ನವದೆಹಲಿ : ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಎಲ್ಲಾ ವಾಹನ ಮಾಲೀಕರು ಹಾಗೂ ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರು ತಮ್ಮ ಮೊಬೈಲ್ ನಂಬರನ್ನು ವಾಹನ ದಾಖಲೆಗಳು ಅಥವಾ ಲೈಸೆನ್ಸ್‌ಗೆ (Licence) ಕಡ್ಡಾಯವಾಗಿ ಲಿಂಕ್ ಮಾಡಿಕೊಳ್ಳುವಂತೆ ಸೂಚಿಸಿದೆ.
ಈ ನಿಯಮವು ದೇಶದ ಎಲ್ಲಾ ರಾಜ್ಯಗಳಲ್ಲಿ ಜಾರಿಗೆ ಬರುವುದರೊಂದಿಗೆ, ಪಾರದರ್ಶಕತೆ, ಸುಗಮ ಸಂವಹನ ಮತ್ತು ಡಿಜಿಟಲ್ ದಾಖಲೆ ನಿರ್ವಹಣೆಗೆ ನೆರವಾಗಲಿದೆ. ಸಚಿವಾಲಯ ಈಗಾಗಲೇ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ವಾಹನ ಸೇವೆಗಳು, ದಂಡಗಳು ಹಾಗೂ ಇತರ ಅಧಿಸೂಚನೆಗಳನ್ನು ನೇರವಾಗಿ ನೋಂದಾಯಿತ ಮೊಬೈಲ್ ನಂಬರಿಗೆ ಕಳುಹಿಸಲು ಈ ವ್ಯವಸ್ಥೆಯನ್ನು ಬಳಸಲಾಗುತ್ತದೆ. ಇದೀಗ ಭಾರತದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು, ಡಿಜಿಟಲ್ ಸಾರಿಗೆ ಸೇವೆಗಳ ಅಧಿಕೃತ ವೇದಿಕೆಯಾದ ಪರಿವಾಹನ್ ಪೋರ್ಟಲ್ ನಲ್ಲಿ ಚಾಲಕರ ಪರಿವಾಹನ್ ನಲ್ಲಿ ವಾಹನ ನೋಂದಣಿ ಸಂಖ್ಯೆ, ಚಾಸಿಸ್ ಮತ್ತು ಎಂಜಿನ್ ಸಂಖ್ಯೆಗಳು, ಮಾಲೀಕರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ಹಾಕಿ ಅಥವಾ ಹೊಸ ಅಕೌಂಟ್ ಅನ್ನು ಕ್ರಿಯೇಟ್ ಮಾಡುವಂತೆ ತಿಳಿಸಲಾಗಿದೆ. ನೀವು ಈಗಾಗಲೇ ನಿಮ್ಮ ವಾಹನ ಅಥವಾ ಲೈಸೆನ್ಸ್‌ಗೆ ಮೊಬೈಲ್ ನಂಬರನ್ನು ಲಿಂಕ್ ಮಾಡಿಕೊಂಡಿದ್ದರೆ, ಮತ್ತೆ ಲಿಂಕ್ ಮಾಡುವ ಅವಶ್ಯಕತೆಯಿಲ್ಲ.. ಒಂದು ವೇಳೆ ನಿಮ್ಮ ಮೊಬೈಲ್ ನಂಬರ್ ಬದಲಾಯಿಸಿದ್ದರೆ ಅಥವಾ ಇನ್ನೂ ಲಿಂಕ್ ಮಾಡದಿದ್ದರೆ, ಪರಿವಾಹನ್ ವೆಬ್‌ಸೈಟ್ (parivahan.gov.in) ಅಥವಾ mParivahan ಅಪ್ಲಿಕೇಶನ್ ಮೂಲಕ ಹೊಸದಾಗಿ ನೊಂದಾಯಿಸಿಕೊಳ್ಳುವಂತೆ ವಾಹನ ಸವಾರಿಗೆ ಭಾರತ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ.
