Home ದೇಶ ನಾನು ಈ ಹಿಂದೆ ಎಡಪಂಥೀಯ ಎಕೊ ಚೇಂಬರ್‌ ಒಳಗೆ ಬಂಧಿಯಾಗಿದ್ದೆ: ಶೆಹ್ಲಾ ರಶೀದ್

ನಾನು ಈ ಹಿಂದೆ ಎಡಪಂಥೀಯ ಎಕೊ ಚೇಂಬರ್‌ ಒಳಗೆ ಬಂಧಿಯಾಗಿದ್ದೆ: ಶೆಹ್ಲಾ ರಶೀದ್

0

ಒಂದು ಕಾಲದಲ್ಲಿ ಬಲಪಂಥೀಯ ಟ್ರೋಲರುಗಳ ಕೈಯಲ್ಲಿ ʼತುಕ್ಡೇ ತುಕ್ಡೇ ಗ್ಯಾಂಗ್‌ʼ ಸದಸ್ಯೆ ಎನ್ನಿಸಿಕೊಂಡಿದ್ದ ಶೆಹ್ಲಾ ರಶೀದ್‌, ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರನ್ನು ಹೊಗಳುವ ಮೂಲಕ ಟ್ರೋಲರುಗಳನ್ನು ಅಚ್ಚರಿಯಲ್ಲಿ ಕೆಡವಿದ್ದಾರೆ.

ANI ಸುದ್ದಿ ಸಂಸ್ಥೆಯ ಸ್ಮಿತಾ ಪ್ರಕಾಶ್‌ ಅವರಿಗೆ ನೀಡಿದ ಸಂದರ್ಶನದಲ್ಲಿ ಅವರು “ನಾನು ಈ ಹಿಂದೆ ಎಡಪಂಥೀಯರ ಎಕೋ ಚೇಂಬರ್‌ ಒಳಗಿದ್ದೆ. ಅವರು ಕೊವಿಡ್‌ ಸಂದರ್ಭದಲ್ಲಿ ನಾನು ಲಾಕ್‌ ಡೌನ್‌ ವಿಷಯದಲ್ಲಿ ಕೇಂದ್ರವನ್ನು ಬೆಂಬಲಿಸಿದ್ದಕ್ಕಾಗಿ ನನ್ನ ಮೇಲೆ ಮುಗಿಬಿದ್ದಿದ್ದರು” ಎಂದು ಹೇಳಿದ್ದಾರೆ.

ಮೋದಿ ಹಾಗೂ ಅಮಿತ್‌ ದೇಶವ್ಯಾಪಿ ಹಾಗೂ ಹೊರದೇಶಗಳಿಂದಲೂ ಸಾಕಷ್ಟು ವಿಮರ್ಶೆಗಳನ್ನು ಸಹಿಸಿಕೊಂಡಿದ್ದಾರೆ. ಅವರು ದೇಶಕ್ಕಾಗಿ ದುಡಿಯುತ್ತಿರುವುದನ್ನು ನಾವು ಗುರುತಿಸಬೇಕು. ಇಂದು ನಾವು ಇಂಗ್ಲಂಡನ್ನು ಹಿಂದಿಕ್ಕಿ ಆರ್ಥಿಕ ಶಕ್ತಿಯಾಗಿ ಬೆಳೆದಿರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದಿದ್ದಾರೆ.

2020ರಲ್ಲಿ ನನಗೆ ʼನಾವುʼ ಕೇವಲ ಟೀಕಿಸಲೇ ಬೇಕು ಎನ್ನುವ ಉದ್ದೇಶಕ್ಕಾಗಿ ಕೇಂದ್ರವನ್ನು ಟೀಕಿಸುತ್ತಿದ್ದೇವೆ ಎನ್ನಿಸತೊಡಗಿತು. ನಾನು ಕೊವಿಡ್‌ ವಿಷಯದಲ್ಲಿ ಕೇಂದ್ರ ಸರ್ಕಾರದ ಪರವಾಗಿ ಮಾತನಾಡಿದಾಗ ʼಅವರುʼ ನನ್ನ ಬಾಯಿ ಮುಚ್ಚಿಸಲು ನೋಡಿದರು.

