ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
RSF ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ತರುವವರ ಪಟ್ಟಿಯಲ್ಲಿ ಅದಾನಿ, ಒಪಿಇಂಡಿಯಾ ಮತ್ತು ಟ್ರಂಪ್‌ಗೆ ಸ್ಥಾನಬಸ್ ಪ್ರಯಾಣ ದರ ಏರಿಕೆ ಖಂಡಿಸಿ ಇಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆಕಡ್ಡಾಯ ಎರಡು ಮಕ್ಕಳು ಸಾಕು ಎನ್ನುವ ನಿಯಮಕ್ಕೆ ಇದು ಸರಿಯಾದ ಕಾಲವಲ್ಲ: ಸುಪ್ರೀಂ ಕೋರ್ಟ್ಅಧ್ಯಕ್ಷರ ನಂಟು ಹೊಂದಿದ್ದ ಡಿಜಿಟಲ್ ಬ್ಯಾಂಕ್‌ಗೆ ಬೀಗ: 30 ಲಕ್ಷ ಗ್ರಾಹಕರ ಹಣ ಅತಂತ್ರಸಲ್ಮಾನ್ ಖಾನ್‌ಗೆ ಲಾರೆನ್ಸ್ ಬಿಷ್ಣೋಯ್ ಕುಟುಂಬದಿಂದ ಸಂಧಾನದ ಆಹ್ವಾನ; ಕ್ಷಮೆ ಕೇಳಿದರೆ ಸುರಕ್ಷತೆಯ ಹೊಣೆ ನನ್ನದು ಎಂದ ರಮೇಶ್ ಬಿಷ್ಣೊಯ್!ಪ್ರಶಾಂತ್ ಭೂಷಣ್ ವಿರುದ್ಧ ದೆಹಲಿ ಪೊಲೀಸರಿಂದ ಪ್ರಕರಣ ದಾಖಲು; ರಷ್ಯಾ ಸಚಿವರ ವಿಡಿಯೊ ತಿರುಚಿದ ಆರೋಪಡಿಕೆ ಶಿವಕುಮಾರ್ ಮಾತ್ರವಲ್ಲ, ಕೇರಳ ಸಿಎಂ ಭೇಟಿಯಲ್ಲೂ AI ಗ್ಲಾಸ್ ಧರಿಸಿದ್ದ ಉದ್ಯಮಿ; ಸ್ಟಿಂಗ್ ಆಪರೇಷನ್ ಅನುಮಾನಕ್ಕೆ ಮತ್ತೊಂದು ತಿರುವು!ತಿರುಚಿದ ವಿಡಿಯೋ ಬಳಸಿ ಸಚಿವ ಕಾಶಪ್ಪನವರ್‌ ತೇಜೋವಧೆಗೆ ಯತ್ನ: ಆಪ್ತ ಸಹಾಯಕನಿಂದ ದೂರು ದಾಖಲುಬಿಜೆಪಿ ಪ್ರತಿಭಟನೆಯಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಪ್ರಕರಣಕ್ಕೆ ಹೈಕೋರ್ಟ್ ತೆರೆ; ಆರೋಪಿಯ ವಿರುದ್ಧದ ಕೇಸ್ ರದ್ದುಗೊಳಿಸಿದ ಜ.ಶ್ರೀಶಾನಂದಕೇಂದ್ರದಿಂದ ಇಂಧನ ಬೆಲೆ ಇಳಿಕೆಯಾದರೆ ಬಸ್ ಪ್ರಯಾಣ ದರವೂ ಕಡಿತ: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ದೀಪಾವಳಿ ಸಂಭ್ರಮ; ಮೂರು ಕಂತುಗಳ ಹಣ ಪಾವತಿಗೆ ₹7,405 ಕೋಟಿ ಬಿಡುಗಡೆನೇತನ್ಯಾಹು ನಂತರ ಈಗ ಟ್ರಂಪ್! ಜಾಗೃತರಾದ ಅಮೆರಿಕದ ಮತದಾರಭಾರತದ ಸ್ವಂತ AI ಕ್ರಾಂತಿಗೆ ಹೊಸ ವೇಗ: 22 ಭಾಷೆಗಳಲ್ಲಿ ಕಾರ್ಯನಿರ್ವಹಿಸುವ EKA-1 ಬಿಡುಗಡೆ, ಕನ್ನಡಕ್ಕೂ ಹೊಸ ಅವಕಾಶವೇ?ಕರ್ನಾಟಕದ ನೆಲದಲ್ಲಿ ಮಹಾರಾಷ್ಟ್ರ ಪೊಲೀಸರ ತನಿಖೆಗೆ ಹೈಕೋರ್ಟ್ ಬ್ರೇಕ್: ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ ಕಾರ್ಯಾಚರಣೆ ನಡೆಸುವಂತಿಲ್ಲಸರ್ಕಾರಿ ಯೋಜನೆಗಳಿಗೆ ಆಧಾರ್ ಬದಲು ವೋಟರ್ ಐಡಿ ಬಳಕೆ? ಕೇಂದ್ರ ಸಚಿವ ಲಲನ್ ಸಿಂಗ್ ಹೇಳಿಕೆಬಸ್ ದರ | ಕಾಂಗ್ರೆಸ್ ಸರ್ಕಾರ ಒಂದು ಕೈಯಲ್ಲಿ ಗ್ಯಾರಂಟಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿದೆ: ಬಿ ವೈ ವಿಜಯೇಂದ್ರಸ್ಟಿಂಗ್ ಆಪರೇಷನ್ ಪರಿಣಾಮ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದೆ – ಆರ್. ಅಶೋಕ್ಸಾಲು ಸಮಸ್ಯೆಗಳು ದತ್ತಾಂಶ ಹಂಚಿಕೊಳ್ಳದ ಕೇಂದ್ರ ಚುನಾವಣಾ ಆಯೋಗ – GBA ಚುನಾವಣೆ ಇನ್ನಷ್ಟು ವಿಳಂಬಬಿಜೆಪಿಯ ಫಾರಿನ್‌ ಫಂಡ್‌ ಕಥೆರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯ 5000 ಕೋಟಿ ಹಣವನ್ನು ಮಂಗಮಾಯ ಮಾಡಿದೆ: ಜೆಡಿಎಸ್‌ ಆರೋಪ

