Home ಬ್ರೇಕಿಂಗ್ ಸುದ್ದಿ ಹಾಸನ ಹಾಸನದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ಪರೀಶೀಲನೆ – ನಾಗಲಕ್ಷ್ಮೀ ಚೌಧರಿ

ಹಾಸನದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ಪರೀಶೀಲನೆ – ನಾಗಲಕ್ಷ್ಮೀ ಚೌಧರಿ

ಹಾಸನ: ನಗರದ  ವೈದ್ಯಕೀಯ ಮಹಾವಿದ್ಯಾಲಯಕ್ಕೆ  ಇಂದು  ಭೇಟಿ ನೀಡಿದ ಡಾ.ನಾಗಲಕ್ಷ್ಮೀ ಚೌಧರಿ ಅವರು ಅಲ್ಲಿನ ಸೆಕ್ಯೂರಿಟಿ ಹಾಗೂ ಇತರ ಸಿಬ್ಬಂದಿಗಳ ಜೊತೆ ಸಮಾಲೋಚನೆ ನಡೆಸಿದರು.  ನಂತರ  ಹಾಸ್ಟೆಲ್ ಗಳಿಗೂ ಭೇಟಿ ನೀಡಿ ವಿದ್ಯಾರ್ಥಿನಿಯರ ಕಷ್ಟಗಳನ್ನು ಆಲಿಸಿದರು. ಬಳಿಕ ಪೊಲೀಸ್ ಠಾಣೆಗಳಿಗೂ ಭೇಟಿ ನೀಡಿದ ಅವರು, ಅಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದರು. ಹಾಗೆಯೇ  ಅವುಗಳ ವಿರುದ್ಧ ದಾಖಲಾಗಿರುವ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿದರು.ಇನ್ನೂ ಮುಂದಿನ ಎರಡು ದಿನಗಳ ಕಾಲ ಹಾಸನದಲ್ಲಿ ಮಹಿಳಾ ಆಯೋಗದ ಅಧ್ಯಕ್ಷರಾದ  ಡಾ.ನಾಗಲಕ್ಷ್ಮೀ ಚೌಧರಿ ವಾಸ್ತವ ಇರಲಿದ್ದು, ಜಿಲ್ಲೆಯ ಮಹಿಳೆಯರ ಸಮಸ್ಯೆಗಳ ಕುರಿತು ದೂರುಗಳಿದ್ದಲ್ಲಿ ನೇರವಾಗಿ ಅವರನ್ನು ಸಂಪರ್ಕಿಸಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದಾಗಿದೆ.

You cannot copy content of this page

Exit mobile version