KSRTC ಬಸ್ ಪಾಸ್ ದರವೂ ಭಾರಿ ಏರಿಕೆ – ಶೇಕಡಾ 23 ರಷ್ಟು ಏರಿಕೆ
ಲಿಂಕ್ ನಕಲಿಸಲಾಗಿದೆ ✓
ಬೆಂಗಳೂರು : ಕರ್ನಾಟಕ ಸರ್ಕಾರವು ಸಾರಿಗೆ ಸಂಸ್ಥೆಗಳ ಆರ್ಥಿಕ ನಷ್ಟ ಸರಿದೂಗಿಸಲು BMTC ಮತ್ತು KSRTC ಸೇರಿದಂತೆ ನಾಲ್ಕೂ ಸಾರಿಗೆ ನಿಗಮಗಳ ಬಸ್ ಟಿಕೆಟ್ ದರವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದೆ. ಈ ಪರಿಷ್ಕೃತ ದರಗಳು ಈಗಾಗಲೇ ಜಾರಿಗೆ ಬಂದಿದ್ದು, ದೈನಂದಿನ ಪ್ರಯಾಣಿಕರಿಗೆ ದೊಡ್ಡ ಆರ್ಥಿಕ ಹೊಡೆತ ಬಿದ್ದಿದೆ. ಇದರ ನಡುವೆಯೇ, ಬಿಎಂಟಿಸಿಯ ದೈನಂದಿನ ಹಾಗೂ ಮಾಸಿಕ ಪಾಸ್ ದರಗಳನ್ನು ಶೇ. 20 ರಿಂದ 25 ರಷ್ಟು ಸರ್ಕಾರ ಹೆಚ್ಚಿಸಿತ್ತು. ಈ ಬೆನ್ನಲ್ಲೇ, ಕೆಎಸ್‌ಆರ್‌ಟಿಸಿ ಮಾಸಿಕ ಪಾಸ್ ದರಗಳನ್ನು ಕೂಡ ಸರಾಸರಿ ಶೇಕಡಾ 23 ರಷ್ಟು ಭಾರಿ ಏರಿಕೆ ಮಾಡಿದೆ. ಆ ಕುರಿತ ವರದಿ ಇಲ್ಲಿದೆ:
ವೇಗದೂತ ಮತ್ತು ತಡೆರಹಿತ ಬಸ್‌ಗಳ ಪಾಸ್ : ದೂರದ ಊರುಗಳಿಗೆ ವೇಗದೂತ ಬಸ್‌ಗಳ ಮೂಲಕ ಪ್ರತಿದಿನ ಪ್ರಯಾಣಿಸುವವರಿಗಾಗಿ ಗರಿಷ್ಠ 20 ಹಂತಗಳವರೆಗೆ ಮಾಸಿಕ ಪಾಸ್ ನೀಡಲಾಗುತ್ತದೆ:
- ಸಾಮಾನ್ಯ ಪ್ರಯಾಣಿಕರ ಕನಿಷ್ಠ ಪಾಸ್ ದರ (1ನೇ ಹಂತ): ₹520 ಇದ್ದದ್ದು ಈಗ ₹640 ಕ್ಕೆ ಏರಿಕೆಯಾಗಿದೆ.
- ಹಿರಿಯ ನಾಗರಿಕರ ಕನಿಷ್ಠ ಪಾಸ್ ದರ (1ನೇ ಹಂತ): ₹465 ಇದ್ದದ್ದು ಈಗ ₹570 ಕ್ಕೆ ಹೆಚ್ಚಳವಾಗಿದೆ.
- ಸಾಮಾನ್ಯ ಪ್ರಯಾಣಿಕರ ಗರಿಷ್ಠ ಪಾಸ್ ದರ (20ನೇ ಹಂತ): ₹3,220 ಇದ್ದದ್ದು ಈಗ ₹3,960 ಕ್ಕೆ ತಲುಪಿದೆ.
- ಹಿರಿಯ ನಾಗರಿಕ ಗರಿಷ್ಠ ಪಾಸ್ ದರ (20ನೇ ಹಂತ): ₹2,900 ಇದ್ದದ್ದು ಈಗ ₹3,570 ಕ್ಕೆ ಏರಿದೆ.
ವಿಷಯಗಳು:
#karnataka
#Karnataka Bus Pass Fare Hike
#KSRTC Bus Pass
#KSRTC Bus Pass Price Hike
#KSRTC Fare Revision
#news
ರ
ರಮೇಶ್ ಹಾಸನ್
Peepal Media · ಬ್ರೇಕಿಂಗ್ ಸುದ್ದಿ ವಿಭಾಗ
ಹಿಂದಿನ ಸುದ್ದಿ