ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಅಪಾಯಕಾರಿ ದೆಹಲಿ ಗಾಳಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕ್ಕೆ – ಸುಪ್ರೀಂ ಕೋರ್ಟ್ ಕಡಕ್ ಸೂಚನೆಕರ್ರೆಗುಟ್ಟಾ ಬೆಟ್ಟದಲ್ಲಿ ಸ್ಫೋಟಕ ಪತ್ತೆ: 711 BGL ಶೆಲ್‌ಗಳು ವಶಕ್ಕೆಸ್ಟಿಂಗ್ ಕೇಂದ್ರಿತ ರಾಜಕಾರಣದ ಹಿಂದಿರುವ ಸಂಚು ವಂಚನೆಗಳ ಅನಾವರಣಸ್ಟಿಂಗ್ ಆಪರೇಷನ್ ನಲ್ಲಿ ಕುಮಾರಸ್ವಾಮಿ‌‌ ಪ್ರಯತ್ನ ಸಂಪೂರ್ಣ ವಿಫಲ – ಶಿವರಾಜ್ ಎಸ್. ತಂಗಡಗಿಕರ್ನಾಟಕದ ಪೆಟ್ರೋಲ್‌ನಲ್ಲಿ 31.2% ಎಥೆನಾಲ್! ವಾಹನ ಸವಾರರಿಗೆ ಆತಂಕ; E20 ಪ್ರಚಾರದ ಜಾಹೀರಾತುಗಳ ಹಿಂದಿನ ಹುನ್ನಾರವೇನು?ಬಯಲು ಸಂತೆಯ ಮೌನ – 3 : ಮೂರು ದಾರಿಯ ಖತ್ರಿಕರ್ಮಭೂಮಿ ಎಕ್ಸ್‌ಪ್ರೆಸ್ ರೈಲಿಗೆ ಬೆಂಕಿ: 4 ಬೋಗಿಗಳಿಗೆ ಹಾನಿ, ಪ್ರಯಾಣಿಕರು ಸುರಕ್ಷಿತಪಂಜಾಬ್‌ನಲ್ಲಿ ಕರ್ಮಭೂಮಿ ಎಕ್ಸ್‌ಪ್ರೆಸ್‌ನ ನಾಲ್ಕು ಬೋಗಿಗಳಿಗೆ ಬೆಂಕಿ: ಪ್ರಯಾಣಿಕರು ಸುರಕ್ಷಿತ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಟೀಸರ್ ವಿರುದ್ಧ ಆಕ್ರೋಶ: ಕೋಮು ಸಾಮರಸ್ಯಕ್ಕೆ ಧಕ್ಕೆ ಆರೋಪ, ಸಿನೆಮಾ ಬಿಡುಗಡೆ ಮಾಡದಂತೆ ಒತ್ತಾಯಗೃಹಲಕ್ಷ್ಮೀ ಫಲಾನುಭವಿಗಳ ಜೊತೆ ಡಿಕೆಶಿ ಸಂವಾದ – ಯೋಜನೆ ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲರಾಜ್ಯದ ರಸ್ತೆ ಮೂಲಸೌಕರ್ಯ ಅಭಿವೃದ್ಧಿಗಾಗಿ 20,000 ಕೋಟಿ ರೂ –  ಈಶ್ವರ ಖಂಡ್ರೆಮೋದಿಯವರಿಗಿಂತ ಚೆನ್ನಾಗಿ ಇಂಗ್ಲೀಷ್ ಮಾತನಾಡಬಲ್ಲೆ – ಪ್ರಿಯಾಂಕ್ ಖರ್ಗೆಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಮತಪತ್ರಗಳ ಬಳಕೆ – ಸಚಿವ ಈಶ್ವರ ಖಂಡ್ರೆKSRTC ಬಸ್ ಪಾಸ್ ದರವೂ ಭಾರಿ ಏರಿಕೆ – ಶೇಕಡಾ 23 ರಷ್ಟು ಏರಿಕೆಅಪರಾಧಗಳ ರಾಜಧಾನಿಯಾಗುತ್ತಿದೆಯೇ ಬೆಂಗಳೂರು?ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಯೂಟ್ಯೂಬ್‌ಗೆ ಇನ್ನು ಕಾನೂನು ರಕ್ಷಣೆ ಇಲ್ಲವೇ? ನಿಮ್ಮ ಒಂದು ಪೋಸ್ಟ್‌ಗೆ ಕಂಪನಿಗಳೇ ಹೊಣೆ!ಕುವೆಂಪು ಚಿಂತನೆಗಳು ಇಂದು: ವಿಷಯ ಮಂಡನೆ ಮತ್ತು ಸಂವಾದಹಿರಿಯ ಸಾಹಿತಿ, ಭಾಷಾಶಾಸ್ತ್ರಜ್ಞ ಪ್ರೊ. ಕೆ.ವಿ. ನಾರಾಯಣ ಇನ್ನಿಲ್ಲಒಂದೇ ಕುಟುಂಬದ ಏಳು ಮಂದಿಯ ಹತ್ಯೆ ಪ್ರಕರಣ: ನಂದಿಬೆಟ್ಟದ ತಪ್ಪಲಿನಲ್ಲಿ ಬಾಲಕನ ಮೃತದೇಹ ಪತ್ತೆ‘ಕನ್ನಡಿಗರಿಗೆ ಉದ್ಯೋಗ ಕೊಡಿ, ಕಂಪನಿಗಳಿಗೆ ಕಿರುಕುಳ ಕೊಡಬೇಡಿ’: ಸರಕಾರದ ಇಬ್ಬಗೆ ನೀತಿ & ಅಸಲಿ ಪರಿಹಾರ

