ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಅಪಾಯಕಾರಿ ದೆಹಲಿ ಗಾಳಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕ್ಕೆ – ಸುಪ್ರೀಂ ಕೋರ್ಟ್ ಕಡಕ್ ಸೂಚನೆಕರ್ರೆಗುಟ್ಟಾ ಬೆಟ್ಟದಲ್ಲಿ ಸ್ಫೋಟಕ ಪತ್ತೆ: 711 BGL ಶೆಲ್‌ಗಳು ವಶಕ್ಕೆಸ್ಟಿಂಗ್ ಕೇಂದ್ರಿತ ರಾಜಕಾರಣದ ಹಿಂದಿರುವ ಸಂಚು ವಂಚನೆಗಳ ಅನಾವರಣಸ್ಟಿಂಗ್ ಆಪರೇಷನ್ ನಲ್ಲಿ ಕುಮಾರಸ್ವಾಮಿ‌‌ ಪ್ರಯತ್ನ ಸಂಪೂರ್ಣ ವಿಫಲ – ಶಿವರಾಜ್ ಎಸ್. ತಂಗಡಗಿಕರ್ನಾಟಕದ ಪೆಟ್ರೋಲ್‌ನಲ್ಲಿ 31.2% ಎಥೆನಾಲ್! ವಾಹನ ಸವಾರರಿಗೆ ಆತಂಕ; E20 ಪ್ರಚಾರದ ಜಾಹೀರಾತುಗಳ ಹಿಂದಿನ ಹುನ್ನಾರವೇನು?ಬಯಲು ಸಂತೆಯ ಮೌನ – 3 : ಮೂರು ದಾರಿಯ ಖತ್ರಿಕರ್ಮಭೂಮಿ ಎಕ್ಸ್‌ಪ್ರೆಸ್ ರೈಲಿಗೆ ಬೆಂಕಿ: 4 ಬೋಗಿಗಳಿಗೆ ಹಾನಿ, ಪ್ರಯಾಣಿಕರು ಸುರಕ್ಷಿತಪಂಜಾಬ್‌ನಲ್ಲಿ ಕರ್ಮಭೂಮಿ ಎಕ್ಸ್‌ಪ್ರೆಸ್‌ನ ನಾಲ್ಕು ಬೋಗಿಗಳಿಗೆ ಬೆಂಕಿ: ಪ್ರಯಾಣಿಕರು ಸುರಕ್ಷಿತ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಟೀಸರ್ ವಿರುದ್ಧ ಆಕ್ರೋಶ: ಕೋಮು ಸಾಮರಸ್ಯಕ್ಕೆ ಧಕ್ಕೆ ಆರೋಪ, ಸಿನೆಮಾ ಬಿಡುಗಡೆ ಮಾಡದಂತೆ ಒತ್ತಾಯಗೃಹಲಕ್ಷ್ಮೀ ಫಲಾನುಭವಿಗಳ ಜೊತೆ ಡಿಕೆಶಿ ಸಂವಾದ – ಯೋಜನೆ ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲರಾಜ್ಯದ ರಸ್ತೆ ಮೂಲಸೌಕರ್ಯ ಅಭಿವೃದ್ಧಿಗಾಗಿ 20,000 ಕೋಟಿ ರೂ –  ಈಶ್ವರ ಖಂಡ್ರೆಮೋದಿಯವರಿಗಿಂತ ಚೆನ್ನಾಗಿ ಇಂಗ್ಲೀಷ್ ಮಾತನಾಡಬಲ್ಲೆ – ಪ್ರಿಯಾಂಕ್ ಖರ್ಗೆಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಮತಪತ್ರಗಳ ಬಳಕೆ – ಸಚಿವ ಈಶ್ವರ ಖಂಡ್ರೆKSRTC ಬಸ್ ಪಾಸ್ ದರವೂ ಭಾರಿ ಏರಿಕೆ – ಶೇಕಡಾ 23 ರಷ್ಟು ಏರಿಕೆಅಪರಾಧಗಳ ರಾಜಧಾನಿಯಾಗುತ್ತಿದೆಯೇ ಬೆಂಗಳೂರು?ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಯೂಟ್ಯೂಬ್‌ಗೆ ಇನ್ನು ಕಾನೂನು ರಕ್ಷಣೆ ಇಲ್ಲವೇ? ನಿಮ್ಮ ಒಂದು ಪೋಸ್ಟ್‌ಗೆ ಕಂಪನಿಗಳೇ ಹೊಣೆ!ಕುವೆಂಪು ಚಿಂತನೆಗಳು ಇಂದು: ವಿಷಯ ಮಂಡನೆ ಮತ್ತು ಸಂವಾದಹಿರಿಯ ಸಾಹಿತಿ, ಭಾಷಾಶಾಸ್ತ್ರಜ್ಞ ಪ್ರೊ. ಕೆ.ವಿ. ನಾರಾಯಣ ಇನ್ನಿಲ್ಲಒಂದೇ ಕುಟುಂಬದ ಏಳು ಮಂದಿಯ ಹತ್ಯೆ ಪ್ರಕರಣ: ನಂದಿಬೆಟ್ಟದ ತಪ್ಪಲಿನಲ್ಲಿ ಬಾಲಕನ ಮೃತದೇಹ ಪತ್ತೆ‘ಕನ್ನಡಿಗರಿಗೆ ಉದ್ಯೋಗ ಕೊಡಿ, ಕಂಪನಿಗಳಿಗೆ ಕಿರುಕುಳ ಕೊಡಬೇಡಿ’: ಸರಕಾರದ ಇಬ್ಬಗೆ ನೀತಿ & ಅಸಲಿ ಪರಿಹಾರ

