ಬೆಳಗಾವಿ: ಫಾಲ್ಸ್ ಬಳಿ ಸೆಲ್ಫೀ ತೆಗೆದುಕೊಳ್ಳಲು ಹೋಗಿ ನಾಲ್ವರು ಬೆಳಗಾವಿ ಮೂಲದ ಯುವತಿಯರು ನೀರುಪಾಲಗಿರುವ ಘಟನೆ ನಡೆದಿದೆ.
ಬೆಳಗಾವಿಯಿಂದ ಪ್ರವಾಸಕ್ಕೆಂದು 40 ವಿದ್ಯಾರ್ಥಿಗಳು, ಕರ್ನಾಟಕದ ಹಾಗೂ ಮಹಾರಾಷ್ಟ್ರ ಗಡಿ ಭಾಗದಲ್ಲಿರುವ ಕಿತವಾಡ ಫಾಲ್ಸ್ ವೀಕ್ಷಣೆ ಮಾಡಲು ತೆರಳಿದ್ದಾರೆ. ಈ ಸಮಯದಲ್ಲಿ ಫಾಲ್ಸ್ ಬಳಿ ಸೆಲ್ಫೀ ತೆಗೆದುಕೊಳ್ಳಲು ಹೋದ ಐವರು ವಿದ್ಯಾರ್ಥಿಗಳು ಕಾಲು ಜಾರಿ ಬಿದ್ದಿದ್ದಾರೆ. ಈ ದುರಂತದಲ್ಲಿ ನಾಲ್ವರು ಯುವತಿಯರು ಮೃತಪಟ್ಟಿದ್ಧು, ಓರ್ವ ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎನ್ನಲಾಗುತ್ತಿದೆ.
ಆಸಿಯಾ ಮುಜಾವರ್(17), ಕುದ್ ಶಿಯಾ ಹಾಸಂ(20), ರುಕ್ಕಾ ಶಾರ್ ಬಿಸ್ತಿ(20) ಮತ್ತು ತಸ್ಮಿಯಾ(20) ಮೃತ ಪಟ್ಟ ಯುವತಿಯರು ಎಂದು ಗುರುತಿಸಲಾಗಿದೆ. ಈ ಘಟನೆಯ ಬಗ್ಗೆ ವಿಷಯ ತಿಳಿದ ಪೋಷಕರು ಬೆಳಗಾವಿ ಜಿಲ್ಲಾಸ್ಪತ್ರೆಯ ಬಳಿ ಹೋಗಿದ್ದು, ಕುಟುಂಬಸ್ಥರ ದುಃಖ ಮುಗಿಲು ಮುಟ್ಟಿದೆ.