ಮೋದಿಯವರಿಗಿಂತ ಚೆನ್ನಾಗಿ ಇಂಗ್ಲೀಷ್ ಮಾತನಾಡಬಲ್ಲೆ – ಪ್ರಿಯಾಂಕ್ ಖರ್ಗೆ
ಲಿಂಕ್ ನಕಲಿಸಲಾಗಿದೆ ✓
ಬೆಂಗಳೂರು: ತಮ್ಮ ಶೈಕ್ಷಣಿಕ ಅರ್ಹತೆ ವಿಚಾರವಾಗಿ ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಹೇಳಿಕೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ನಾನು ಅಫಿಡವಿಟ್ಟು ಹಾಕಿದ್ದೇನೆ, ಪ್ರಧಾನಿ ಮೋದಿಯವರ ಡಿಗ್ರಿ ಏನಿದೆ, ನನ್ನ ವಿದ್ಯಾರ್ಹತೆ ಕುರಿತು ಸಾರ್ವಜನಿಕವಾಗಿ ಚರ್ಚಿಸಲು ಸಿದ್ಧರಿರುವುದಾಗಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಪ್ರಮಾಣಪತ್ರದ ಬಗ್ಗೆ ಆರ್ಟಿಐ ಮೂಲಕವೂ ಮಾಹಿತಿ ಲಭ್ಯವಿಲ್ಲ, ತಾವು ಮೋದಿ ಅವರಿಗಿಂತ ಹೆಚ್ಚು ವಿದ್ಯಾರ್ಹತೆ ಹೊಂದಿದ್ದೇನೆ, ಅವರಿಗಿಂತ ಚೆನ್ನಾಗಿ ಇಂಗ್ಲೀಷ್ ನಲ್ಲಿ ಮಾತನಾಡಬಲ್ಲೆ ಎಂದರು. ಕಾನ್ವೆಂಟ್ ದಲಿತ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ತಾವು‘ಗ್ರಾಫಿಕ್ ಡಿಸೈನರ್ ಎಂದು ಇಡೀ ಜಗತ್ತಿಗೆ ಗೊತ್ತಿದೆ, ಅದರಲ್ಲಿ ಏನು ತಪ್ಪಿದೆ, ಆರೋಪಿಸಿದವರ ನಾಯಕರ ಮಕ್ಕಳೇ ಕಾನ್ವೆಂಟ್ ಶಾಲೆಗೆ ಹೋಗಿ ಕಲಿತವರು, ನಾನು ಅದಮಾರು ಮಠ ಶಾಲೆಯಲ್ಲಿ ಓದಿದವನು, ಮೋದಿಯವರಿಗಿಂತ ಉತ್ತಮ ಶೈಕ್ಷಣಿಕ ಅರ್ಹತೆ ಹೊಂದಿದವನು ನಾನು, ಅವರಿಗೆ ಕನ್ನಡ ಬರುವುದಿಲ್ಲ ಬಿಡಿ, ನನಗೂ ಹಿಂದಿ ಬರುತ್ತದೆ, ಸಂಸ್ಕೃತ ಕೂಡ ಓದಲು ಬರುತ್ತದೆ ಎಂದರು. ನಾರಾಯಣಸ್ವಾಮಿ ಅವರು ಯಾವುದೇ ಭಾಷೆ, ಯಾವುದೇ ವಿಷಯದ ಕುರಿತು ಯಾವುದೇ ಸಮಯದಲ್ಲಿ ಚರ್ಚೆಗೆ ಬರಬಹುದು ಎಂದು ಸವಾಲು ಹಾಕಿದ್ದಾರೆ.
ಇದೇ ವೇಳೆ, ವಂದೇ ಮಾತರಂ ಕುರಿತು ತಮ್ಮ ಜ್ಞಾನದ ಮಿತಿ ಒಪ್ಪಿಕೊಂಡ ಪ್ರಿಯಾಂಕ್ ಖರ್ಗೆ, ಇತರರ ಸಾಮರ್ಥ್ಯವನ್ನೂ ಪ್ರಶ್ನಿಸಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಹಳ್ಳಿ ಗುಗ್ಗುಎಂದು ಕರೆದಿದ್ದಕ್ಕೆ ಕ್ಷಮೆಯಾಚಿಸಬೇಕೆಂಬ ಬಿಜೆಪಿ ನಾಯಕ ಎನ್. ರವಿಕುಮಾರ್ ಅವರ ಬೇಡಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, ರವಿಕುಮಾರ್ ಗೆ ಯಾವಾಗ ಕೋಟ್ಯಂತರ ಜನರ ಬೆಂಬಲ ಸಿಕ್ಕಿತು, ಅವರಿಗೆ ಅಷ್ಟು ಬೆಂಬಲ ಸಿಕ್ಕಿದರೆ ಸಿಎಂ ಆಗೋದಿಕ್ಕೆ ಹೇಳಿ ಎಂದರು.
ರಮೇಶ್ ಹಾಸನ್
Peepal Media · ಬ್ರೇಕಿಂಗ್ ಸುದ್ದಿ ವಿಭಾಗ