ಲಾಕ್‌ ಡೌನ್‌ ವಿಷಯದಲ್ಲಿ ಕೇಂದ್ರಕ್ಕೆ ಲಾಕ್‌ ಡೌನ್‌ ಮಾಡುವುದನ್ನು ಬಿಟ್ಟು ಬೇರೆ ಅಯ್ಕೆಯೇ ಇದ್ದಿರಲಿಲ್ಲ. ಲಾಕ್‌ ಡೌನ್‌ ಹೇರದ ಅಮೇರಿಕಾದ ಸ್ಥಿತಿ ಏನಾಗಿತ್ತು ಎನ್ನುವುದು ನಮಗೆಲ್ಲ ತಿಳಿದಿದೆ ಎಂದು ಅವರು ಹೇಳಿದ್ದಾರೆ.

ಸಾಮಾಜಿಕ ಕಾರ್ಯಕರ್ತೆ ಹಾಗೂ ಸಂಶೋಧಕಿಯಾಗಿರುವ ಶೆಹ್ಲಾ 2016ರಲ್ಲಿ JNU ಪ್ರಕರಣದಲ್ಲಿ ಕನಯ್ಯ ಕುಮಾರ್‌ ಪರವಾಗಿ ಮಾತನಾಡುವ ಮೂಲಕ ಸುದ್ದಿಯ ಮುನ್ನೆಲೆಗೆ ಬಂದಿದ್ದರು. ಕಾಶ್ಮೀರಕ್ಕೆ ಸಂಬಂಧಪಟ್ಟ ವಿಷಯದಲ್ಲಿ ಅಂದು ಕನಯ್ಯ ಕುಮಾರ್‌ ವಿರುದ್ಧ ಕೇಸ್‌ ಆಗಿತ್ತು.

ಮೊನ್ನೆಯ ಸಂದರ್ಶನದಲ್ಲಿ ಶೆಹ್ಲಾ ಕಾಶ್ಮೀರದಲ್ಲಿ ಪ್ರಸ್ತುತ ಪರಿಸ್ಥಿತಿ “ಉತ್ತಮಗೊಂಡಿದೆ” ಎಂದಿದ್ದಾರೆ.

ಮುಸ್ಲಿಮರ ವಿರುದ್ಧದ ತಾರತಮ್ಯದ ಕುರಿತು ಕೇಳಿದಾಗ ಅವರು, “ಭಾರತದಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರಲ್ಲ. ಅವರು ಇಲ್ಲಿ ಎರಡನೇ ಅತಿ ದೊಡ್ಡ ಜನಸಂಖ್ಯೆ. ಇದನ್ನು ಹಲವು ಮುಸ್ಲಿಂ ವಿಧ್ವಾಂಸರು ಸಹ ಪ್ರತಿಪಾದಿಸಿದ್ದಾರೆ” ಎಂದು ಅವರು ಹೇಳಿದ್ದಾರೆ.

ಕೋಮುವಾದದ ಕುರಿತು ಮಾತನಾಡಿದ ಅವರು “ದೇಶದಲ್ಲಿ ಕೋಮುವಾದ ಇದೆಯೇ ಎಂದು ಕೇಳಿದರೆ ಹೌದು ಎನ್ನಬೇಕಾಗುತ್ತದೆ. ಎಪ್ಪತ್ತು ವರ್ಷಗಳ ಹಿಂದೆ ದೇಶ ವಿಭಜನೆಯಾಗಿದ್ದೇ ಧಾರ್ಮಿಕ ಆಧಾರದಲ್ಲಿ. 2014ರ ನಂತರ ಅಥವಾ ಬಿಜೆಪಿಯಿಂದ ಕೋಮುವಾದ ಇದೆಯೆನ್ನುವುದು ಸರಿಯಲ್ಲ. ಕೋಮುವಾದಕ್ಕೆ ದೀರ್ಘ ಇತಿಹಾಸವಿದೆ. ಅದು ಮುಂದೆಯೂ ಇರುತ್ತದೆ. ನಾವು ಅತಿಯಾದ ನಕರಾತ್ಮಕತೆಯನ್ನು ಆಚರಿಸಿದಷ್ಟು, ಸಕಾರಾತ್ಮಕತೆಯನ್ನು ಆಚರಿಸುವುದಿಲ್ಲ” ಎಂದು ಅವರು ಹೇಳಿದರು.

