Home ಬ್ರೇಕಿಂಗ್ ಸುದ್ದಿ ಡಾ. ಬಿ ಆರ್.ಅಂಬೇಡ್ಕರ್ ರವರ ಆದರ್ಶಗಳೆ ಸಾಮಾಜಿಕ ಪರಿವರ್ತನೆಯ ಸಾಧನ – ಡಾ.ಹೆಚ್. ಜೆ. ಅಮರೇಂದ್ರ

ಡಾ. ಬಿ ಆರ್.ಅಂಬೇಡ್ಕರ್ ರವರ ಆದರ್ಶಗಳೆ ಸಾಮಾಜಿಕ ಪರಿವರ್ತನೆಯ ಸಾಧನ – ಡಾ.ಹೆಚ್. ಜೆ. ಅಮರೇಂದ್ರ

ಹಾಸನ : ಡಾ. ಬಿ. ಅರ್.ಅಂಬೇಡ್ಕರ್ ರವರ 135ನೇ ಜನ್ಮದಿನೋತ್ಸವದ ಅಂಗವಾಗಿ ದೇಶಾದ್ಯಂತ ಇಂದು ಸಂವಿಧಾನ ಶಿಲ್ಪಿ ಮಾನವತವಾದಿ ಡಾ. ಬಿಆರ್ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಣೆ ಮಾಡುತ್ತಿದ್ದೇವೆ ನ್ಯಾಯ ಸಮಾನತೆ ಶಿಕ್ಷಣ ಮತ್ತು ಸಬಲೀಕರಣದ ಮೌಲ್ಯಗಳನ್ನು ನೆನಪಿಸುವ ಮಹತ್ವದ ದಿನವಾಗಿದೆ ಡಾ. ಬಿ ಆರ್.ಅಂಬೇಡ್ಕರ್ ಅವರು ಶಿಕ್ಷಣವೇ ಸಾಮಾಜಿಕ ಪರಿವರ್ತನೆಯ ಸಾಧನ ಎಂದು ತಿಳಿಸಿರುವುದು ನಮ್ಮೆಲ್ಲರಿಗೂ ಮಾರ್ಗದರ್ಶನವಾಗಿದೆ ಎಂದು ಹಾಸನದ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಹೆಚ್.ಜೆ ಅಮರೇಂದ್ರ ರವರು ದಿನಾಂಕ 14- 4 2026 ರಂದು ಮಲೆನಾಡು ಇಂಜಿನಿಯರಿಂಗ್ ಕಾಲೇಜ್ ಆವರಣದಲ್ಲಿ ನಡೆದ ಡಾ. ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನೋತ್ಸವದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮನಸ್ಸಿನ ಬೆಳವಣಿಗೆ ಮಾನವ ಜೀವನದ ಪ್ರಗತಿಯ ಗುರಿಯಾಗಬೇಕು,ನಾವು ಕೇವಲ ಜ್ಞಾನವನ್ನು ನಿಡುವುದರ ಜೋತೆಗೆ ಯುವ ಜನಾಂಗದವರಿಗೆ, ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಮರ್ಶಾತ್ಮಕ ಚಿಂತನೆ ಮತ್ತು ಮಾನವೀಯತೆಯನ್ನು ಬೆಳೆಸುವ ಜವಾಬ್ದಾರಿಯು ನಮ್ಮ ಶಿಕ್ಷಕರ ಪಾತ್ರವಾಗಿದೆ ಸತ್ಯ ನಿಷ್ಠೆ ಗೌರವ ಮತ್ತು ಸಾಮಾಜಿಕ ಜವಾಬ್ದಾರಿಯ ಮೌಲ್ಯಗಳನ್ನು ಕಾಪಾಡುವುದು ಪ್ರತಿಯೊಬ್ಬರು ಆದ್ಯ ಕರ್ತವ್ಯವಾಗಿದೆ,ಎಲ್ಲರನ್ನೂ ಸಬಲರನ್ನಾಗಿ ಮಾಡುವ ವಾತಾವರಣವನ್ನು ನಿರ್ಮಿಸಲು ನಾವು ಪ್ರಯತ್ನಿಸಬೇಕು ಇದು ಡಾ. ಅಂಬೇಡ್ಕರ್ ಅವರ ಆದರ್ಶಗಳಿಗೆ ನಿಜವಾದ ಗೌರವ ನಿಡಿದಂತಾಗುವುದು,ಅವರ ಜೀವನದ ಹೋರಾಟ ದೃಢ ನಿಶ್ಚಯ ಮತ್ತು ದೇಶದ ಮೇಲಿನ ಅಪಾರ ಬದ್ಧತೆ ಪ್ರಮುಖವಾಗಿದೆ ಸಮಾನತೆಯ ಪ್ರೇರಣೆಯಿಂದ ನಾವು ನಮ್ಮ ಕರ್ತವ್ಯಗಳನ್ನು ಇನ್ನಷ್ಟು ನಿರ್ವಹಿಸೋಣ ಎಂದು ಡಾ ಬಿ ಅರ್ ಅಂಬೇಡ್ಕರ್ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಸುಸಂದರ್ಭದಲ್ಲಿ ತಿಳಿಸಿದರು

