Home ವಿದೇಶ “ಇರಾನ್‌ನ ಸರ್ವೋಚ್ಚ ನಾಯಕನಾಗಲು ನನಗೆ ಆಫರ್ ಇತ್ತು”: ಡೊನಾಲ್ಡ್ ಟ್ರಂಪ್ ಎಡಬಿಡಂಗಿ ಹೇಳಿಕೆಗೆ ಇರಾನ್ ಟೀಕೆ

“ಇರಾನ್‌ನ ಸರ್ವೋಚ್ಚ ನಾಯಕನಾಗಲು ನನಗೆ ಆಫರ್ ಇತ್ತು”: ಡೊನಾಲ್ಡ್ ಟ್ರಂಪ್ ಎಡಬಿಡಂಗಿ ಹೇಳಿಕೆಗೆ ಇರಾನ್ ಟೀಕೆ

0

ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿಯಲ್ಲಿ ಅಮೆರಿಕಾದ ಘೋಷಿತ 5 ದಿನಗಳ ಕದನ ವಿರಾಮದ ನಡುವೆಯೂ ಯುದ್ಧ ಮುಂದುವರಿದಿರುವಾಗ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.

ಟ್ರಂಪ್ ಹೇಳಿದ್ದೇನು?
ಬುಧವಾರ (ಮಾ.25) ಅಮೆರಿಕಾದಲ್ಲಿ ನಡೆದ ರಿಪಬ್ಲಿಕನ್ ಪಕ್ಷದ ನಿಧಿ ಸಂಗ್ರಹ ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್, ಇರಾನ್ ಅಮೇರಿಕಾದೊಂದಿಗೆ ಮಾತುಕತೆ ನಡೆಸಲು ಉತ್ಸುಕವಾಗಿದೆ ಎಂದು ಹೇಳಿದ್ದಾರೆ.

“ಇರಾನ್ ಒಪ್ಪಂದಕ್ಕಾಗಿ ಹಾತೊರೆಯುತ್ತಿದೆ. ಆದರೆ, ಅವರು ಅದನ್ನು ಬಹಿರಂಗವಾಗಿ ಹೇಳಲು ಭಯಪಡುತ್ತಿದ್ದಾರೆ. ತಮ್ಮ ಜನರಿಂದಲೂ, ನಮ್ಮಿಂದಲೂ ಅಪಾಯ ಇದೆ ಎಂಬ ಭಯದಲ್ಲಿ ಬದುಕುತ್ತಿದ್ದಾರೆ,” ಎಂದು ಹೇಳಿದ್ದಾರೆ.

ಇದನ್ನೂ ಮೀರಿ, ಟ್ರಂಪ್ ಇನ್ನಷ್ಟು ಅಚ್ಚರಿಯ ಹೇಳಿಕೆ ನೀಡಿ,
“ಇರಾನ್‌ ನನಗೆ ತಮ್ಮ ದೇಶದ ಮುಂದಿನ ಸುಪ್ರೀಂ ಲೀಡರ್ ಆಗುವಂತೆ ಅನೌಪಚಾರಿಕವಾಗಿ ಆಫರ್ ನೀಡಿತ್ತು. ಆದರೆ ನಾನು ಅದನ್ನು ‘ಬೇಡ’ ಎಂದು ತಿರಸ್ಕರಿಸಿದೆ,” ಎಂದು ಹೇಳಿದ್ದಾರೆ.

ಇರಾನ್‌ನ ಕಟು ಪ್ರತಿಕ್ರಿಯೆ
ಟ್ರಂಪ್ ಹೇಳಿಕೆಗಳನ್ನು ಇರಾನ್ ತೀವ್ರವಾಗಿ ತಳ್ಳಿ ಹಾಕಿದೆ.
ಇರಾನ್‌ನ ಇಸ್ಲಾಮಿಕ್ ರೆವೆಲ್ಯೂಷನರಿ ಗಾರ್ಡ್ ಕಾರ್ಪ್ಸ್ ವಕ್ತಾರ ಇಬ್ರಾಹಿಂ ಝೋಲ್ಫಾಘರಿ ವ್ಯಂಗ್ಯವಾಗಿ, “ಯುದ್ಧ ನಿಲ್ಲಿಸಲು ನೀವು ನಿಮ್ಮೊಳಗೆ ನಿಮ್ಮೇ ಮಾತುಕತೆ ನಡೆಸುತ್ತಿದ್ದೀರಾ? ನಿಮ್ಮ ಸೋಲನ್ನು ಒಪ್ಪಂದ ಎಂದು ತೋರಿಸಬೇಡಿ,” ಎಂದು ಪ್ರತಿಕ್ರಿಯಿಸಿದ್ದಾರೆ.

ನೇರ ಮಾತುಕತೆಗಳೇ ಇಲ್ಲ: ಇರಾನ್ ಸ್ಪಷ್ಟನೆ
ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಕ್ಚಿ ಸ್ಪಷ್ಟಪಡಿಸಿ,
“ಅಮೆರಿಕಾ ಮಿತ್ರ ರಾಷ್ಟ್ರಗಳ ಮೂಲಕ ಸಂದೇಶ ಕಳುಹಿಸಿದೆ. ಆದರೆ ಯಾವುದೇ ನೇರ ಮಾತುಕತೆ ನಡೆದಿಲ್ಲ. ಹಿಂದೆ ಬೇಷರತ್ತಾಗಿ ಶರಣಾಗತಿರಾಗಬೇಕು ಎಂದು ಹೇಳಿದ ಅಮೆರಿಕಾ ಈಗ ಮಾತುಕತೆಗೆ ಮುಂದಾಗಿರುವುದು ಅವರ ದುರ್ಬಲತೆಯ ಸಂಕೇತ,” ಎಂದು ಹೇಳಿದ್ದಾರೆ.

You cannot copy content of this page

Exit mobile version