ಮೊಬೈಲ್ ನಂಬರ್ ಲಿಂಕ್ ಮಾಡುವಾಗ ಆಧಾರ್ ಕಾರ್ಡ್ ಅಥೆಂಟಿಕೇಶನ್ ಕಡ್ಡಾಯವಾಗಿದೆ. ನೀವು ನಿಮ್ಮ ವಾಹನದ ರಿಜಿಸ್ಟ್ರೇಶನ್ ನಂಬರ್, ಎಂಜಿನ್/ಚಾಸಿಸ್ ನಂಬರ್, ಮತ್ತು ಡ್ರೈವಿಂಗ್ ಲೈಸೆನ್ಸ್ ವಿವರಗಳನ್ನು ನಮೂದಿಸಬೇಕು. ನಂತರ, ನಿಮ್ಮ ಆಧಾರ್‌ಗೆ ನೋಂದಾಯಿತ ಮೊಬೈಲ್ ನಂಬರ್‌ಗೆ OTP (ಏಕ-ಸಮಯದ ಪಾಸ್ವರ್ಡ್) ಬರಲಿದೆ, ಅದನ್ನು ನಮೂದಿಸಿ ಪೂರ್ಣಗೊಳಿಸಬೇಕು. ಈ ಪ್ರಕ್ರಿಯೆಯು ಉಚಿತವಾಗಿದೆ ಮತ್ತು ಆನ್‌ಲೈನ್‌ನಲ್ಲಿ ಕೆಲವೇ ನಿಮಿಷಗಳಲ್ಲಿ ಪೂರ್ಣಗೊಳ್ಳುತ್ತದೆ.
ಆನ್‌ಲೈನ್ ಮೂಲಕ ಮೊಬೈಲ್ ನಂಬರ್ ಗಳನ್ನು ಲಿಂಕ್ ಮಾಡುವ ಹಂತ-ಹಂತದ ಪ್ರಕ್ರಿಯೆ:
ದೃಢೀಕರಣ ದಾಖಲೆಯನ್ನು ಡೌನ್‌ಲೋಡ್ ಮಾಡಿ – ಲಿಂಕ್ ಯಶಸ್ವಿಯಾದ ನಂತರ, ಪರಿವಾಹನ್ ಪೋರ್ಟಲ್‌ನಿಂದ ದೃಢೀಕರಣ ದಾಖಲೆ ಪಡೆಯಬಹುದು.
ಪರಿವಾಹನ್ ವೆಬ್‌ಸೈಟ್ ಅಥವಾ ಅಪ್ಲಿಕೇಶನ್ ತೆರೆಯಿರಿ – parivahan.gov.in ಗೆ ಲಾಗಿನ್ ಆಗಿ ಅಥವಾ mParivahan ಅಪ್ ಅನ್ನು ಡೌನ್‌ಲೋಡ್ ಮಾಡಿ.
ಲಿಂಕಿಂಗ್ ಆಯ್ಕೆ ಆರಿಸಿ – “Link Mobile Number” ವಿಭಾಗದಲ್ಲಿ, ವಾಹನ ಅಥವಾ ಲೈಸೆನ್ಸ್‌ಗೆ ಸಂಬಂಧಿಸಿದ ಸರಿಯಾದ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
ಅಗತ್ಯ ವಿವರಗಳನ್ನು ನಮೂದಿಸಿ – ವಾಹನದ ರಿಜಿಸ್ಟ್ರೇಶನ್ ನಂಬರ್, ಲೈಸೆನ್ಸ್ ನಂಬರ್ ಹಾಗೂ ಬೇಡಿಕೆಯ ದಾಖಲೆಗಳನ್ನು ಸಲ್ಲಿಸಿ.
