ಬೆಳಗಾವಿ: ನವೆಂಬರ್ 3ರಂದು ಬೆಳಗಾವಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಸಾರಿಗೆ ಸಚಿವ ಶ್ರೀರಾಮುಲು, ʼರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 10ಲಕ್ಷ ಕಿಲೋಮೀಟರ್ ಗೂ ಹೆಚ್ಚು ಸಂಚರಿಸಿರುವ ಸುಮಾರು 30 ಸಾವಿರ ಬಸ್ ಗಳನ್ನು ಒಂದೊಂದಾಗಿಯೇ ಹಿಂದಕ್ಕೆ ಪಡಿದು ಹೊಸ ಬಸ್‌ಗಳನ್ನು ಖರೀದಿಸಲಾಗುವುದುʼ ಎಂದು ಹೇಳಿದ್ದಾರೆ.
ʼಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಸಾರಿಗೆ ಸಿಬ್ಬಂದಿಯ ವೇತನಕ್ಕಾಗಿ ಸರ್ಕಾರದಿಂದ 4000 ಕೋಟಿ ರುಪಾಯಿಗಳನ್ನು ಅನುದಾನ ನೀಡಲಾಗಿತ್ತು. ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ ಸಾರಿಗೆ ಸಿಬ್ಬಂದಿ ಕುಟುಂಬಕ್ಕೆ ಅನುಕಂಪದ ಆಧಾರದ ಮೇಲೆ ಉದ್ಯೋಗಾವಕಾಶ ಸೇರಿದಂತೆ ಅಗತ್ಯ ನೆರವನ್ನು ನೀಡಲಾಗುವುದುʼ ಎಂದು ತಿಳಿಸಿದರು.
ʼಕೊರೋನಾ ಕಾರಣದಿಂದ ಸಾರಿಗೆ ಸಂಸ್ಥೆ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿತ್ತು. ಆದರೂ ಪ್ರಯಾಣಿಕರ ಅನುಕೂಲಕ್ಕಾಗಿ 3500 ಬಸ್‌ಗಳನ್ನು ಖರೀದಿಸಿದ್ದು, ಇನ್ನಷ್ಟು ಬಸ್‌ಗಳನ್ನು ಖರೀದಿಸಲಾಗುವುದು. 10 ಲಕ್ಷ ಕಿ.ಮೀ ಚಲಿಸಿರುವಂತಹ ಬಸ್‌ಗಳು ಬಹಳಷ್ಟು ರಿಪೇರಿಯ ಸ್ಥಿತಿಯಲ್ಲಿವೆ. ಈ ರೀತಿ ರಿಪೇರಿಯಾಗಿರುವ ಬಸ್ ಗಳನ್ನು ಒಂದೊಂದಾಗಿಯೇ ಹಿಂದಕ್ಕೆ ಪಡಿದು ಹೊಸ ಬಸ್‌ಗಳನ್ನು ಖರೀದಿಸಲಾಗುವುದುʼ ಎಂದು ಶ್ರೀರಾಮುಲು ಹೇಳಿದ್ದಾರೆ.