ಕರ್ಮಭೂಮಿ ಎಕ್ಸ್‌ಪ್ರೆಸ್ ರೈಲಿಗೆ ಬೆಂಕಿ: 4 ಬೋಗಿಗಳಿಗೆ ಹಾನಿ, ಪ್ರಯಾಣಿಕರು ಸುರಕ್ಷಿತ

MMurali Maluru

Murali Maluru ದೇಶ

• 1 ನಿಮಿಷದ ಓದು

ಕರ್ಮಭೂಮಿ ಎಕ್ಸ್‌ಪ್ರೆಸ್ ರೈಲಿಗೆ ಬೆಂಕಿ: 4 ಬೋಗಿಗಳಿಗೆ ಹಾನಿ, ಪ್ರಯಾಣಿಕರು ಸುರಕ್ಷಿತ

ಪಂಜಾಬ್: ಕರ್ಮಭೂಮಿ ಎಕ್ಸ್‌ಪ್ರೆಸ್ ರೈಲಿಗೆ ಬೆಂಕಿ ಕಾಣಿಸಿಕೊಂಡು ನಾಲ್ಕು ಬೋಗಿಗಳಿಗೆ ಹಾನಿಯಾಗಿರುವ ಘಟನೆ ಪಂಜಾಬ್‌ನ ಪಟಿಯಾಲಾ ಜಿಲ್ಲೆಯ ರಾಜಪುರ ಸಮೀಪ ನಡೆದಿದೆ. ಶುಕ್ರವಾರ ಮಧ್ಯಾಹ್ನ ಸಂಭವಿಸಿದ ಈ ಅವಘಡದಲ್ಲಿ ರೈಲಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದು, ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ.

ಅಮೃತಸರದಿಂದ ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿಗೆ ತೆರಳುತ್ತಿದ್ದ ಕರ್ಮಭೂಮಿ ಎಕ್ಸ್‌ಪ್ರೆಸ್ ರೈಲು, ರಾಜಪುರ–ಸಿರ್ಹಿಂದ್ ರೈಲು ಮಾರ್ಗದಲ್ಲಿರುವ ಸರಾಯ್ ಬಂಜಾರಾ ರೈಲು ನಿಲ್ದಾಣದ ಸಮೀಪ ಬರುತ್ತಿದ್ದಾಗ ಈ ಘಟನೆ ನಡೆದಿದೆ.

ಸಾಮಾನ್ಯ (General coach) ಬೋಗಿಯೊಂದರಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಬೆಂಕಿ ಪಕ್ಕದಲ್ಲಿದ್ದ ಮತ್ತೆರಡು ಬೋಗಿಗಳಿಗೂ ಹರಡಿದೆ. ನಾಲ್ಕನೇ ಬೋಗಿಯ ಹೊರಭಾಗಕ್ಕೂ ಬೆಂಕಿಯಿಂದ ಹಾನಿಯಾಗಿದೆ.

ರೈಲಿನಲ್ಲಿದ್ದ ಪ್ರಯಾಣಿಕರು ದಟ್ಟ ಹೊಗೆ ಮತ್ತು ಬೆಂಕಿಯ ಜ್ವಾಲೆಗಳನ್ನು ಕಂಡು ಆತಂಕಗೊಂಡಿದ್ದಾರೆ. ಈ ವೇಳೆ ರೈಲಿನ ಸ್ವಯಂಚಾಲಿತ ಸುರಕ್ಷತಾ ವ್ಯವಸ್ಥೆ ಕಾರ್ಯನಿರ್ವಹಿಸಿದ್ದು, ರೈಲು ತಕ್ಷಣವೇ ನಿಂತಿದೆ. ಇದರಿಂದಾಗಿ ಪ್ರಯಾಣಿಕರು ರೈಲಿನಿಂದ ಕೆಳಗಿಳಿದು ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ, ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಈ ಘಟನೆಯಲ್ಲಿ ಮೂರು ಬೋಗಿಗಳು ತೀವ್ರವಾಗಿ ಹಾನಿಗೊಳಗಾಗಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ಮಭೂಮಿ ಎಕ್ಸ್‌ಪ್ರೆಸ್ ರೈಲಿಗೆ ಬೆಂಕಿ (News Arena India Photo)