ಸ್ಟಿಂಗ್ ಕೇಂದ್ರಿತ ರಾಜಕಾರಣದ ಹಿಂದಿರುವ ಸಂಚು ವಂಚನೆಗಳ ಅನಾವರಣ

PPeepal Media Desk

Peepal Media Desk ಅಂಕಣ

• 4 ನಿಮಿಷದ ಓದು

ಸ್ಟಿಂಗ್ ಕೇಂದ್ರಿತ ರಾಜಕಾರಣದ ಹಿಂದಿರುವ ಸಂಚು ವಂಚನೆಗಳ ಅನಾವರಣ

“..ನಾಲ್ಕು ದಿನ ಸುದ್ದಿಯಾಗಿ ತಣ್ಣಗಾಗಬೇಕಿದ್ದ ಈ ಅನಗತ್ಯ ವಿವಾದ ತಿಂಗಳುಗಳೇ ಸರಿದರೂ ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ಯಾಕೆ ಎಂಬ ಪ್ರಶ್ನೆಗೆ ಉತ್ತರ ಮತ ರಾಜಕಾರಣ ಹಾಗೂ ರಾಜಕೀಯ ಹಿತಾಸಕ್ತಿ..” ವಿಮರ್ಶಕ ಶಶಿಕಾಂತ ಯಡಹಳ್ಳಿ ಅವರ ಬರಹದಲ್ಲಿ

ಕಳೆದ ಒಂದು ತಿಂಗಳಿಂದ ನಾಡಿನಾದ್ಯಂತ ಸ್ಟಿಂಗ್ ಸುದ್ದಿ ಪ್ರತಿದ್ವನಿಸುತ್ತಲೇ ಇದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಿದ ನಂತರ ಸಿಎಂ ಆಗಿ ಬಂದ ಡಿ.ಕೆ.ಶಿವಕುಮಾರರವರು ಯಾವಾಗ ಸಚಿವ ಸಂಪುಟ ಸಭೆಯಲ್ಲಿ ಕೆಲವು ಸಚಿವರಿಗೆ ಸ್ಟಿಂಗ್ ಟ್ರ್ಯಾಪ್ ಕುರಿತು ಎಚ್ಚರಿಕೆ ಕೊಟ್ಟರೋ ಅವತ್ತಿನಿಂದ ಈ ಸ್ಟಿಂಗ್ ಆಪರೇಶನ್ ರೋಗ ಉಲ್ಬಣಿಸತೊಡಗಿತು.

