ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಅಪಾಯಕಾರಿ ದೆಹಲಿ ಗಾಳಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕ್ಕೆ – ಸುಪ್ರೀಂ ಕೋರ್ಟ್ ಕಡಕ್ ಸೂಚನೆಕರ್ರೆಗುಟ್ಟಾ ಬೆಟ್ಟದಲ್ಲಿ ಸ್ಫೋಟಕ ಪತ್ತೆ: 711 BGL ಶೆಲ್‌ಗಳು ವಶಕ್ಕೆಸ್ಟಿಂಗ್ ಕೇಂದ್ರಿತ ರಾಜಕಾರಣದ ಹಿಂದಿರುವ ಸಂಚು ವಂಚನೆಗಳ ಅನಾವರಣಸ್ಟಿಂಗ್ ಆಪರೇಷನ್ ನಲ್ಲಿ ಕುಮಾರಸ್ವಾಮಿ‌‌ ಪ್ರಯತ್ನ ಸಂಪೂರ್ಣ ವಿಫಲ – ಶಿವರಾಜ್ ಎಸ್. ತಂಗಡಗಿಕರ್ನಾಟಕದ ಪೆಟ್ರೋಲ್‌ನಲ್ಲಿ 31.2% ಎಥೆನಾಲ್! ವಾಹನ ಸವಾರರಿಗೆ ಆತಂಕ; E20 ಪ್ರಚಾರದ ಜಾಹೀರಾತುಗಳ ಹಿಂದಿನ ಹುನ್ನಾರವೇನು?ಬಯಲು ಸಂತೆಯ ಮೌನ – 3 : ಮೂರು ದಾರಿಯ ಖತ್ರಿಕರ್ಮಭೂಮಿ ಎಕ್ಸ್‌ಪ್ರೆಸ್ ರೈಲಿಗೆ ಬೆಂಕಿ: 4 ಬೋಗಿಗಳಿಗೆ ಹಾನಿ, ಪ್ರಯಾಣಿಕರು ಸುರಕ್ಷಿತಪಂಜಾಬ್‌ನಲ್ಲಿ ಕರ್ಮಭೂಮಿ ಎಕ್ಸ್‌ಪ್ರೆಸ್‌ನ ನಾಲ್ಕು ಬೋಗಿಗಳಿಗೆ ಬೆಂಕಿ: ಪ್ರಯಾಣಿಕರು ಸುರಕ್ಷಿತ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಟೀಸರ್ ವಿರುದ್ಧ ಆಕ್ರೋಶ: ಕೋಮು ಸಾಮರಸ್ಯಕ್ಕೆ ಧಕ್ಕೆ ಆರೋಪ, ಸಿನೆಮಾ ಬಿಡುಗಡೆ ಮಾಡದಂತೆ ಒತ್ತಾಯಗೃಹಲಕ್ಷ್ಮೀ ಫಲಾನುಭವಿಗಳ ಜೊತೆ ಡಿಕೆಶಿ ಸಂವಾದ – ಯೋಜನೆ ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲರಾಜ್ಯದ ರಸ್ತೆ ಮೂಲಸೌಕರ್ಯ ಅಭಿವೃದ್ಧಿಗಾಗಿ 20,000 ಕೋಟಿ ರೂ –  ಈಶ್ವರ ಖಂಡ್ರೆಮೋದಿಯವರಿಗಿಂತ ಚೆನ್ನಾಗಿ ಇಂಗ್ಲೀಷ್ ಮಾತನಾಡಬಲ್ಲೆ – ಪ್ರಿಯಾಂಕ್ ಖರ್ಗೆಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಮತಪತ್ರಗಳ ಬಳಕೆ – ಸಚಿವ ಈಶ್ವರ ಖಂಡ್ರೆKSRTC ಬಸ್ ಪಾಸ್ ದರವೂ ಭಾರಿ ಏರಿಕೆ – ಶೇಕಡಾ 23 ರಷ್ಟು ಏರಿಕೆಅಪರಾಧಗಳ ರಾಜಧಾನಿಯಾಗುತ್ತಿದೆಯೇ ಬೆಂಗಳೂರು?ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಯೂಟ್ಯೂಬ್‌ಗೆ ಇನ್ನು ಕಾನೂನು ರಕ್ಷಣೆ ಇಲ್ಲವೇ? ನಿಮ್ಮ ಒಂದು ಪೋಸ್ಟ್‌ಗೆ ಕಂಪನಿಗಳೇ ಹೊಣೆ!ಕುವೆಂಪು ಚಿಂತನೆಗಳು ಇಂದು: ವಿಷಯ ಮಂಡನೆ ಮತ್ತು ಸಂವಾದಹಿರಿಯ ಸಾಹಿತಿ, ಭಾಷಾಶಾಸ್ತ್ರಜ್ಞ ಪ್ರೊ. ಕೆ.ವಿ. ನಾರಾಯಣ ಇನ್ನಿಲ್ಲಒಂದೇ ಕುಟುಂಬದ ಏಳು ಮಂದಿಯ ಹತ್ಯೆ ಪ್ರಕರಣ: ನಂದಿಬೆಟ್ಟದ ತಪ್ಪಲಿನಲ್ಲಿ ಬಾಲಕನ ಮೃತದೇಹ ಪತ್ತೆ‘ಕನ್ನಡಿಗರಿಗೆ ಉದ್ಯೋಗ ಕೊಡಿ, ಕಂಪನಿಗಳಿಗೆ ಕಿರುಕುಳ ಕೊಡಬೇಡಿ’: ಸರಕಾರದ ಇಬ್ಬಗೆ ನೀತಿ & ಅಸಲಿ ಪರಿಹಾರ

