ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
RSF ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ತರುವವರ ಪಟ್ಟಿಯಲ್ಲಿ ಅದಾನಿ, ಒಪಿಇಂಡಿಯಾ ಮತ್ತು ಟ್ರಂಪ್‌ಗೆ ಸ್ಥಾನಬಸ್ ಪ್ರಯಾಣ ದರ ಏರಿಕೆ ಖಂಡಿಸಿ ಇಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆಕಡ್ಡಾಯ ಎರಡು ಮಕ್ಕಳು ಸಾಕು ಎನ್ನುವ ನಿಯಮಕ್ಕೆ ಇದು ಸರಿಯಾದ ಕಾಲವಲ್ಲ: ಸುಪ್ರೀಂ ಕೋರ್ಟ್ಅಧ್ಯಕ್ಷರ ನಂಟು ಹೊಂದಿದ್ದ ಡಿಜಿಟಲ್ ಬ್ಯಾಂಕ್‌ಗೆ ಬೀಗ: 30 ಲಕ್ಷ ಗ್ರಾಹಕರ ಹಣ ಅತಂತ್ರಸಲ್ಮಾನ್ ಖಾನ್‌ಗೆ ಲಾರೆನ್ಸ್ ಬಿಷ್ಣೋಯ್ ಕುಟುಂಬದಿಂದ ಸಂಧಾನದ ಆಹ್ವಾನ; ಕ್ಷಮೆ ಕೇಳಿದರೆ ಸುರಕ್ಷತೆಯ ಹೊಣೆ ನನ್ನದು ಎಂದ ರಮೇಶ್ ಬಿಷ್ಣೊಯ್!ಪ್ರಶಾಂತ್ ಭೂಷಣ್ ವಿರುದ್ಧ ದೆಹಲಿ ಪೊಲೀಸರಿಂದ ಪ್ರಕರಣ ದಾಖಲು; ರಷ್ಯಾ ಸಚಿವರ ವಿಡಿಯೊ ತಿರುಚಿದ ಆರೋಪಡಿಕೆ ಶಿವಕುಮಾರ್ ಮಾತ್ರವಲ್ಲ, ಕೇರಳ ಸಿಎಂ ಭೇಟಿಯಲ್ಲೂ AI ಗ್ಲಾಸ್ ಧರಿಸಿದ್ದ ಉದ್ಯಮಿ; ಸ್ಟಿಂಗ್ ಆಪರೇಷನ್ ಅನುಮಾನಕ್ಕೆ ಮತ್ತೊಂದು ತಿರುವು!ತಿರುಚಿದ ವಿಡಿಯೋ ಬಳಸಿ ಸಚಿವ ಕಾಶಪ್ಪನವರ್‌ ತೇಜೋವಧೆಗೆ ಯತ್ನ: ಆಪ್ತ ಸಹಾಯಕನಿಂದ ದೂರು ದಾಖಲುಬಿಜೆಪಿ ಪ್ರತಿಭಟನೆಯಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಪ್ರಕರಣಕ್ಕೆ ಹೈಕೋರ್ಟ್ ತೆರೆ; ಆರೋಪಿಯ ವಿರುದ್ಧದ ಕೇಸ್ ರದ್ದುಗೊಳಿಸಿದ ಜ.ಶ್ರೀಶಾನಂದಕೇಂದ್ರದಿಂದ ಇಂಧನ ಬೆಲೆ ಇಳಿಕೆಯಾದರೆ ಬಸ್ ಪ್ರಯಾಣ ದರವೂ ಕಡಿತ: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ದೀಪಾವಳಿ ಸಂಭ್ರಮ; ಮೂರು ಕಂತುಗಳ ಹಣ ಪಾವತಿಗೆ ₹7,405 ಕೋಟಿ ಬಿಡುಗಡೆನೇತನ್ಯಾಹು ನಂತರ ಈಗ ಟ್ರಂಪ್! ಜಾಗೃತರಾದ ಅಮೆರಿಕದ ಮತದಾರಭಾರತದ ಸ್ವಂತ AI ಕ್ರಾಂತಿಗೆ ಹೊಸ ವೇಗ: 22 ಭಾಷೆಗಳಲ್ಲಿ ಕಾರ್ಯನಿರ್ವಹಿಸುವ EKA-1 ಬಿಡುಗಡೆ, ಕನ್ನಡಕ್ಕೂ ಹೊಸ ಅವಕಾಶವೇ?ಕರ್ನಾಟಕದ ನೆಲದಲ್ಲಿ ಮಹಾರಾಷ್ಟ್ರ ಪೊಲೀಸರ ತನಿಖೆಗೆ ಹೈಕೋರ್ಟ್ ಬ್ರೇಕ್: ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ ಕಾರ್ಯಾಚರಣೆ ನಡೆಸುವಂತಿಲ್ಲಸರ್ಕಾರಿ ಯೋಜನೆಗಳಿಗೆ ಆಧಾರ್ ಬದಲು ವೋಟರ್ ಐಡಿ ಬಳಕೆ? ಕೇಂದ್ರ ಸಚಿವ ಲಲನ್ ಸಿಂಗ್ ಹೇಳಿಕೆಬಸ್ ದರ | ಕಾಂಗ್ರೆಸ್ ಸರ್ಕಾರ ಒಂದು ಕೈಯಲ್ಲಿ ಗ್ಯಾರಂಟಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿದೆ: ಬಿ ವೈ ವಿಜಯೇಂದ್ರಸ್ಟಿಂಗ್ ಆಪರೇಷನ್ ಪರಿಣಾಮ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದೆ – ಆರ್. ಅಶೋಕ್ಸಾಲು ಸಮಸ್ಯೆಗಳು ದತ್ತಾಂಶ ಹಂಚಿಕೊಳ್ಳದ ಕೇಂದ್ರ ಚುನಾವಣಾ ಆಯೋಗ – GBA ಚುನಾವಣೆ ಇನ್ನಷ್ಟು ವಿಳಂಬಬಿಜೆಪಿಯ ಫಾರಿನ್‌ ಫಂಡ್‌ ಕಥೆರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯ 5000 ಕೋಟಿ ಹಣವನ್ನು ಮಂಗಮಾಯ ಮಾಡಿದೆ: ಜೆಡಿಎಸ್‌ ಆರೋಪ

ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ದೀಪಾವಳಿ ಸಂಭ್ರಮ; ಮೂರು ಕಂತುಗಳ ಹಣ ಪಾವತಿಗೆ ₹7,405 ಕೋಟಿ ಬಿಡುಗಡೆ

PPeepal Media Desk

Peepal Media Desk ರಾಜ್ಯ

• 1 ನಿಮಿಷದ ಓದು

ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ದೀಪಾವಳಿ ಸಂಭ್ರಮ; ಮೂರು ಕಂತುಗಳ ಹಣ ಪಾವತಿಗೆ ₹7,405 ಕೋಟಿ ಬಿಡುಗಡೆ

ಬೆಂಗಳೂರು: ದೀಪಾವಳಿ ಹಬ್ಬದ ಹೊತ್ತಿನಲ್ಲಿ ರಾಜ್ಯದ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಸರ್ಕಾರದಿಂದ ಆರ್ಥಿಕ ನೆರವಿನ ಸಿಹಿಸುದ್ದಿ ದೊರೆತಿದೆ. ಯೋಜನೆಯಡಿ ಬಾಕಿ ಇರುವ ಮೂರು ಕಂತುಗಳ ಹಣ ಬಿಡುಗಡೆ ಮಾಡಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆದೇಶಿಸಿದ್ದು, ಒಟ್ಟು ₹7,405.86 ಕೋಟಿ ಮೊತ್ತದ ಅನುದಾನಕ್ಕೆ ಅನುಮೋದನೆ ನೀಡಲಾಗಿದೆ.

ಈವರೆಗೆ ಯೋಜನೆಯಡಿ 33 ಕಂತುಗಳ ಹಣವನ್ನು ಫಲಾನುಭವಿಗಳಿಗೆ ಪಾವತಿಸಲಾಗಿದ್ದು, ಇದೀಗ 34ರಿಂದ 36ನೇ ಕಂತಿನವರೆಗಿನ ಮೊತ್ತ ಬಿಡುಗಡೆಗೆ ಸರ್ಕಾರ ಮುಂದಾಗಿದೆ. 34ನೇ ಕಂತಿಗೆ ₹2,500 ಕೋಟಿ ಹಾಗೂ 35 ಮತ್ತು 36ನೇ ಕಂತುಗಳಿಗೆ ತಲಾ ₹2,452.93 ಕೋಟಿ ಹಣ ನಿಗದಿಪಡಿಸಲಾಗಿದೆ.

ರಾಜ್ಯಾದ್ಯಂತ ಸುಮಾರು 1.24 ಕೋಟಿ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ಅಕ್ಟೋಬರ್ ತಿಂಗಳವರೆಗಿನ ಪಾವತಿಯನ್ನು ಪರಿಗಣಿಸಿದರೆ, ಫಲಾನುಭವಿಗಳಿಗೆ ಒಟ್ಟಾರೆಯಾಗಿ ₹86,838.36 ಕೋಟಿ ಹಣ ವರ್ಗಾವಣೆಯಾದಂತಾಗಲಿದೆ. ಈ ಮೂಲಕ ಪ್ರತಿ ಮಹಿಳಾ ಫಲಾನುಭವಿಗೆ ಈವರೆಗೆ ಒಟ್ಟು ₹72 ಸಾವಿರ ಆರ್ಥಿಕ ನೆರವು ತಲುಪಿದಂತಾಗುತ್ತದೆ.

ಮಹಿಳೆಯರಿಗೆ ಪ್ರತಿ ತಿಂಗಳು ₹2,000 ಆರ್ಥಿಕ ನೆರವು ನೀಡುವ ಗೃಹಲಕ್ಷ್ಮೀ ಯೋಜನೆಯು ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿದೆ. ಹಬ್ಬದ ಸಂದರ್ಭದಲ್ಲಿ ಮೂರು ಕಂತುಗಳ ಹಣ ಬಿಡುಗಡೆಗೆ ಆದೇಶಿಸಿರುವುದು ಫಲಾನುಭವಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.

PPeepal Media Desk

Peepal Media Desk

Peepal Media · ರಾಜ್ಯ ವಿಭಾಗ

ಸಂಬಂಧಿತ ಸುದ್ದಿಗಳು