ಮೂರು ದಿನಕ್ಕೊಮ್ಮೆ ದೆಹಲಿಯಿಂದ ಬರುತ್ತಿದ್ದ ಕೇಂದ್ರ ಸಚಿವ ಕುಮಾರಸ್ವಾಮಿಯವರು ಹತ್ತಿ ಉರಿಯುತ್ತಿದ್ದ ಸ್ಟಿಂಗ್ ಬೆಂಕಿ ಆರದಂತೆ ಮಾತಿನ ಇಂದನ ಸುರಿಯುತ್ತಲೇ ಬಂದರು. ಇದಕ್ಕೆ ಪ್ರತಿಯಾಗಿ ಗೃಹ ಸಚಿವರಾದ ಪ್ರಿಯಾಂಕ್ ಖರ್ಗೆಯವರು ಟಕ್ಕರ್ ಕೊಡುತ್ತಲೇ ಸ್ಟಿಂಗ್ ಸುದ್ದಿ ಸದಾ ಸದ್ದಾಗುವಂತೆ ನೋಡಿಕೊಂಡರು. ಈ ಕುಮಾರಸ್ವಾಮಿ ಮತ್ತು ಪ್ರಿಯಾಂಕ ಖರ್ಗೆಯವರ ನಡುವಿನ ಬೆಂಕಿ- ಬಿರುಗಾಳಿ ಹೇಳಿಕೆಗಳಿಗೆ ಕರ್ನಾಟಕದ ಸಕಲ ಸೆಟಲೈಟ್ ಮಾಧ್ಯಮಗಳೂ ಗಾಳಿ ಬೀಸತೊಡಗಿದವು. ಇದರಿಂದಾಗಿ ಸ್ಟಿಂಗ್ ಕಿಡಿ ಬೆಂಕಿಯಾಗಿ ಪ್ರಜ್ವಲಿಸತೊಡಗಿತು. ಅದರ ಹೊಗೆ ರಾಜ್ಯವನ್ನೂ ದಾಟಿ ದೇಶಾದ್ಯಂತ ಘಾಟು ವಾಸನೆ ಹರಡಿತು.

ನಾಲ್ಕು ದಿನ ಸುದ್ದಿಯಾಗಿ ತಣ್ಣಗಾಗಬೇಕಿದ್ದ ಈ ಅನಗತ್ಯ ವಿವಾದ ತಿಂಗಳುಗಳೇ ಸರಿದರೂ ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ಯಾಕೆ ಎಂಬ ಪ್ರಶ್ನೆಗೆ ಉತ್ತರ ಮತ ರಾಜಕಾರಣ ಹಾಗೂ ರಾಜಕೀಯ ಹಿತಾಸಕ್ತಿ. ಮೇಲ್ನೋಟಕ್ಕೆ ಈ ಸ್ಟಿಂಗ್ ಪ್ರಕರಣ ರಾಜಕೀಯ ವ್ಯಕ್ತಿಗಳ ನಡುವಿನ ಪೈಪೋಟಿ ಹಾಗೂ ದ್ವೇಷ ರಾಜಕಾರಣ ಎಂದು ತೋರುತ್ತದಾದರೂ ಸ್ಟಿಂಗ್ ಆಳಕ್ಕಿಳಿದು ನೋಡಿದರೆ ಮತ ಬ್ಯಾಂಕ್ ರಾಜಕಾರಣದ ಬ್ರುಹನ್ನಾಟಕ ಎನ್ನುವುದು ಸ್ಪಷ್ಟವಾಗುತ್ತದೆ.

ಯಾಕೆಂದರೆ ಇನ್ನು ಒಂದೂವರೆ ವರ್ಷದ ನಂತರ ಕರ್ನಾಟಕದಲ್ಲಿ ವಿಧಾನಸಭೆಗೆ ಚುನಾವಣೆ ಇದೆ. ಇದಕ್ಕೆ ಪೂರ್ವಭಾವಿಯಾಗಿ ಮೂರೂ ಪಕ್ಷಗಳೂ ಈಗಲೇ ತೆರೆಮರೆಯಲ್ಲಿ ತಯಾರಿ ನಡೆಸಿವೆ. ಆ ಪಕ್ಷಗಳ ನಾಯಕರುಗಳ ಸಂಚು ವಂಚನೆಯ ಸ್ಕ್ರಿಪ್ಟ್ ಸಿದ್ದವಾಗಿದೆ.‌ ಆ ಸಂಚಿನ ಭಾಗವಾಗಿಯೇ ಈ ಸ್ಟಿಂಗ್ ಎನ್ನುವ ವಿವಾದ ಅತಿಯಾಗುತ್ತಿದೆ. ಅಸಲಿಗೆ ಬೆಂಕಿಯೇ ಇಲ್ಲದೇ ಹೊಗೆ ಎಲ್ಲೆಡೆ ಹರಿದಾಡುತ್ತಿದೆ.

