Home ದೇಶ ರೆಹಮಾನ್ ಏನು ತಪ್ಪು ಮಾಡಿದ್ದಾರೆ?: ಕೆಕೆಆರ್ ಪರ ಬ್ಯಾಟ್ ಬೀಸಿದ ತರೂರ್; ಬಿಸಿಸಿಐ ನಿರ್ಧಾರಕ್ಕೆ ತೀವ್ರ...

ರೆಹಮಾನ್ ಏನು ತಪ್ಪು ಮಾಡಿದ್ದಾರೆ?: ಕೆಕೆಆರ್ ಪರ ಬ್ಯಾಟ್ ಬೀಸಿದ ತರೂರ್; ಬಿಸಿಸಿಐ ನಿರ್ಧಾರಕ್ಕೆ ತೀವ್ರ ವಿರೋಧ

0

ಐಪಿಎಲ್ 2026ರ ಹರಾಜಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ (KKR) ತಂಡವು ಬಾಂಗ್ಲಾದೇಶದ ವೇಗಿ ಮುಸ್ತಫಿಜುರ್ ರೆಹಮಾನ್ ಅವರನ್ನು ಆಯ್ಕೆ ಮಾಡಿರುವುದಕ್ಕೆ ಸಂಬಂಧಿಸಿದ ವಿವಾದದ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿಗಳ ಹಿನ್ನೆಲೆಯಲ್ಲಿ ರೆಹಮಾನ್ ಅವರನ್ನು ತಂಡದಿಂದ ಕೈಬಿಡುವಂತೆ ಬಿಸಿಸಿಐ (BCCI) ಸೂಚಿಸಿರುವುದು ರಾಜಕೀಯ ಪ್ರೇರಿತ ಎಂದು ಅವರು ಟೀಕಿಸಿದ್ದಾರೆ.

ಕ್ರೀಡೆಯನ್ನು ರಾಜಕೀಯಗೊಳಿಸುವುದು ಅತ್ಯಂತ ವಿಷಾದನೀಯ ಎಂದು ಹೇಳಿರುವ ತರೂರ್, ಆಟಗಾರರ ಹರಾಜಿಗೆ ಬಿಸಿಸಿಐ ಮೊದಲು ಒಪ್ಪಿಗೆ ನೀಡಿದ್ದ ಪಟ್ಟಿಯಿಂದಲೇ ಕೆಕೆಆರ್ ಮುಸ್ತಫಿಜುರ್ ಅವರನ್ನು ₹9.20 ಕೋಟಿಗೆ ಖರೀದಿಸಿದೆ ಎಂದು ನೆನಪಿಸಿದ್ದಾರೆ. ತಂಡದ ಮಾಲೀಕರು ಅಥವಾ ಆಟಗಾರರನ್ನು ಈ ರೀತಿ ಗುರಿ ಮಾಡುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಒಬ್ಬ ಆಟಗಾರನನ್ನು ಆತನ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಗೆ ಹೊಣೆಗಾರನನ್ನಾಗಿ ಮಾಡುವುದು ಅಥವಾ ಕ್ರೀಡೆಯಲ್ಲಿ ಧರ್ಮ ಮತ್ತು ರಾಷ್ಟ್ರೀಯತೆಯನ್ನು ಎಳೆದು ತರುವುದು ತಪ್ಪು ಎಂದು ತರೂರ್ ಪ್ರತಿಪಾದಿಸಿದ್ದಾರೆ. ಕೆಕೆಆರ್ ತಂಡದ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಅವರು, ಕ್ರೀಡಾ ಮನೋಭಾವಕ್ಕೆ ಧಕ್ಕೆಯಾಗದಂತೆ ಬಿಸಿಸಿಐ ವರ್ತಿಸಬೇಕು ಎಂದು ಆಗ್ರಹಿಸಿದ್ದಾರೆ.

You cannot copy content of this page

Exit mobile version