OTP ಮೂಲಕ ದೃಢೀಕರಿಸಿ – ಆಧಾರ್‌ಗೆ ಲಿಂಕ್ ಆಗಿರುವ ನಿಮ್ಮ ಮೊಬೈಲ್‌ಗೆ OTP ಬರುತ್ತದೆ, ಅದನ್ನು ನಮೂದಿಸಿ ಲಿಂಕಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ಮೊಬೈಲ್ ನಂಬರ್ ಲಿಂಕ್ ನಿಂದ ಏನೆಲ್ಲಾ ಉಪಯೋಗ.?
- ತುರ್ತು ಪರಿಸ್ಥಿತಿಯಲ್ಲಿ ನೆರವು : ರಸ್ತೆ ಅಪಘಾತ ಅಥವಾ ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ, ನವೀಕರಿಸಿದ ಸಂಪರ್ಕ ವಿವರಗಳು ಅಧಿಕಾರಿಗಳಿಗೆ ನಿಮ್ಮನ್ನು ಹಾಗೂ ನಿಮ್ಮ ಕುಟುಂಬವನ್ನು ತಕ್ಷಣ ಸಂಪರ್ಕಿಸಲು ನೆರವಾಗುತ್ತವೆ.
- ಕಳ್ಳತನ ಪ್ರಕರಣದಲ್ಲಿ ಸುಲಭ ಪತ್ತೆ : ನಿಮ್ಮ ವಾಹನ ಕಳ್ಳತನವಾದರೆ, ಪೋರ್ಟಲ್‌ನಲ್ಲಿ ನಿಖರವಾದ ಮಾಹಿತಿ ಇರುವುದರಿಂದ ವಾಹನವನ್ನು ಪತ್ತೆಹಚ್ಚುವ ಕಾರ್ಯ ವೇಗವಾಗಿ ನಡೆಯುತ್ತದೆ.
- ಕಾನೂನುಬದ್ಧ ರಕ್ಷಣೆ : ನೀವು ವಾಹನವನ್ನು ಮಾರಾಟ ಮಾಡಿದ ನಂತರ ಮಾಲೀಕತ್ವ ದಾಖಲೆಗಳನ್ನು ನವೀಕರಿಸದಿದ್ದರೆ, ಆ ವಾಹನದಿಂದಾಗುವ ಸಂಚಾರ ನಿಯಮ ಉಲ್ಲಂಘನೆಗಳು ಅಥವಾ ಟೋಲ್ ದಂಡಗಳಿಗೆ ನೀವು ಇನ್ನೂ ಹೊಣೆಗಾರರಾಗಬಹುದು.
- ಸರಾಗ ಸೇವೆಗಳ ಲಾಭ : ವಿಮಾ ನವೀಕರಣ, ರಸ್ತೆ ತೆರಿಗೆ ಪಾವತಿ ಮುಂತಾದ ಸೇವೆಗಳು ನಿಖರ ದಾಖಲೆಗಳಿಂದ ಯಾವುದೇ ವಿಳಂಬವಿಲ್ಲದೆ ಹಾಗೂ ಅಡಚಣೆಗಳಿಲ್ಲದೆ ಲಭ್ಯವಾಗುತ್ತವೆ.
ಹೆಚ್ಚಿನ ಮಾಹಿತಿಗಾಗಿ, ನಿಮ್ಮ ಹತ್ತಿರದ RTO (ರೀಜನಲ್ ಟ್ರಾನ್ಸ್‌ಪೋರ್ಟ್ ಆಫೀಸ್) ಅಥವಾ ಪರಿವಾಹನ್ ಹೆಲ್ಪ್‌ಲೈನ್ ಅನ್ನು ಸಂಪರ್ಕಿಸಬಹುದು. ಈ ಹೊಸ ನಿಯಮವು ಪ್ರತಿಯೊಬ್ಬ ವಾಹನ ಮಾಲೀಕನಿಗೂ ಅನ್ವಯಿಸುತ್ತಿರುವುದರಿಂದ, ದಯವಿಟ್ಟು ನಿಮ್ಮ ಮೊಬೈಲ್ ನಂಬರ್ ಅನ್ನು ತಕ್ಷಣ ಲಿಂಕ್ ಮಾಡಿಕೊಳ್ಳಿ.