ಸ್ಟಿಂಗ್ ಕೇಂದ್ರಿತ ಈ ಎಲ್ಲಾ ಅನಗತ್ಯ ಬೆಳವಣಿಗೆಯ ಕೇಂದ್ರ ಬಿಂದು ಮಾನ್ಯ ಸಿದ್ದರಾಮಯ್ಯನವರು ಎಂದರೆ ಅಚ್ಚರಿ ಎನ್ನಿಸಬಹುದು. ಆದರೆ ಅದೇ ಸತ್ಯ. ಅದು ಹೇಗೆಂದರೆ.. ಯಾವಾಗ ಸಿದ್ದರಾಮಯ್ಯನವರ ಮೇಲೆ ಸ್ಟಿಂಗ್ ಆರೋಪ ಕೇಳಿ ಬಂತೋ, ಯಾವಾಗ ಬೇನಾಮಿ ವಿಡಿಯೋ ತುಣುಕೊಂದು ಹರಿದಾಡತೊಡಗಿತೋ ಆಗ ಸಹಜವಾಗಿ ಕಳಂಕರಹಿತ ವ್ಯಕ್ತಿತ್ವದ ಅವರಿಗೆ ನೋವಾಯ್ತು. ಆದರೆ ಅವರಿಗಿಂತಾ ಹೆಚ್ಚು ಬೇಸರವನ್ನು ಜೆಡಿಎಸ್ ಬಿಜೆಪಿ ನಾಯಕರು ತೋರಿದರು. ಕುಮಾರಸ್ವಾಮಿಗಳು, ವಿಜಯೇಂದ್ರರವರು ಹಾಗೂ ಇತರ ಬಿಜೆಪಿಗರು ಸಿದ್ದರಾಮಯ್ಯನವರ ವ್ಯಕ್ತಿತ್ವವನ್ನು ಹೊಗಳುತ್ತಾ ಕನಿಕರ ಹಾಗೂ ಕರುಣೆಯನ್ನು ಕ್ಯಾಮರಾಗಳ ಮುಂದೆ ವ್ಯಕ್ತಪಡಿಸತೊಡಗಿದರು.

ಅರೆ.. ಸಿದ್ದರಾಮಯ್ಯನವರನ್ನು ಇನ್ನಿಲ್ಲದಂತೆ ಟೀಕಿಸುತ್ತಾ, ಅವರ ಅಧಿಕಾರದ ಅವಧಿಯಲ್ಲಿ ಮೂಡಾ, ವಾಲ್ಮೀಕಿ ಹಗರಣ ಎಂದು ಕಾಡಿದ ಇದೇ ಸೋ ಕಾಲ್ಡ್ ವಿರೋಧ ಪಕ್ಷದ ನಾಯಕರುಗಳಿಗೆ ಇದ್ದಕ್ಕಿದ್ದಂತೆ ಇಷ್ಟೊಂದು ಪ್ರೀತಿ, ಅಕ್ಕರೆ, ಅಭಿಮಾನ ಹೇಗೆ ಉಕ್ಕಿ ಹರಿಯಿತು ಎಂಬುದು ಬಹುತೇಕರಿಗೆ ಯಕ್ಷ ಪ್ರಶ್ನೆಯಾಯ್ತು.

