ನವದೆಹಲಿ: ಯೋಗ ಗುರು ಬಾಬಾ ರಾಮದೇವ್, ಅವರ ಆಪ್ತ ಬಾಲಕೃಷ್ಣ ಮತ್ತು ಪತಂಜಲಿ ಆಯುರ್ವೇದ ಕಂಪನಿಯು ದಾರಿ ತಪ್ಪಿಸುವ ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಮಾಪಣೆಯನ್ನು ಅಂಗೀಕರಿಸಿರುವ ಸುಪ್ರೀಂ ಕೋರ್ಟ್, ಅವರ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಗೆ ಅಂತಿಮಗೊಳಿಸಿದೆ. ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ಅಂತ್ಯಗೊಳಿಸಿದೆ’ಎಂದು ವಕೀಲ ಗೌತಮ್ ತಾಲುಕ ದಾರ್ ಹೇಳಿದ್ದಾರೆ.
ಬಾಬಾ ರಾಮದೇವ್, ಅವರ ಆಪ್ತ ಬಾಲಕೃಷ್ಣ ಮತ್ತು ಪತಂಜಲಿ ಆಯುರ್ವೇದ ಲಿಮಿಟೇಡ್‌ಗೆ ನೀಡಲಾಗಿದ್ದ ನ್ಯಾಯಾಂಗ ನಿಂದನೆ ನೋಟಿಸ್ ಸಂಬಂಧಿತ ಆದೇಶವನ್ನು ಮೇ 14ರಂದು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ, ಅಹ್ಸಾನುದ್ದೀನ್ ಅಮಾನುಲ್ಲಾ ಅವರನ್ನೊಳಗೊಂಡ ಪೀಠವು ಕಾಯ್ದಿರಿಸಿತ್ತು.
ಕೋವಿಡ್ ಲಸಿಕಾ ಅಭಿಯಾನ ಮತ್ತು ಆಧುನಿಕ ವೈದ್ಯಕೀಯ ವ್ಯವಸ್ಥೆಗಳ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತ್ತು.
ತಮ್ಮ ಉತ್ಪನ್ನಗಳ ಕುರಿತಾದ ಜಾಹೀರಾತು ಮತ್ತು ಅವುಗಳ ವೈದ್ಯಕೀಯ ಕ್ಷಮತೆ ಕುರಿತಂತೆ ಈ ಹಿಂದೆ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿರುವ ಮಾಹಿತಿಯ ಉಲ್ಲಂಘನೆಯು ಮೇಲ್ನೋಟಕ್ಕೆ ಕಂಡಿಬಂದಿದ್ದು, ನಿಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಬಾರದೇಕೆ? ಎಂದು ಪ್ರಶ್ನಿಸಿ ಫೆಬ್ರುವರಿ 27ರಂದು ಸುಪ್ರೀಂ ಕೋರ್ಟ್, ಬಾಬಾ ರಾಮದೇವ್, ಅವರ ಆಪ್ತ ಬಾಲಕೃಷ್ಣ ಮತ್ತು ಪತಂಜಲಿ ಆಯುರ್ವೇದ ಲಿಮಿಟೇಡ್‌ಗೆ ನೋಟಿಸ್ ನೀಡಿತ್ತು. ಈಗ ಬಾಬಾ ರಾಮದೇವ್ ಮತ್ತು ಅವರ ಕಂಪನಿ ಕ್ಷಮಾಪಣೆ ಕೇಳಿರುವುದರಿಂದ ಪ್ರಕರನ ಅಂತ್ಯಗೊಳಿಸಲಾಗಿದೆ.