ಣಿಗೆ ಗಾಯ; ಗಾಯಾಳುಗಳಲ್ಲಿ ಮಕ್ಕಳ ಸಂಖ್ಯೆಯೂ ಅಧಿಕಯಾವುದೇ ಭಿನ್ನಾಭಿಪ್ರಾಯವಿಲ್ಲ, ಸಿದ್ದರಾಮಯ್ಯ ನಮ್ಮ ನಾಯಕ: ಊಹಾಪೋಹಗಳಿಗೆ ಡಿ.ಕೆ. ಶಿವಕುಮಾರ್ ಸ್ಪಷ್ಟನೆಟಿಪ್ಪು ಜಯಂತಿಯನ್ನು ಜನರು, ಸಂಘ-ಸಂಸ್ಥೆಗಳು ಸ್ವಯಂ ಆಚರಿಸಬಹುದು; ಸರ್ಕಾರ ಅಗತ್ಯ ಸಹಕಾರ ಕೊಡಲಿದೆ: ಯು.ಟಿ. ಖಾದರ್2013ರ ಪ್ರತಿಭಟನೆ ಪ್ರಕರಣ: ಮಮತಾ ಬ್ಯಾನರ್ಜಿ ಹೇಳಿಕೆ ದಾಖಲಿಸಿಕೊಳ್ಳಲು ದೆಹಲಿ ಪೊಲೀಸರಿಂದ ನೋಟಿಸ್ರಸ್ತೆ ಮಧ್ಯೆ ಪಟಾಕಿ ಸಿಡಿಸುವುದನ್ನು ಪ್ರಶ್ನಿಸಿದ ಪೊಲೀಸ್ ಅಧಿಕಾರಿ ಸಾವು: ಆರು ಮಂದಿ ಬಂಧನದೀಪಾವಳಿ ಪಟಾಕಿ ಅಬ್ಬರ; ದೆಹಲಿಯಲ್ಲಿ ಉಸಿರುಗಟ್ಟುವ ಸ್ಥಿತಿ! ಹಲವು ಪ್ರದೇಶಗಳಲ್ಲಿ AQI 350 ದಾಟಿ ತೀವ್ರ ಮಾಲಿನ್ಯಸಂಸತ್‌ನಲ್ಲಿ ಮತ್ತೆ ಕ್ಷೇತ್ರ ಪುನರ್ವಿಂಗಡಣೆ ಮಸೂದೆ?: 2029ರ ಲೋಕಸಭೆ ಚುನಾವಣೆಗೂ ಮುನ್ನ ಅಂಗೀಕಾರಕ್ಕೆ ಕೇಂದ್ರದ ಬಿರುಸಿನ ಕಸರತ್ತುಇರಾನ್ ವಿರುದ್ಧ ನೌಕಾ ದಿಗ್ಬಂಧನದ ನಡುವೆಯೇ ಯುದ್ಧ ಅಂತ್ಯಗೊಳಿಸುವ ಹೇಳಿಕೆ; ಇಬ್ಬಗೆಯ ನಿಲುವು ಪ್ರದರ್ಶಿಸಿದ ಅಮೇರಿಕಾ13 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ನಟ ಪವನ್ ಕಲ್ಯಾಣ್-ಅನ್ನಾ ಕೊನಿಡೇಲಾ ದಂಪತಿ!ಹಂಪೆಯನಾಡಿನೊಳ್ – 2: ಜನರ ಸರದಾರ ಕುಮಾರರಾಮ