ಆದರೆ ಇದರ ಹಿಂದಿನ ಮರ್ಮ ಸಿದ್ದಣ್ಣನವರ ಮೇಲಿನ ಅಭಿಮಾನವೂ ಅಲ್ಲಾ, ಕಳಕಳಿ ಕಾಳಜಿಯಂತೂ ಮೊದಲೇ ಅಲ್ಲಾ. ಅದಕ್ಕೆ ಎರಡು ಕಾರಣಗಳಿದ್ದವು. ಮೊದಲನೆಯದು ಸಿಎಂ ಡಿಕೆಶಿ ರವರ ಮೇಲೆ ಸಿದ್ದರಾಮಯ್ಯನವರನ್ನು ಎತ್ತಿ ಕಟ್ಟಿ ಸಿದ್ದರಾಮಯ್ಯನವರ ಇಮೇಜ್ ಹಾಳು ಮಾಡಲು ಡಿಕೆಶಿ ಯವರೇ ತಮ್ಮ ಆಪ್ತ ಪವರ್ ಟಿವಿ ಮುಖ್ಯಸ್ಥ ರಾಕೇಶ್ ಶೆಟ್ಟಿಯವರ ಮೂಲಕ ಈ ಸ್ಟಿಂಗ್ ವಿಡಿಯೋ ಹರಿಯ ಬಿಟ್ಟಿದ್ದಾರೆ ಹಾಗೂ ಈ ವಿಡಿಯೋ ತೋರಿಸಿ ಬ್ಲಾಕ್ಮೇಲ್ ಮಾಡಿ ಸಿಎಂ ಸ್ಥಾನದಿಂದ ಸಿದ್ದಣ್ಣನವರನ್ನು ಕೆಳಗಿಳಿಸಿದ್ದಾರೆ ಎಂಬ ನರೇಶನ್ ಒಂದನ್ನು ಈ ವಿರೋಧಿ ನಾಯಕರು ಸೆಟ್ ಮಾಡತೊಡಗಿದರು. ಸಿದ್ದರಾಮಯ್ಯನವರ ಸ್ವಾಭಿಮಾನವನ್ನೂ ಪ್ರಚೋದಿಸಲು ಆರಂಭಿಸಿದರು. ಇದರಿಂದ ಸಿದ್ದರಾಮಯ್ಯನವರು ಸಿಟ್ಟಿಗೇಳುತ್ತಾರೆ, ಡಿಕೆಶಿ ವಿರುದ್ದ ತಿರುಗಿ ಬೀಳುತ್ತಾರೆ. ರಾಜ್ಯ ಕಾಂಗ್ರೆಸ್ಸಿನಲ್ಲಿ ಬಿರುಕು ಮೂಡುತ್ತದೆ. ಆ ಭಿನ್ನಾಭಿಪ್ರಾಯದ ಲಾಭವನ್ನು ತಾವು ಪಡೆದು ಅಧಿಕಾರಕ್ಕೆ ಬರಬೇಕು ಎನ್ನುವುದು ಜೆಡಿಎಸ್ ಮತ್ತು ಬಿಜೆಪಿಯ ಲೆಕ್ಕಾಚಾರವಾಗಿತ್ತು.

ಇದಕ್ಕಿಂತಲೂ ಅಸಲಿ ಕಾರಣ ಏನೆಂದರೆ ಸಿದ್ದರಾಮಯ್ಯನವರ ಹಿಂದಿರುವ ಅಪಾರ ಸಂಖ್ಯೆಯ ಅಹಿಂದ ಮತಗಳು. ಯಾರು ಏನೇ ಹೇಳಲಿ ಆಗಲೂ ಈಗಲೂ ಸಿದ್ದರಾಮಯ್ಯನವರು ಕರ್ನಾಟಕದಲ್ಲಿ ಏಕೈಕ ಮಾಸ್ ಲೀಡರ್. ಜಾತಿ ಕಾರಣಕ್ಕೆ ಕುರುಬ ಸಮುದಾಯ ಅವರನ್ನು ಬೆಂಬಲಿಸುತ್ತದೆ ಹಾಗೂ ಹಿಂದುಳಿದ ವರ್ಗಗಳ ಬಹುತೇಕ ಸಮುದಾಯ ಸಿದ್ದಣ್ಣನವರ ಹಿಂದಿದೆ. ಅಲ್ಪಸಂಖ್ಯಾತ ಸಮುದಾಯದವರೂ ಜೊತೆಯಾಗುತ್ತಾರೆ. ಆದ್ದರಿಂದ ಸಿದ್ದರಾಮಯ್ಯನವರನ್ನು ದುರಂತ ನಾಯಕ ಎಂದು ಚಿತ್ರಿಸುವುದರೊಂದಿಗೆ ಸ್ಟಿಂಗ್ ಮೂಲಕ ಅವರ ಅಧಿಕಾರವನ್ನು ಡಿಕೆಶಿ ಕಿತ್ತುಕೊಂಡರು ಎಂದು ಪ್ರಚಾರ ಮಾಡುವುದರ ಮೂಲಕ ಸಿದ್ದರಾಮಯ್ಯನವರ ಹಿಂದಿರುವ ಈ ಅಹಿಂದ ಮತದಾರರನ್ನು ಕಾಂಗ್ರೆಸ್ ಪಕ್ಷದಿಂದ ದೂರ ಮಾಡುವುದು ಹಾಗೂ ಅವರನ್ನು ತಮ್ಮ ಪಕ್ಷಗಳತ್ತ ಸೆಳೆಯುವುದು ಈ ಜೆಡಿಎಸ್ ಮತ್ತು ಬಿಜೆಪಿಗರ ತಂತ್ರಗಾರಿಕೆಯಾಗಿತ್ತು. ಹೀಗಾಗಿಯೇ ಸಿದ್ದರಾಮಯ್ಯನವರ ಮೇಲೆ ಕುಮಾರಸ್ವಾಮಿ ಹಾಗೂ ಬಿಜೆಪಿಗರಿಗೆ ಇದ್ದಕ್ಕಿದ್ದಂತೆ ಒಲವು ವ್ಯಕ್ತವಾಗಿದ್ದು. ರಾಜಕೀಯ ಅಂದ್ರೆ ಇದು.

