ಬೆಂಗಳೂರು : ಕೆಜಿಎಫ್-2 ಸಿನಿಮಾದ ಹಾಡುಗಳನ್ನು ಭಾರತ್ ಜೋಡೋ ಪ್ರಚಾರಕ್ಕೆ ಬಳಸುವ ಮೂಲಕ ಕೃತಿಸ್ವಾಮ್ಯ ಉಲ್ಲಂಘನೆ ಕುರಿತು ಏಕಸದಸ್ಯ ಪೀಠದ ಆದೇಶ ಪಾಲಿಸದೇ ಇರುವುದನ್ನು ಪ್ರಶ್ನಿಸಿ ಎಂಆರ್‌ಟಿ ಮ್ಯೂಸಿಕ್‌ನಿಂದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೇರಿದಂತೆ ಮೂವರ ವಿರುದ್ಧ ಶುಕ್ರವಾರದಂದು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿದೆ.
ಕೆಜಿಎಫ್(KGF) ಚಲನಚಿತ್ರದ ಹಿಂದಿ ಅವತರಿಣಿಕೆಯ ಹಾಡುಗಳನ್ನು ಭಾರತ್ ಜೋಡೋ ಪ್ರಚಾರದಲ್ಲಿ ಬಳಸಿಕೊಂಡಿರುವುದಕ್ಕಾಗಿ ಎಂ.ಆರ್.ಟಿ. ಮ್ಯೂಸಿಕ್ ಸಂಸ್ಥೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹಾಗು ಸಾಮಾಜಿಕ ಜಾಲತಾಣ ಮುಖ್ಯಸ್ಥೆ ಸುಪ್ರಿಯಾ ಶ್ರೀನೇತ್ ವಿರುದ್ಧ ನವೆಂಬರ್ 4ರಂದು ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿ FIR ದಾಖಲಿಸಿಲಾಗಿತ್ತು.