ಭಾರತದ ಮೇಲೆ ದುಪ್ಪಟ್ಟು ಸುಂಕ ವಿಧಿಸಿದ ಮೇಲೂ ಸಹ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ದೋಸ್ತಿ ಜಪ ಮಾಡಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ನನ್ನ ಅತ್ಯಾಪ್ತ ಸ್ನೇಹಿತ. ಹೀಗಾಗಿ ಭಾರತ ಅಮೇರಿಕಾ ಬಾಂಧವ್ಯ ವೃದ್ಧಿಗೆ ನರೇಂದ್ರ ಮೋದಿ ಸಹಕಾರ ಅತಿ ಮುಖ್ಯ ಎಂದು ಹೇಳಿದ್ದಾರೆ.
“ಭಾರತದ ಪ್ರಧಾನಿ ನರೇಂದ್ರ ಮೋದಿ ಎರಡು ತಿಂಗಳ ಹಿಂದೆ ಅಮೇರಿಕಾದಲ್ಲೇ ಇದ್ದರು. ಅವರು ನಮ್ಮ ಆಪ್ತರು. ಆದರೆ ಭಾರತ ರಷ್ಯಾದಿಂದ ಇಷ್ಟೊಂದು ತೈಲ ಖರೀದಿಸುತ್ತಿರುವುದು ನನಗೆ ತುಂಬಾ ನಿರಾಶೆಯಾಗಿದೆ. ಮತ್ತು ನಾನು ಇದನ್ನು ಅವರಿಗೆ ಮನವರಿಕೆ ಮಾಡಿದ್ದೇನೆ. ನಾವು ಭಾರತದ ಮೇಲೆ ಬಹಳ ದೊಡ್ಡ ಸುಂಕವನ್ನು ವಿಧಿಸಿದ್ದೇವೆ, 50% ಸುಂಕ, ತುಂಬಾ ಹೆಚ್ಚಿನ ಸುಂಕವೇ. ನಾನು (ಪ್ರಧಾನಿ ನರೇಂದ್ರ) ಮೋದಿ ಅವರೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತೇನೆ.. ಹೀಗಾಗಿ ಮತ್ತೊಮ್ಮೆ ಅವರೊಂದಿಗೆ ಮಾತುಕತೆ ನಡೆಸುತ್ತೇನೆ’ ಎಂದು ಟ್ರಂಪ್ ಹೇಳಿದ್ದಾರೆ.
ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿಕೆ ಭಾರತ ಮತ್ತು ಅಮೆರಿಕದ ನಡುವೆ ಸಕಾರಾತ್ಮಕ ದೃಷ್ಟಿಕೋನ ಹೊಂದಿದೆ ಎಂದಿದ್ದಾರೆ.
ಭಾರತದ ಮೇಲೆ ತೆರಿಗೆ ವಿಧಿಸಿದ ನಂತರ, ಅವರು ಪ್ರಧಾನಿ ಮೋದಿಯವರನ್ನು ತಮ್ಮ ಉತ್ತಮ ಗೆಳೆಯ ಎಂದು ಹೊಗಳಿದ್ದರು. ಟ್ರಂಪ್ ಅವರ ಭಾರತ-ಅಮೆರಿಕ ಸಂಬಂಧಗಳ ಬಗ್ಗೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.