ಆದರೆ.. ಹೀಗೆ ಡಿಕೆಶಿ ಯವರ ಮೇಲೆ ಬಿಟ್ಟ ಈ ಸ್ಟಿಂಗ್ ಎನ್ನುವ ಅಸ್ತ್ರ ಒಂದು ಸುತ್ತು ಸುಳಿದು ಕುಮಾರಸ್ವಾಮಿಯವರ ಬುಡಕ್ಕೆ ಬಂದು ಬಿದ್ದು ಅವರನ್ನು ಸುತ್ತಿಕೊಂಡಿದ್ದು ಮಜವಾಗಿದೆ.

2011 ರಲ್ಲಿ ತನ್ನ ಮೇಲೆ ಸಿದ್ದರಾಮಯ್ಯನವರು ವ್ಯತಿರಿಕ್ತವಾಗಿ ನಡೆದುಕೊಂಡಿದ್ದರು ಎಂದು ಕೇರಳದ ಮಹಿಳೆಯ ಬಾಯಿಂದ 2013 ರಲ್ಲಿ ಹೇಳಿಸಿ ವಿಡಿಯೋ ಮಾಡಿಟ್ಟುಕೊಂಡಿದ್ದ ಪವರ್ ಟಿವಿಯ ರಾಕೇಶ್ ಶೆಟ್ರು ಆ ಸ್ಟಿಂಗ್ ವಿಡಿಯೊ ಮಾಡಿದ್ದು ತಾನೇ ಎಂದು ತನ್ನ ಚಾನೆಲ್ ನಲ್ಲಿ ದಿನಗಂಟಲೇ ಹೇಳಿದ್ದರು. ಕುಮಾರಸ್ವಾಮಿಯವರ ಜನ್ಮ ಜಾಲಾಡಿಸಿದ್ದರು. ಆ ವಿಡಿಯೋ ಬಹಿರಂಗವಾಗಲು ಕುಮಾರಸ್ವಾಮಿಯವರೇ ಕಾರಣ ಎಂದೂ ಆರೋಪಿಸಿದರು.