ಬಿಜೆಪಿ ಪ್ರತಿಭಟನೆಯಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಪ್ರಕರಣಕ್ಕೆ ಹೈಕೋರ್ಟ್ ತೆರೆ; ಆರೋಪಿಯ ವಿರುದ್ಧದ ಕೇಸ್ ರದ್ದುಗೊಳಿಸಿದ ಜ.ಶ್ರೀಶಾನಂದ

PPeepal Media Desk

Peepal Media Desk ಕಾನೂನು

• 1 ನಿಮಿಷದ ಓದು

ಬಿಜೆಪಿ ಪ್ರತಿಭಟನೆಯಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಪ್ರಕರಣಕ್ಕೆ ಹೈಕೋರ್ಟ್ ತೆರೆ; ಆರೋಪಿಯ ವಿರುದ್ಧದ ಕೇಸ್ ರದ್ದುಗೊಳಿಸಿದ ಜ.ಶ್ರೀಶಾನಂದ

ಬೆಂಗಳೂರು: ಮಂಡ್ಯದಲ್ಲಿ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯ ವೇಳೆ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಘೋಷಣೆ ಉದ್ದೇಶಪೂರ್ವಕವಾಗಿ ಕೂಗಿದ್ದಲ್ಲ, ಪ್ರತಿಭಟನೆಯ ಭರದಲ್ಲಿ ‘ಪಾಕಿಸ್ತಾನ್ ಮುರ್ದಾಬಾದ್’ ಎನ್ನುವ ಬದಲು ತಪ್ಪಾಗಿ ‘ಜಿಂದಾಬಾದ್’ ಪದ ಬಳಕೆಯಾಗಿರಬಹುದು ಎಂಬ ಅರ್ಜಿದಾರರ ವಾದವನ್ನು ನ್ಯಾಯಾಲಯ ಪರಿಗಣಿಸಿದೆ.

ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಏಕಸದಸ್ಯ ಪೀಠವು ಅಕ್ಟೋಬರ್ 28ರಂದು ಈ ಆದೇಶ ಹೊರಡಿಸಿದ್ದು, ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರು ಉದ್ದೇಶಪೂರ್ವಕವಾಗಿ ಪಾಕಿಸ್ತಾನದ ಪರ ಘೋಷಣೆ ಕೂಗಿರುವ ಸಾಧ್ಯತೆ ಊಹಿಸಲೂ ಕಷ್ಟ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಏನಿದು ಪ್ರಕರಣ?
2022ರ ಡಿಸೆಂಬರ್ 18ರಂದು ಮಂಡ್ಯದಲ್ಲಿ ಬಿಜೆಪಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಕೆಲವರು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಕನ್ನಂಬಾಡಿ ಕುಮಾರ್ ಎಂಬುವವರು ದೂರು ನೀಡಿದ್ದರು. ಪ್ರತಿಭಟನೆಯ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ವೀಕ್ಷಿಸಿದ ಬಳಿಕ ತಮಗೆ ಮಾನಸಿಕವಾಗಿ ಆಘಾತವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

