ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಟರ್ಕಿಯ ಉಕ್ಕಿನ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 16 ಕಾರ್ಮಿಕರು ಸಾವು, ಹಲವರಿಗೆ ಗಾಯಐಫೋನ್ ಬಿಡಿಭಾಗಗಳ ತಯಾರಿಕಾ ಘಟಕದಲ್ಲಿ ದುರಂತ; ವಿಷಕಾರಿ ಅನಿಲ ಸೇವಿಸಿ ಮೂವರು ಕಾರ್ಮಿಕರು ಸಾವು!ಹಾಸನ DC ಹುದ್ದೆಯಲ್ಲಿ ಮುಂದುವರಿಯಲು ₹75 ಲಕ್ಷ ಲಂಚ – ತನಿಖೆಗೆ HDK ಒತ್ತಾಯದೀಪಾವಳಿ ಪಟಾಕಿ ಹಾವಳಿ; ದೆಹಲಿ ವಾಯುಮಾಲಿನ್ಯದ ನಂತರ ಬೆಂಗಳೂರಿನ ಗಾಳಿ ಕಲುಷಿತ!ಮಾಲಿನ್ಯದಲ್ಲಿ ಶೇ.25ರಷ್ಟು ಏರಿಕೆLPG ಕೆ.ಜಿಗೆ 11 ರೂ ಹೆಚ್ಚಳ ಆಟೋ ಚಾಲಕರಿಗೆ – ಗಾಯದ ಮೇಲೆ ಬರೆಐದು ದಶಕಗಳ ಭಾರತದ ಇತಿಹಾಸಕ್ಕೆ ಸಾಕ್ಷಿಯಾದ ಸೋನಿಯಾ ಗಾಂಧಿ ಆತ್ಮಕಥೆ ಬಿಡುಗಡೆ; ಪುಸ್ತಕ ಮಳಿಗೆಗಳಲ್ಲಿ ಓದುಗರ ಆಸಕ್ತಿ!ಅಗತ್ಯ ವಸ್ತುಗಳ ದರ ಏರಿಕೆಗೆ ಸರ್ಕಾರದ ವಿರುದ್ದ – ಹೈಕೋರ್ಟ್ ಗರಂಕಲಬುರ್ಗಿ, ಗೌರಿ ಲಂಕೇಶ್ ಹತ್ಯೆಯ ಹಿಂದೆ ಸಂಘ ಪರಿವಾರ ಕೈವಾಡ – ಪ್ರಿಯಾಂಕ್ ಖರ್ಗೆಎಐ ಯುಗದಲ್ಲಿ ನಕಲಿ ಚಾಟ್ ಸೃಷ್ಟಿಸಿ ಮಾನಹಾನಿ ಮಾಡುವುದು ಕುಮಾರಸ್ವಾಮಿಯವರಿಗೆ ಶೋಭೆಯಲ್ಲ: ಕೆ. ಎಂ. ಶಿವಲಿಂಗೇಗೌಡ44,250 ಸಜೀವ ಗುಂಡುಗಳ ವಶ: ಆರ್‌ಎಸ್‌ಎಸ್‌–ಬಿಜೆಪಿಗೆ 5 ಪ್ರಶ್ನೆಗಳನ್ನು ಮುಂದಿಟ್ಟ ಪ್ರಿಯಾಂಕ್ ಖರ್ಗೆಬೆಂಗಳೂರಿನಲ್ಲಿ ಪಟಾಕಿ ಸಿಡಿತಕ್ಕೆ 50ಕ್ಕೂ ಹೆಚ್ಚು ಜನರ ಕಣ್ಣಿಗೆ ಗಾಯ; ಗಾಯಾಳುಗಳಲ್ಲಿ ಮಕ್ಕಳ ಸಂಖ್ಯೆಯೂ ಅಧಿಕಯಾವುದೇ ಭಿನ್ನಾಭಿಪ್ರಾಯವಿಲ್ಲ, ಸಿದ್ದರಾಮಯ್ಯ ನಮ್ಮ ನಾಯಕ: ಊಹಾಪೋಹಗಳಿಗೆ ಡಿ.ಕೆ. ಶಿವಕುಮಾರ್ ಸ್ಪಷ್ಟನೆಟಿಪ್ಪು ಜಯಂತಿಯನ್ನು ಜನರು, ಸಂಘ-ಸಂಸ್ಥೆಗಳು ಸ್ವಯಂ ಆಚರಿಸಬಹುದು; ಸರ್ಕಾರ ಅಗತ್ಯ ಸಹಕಾರ ಕೊಡಲಿದೆ: ಯು.ಟಿ. ಖಾದರ್2013ರ ಪ್ರತಿಭಟನೆ ಪ್ರಕರಣ: ಮಮತಾ ಬ್ಯಾನರ್ಜಿ ಹೇಳಿಕೆ ದಾಖಲಿಸಿಕೊಳ್ಳಲು ದೆಹಲಿ ಪೊಲೀಸರಿಂದ ನೋಟಿಸ್ರಸ್ತೆ ಮಧ್ಯೆ ಪಟಾಕಿ ಸಿಡಿಸುವುದನ್ನು ಪ್ರಶ್ನಿಸಿದ ಪೊಲೀಸ್ ಅಧಿಕಾರಿ ಸಾವು: ಆರು ಮಂದಿ ಬಂಧನದೀಪಾವಳಿ ಪಟಾಕಿ ಅಬ್ಬರ; ದೆಹಲಿಯಲ್ಲಿ ಉಸಿರುಗಟ್ಟುವ ಸ್ಥಿತಿ! ಹಲವು ಪ್ರದೇಶಗಳಲ್ಲಿ AQI 350 ದಾಟಿ ತೀವ್ರ ಮಾಲಿನ್ಯಸಂಸತ್‌ನಲ್ಲಿ ಮತ್ತೆ ಕ್ಷೇತ್ರ ಪುನರ್ವಿಂಗಡಣೆ ಮಸೂದೆ?: 2029ರ ಲೋಕಸಭೆ ಚುನಾವಣೆಗೂ ಮುನ್ನ ಅಂಗೀಕಾರಕ್ಕೆ ಕೇಂದ್ರದ ಬಿರುಸಿನ ಕಸರತ್ತುಇರಾನ್ ವಿರುದ್ಧ ನೌಕಾ ದಿಗ್ಬಂಧನದ ನಡುವೆಯೇ ಯುದ್ಧ ಅಂತ್ಯಗೊಳಿಸುವ ಹೇಳಿಕೆ; ಇಬ್ಬಗೆಯ ನಿಲುವು ಪ್ರದರ್ಶಿಸಿದ ಅಮೇರಿಕಾ13 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ನಟ ಪವನ್ ಕಲ್ಯಾಣ್-ಅನ್ನಾ ಕೊನಿಡೇಲಾ ದಂಪತಿ!ಹಂಪೆಯನಾಡಿನೊಳ್ – 2: ಜನರ ಸರದಾರ ಕುಮಾರರಾಮ

