Home Uncategorized ದ್ವಿಶತಕ ಸಿಡಿಸಿ ಮಿಂಚಿದ ನಾಯಕ ಗಿಲ್, ಬೃಹತ್‌ ಮೊತ್ತ ಕಲೆ ಹಾಕಿದ ಭಾರತ

ದ್ವಿಶತಕ ಸಿಡಿಸಿ ಮಿಂಚಿದ ನಾಯಕ ಗಿಲ್, ಬೃಹತ್‌ ಮೊತ್ತ ಕಲೆ ಹಾಕಿದ ಭಾರತ

ಎಜ್‌ಬಾಸ್ಟನ್ : ಇಂಗ್ಲೆಂಡ್ ವಿರುದ್ಧದ ಎರಡನೆಯ ಟೆಸ್ಟ್ ಒಂದ್ಯದ ಮೊದಲ ಇನ್ನಿಂಗ್ಸ್ ನ ಎರಡನೇ ದಿನದ ಆಟದಲ್ಲಿ ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್ ದ್ವಿಶತಕದ ನೆರವಿನಿಂದ ಭಾರತ 587 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿದೆ.

ಇಂದಿನ ಒಂದ್ಯದಲ್ಲಿ ಟೀಮ್ ಇಂಡಿಯಾದ ನಾಯಕ ಶುಭಮನ್ ಗಿಲ್ ಹೊಸ ದಾಖಲೆ ಬರೆದಿದ್ದು,ವರ್ಲ್ಡ್ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಮೊಟ್ಟ ಮೊದಲ ದ್ವಿಶತಕ ಸಿಡಿಸಿ ಮಿಂಚಿದ್ದಾರೆ.

ಇನ್ನು ನಾಯಕ ಗಿಲ್ ಗೆ ಜೊತೆಯಾಗಿ ಮೊದಲ ದಿನದಾಟದಲ್ಲಿ ಯಶಸ್ವಿ ಜೈಸ್ವಾಲ್ 87 ರನ್ ಗಳಿಸಿದ್ದರೆ ಎರಡನೇ ದಿನದಾಟದಲ್ಲಿ ರವೀಂದ್ರ ಜಡಂಜ 89 ರನ್ ಗಳಿಸಿ ಗಿಲ್ ಗೆ ಉತ್ತಮಸಾಥ್ ನೀಡಿದರು.ಇನ್ನು ವಾಷಿಂಗ್ಟನ್ ಸುಂದರ್ 42 ರನ್‌ಗಳ ಉತ್ತಮ ಆಟ ಪ್ರದರ್ಶಿಸಿದ್ರು.

ಟೆಸ್ಟ್ ಕ್ರಿಕೆಟ್ ನಲ್ಲಿ ಇದುವರೆಗಿನ ತಮ್ಮ ಶ್ರೇಷ್ಠ ಇನಿಂಗ್ಸ್ ಕಟ್ಟಿದ ನಾಯಕ ಗಿಲ್ ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದ್ದಾರೆ. ಶುಭಮನ್ ಗಿಲ್ 387 ಎಸೆತಗಳಲ್ಲಿ 269 ರನ್ ಗಳಿಸಿ ಔಟ್ ಆದರು.ಆ ಮೂಲಕ ಭಾರತ ಬೃಹತ್ ಮೊತ್ತ ದಾಖಲಿಸುವಲ್ಲಿ ಸಹಕಾರಿಯಾಗಿದ್ದಾರೆ.

You cannot copy content of this page

Exit mobile version