ಬ್ರಿಜ್ ಭೂಷಣ್ ಗೂಂಡಾಗಳು ಅಮ್ಮನಿಗೆ ಬೆದರಿಕೆ ಹಾಕುತ್ತಿದ್ದಾರೆ, ನಮಗೆ ರಕ್ಷಣೆ ಕೊಡಿ: ಸಾಕ್ಷಿ ಮಲಿಕ್

PPeepal Media Desk

Peepal Media Desk ದೇಶ

• 1 ನಿಮಿಷದ ಓದು

ಬ್ರಿಜ್ ಭೂಷಣ್ ಗೂಂಡಾಗಳು ಅಮ್ಮನಿಗೆ ಬೆದರಿಕೆ ಹಾಕುತ್ತಿದ್ದಾರೆ, ನಮಗೆ ರಕ್ಷಣೆ ಕೊಡಿ: ಸಾಕ್ಷಿ ಮಲಿಕ್

ಭಾರತದ ಕುಸ್ತಿ ಒಕ್ಕೂಟದ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಸರಣ್ ಸಿಂಗ್ ‘ಗೂಂಡಾಗಳು’ ಸಕ್ರಿಯರಾಗಿದ್ದಾರೆ ಎಂದು ಸಾಕ್ಷಿ ಮಲಿಕ್ ಬುಧವಾರ ಹೇಳಿದ್ದಾರೆ. ಬ್ರಿಜ್ ಭೂಷಣ್ ಅವರ ಆತ್ಮೀಯ ಸ್ನೇಹಿತ ಸಂಜಯ್ ಸಿಂಗ್ ಫೆಡರೇಶನ್ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಕುಸ್ತಿಯಿಂದ ನಿವೃತ್ತಿ ಘೋಷಿಸಿದ ಸಾಕ್ಷಿ ಮತ್ತವರ ತಾಯಿಗೆ ಬೆದರಿಕೆ ಕರೆಗಳು ಬರುತ್ತಿವೆಯೆನ್ನುವ ಆತಂಕಕಾರಿ ಸುದ್ದಿಯನ್ನು ಅವರು ಪತ್ರಕರ್ತರೊಂದಿಗೆ ಹಂಚಿಕೊಂಡರು.