ಯಾವುದೇ ಭಿನ್ನಾಭಿಪ್ರಾಯವಿಲ್ಲ, ಸಿದ್ದರಾಮಯ್ಯ ನಮ್ಮ ನಾಯಕ: ಊಹಾಪೋಹಗಳಿಗೆ ಡಿ.ಕೆ. ಶಿವಕುಮಾರ್ ಸ್ಪಷ್ಟನೆ

PPeepal Media

Peepal Media ರಾಜ್ಯ

• 1 ನಿಮಿಷದ ಓದು

ಯಾವುದೇ ಭಿನ್ನಾಭಿಪ್ರಾಯವಿಲ್ಲ, ಸಿದ್ದರಾಮಯ್ಯ ನಮ್ಮ ನಾಯಕ: ಊಹಾಪೋಹಗಳಿಗೆ ಡಿ.ಕೆ. ಶಿವಕುಮಾರ್ ಸ್ಪಷ್ಟನೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ತಮ್ಮ ನಡುವೆ ಯಾವುದೇ ಅಸಮಾಧಾನ ಅಥವಾ ಭಿನ್ನಾಭಿಪ್ರಾಯವಿಲ್ಲ. ಪಕ್ಷದ ನಾಯಕತ್ವದಲ್ಲಿ ದೊಡ್ಡದಾಗಲಿ, ಸಣ್ಣದಾಗಲಿ ಯಾವುದೇ ಮನಸ್ತಾಪ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ದೀಪಾವಳಿ ಹಬ್ಬದ ಶುಭಾಶಯ ತಿಳಿಸಲು ಸೋಮವಾರ ಬೆಂಗಳೂರಿನಲ್ಲಿರುವ ಸಿದ್ದರಾಮಯ್ಯ ಅವರ ನಿವಾಸಕ್ಕೆ ಡಿ.ಕೆ. ಶಿವಕುಮಾರ್ ಭೇಟಿ ನೀಡಿದ್ದರು. ಈ ಭೇಟಿಯ ಬಳಿಕ ಉಭಯ ನಾಯಕರ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ರಾಜಕೀಯ ವಲಯದ ಚರ್ಚೆಗಳಿಗೆ ಅವರು ಪ್ರತಿಕ್ರಿಯಿಸಿದರು.

ಮೇಖ್ರಿ ವೃತ್ತದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, “ನಮ್ಮ ನಾಯಕನನ್ನು ಭೇಟಿ ಮಾಡಲು ಬಂದಿದ್ದೆ. ಅವರಿಗೆ ತಿಳಿಸಬೇಕಾದ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಮಾಧ್ಯಮಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಸುದ್ದಿಗಳನ್ನು ಬಿಂಬಿಸಲಾಗುತ್ತಿದೆ. ಆದರೆ, ನಾವು ಚರ್ಚಿಸಬೇಕಾದ ಎಲ್ಲ ವಿಚಾರಗಳನ್ನೂ ಮಾತನಾಡಿದ್ದೇವೆ” ಎಂದು ಹೇಳಿದರು.

