Home ಜನ-ಗಣ-ಮನ ಕಲೆ – ಸಾಹಿತ್ಯ “ಕಡಲಮ್ಮನ ಸೆರಗಿನಲ್ಲಿ “

“ಕಡಲಮ್ಮನ ಸೆರಗಿನಲ್ಲಿ “

0

ಪೌರ್ಣಮಿಯ ಚಂದ್ರನೆದೆಗೆ
ಯಾರೋ ಗುರಿ ಇಟ್ಟಿರುವಾಗ!
ಮಂಗಳನ ಹಜಾರದಲ್ಲಿ ಆತಂಕ ನಡೆದಾಡಿದೆ
ನಾನಿಲ್ಲಿ ಕಡಲಮ್ಮನ ಸೆರಗಿನಲ್ಲಿ
ಪ್ರೇಮದ ತೇವಕ್ಕೆ ಬೆರಗಾದೆ
ನೂರಾರು ಹಕ್ಕಿಗಳ ಸ್ವಪ್ನಗಳಿಗೆ
ಈ ಕಡಲೇ ಹರಣವಾದುದು ಪ್ರೇಮವೇ ಅಲ್ಲವೆ!
ಬಲೆ ಎಂದರೆ ಶಿಕಾರಿಯಷ್ಷೇ ಏನು?!! ಬಲೆಯಲ್ಲೇ ಬಿಡುಗಡೆಯ ಹಾದಿ ಅರಳಲಿ…
ಜಲದಬ್ಬರಕೆ ಪ್ರೇಮದ ಪಿಸುಮಾತುಗಳ ಕಲಿಸುವ ಸಮೀರ ಅದ್ಯಾವಾಗಲೋ ಕಠಿಣಗೊಂಡು ಹಡಗು ಮುಳುಗಿರುವಾಗ ರಾಗಪ್ರಾಣಗಳು ಕಾಣುವುದಿಲ್ಲವೇ??
ಅವಳ ನೇತ್ರಗಳಿನ್ನೂ ಅವನದೇ ಬಿಂಬದಲ್ಲಿ ಜೀವಿಸುತ್ತಿವೆ…..
ಕಡಲಮ್ಮನ ಎದೆಯಲ್ಲಿ ಬಿರುಗಾಳಿ ತುಂಬಿದವರು ಪ್ರೇಮಕ್ಕೆ ಶರಣಾಗಲಿ; ಜೀವಗಳು ಬೆಳೆದಾವು ಅಲ್ಲಿ..
ಯಾರ್ಯಾರವೋ ಒಲವುಗಳಿಲ್ಲಿ ಚುಕ್ಕಿಗಳ ಎಣಿಸುವಾಗ ದೂರದಲಿ ಜಾತಿಗಳ ಆಯುಧ ಮಸೆದವರು ಹಿಂಸೆಗೆ ಶರಣಾಗಿದ್ದಾರೆ…..
ತಥಾಗತನು ಕಡಲ ದಾಟುವಾಗ
ಅಗಾಧ ಕೂರ್ಮೆಯ ಚೆಲುವಿಗೆ
ಜೀವತುಂಬಿಯೇ ಹೋದವನು
ಗಗನದಂಗಳವು ಶುಭ್ರ ಪ್ರೇಮವ ಧರಿಸಿ ಸಣ್ಣಗೆ ಹನಿಚೆಲ್ಲುವಾಗ ಪ್ರೀತಿಯ ಬನಗಳು ಧರೆಯ ಚೆಲುವಾಗಲಿ

You cannot copy content of this page

Exit mobile version