ಅದ್ಯಾರು ಸಲಹೆ ಕೊಟ್ಟರೊ ಗೊತ್ತಿಲ್ಲಾ, ಸಿದ್ದರಾಮಯ್ಯನವರು ಕೋರ್ಟಿಗೆ ಹೋಗಿ ಆ ವಿಡಿಯೊ ಪ್ರಸಾರ ಮಾಡದಂತೆ ಸ್ಟೇ ತಂದರು. ಪೋಲೀಸ್ ಕಮಿಷನರ್ ಗೆ ದೂರು ಕೊಟ್ಟು ತನಿಖೆಗೆ ಆಗ್ರಹಿಸಿದರು. ಪೊಲೀಸರ ತನಿಖೆ ಹೋಗಿ ದೆಹಲಿಯ ಕುಮಾರಸ್ವಾಮಿಯವರ ಮನೆಯ ಅಂಗಳದಲ್ಲಿ ನಿಂತಿತು. ಕರ್ನಾಟಕ ಹನಿ ಟ್ರ್ಯಾಪ್ ಹೆಸರಲ್ಲಿ ಅಕೌಂಟ್ ತೆರೆದು ವಿಡಿಯೋ ಅಪ್ ಲೋಡ್ ಮಾಡಿದ್ದ ರಿತೇಶ್ ಪಾಂಡೆ ಎನ್ನುವಾತನನ್ನು ಬಂಧಿಸಿ ಕರೆತರಲಾಯ್ತು. ವಿಚಾರಣೆ ಮಾಡಿದಾಗ ವಿನೋದ ಶರ್ಮಾ ಎನ್ನುವಾತನ ಕೈವಾಡ ಇರುವುದು ಗೊತ್ತಾಯ್ತು. ಆತನ ಹಿಂದೆ ಪ್ರಜ್ವಲ್ ಪ್ರಸಾದ್ ಎನ್ನುವ ಜೆಡಿಎಸ್ ಸಾಮಾಜಿಕ ಮಾಧ್ಯಮದ ಸಲಹೆಗಾರ ಇದ್ದಾನೆಂಬುದು ಬೆಳಕಿಗೆ ಬಂತು. ತನಿಖೆ ಚುರುಕಾದಂತೆ ಇವರೆಲ್ಲಾ ತಲೆಮರೆಸಿಕೊಂಡರು. ಅವರಿಗೂ ತಮಗೂ ಸಂಬಂಧವೇ ಇಲ್ಲವೆಂದು ಕುಮಾರಸ್ವಾಮಿಯವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ತಲೆಮರೆಸಿಕೊಂಡವರ ಬಂಧನವಾದ ಮೇಲೆ, ಪೋಲೀಸ್ ತನಿಖೆ ಮುಗಿದಾದ ಮೇಲೆ ಈ ಸ್ಟಿಂಗ್ ವಿಡಿಯೊ ಹರಿಬಿಟ್ಟವರ ಮುಖವಾಡ ಕಳಚಿ ಬೀಳುತ್ತದೆ. ಈಗಾಗಲೇ ಆ ವಿಡಿಯೊದಲ್ಲಿರುವ ಮಹಿಳೆ ಸಿದ್ದರಾಮಯ್ಯನವರನ್ನು ತಾನು ಬೇಟಿಯೇ ಆಗಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ಅದನ್ನು ಆಧರಿಸಿ ಸಿಸಿಬಿ ಪೊಲೀಸರು ಸಿದ್ದರಾಮಯ್ಯನವರಿಗೆ ಕ್ಲೀನ್ ಚಿಟ್ ಕೊಟ್ಟಿದೆ. ಈ ಸ್ಟಿಂಗಿನ ಕಿಂಗ್ ಶೆಟ್ರು ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ. ತನಿಖೆ ಮುಂದುವರೆದಿದೆ.

ಈಗ ವಿಡಿಯೋ ಮಾಡಿದವರು ಯಾರು ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಪವರ್ ಟಿವಿ ಶೆಟ್ರು ತೆಗೆದುಕೊಂಡಿರುವ ಜಾಮೀನು ರದ್ದುಗೊಳಿಸಲು ಸರಕಾರ ಮೇಲ್ಮನವಿ ಸಲ್ಲಿಸಿ ಅವರನ್ನು ಬಂಧಿಸಿ ಸುಳ್ಳು ಸ್ಟಿಂಗ್ ಮಾಡಿದ್ದಕ್ಕೆ ಕಾನೂನು ಕ್ರಮ ಆಗುವಂತೆ ಮಾಡಬೇಕಿದೆ. ಆ ವಿಡಿಯೋ ಹೇಗೆ ಲೀಕಾಯ್ತು, ಯಾರ ಕೈಗೆ ಸೇರಿತು, ಯಾರು ಅದನ್ನು ಅಪ್ಲೋಡ್ ಮಾಡಿದರು ಮತ್ತು ಮಾಡಿಸಿದರು, ಇದರ ಹಿಂದೆ ಇರುವ ಕಾಣದ ಕೈಗಳು ಹಾಗೂ ಮೆದುಳು ಯಾರದು, ಎಂಬುದೆಲ್ಲಾ ತೀಕ್ಷ್ಣ ತನಿಖೆಯಿಂದ ಹೊರಗೆ ಬರಬೇಕಾಗಿದೆ.