ನಮ್ಮ ಭದ್ರತೆ ಸರ್ಕಾರದ ಹೊಣೆ ಎಂದು ಸಾಕ್ಷಿ ಮಲಿಕ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

WFI ವಿವಾದದ ನಡುವೆ ಪ್ರಮುಖ ಟ್ವಿಸ್ಟ್‌ ಎನ್ನುವಂತೆ, ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ವಿರುದ್ಧ ಬುಧವಾರ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಪ್ರಾರಂಭವಾಯಿತು. ಉತ್ತರ ಪ್ರದೇಶ, ಹರಿಯಾಣ ಮತ್ತು ದೆಹಲಿಯ ಜೂನಿಯರ್ ಕುಸ್ತಿಪಟುಗಳು ಜಂತರ್ ಮಂತರ್‌ನಲ್ಲಿ “UWW ಈ 3 ಕುಸ್ತಿಪಟುಗಳಿಂದ ನಮ್ಮ ಕುಸ್ತಿಯನ್ನು ಉಳಿಸಿ” ಎಂಬ ಬ್ಯಾನರ್‌ಗಳನ್ನು ಹಿಡಿದು ಪ್ರತಿಭಟಿಸಿದರು. ಬ್ರಿಜ್ ಭೂಷಣ್ ಅವರ ಲೈಂಗಿಕ ಕಿರುಕುಳದ ಆರೋಪ ಹೊರಿಸಿರುವುದರ ವಿರುದ್ಧ ಮೂವರು ಕುಸ್ತಿಪಟುಗಳು ಪ್ರತಿಭಟಿಸಿದರು.

“ಬ್ರಿಜ್ ಭೂಷಣ್ ಪ್ರಭಾವಿ ಎಂದು ನಮಗೆ ತಿಳಿದಿತ್ತು ಆದರೆ ಯಾರೊಂದಿಗೂ ಚರ್ಚಿಸದೆ ಅವರ ನಿವಾಸದಿಂದಲೇ ಅಧ್ಯಕ್ಷರನ್ನು ಘೋಷಿಸುವಷ್ಟು ಶಕ್ತಿಶಾಲಿ ಎಂದು ನಮಗೆ ತಿಳಿದಿರಲಿಲ್ಲ. ಈಗ ನಾವು ಕಿರಿಯರ ಕುಸ್ತಿ ವೃತ್ತಿಜೀವನವನ್ನು ಹಾಳುಮಾಡಲು ಬಯಸುವುದಿಲ್ಲ. ನಾನು ಕುಸ್ತಿಯಿಂದ ನಿವೃತ್ತಿ ಪಡೆದಿದ್ದೇನೆ. ನಾನು ಪೂರ್ಣಗೊಳಿಸಲು ಸಾಧ್ಯವಾಗದ ನನ್ನ ಕನಸನ್ನು ಜೂನಿಯರ್ ಹುಡುಗಿಯರು ಈಡೇರಿಸಬೇಕೆಂದು ನಾನು ಬಯಸುತ್ತೇನೆ, ಅವರು ದೇಶಕ್ಕಾಗಿ ಕುಸ್ತಿಯಲ್ಲಿ ಬೆಳ್ಳಿ, ನಾನು ಚಿನ್ನ ಗೆಲ್ಲಬೇಕೆನ್ನುವುದು ನನ್ನ ಬಯಕೆ, ಯಾವುದೇ ಜೂನಿಯರ್ ನಮಗಾಗಿ ನೋವು ಅನುಭವಿಸಬಾರದು” ಎಂದು ಸಾಕ್ಷಿ ಮಲಿಕ್ ಹೇಳಿದ್ದಾರೆ.

“ನಮಗೆ ಹೊಸ ಫೆಡರೇಶನ್ ಅಥವಾ ಮಧ್ಯಂತರ ಸಮಿತಿಯೊಂದಿಗೆ ಯಾವುದೇ ಸಮಸ್ಯೆ ಇಲ್ಲ. ನಮಗೆ ಬ್ರಿಜ್ ಭೂಷಣ್ ಅವರ ಸಹಾಯಕ ಸಂಜಯ್ ಸಿಂಗ್ ಅವರೊಂದಿಗೆ ಮಾತ್ರ ಸಮಸ್ಯೆ ಇದೆ” ಎಂದು ಸಾಕ್ಷಿ ಹೇಳಿದರು.

PPeepal Media Desk

Peepal Media Desk

Peepal Media · ದೇಶ ವಿಭಾಗ

ಸಂಬಂಧಿತ ಸುದ್ದಿಗಳು