ಬೆಂಗಳೂರು : ಇಂಡಿಗೋ (Indigo ) ಸಂಸ್ಥೆಯ ಗೊಂದಲ ಬಗೆಹರಿಯುವ ಲಕ್ಷಣಗಳೇ ಬಗೆಹರಿಯುತ್ತಿಲ್ಲ. ಪ್ರಯಾಣಿಕರಂತೂ (Passengers) ಕಂಗಾಲಾಗಿದ್ದಾರೆ.
ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 121 ವಿಮಾನಗಳ ಹಾರಾಟ ರದ್ದಾಗಿದೆ.ಕಳೆದ ಕೆಲವು ದಿನಗಳಿಂದ ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯಥಯ ಉಂಟಾಗಿ ಪ್ರಯಾಣಿಕರಿಗೆ ತೀವ್ರ ಸಮಸ್ಯೆ ಉಂಟಾಗಿದೆ.ಇಂಡಿಗೋ ಸಂಸ್ಥೆ ಸುಮಾರು 121 ವಿಮಾನಗಳ ಹಾರಾಟ ರದ್ದು ಮಾಡಿದೆ. ವಿಮಾನ ರದ್ದು ಬಗ್ಗೆ ಮುಂಚಿತವಾಗಿ ಪ್ರಯಾಣಿಕರಿಗೆ ಸಂದೇಶ ನೀಡಿದೆ.ದೆಹಲಿ, ಲಖನೌ, ಮುಂಬೈ, ಹೈದರಾಬಾದ್, ಭುವನೇಶ್ವರ, ರಾಯಪುರ, ಪಾಟ್ನಾ ಹಾಗು ಅಮೃತಸರಕ್ಕೆ ತರಬೇಕಿದ್ದ ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ.
ಪ್ರಯಾಣಿಕರಿಗೆ ಮೊದಲೇ ಸಂದೇಶ ರವಾನಿಸಿದ್ದರಿಂದ ಏರ್ಪೋರ್ಟ್ ನಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ. ಈಗಾಗಲೇ ಇಂಡಿಗೋ 600ಕೋಟಿಗೂ ಹೆಚ್ಚು ಟಿಕೆಟ್ ಮೊತ್ತವನ್ನು ಪ್ಯಾಸೆಂಜರ್ಸ್ ಗೆ ಮರುಪಾವತಿ ಮಾಡಿದ್ದು, ಸಮಗ್ರ ತನಿಖೆಗೆ ಕೇಂದ್ರ ಸರಕಾರ ಕೂಡ ಅದೇಶಿಸಿದೆ.