ಭಾರತವು ಅತಿದೊಡ್ಡ ದೇಶವಾಗಿದ್ದು, ಈ ಹಿಂದೆಯೂ ಮುಸ್ಲಿಮರ ವಿರುದ್ಧ ಗುಂಪು ಹತ್ಯೆ ಮತ್ತು ದುರದೃಷ್ಟಕರ ಹೇಳಿಕೆಗಳನ್ನು ನೀಡಿದ ಘಟನೆಗಳು ನಡೆದಿವೆ ಎಂದು ಶೆಹ್ಲಾ ಹೇಳಿದರು.

“ಹೌದು ಮುಸ್ಲಿಂರಾಗಿರುವುದಕ್ಕಾಗಿ ನಮ್ಮನ್ನು ನೋಯಿಸಲಾಗುತ್ತದೆ. ಹಾಗೆಂದು ಅದರ ಕಡೆಯೇ ಗಮನ ನೀಡಲಾಗದು. ನಕರಾತ್ಮಕತೆಯತ್ತ ಇನ್ನೆಷ್ಟು ಗಮನ ಕೊಡುವುದು? ಅದನ್ನೇ ಮಾಡುತ್ತಾ ಹಲವು ವರ್ಷಗಳನ್ನು ಹಾಳುಗೆಡವಿದ್ದೇವೆ. ಈ ದೇಶ ಬೇರೆಯವರಿಗೆ ಎಷ್ಟು ಸೇರಿದ್ದೋ ನಮಗೂ ಅಷ್ಟೇ ಸೇರಿದೆ.”

“ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶ್ರೀನಗರಕ್ಕೆ ಭೇಟಿ ನೀಡಿದಾಗ ಕಾಶ್ಮೀರಿಗಳಿಗೆ ಇದು ಅವರ ದೇಶ ಮತ್ತು ಅವರು ಎಲ್ಲಿ ಬೇಕಾದರೂ ವಾಸಿಸಬಹುದು ಮತ್ತು ಹೋಗಬಹುದು ಎಂದು ಹೇಳಿದ್ದಾರೆ. ಇದು ಅವರ ನಿಖರವಾದ ಮಾತುಗಳು. ಮತ್ತು ನಾವು ಒಂದು ಕ್ಷಣ ಯೋಚಿಸಬೇಕು. ನಾವು ಐತಿಹಾಸಿಕ ಕಾಲಘಟ್ಟದಲ್ಲಿ ಬದುಕುತ್ತಿದ್ದೇವೆ ಎನ್ನುವುದನ್ನು ಒಪ್ಪಿಕೊಳ್ಳಬೇಕು. ಇದೊಂದು ದೇಶದ ಇತಿಹಾಸದ ಪ್ರಮುಖ ಹಂತ. ನಮ್ಮನ್ನು ನಾವು ಅದೃಷ್ಟವಂತರೆಂದು ಪರಿಗಣಿಸಬೇಕು. ಏಕೆಂದರೆ ಇನ್ಯಾವುದೋ ದೇಶದಲ್ಲಿ ವಾಸಿಸುತ್ತಿಲ್ಲ. ನಾವು ಈ ದೇಶದಲ್ಲಿ ವಾಸಿಸುತ್ತಿರುವುದರ ಕುರಿತು ಹೆಮ್ಮೆ ಪಡಬೇಬೇಕು. ಏಕೆಂದರೆ ಇಲ್ಲಿ ಶಾಂತಿಯಿದೆ, ಅಭಿವೃದ್ಧಿಯಿದೆ ಮತ್ತು ನಾವು ನಮ್ಮ ಹಿಂದಿನ ವಸಾಹತುಶಾಹಿಗಳಾದ ಇಂಗ್ಲೆಂಡನ್ನು ಹಿಂದಿಕ್ಕಿ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆದಿದ್ದೇವೆ.” ಎಂದು ಅವರು ಹೇಳಿದರು.

You cannot copy content of this page

Exit mobile version