LPG ಕೆ.ಜಿಗೆ 11 ರೂ ಹೆಚ್ಚಳ ಆಟೋ ಚಾಲಕರಿಗೆ – ಗಾಯದ ಮೇಲೆ ಬರೆ

LPG ಕೆ.ಜಿಗೆ 11 ರೂ ಹೆಚ್ಚಳ ಆಟೋ ಚಾಲಕರಿಗೆ – ಗಾಯದ ಮೇಲೆ ಬರೆ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಆಟೋ ಚಾಲಕರಿಗೆ ಎಲ್‌ಪಿಜಿ ದರ ಏರಿಕೆ ಮತ್ತಷ್ಟು ಆರ್ಥಿಕ ಹೊರೆ ತಂದಿದೆ.ಅಕ್ಟೋಬರ್ ತಿಂಗಳೊಂದರಲ್ಲೇ ಆಟೋಗಳಿಗೆ ಬಳಸುವ ಎಲ್‌ಪಿಜಿ ದರ ಪ್ರತಿ ಕೆ.ಜಿಗೆ 11 ರೂ. ಹೆಚ್ಚಳವಾಗಿದೆ ಎಂದು ಚಾಲಕರು ಹೇಳಿದ್ದಾರೆ.ನಗರದ ಒಟ್ಟು ಆಟೋಗಳ ಪೈಕಿ ಅರ್ಧದಷ್ಟು ಆಟೋಗಳು ಎಲ್‌ಪಿಜಿ ಬಳಸಿ ಸಂಚರಿಸುತ್ತಿದ್ದು, ದರ ಏರಿಕೆ ಚಾಲಕರ ದೈನಂದಿನ ಆದಾಯದ ಮೇಲೆ ಪರಿಣಾಮ ಬೀರುತ್ತಿದೆ.

ಬಹುತೇಕ ಗ್ಯಾಸ್ ಭರ್ತಿ ಕೇಂದ್ರಗಳು ತಮಗೆ ಬೇಕಾದಂತೆ ದರ ಹೆಚ್ಚಿಸುತ್ತಿವೆ. ದರ ಏರಿಕೆಗೆ ಆಧಾರವೇನು ಎಂದು ಪ್ರಶ್ನಿಸಿದರೆ ನಮ್ಮ ವಿರುದ್ಧ ಪೊಲೀಸ್ ದೂರು ದಾಖಲಿಸುವುದಾಗಿ ಬೆದರಿಕೆ ಹಾಕುತ್ತಾರೆ. ಇರುವ ದರದಲ್ಲೇ ಗ್ಯಾಸ್ ಖರೀದಿಸಿ, ಇಲ್ಲದಿದ್ದರೆ ಹೊರಡಿ ಎಂದು ಹೇಳುತ್ತಾರೆ.

ಆಟೋಗಳ ಕನಿಷ್ಠ ಪ್ರಯಾಣ ದರ 36 ರೂ. ಆಗಿದ್ದರೂ, ಹೆಚ್ಚುತ್ತಿರುವ ಜೀವನ ವೆಚ್ಚಕ್ಕೆ ಅನುಗುಣವಾಗಿ ಅದನ್ನು ಪರಿಷ್ಕರಿಸಿಲ್ಲ’ ಎಂದು ಕಳೆದ 10 ವರ್ಷಗಳಿಂದ ಆಟೋ ಚಾಲನೆ ಮಾಡುತ್ತಿರುವ ಮೂರ್ತಿ ನಾಯಕ್ ಅವರು ಅಳಲು ತೋಡಿಕೊಂಡಿದ್ದಾರೆ.

ನಮ್ಮ ಜೀವನೋಪಾಯ ಸಂಪೂರ್ಣವಾಗಿ ದಿನದ ದುಡಿಮೆಯನ್ನೇ ಅವಲಂಬಿಸಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ವಿಪರೀತ ಏರಿಕೆಯಾಗಿದೆ. ಶಾಲಾ ವಾಹನಗಳ ಬಾಡಿಗೆಯೂ ಹೆಚ್ಚಾಗಿದೆ. ತಿಂಗಳೊಂದರಲ್ಲಿ ಎರಡು ಅಥವಾ ಮೂರು ಬಾರಿ ಎಲ್‌ಪಿಜಿ ದರ ಹೆಚ್ಚಿಸಿದರೆ ನಾವು ಜೀವನ ನಡೆಸುವುದಾದರೂ ಹೇಗೆ? ಯಾವ ಆಧಾರದ ಮೇಲೆ ಈ ದರ ಏರಿಕೆ ಮಾಡಲಾಗುತ್ತಿದೆ?’ ಎಂದು ಪ್ರಶ್ನಿಸಿದ್ದಾರೆ.

ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌

Peepal Media · ಬ್ರೇಕಿಂಗ್ ಸುದ್ದಿ ವಿಭಾಗ

ಸಂಬಂಧಿತ ಸುದ್ದಿಗಳು