ಮುಖ್ಯ ಅತಿಥಿಗಳಾಗಿದ್ದ ಕಾಲೇಜಿನ ನಿರ್ದೇಶಕರಾದ ಡಾ. ಎಸ್. ಪ್ರದೀಪ್ ಮಾತನಾಡಿ ಡಾ. ಬಿ ಆರ್ ಅಂಬೇಡ್ಕರ್ ಅವರು ಸಮಾನತೆಯ ಮತ್ತು ಪ್ರಗತಿಯ ಸಮಾಜ ನಿರ್ಮಾಣದ ದಿಕ್ಕಿನಲ್ಲಿ ಸಂಪೂರ್ಣ ಪ್ರಯತ್ನವನ್ನ ಹಾಕಿದ್ದಾರೆ, ಮೇಲು ಕೇಳು ಎಂಬ ಭಾವನೆ ಇಲ್ಲದೆ ಎಲ್ಲರೂ ಸಮಾನಾಂತರವಾಗಿ ಬದುಕುವುದು ಅಂಬೇಡ್ಕರ್ ಅವರ ಉದ್ದೇಶವಾಗಿತ್ತು ಎಂದರು.
ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಹಾಗೂ ಪ್ರಾಧ್ಯಾಪಕರು ಆದ ಡಾ. ಎ. ಜೆ.ಕೃಷ್ಣಯ್ಯನವರು ಮಾತನಾಡಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನವನ್ನು ರಚನೆ ಮಾಡಲು ಬಹಳಷ್ಟು ಹೋರಾಟ ಮಾಡಿದ್ದಾರೆ ಹಾಗೂ ಬಡತನದಲ್ಲಿರುವವರನ್ನು ಮೇಲ್ಮಟ್ಟಕ್ಕೆ ತರುವಂತಹ ಕೆಲಸ ಆಗಬೇಕೆಂದು ಅವರ ಗುರಿಯಾಗಿದ್ದು ಶೈಕ್ಷಣಿಕವಾಗಿ ಸಾಮಾಜಿಕವಾಗಿ ರಾಜಕೀಯವಾಗಿ ಆರ್ಥಿಕವಾಗಿ ಎಲ್ಲರೂ ಸಮಾನತೆಯ ದೃಷ್ಟಿಯಿಂದ ಬದುಕನ್ನು ಕಾಣಬೇಕೆಂಬುದು ಅಂಬೇಡ್ಕರ್ ಅವರ ಗುರಿಯಾಗಿತ್ತು ಎಂದರು. ಸಂವಿಧಾನ ಇರಾಲಾಗಿ ಎಲ್ಲರೂ ಸಮಾನತೆಯ ಬದುಕು ಕಾಣಲು ಸಾಧ್ಯವಾಗಿದೆ ಎಂದರು

ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ, ಇಂದ್ರ ಬಹದ್ದೂರ್, ಕಾಲೇಜು ಎನ್ ಎಸ್ ಎಸ್ ಅಧೀಕಾರಿಗಳಾದ ಡಾ ವೀಜಯಕುಮಾರ್ ತೀಲೆ, ಪರಿಕ್ಷಾ ವಿಭಾಗದ ಮುಖ್ಯ ಸ್ಥರಾದ ಡಾ. ಎ. ಎ. ಪ್ರಸನ್ನ, ವಿಭಾಗದ ಮುಖ್ಯ ಸ್ಥರುಗಳಾದ ಡಾ. ರಾಜಣ್ಣ, ಡಾ, ಹರೀಶ್, ಡಾ, ಸುಮನ ಜಯಪ್ರಕಾಶ್, ಕಾಲೇಜು ರಿಜಿಸ್ಟ್ರಾರ್ ಕುಮುದ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೇಯ ಮಾಧ್ಯಮ ಸಂಯೋಜಕರಾದ ಕಟ್ಟಾಯ ಶಿವಕುಮಾರ್, ಪ್ರಾದ್ಯಾಪಕರಾದ ಡಾ. ಮೂರ್ತಿ ಮಹದೇವ್ ನಾಯಕ್, ಡಾ ತ್ರೀವೇಣಿ, ಡಾ ಶಂಭುಲಿಂಗ ಮೂರ್ತಿ . ಡಾ.ವೆಂಕಟೇಶ್ ರಾವ್ ಕೋಲ್ಲಿ,
ಹಾಗೂ ಕಾಲೇಜಿನ ಡೀನ್ ರವರು, ಎಲ್ಲಾ ವಿಭಾಗದ ಮುಖ್ಯಸ್ಥರುಗಳು ಪ್ರಾಧ್ಯಾಪಕರು, ಸಹಪ್ರಾಧ್ಯಪಕರು,ನೌಕರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು
ಡಾ. ಬಿ. ಅರ್ ಅಂಬೇಡ್ಕರ್ ರವರ ಬಾವಚೀತ್ರಕ್ಕೆ ಪುಷ್ಪಾ ರ್ಚನೆಯನ್ನು ಎಲ್ಲಾರು ಸಲ್ಲಿಸಿದರು,
ಕಾರ್ಯಕ್ರಮದ ಕೊನೆಯಲ್ಲಿ ವಿಶ್ವ ಶಾಂತಿಗಾಗಿ ಪ್ರಾಥನೆ ಮಾಡಲಾಯಿತು.

You cannot copy content of this page

Exit mobile version