ದೂರಿನ ಆಧಾರದಲ್ಲಿ ಮಂಡ್ಯ ಪಶ್ಚಿಮ ಠಾಣೆ ಪೊಲೀಸರು 2024ರಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153B ಮತ್ತು 505(1)(b) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಆರೋಪಿಯ ವಾದವೇನು?
ಪ್ರಕರಣ ರದ್ದುಗೊಳಿಸುವಂತೆ ಕೋರಿ ಡಿ.ಎಸ್. ರವಿಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರತಿಭಟನೆಯ ಸಂದರ್ಭದಲ್ಲಿ ಘೋಷಣೆ ಕೂಗುವ ಭರದಲ್ಲಿ ‘ಪಾಕಿಸ್ತಾನ್ ಮುರ್ದಾಬಾದ್’ ಎನ್ನುವ ಬದಲು ತಪ್ಪಾಗಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಉಚ್ಚರಿಸಲಾಗಿದೆ. ಇದರಲ್ಲಿ ಯಾವುದೇ ದುರುದ್ದೇಶವಿರಲಿಲ್ಲ ಅಥವಾ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶ ಇರಲಿಲ್ಲ ಎಂದು ಅವರ ಪರ ವಕೀಲರು ವಾದಿಸಿದ್ದರು.

ಆದರೆ, ದೂರುದಾರರು ಸಲ್ಲಿಸಿದ್ದ ವಿಡಿಯೋದಲ್ಲಿ ವಿವಾದಿತ ಘೋಷಣೆ ಸ್ಪಷ್ಟವಾಗಿ ಕೇಳಿಸುತ್ತದೆ. ಹೀಗಾಗಿ ಪ್ರಕರಣದ ತನಿಖೆ ಮುಂದುವರಿಯಬೇಕು ಎಂದು ರಾಜ್ಯ ಸರ್ಕಾರ ನ್ಯಾಯಾಲಯದಲ್ಲಿ ಆಕ್ಷೇಪ ವ್ಯಕ್ತಪಡಿಸಿತ್ತು.

ಪ್ರಕರಣ ರದ್ದತಿಗೆ ನ್ಯಾಯಾಲಯ ನೀಡಿದ ಕಾರಣಗಳೇನು?
ಘಟನೆಯಾಗಿ ಸುಮಾರು ಎರಡು ವರ್ಷಗಳ ಬಳಿಕ ದೂರು ದಾಖಲಿಸಿರುವುದನ್ನು ನ್ಯಾಯಾಲಯ ಗಮನಿಸಿದೆ. ತನಿಖೆಯಲ್ಲಿಯೂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರ ಗುರುತು ಹಾಗೂ ವಿವಾದಿತ ಘೋಷಣೆಯಿಂದ ನಿರ್ದಿಷ್ಟ ಸಮುದಾಯ ಅಥವಾ ಸಾರ್ವಜನಿಕ ವಲಯದಲ್ಲಿ ಅಶಾಂತಿ ಉಂಟಾಗಿರುವುದಕ್ಕೆ ಅಗತ್ಯವಾದ ಸಾಕ್ಷ್ಯಾಧಾರಗಳು ಪತ್ತೆಯಾಗಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಇದರೊಂದಿಗೆ, ಐಪಿಸಿಯ ಸೆಕ್ಷನ್ 505(1)(b) ಅಡಿಯಲ್ಲಿ ವಿಚಾರಣೆ ನಡೆಸಲು ಅಗತ್ಯವಿದ್ದ ಪೂರ್ವಾನುಮತಿಯನ್ನು ಪಡೆಯದೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಪ್ರಕರಣವನ್ನು ಪರಿಗಣನೆಗೆ ತೆಗೆದುಕೊಂಡಿರುವುದನ್ನೂ ಹೈಕೋರ್ಟ್ ಆಕ್ಷೇಪಿಸಿದೆ.

ಸೆಕ್ಷನ್ 153B ಅಡಿಯಲ್ಲಿ ಅಪರಾಧ ಸಾಬೀತುಪಡಿಸಲು ಅಗತ್ಯವಿರುವ ಅಂಶಗಳು ಪ್ರಕರಣದಲ್ಲಿ ಕಂಡುಬಂದಿಲ್ಲ ಎಂದು ಹೇಳಿದ ನ್ಯಾಯಪೀಠ, ಕಾನೂನು ಪ್ರಕ್ರಿಯೆಯನ್ನು ಮುಂದುವರಿಸುವುದು ಅನಗತ್ಯವಾಗುತ್ತದೆ ಎಂಬ ನಿರ್ಧಾರಕ್ಕೆ ಬಂದಿದೆ.

ಅಂತಿಮವಾಗಿ ಡಿ.ಎಸ್. ರವಿಕುಮಾರ್ ವಿರುದ್ಧ ಮಂಡ್ಯ ನ್ಯಾಯಾಲಯದಲ್ಲಿ ಬಾಕಿ ಇದ್ದ ಕ್ರಿಮಿನಲ್ ಪ್ರಕ್ರಿಯೆಗಳನ್ನು ರದ್ದುಗೊಳಿಸಿ ಅರ್ಜಿಯನ್ನು ಪುರಸ್ಕರಿಸಿದೆ.

PPeepal Media Desk

Peepal Media Desk

Peepal Media · ಕಾನೂನು ವಿಭಾಗ

ಸಂಬಂಧಿತ ಸುದ್ದಿಗಳು