ಪ್ರಯಾಣಿಕರ ಸುರಕ್ಷತೆಗೆ ರೈಲ್ವೆ ಇಲಾಖೆಯ ಕ್ರಮ

ಈ ಕುರಿತು ಮಾತನಾಡಿರುವ ಅಂಬಾಲಾ ವಿಭಾಗದ ಹಿರಿಯ ವಾಣಿಜ್ಯ ವಿಭಾಗದ ವ್ಯವಸ್ಥಾಪಕ ಯಶಂಜಿತ್ ಸಿಂಗ್,”ಪ್ರಯಾಣಿಕರು ಯಾವುದೇ ತೊಂದರೆಯಿಲ್ಲದೆ ತಮ್ಮ ಗಮ್ಯಸ್ಥಾನ ತಲುಪುವಂತೆ ಮಾಡುವುದು ನಮ್ಮ ಮೊದಲ ಆದ್ಯತೆಯಾಗಿದೆ. ಇದಕ್ಕಾಗಿ ಪರ್ಯಾಯ ರೈಲಿನ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಪ್ರಯಾಣಿಕರನ್ನು ಸುಮಾರು 500 ಮೀಟರ್ ದೂರದಲ್ಲಿರುವ ಹತ್ತಿರದ ರೈಲು ನಿಲ್ದಾಣಕ್ಕೆ ಸುರಕ್ಷಿತವಾಗಿ ತಲುಪಿಸಿ, ಅಲ್ಲಿಂದ ಮುಂದಿನ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.

ಬೆಂಕಿ ಅವಘಡಕ್ಕೆ ಕಾರಣವೇನು?

ರೈಲಿನಲ್ಲಿ ಬೆಂಕಿ ಕಾಣಿಸಿಕೊಳ್ಳಲು ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ರೈಲ್ವೆ ಇಲಾಖೆ ತಾಂತ್ರಿಕ ತನಿಖೆಗೆ ಆದೇಶಿಸಿದೆ.

ವಿದ್ಯುತ್ ತಂತಿಗಳಲ್ಲಿನ ದೋಷ, ರೈಲಿನ ಯಾಂತ್ರಿಕ ವ್ಯವಸ್ಥೆಯಲ್ಲಿನ ಸಮಸ್ಯೆ ಅಥವಾ ಹೊರಗಿನ ಯಾವುದೇ ಕಾರಣದಿಂದ ಬೆಂಕಿ ಕಾಣಿಸಿಕೊಂಡಿದೆಯೇ ಎಂಬುದನ್ನು ತನಿಖೆ ನಡೆಸಲಾಗುತ್ತಿದೆ.

ಈ ಘಟನೆಯಿಂದಾಗಿ ರಾಜಪುರ–ಸಿರ್ಹಿಂದ್ ರೈಲು ಮಾರ್ಗದಲ್ಲಿ ಕೆಲಕಾಲ ರೈಲು ಸಂಚಾರವನ್ನು ನಿಯಂತ್ರಿಸಲಾಗಿತ್ತು. ಸುರಕ್ಷತಾ ಪರಿಶೀಲನೆ ಮತ್ತು ಬೆಂಕಿಯಿಂದ ಹಾನಿಗೊಳಗಾದ ಸ್ಥಳವನ್ನು ಸ್ವಚ್ಛಗೊಳಿಸಿದ ಬಳಿಕ ರೈಲು ಸಂಚಾರವನ್ನು ಸಹಜ ಸ್ಥಿತಿಗೆ ತರಲು ಕ್ರಮ ಕೈಗೊಳ್ಳಲಾಗಿದೆ.

ವರದಿ ಮೂಲ: Hindustan Times, ನವೆಂಬರ್ 6, 2026.

MMurali Maluru

Murali Maluru

Peepal Media · ದೇಶ ವಿಭಾಗ

Murali MV is a reporter cum presenter at Peepal Media, covering sports and political affairs. An avid reader with a keen interest in current affairs, he brings curiosity, insight and a passion for storytelling to his journalism. His reporting focuses on exploring key developments and issues shaping the worlds of sports and politics.

ಸಂಬಂಧಿತ ಸುದ್ದಿಗಳು