ಸಿದ್ದರಾಮಯ್ಯ ಮತ್ತು ತಮ್ಮ ನಡುವೆ ಯಾವುದಾದರೂ ಅಸಮಾಧಾನ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಯಾವುದೇ ರೀತಿಯ ಅಸಮಾಧಾನವಿಲ್ಲ. ದೊಡ್ಡದೂ ಇಲ್ಲ, ಸಣ್ಣದೂ ಇಲ್ಲ. ಕೆಲವು ವಿರೋಧ ಪಕ್ಷಗಳು ಇಂತಹ ವಿವಾದಗಳನ್ನು ಸೃಷ್ಟಿಸಲು ತಮ್ಮದೇ ಜನರನ್ನು ನಿಯೋಜಿಸಿವೆ. ರಾಜಕೀಯದಲ್ಲಿ ಟೀಕಾಕಾರರು ಮತ್ತು ವಿರೋಧಿಗಳು ಇರಬೇಕು. ಅವರಿದ್ದಾಗ ಮಾತ್ರ ನಮ್ಮಂತಹವರು ಸ್ವಚ್ಛ ರಾಜಕಾರಣ ಮಾಡಲು ಸಾಧ್ಯ” ಎಂದು ಪ್ರತಿಕ್ರಿಯಿಸಿದರು.

ನಂತರ ಟೌನ್‌ಹಾಲ್ ಸಮೀಪ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, “ಸಿದ್ದರಾಮಯ್ಯ ನಮ್ಮ ನಾಯಕರು. ಅವರೊಂದಿಗೆ ಹಲವು ಪ್ರಮುಖ ವಿಚಾರಗಳ ಕುರಿತು ಚರ್ಚಿಸಿದ್ದೇವೆ” ಎಂದು ಪಕ್ಷದ ಒಗ್ಗಟ್ಟಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು, ಪಕ್ಷದ ಸಂಘಟನಾ ಕಾರ್ಯತಂತ್ರಗಳು ಹಾಗೂ ನ್ಯಾಯಾಲಯದ ನಿರ್ದೇಶನಗಳ ಪಾಲನೆ ಸೇರಿದಂತೆ ಹಲವು ವಿಷಯಗಳು ಚರ್ಚೆಯಲ್ಲಿ ಪ್ರಸ್ತಾಪವಾಗಿವೆ ಎಂದು ತಿಳಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸಂಬಂಧಿಸಿದ ನ್ಯಾಯಾಲಯದ ಆದೇಶಗಳ ಕುರಿತು ಮಾತನಾಡಿದ ಅವರು, ಈ ವಿಚಾರವಾಗಿ ಸಂಬಂಧಪಟ್ಟ ಎಲ್ಲ ಶಾಸಕರ ಸಭೆಯನ್ನು ಕರೆದಿರುವುದಾಗಿ ಹೇಳಿದರು. ಆ ಸಭೆಯ ಬಳಿಕ ಇತರ ಸಮುದಾಯಗಳನ್ನು ಪ್ರತಿನಿಧಿಸುವ ಶಾಸಕರೊಂದಿಗೂ ಸಭೆ ನಡೆಸುವುದಾಗಿ ತಿಳಿಸಿದರು.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ (ಜಾತಿ ಗಣತಿ) ತಕ್ಷಣ ಜಾರಿಗೊಳಿಸಬೇಕೆಂದು ವಿವಿಧ ಸಂಘಟನೆಗಳು ಒತ್ತಾಯಿಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಕಾಂಗ್ರೆಸ್ ಪಕ್ಷ ನೀಡಿರುವ ಭರವಸೆಯನ್ನು ಈಡೇರಿಸಲಿದೆ ಎಂದು ಹೇಳಿದರು.

“ನಮ್ಮ ಪಕ್ಷ ನೀಡಿರುವ ಯಾವುದೇ ಭರವಸೆಯನ್ನು ಈಡೇರಿಸುತ್ತೇವೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಜಾತಿ ಗಣತಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಆರಂಭದಿಂದಲೂ ಸಿದ್ಧವಾಗಿದೆ. ಈ ನಿಲುವಿಗೆ ನಾವು ಬದ್ಧರಾಗಿದ್ದೇವೆ. ಅದೇ ಸಮಯದಲ್ಲಿ ನ್ಯಾಯಾಲಯದ ವಿಚಾರಣೆಗಳ ಮೇಲೆಯೂ ಗಮನ ಇರಿಸಿದ್ದೇವೆ” ಎಂದು ಅವರು ತಿಳಿಸಿದರು.


ಇದನ್ನೂ ಓದಿ: ಟಿಪ್ಪು ಜಯಂತಿಯನ್ನು ಜನರು, ಸಂಘ-ಸಂಸ್ಥೆಗಳು ಸ್ವಯಂ ಆಚರಿಸಬಹುದು; ಸರ್ಕಾರ ಅಗತ್ಯ ಸಹಕಾರ ಕೊಡಲಿದೆ: ಯು.ಟಿ. ಖಾದರ್

PPeepal Media

Peepal Media

Peepal Media · ರಾಜ್ಯ ವಿಭಾಗ

ಸಂಬಂಧಿತ ಸುದ್ದಿಗಳು