Home ದೇಶ ಮಾಧ್ಯಮ ಸಾಧನಗಳನ್ನು ವಶಪಡಿಸಿಕೊಳ್ಳುವ ಮಾರ್ಗಸೂಚಿಗಳನ್ನು ರೂಪಿಸಿ: ಕೇಂದ್ರಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ

ಮಾಧ್ಯಮ ಸಾಧನಗಳನ್ನು ವಶಪಡಿಸಿಕೊಳ್ಳುವ ಮಾರ್ಗಸೂಚಿಗಳನ್ನು ರೂಪಿಸಿ: ಕೇಂದ್ರಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ

0

ದೆಹಲಿ: ಸುದ್ದಿ ಪ್ರಸಾರಕ್ಕೆ ತೆರಳಿದ ಮಾಧ್ಯಮದವರ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳುವುದು ಅತ್ಯಂತ ಗಂಭೀರ ವಿಚಾರ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ತನಿಖೆಗೆ ವಶಪಡಿಸಿಕೊಳ್ಳುವುದು ಅಗತ್ಯವಿದ್ದಲ್ಲಿ ವಿಶೇಷ ಮಾರ್ಗಸೂಚಿಗಳನ್ನು ರೂಪಿಸಿ ಜಾರಿಗೊಳಿಸಬೇಕು ಎಂದು ಆದೇಶಿಸಿದೆ. ಫೌಂಡೇಶನ್‌ ಫಾರ್‌ ಪ್ರೊಫೆಷನಲ್‌ ಮೀಡಿಯಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಿಚಾರಣೆ ನಡೆಸಿದ್ದು, ದೇಶದಲ್ಲಿ ಪತ್ರಕರ್ತರನ್ನು ತನಿಖೆ ಮಾಡಲು ಮತ್ತು ಅವರಿಂದ ದಾಖಲೆಗಳು, ಹಾರ್ಡ್ ಡಿಸ್ಕ್‌ಗಳು, ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲು ವಿಶೇಷ ಕಾರ್ಯವಿಧಾನಗಳನ್ನು ರಚಿಸುವಂತೆ ಸೂಚಿಸಿದೆ. ಈ ಸಂದರ್ಭದಲ್ಲಿ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠವು ‘ಇದು ತುಂಬಾ ಗಂಭೀರವಾದ ವಿಚಾರʼ ಎಂದು ಕೆಲವು ಪ್ರಮುಖ ಅಭಿಪ್ರಾಯಗಳನ್ನು ವ್ಯಕ್ತಪಡಿಸಿತು.

ಮಾಧ್ಯಮ ವೃತ್ತಿಪರರ ಡಿಜಿಟಲ್ ಉಪಕರಣಗಳ ತಪಾಸಣೆ ಮತ್ತು ಸ್ವಾಧೀನಕ್ಕೆ ನಿರ್ದಿಷ್ಟ ಮಾರ್ಗಸೂಚಿಗಳನ್ನು ಹೊಂದಿರಬೇಕು. ಮಾಧ್ಯಮದವರು ತಮ್ಮದೇ ಆದ ಮೂಲಗಳನ್ನು ಹೊಂದಿರುತ್ತಾರೆ. ಖಾಸಗಿತನ ಮೂಲಭೂತ ಹಕ್ಕು. ಅದರಲ್ಲಿ ಸಮತೋಲನ ಇರಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ವಿಶೇಷ ಮಾರ್ಗಸೂಚಿಗಳಿಗಾಗಿ ಒಂದು ತಿಂಗಳು ಸಮಯ ನೀಡಲಾಗಿದೆ ಎಂದು ಅದು ಹೇಳಿದೆ. ಅರ್ಜಿಯ ಮುಂದಿನ ವಿಚಾರಣೆಯನ್ನು ಡಿಸೆಂಬರ್ 6ಕ್ಕೆ ಮುಂದೂಡಲಾಗಿದೆ. ಈ ನಿಟ್ಟಿನಲ್ಲಿ ಇತ್ತೀಚೆಗೆ 15 ಮಾಧ್ಯಮ ಸಂಸ್ಥೆಗಳು ಸಿಜೆಐ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರಿಗೆ ಪತ್ರ ಬರೆದಿರುವುದು ಬರೆದಿದ್ದವು.

You cannot copy content of this page

Exit mobile version