ಆದರೆ ಇದು ಪವರ್ ಪಾಲಿಟಿಕ್ಸ್. ಇಲ್ಲಿ ಯಾವ ಸಂಚೂ ಗೋಚರವಾಗುವುದಿಲ್ಲ. ಅವರ ಮೇಲೆ ಇವರು, ಇವರ ಮೇಲೆ ಅವರು ಆರೋಪ ಪ್ರತ್ಯಾರೋಪ, ಕೆಸರೆರಚಾಟ ಮಾಡುತ್ತಾ ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಲೇ ಇರುತ್ತಾರೆ. ಆದರೆ ಈ ಯಾರಿಗೂ ಜನರ ಪರ ಹಿತಾಸಕ್ತಿಯಲ್ಲಿ ಆಸಕ್ತಿ ಇಲ್ಲವೇ ಇಲ್ಲ. ಈಗ ರಾಜ್ಯದಲ್ಲಿ ತೀವ್ರ ಬರ ಇದೆ, ವಿರೋಧ ಪಕ್ಷದವರಿಗೆ ಆ ಕುರಿತು ಕಾಳಜಿ ಇಲ್ಲ. ನ್ಯಾಯಯುತವಾದ ಬೆಲೆಗೆ ರೈತರು ಹತ್ತು ದಿನಗಳಿಂದ ಹೆದ್ದಾರಿಗಳಲ್ಲಿ ನಾನಾ ರೀತಿಯಲ್ಲಿ ಹೋರಾಟ ಮಾಡುತ್ತಲೇ ಇದ್ದಾರೆ, ಅವರ ಬಗ್ಗೆ ಕಾಳಜಿ ಈ ರಾಜಕಾರಣಿಗಳಿಗಿಲ್ಲ. ರಾಜ್ಯ ಸರಕಾರ ಈ ಸಂತ್ರಸ್ತರ ಬೆಂಬಲಕ್ಕೆ ನಿಲ್ಲುತ್ತಿಲ್ಲಾ, ಕೇಂದ್ರ ಸರಕಾರ ಬರ ಪರಿಹಾರ ಕೊಡುತ್ತಿಲ್ಲ, ರೈತರ ಕಬ್ಬಿಗೆ ಬೆಂಬಲ ಬೆಲೆ ನಿಗಧಿ ಮಾಡುತ್ತಿಲ್ಲ. ಕೇಂದ್ರದಲ್ಲಿ ಜೆಡಿಎಸ್ ಬೆಂಬಲಿತ ಬಿಜೆಪಿ ಸರಕಾರವೇ ಇದೆ. ಈ ಸ್ಟಿಂಗ್ ಹಿಂದೆ ಅನಗತ್ಯವಾಗಿ ಬಿದ್ದು ಅನಪೇಕ್ಷಿತ ರಾಜಕಾರಣ ಮಾಡುತ್ತಿರುವ ಕೇಂದ್ರ ಸಚಿವರಾದ ಕುಮಾರಸ್ವಾಮಿ, ಪ್ರಹ್ಲಾದ ಜೋಶಿಯವರಾಗಲಿ ಯಾಕೆ ಮೋದಿಯವರ ಮನ ಒಲಸಿ ಕೇಂದ್ರದಿಂದ ಅನುದಾನ ಹಾಗೂ ಪರಿಹಾರ ಕೊಡಿಸಬಾರದು. ಬಿಜೆಪಿಯ ಸಂಸದರು ಯಾಕೆ ಸುಮ್ಮನಿದ್ದಾರೆ? ಯಾಕೆಂದರೆ ಇವರಿಗೆ ಯಾರಿಗೂ ಕರ್ನಾಟಕದ ಜನರ ಬಗ್ಗೆ ಕಾಳಜಿ ಇಲ್ಲವೇ ಇಲ್ಲ. ಹಾಗೂ ಮೋದಿ ಶಾ ರವರ ಮುಂದೆ ಇವರ ಮಾತಿಗೆ ಕವಡೆ ಕಿಮ್ಮತ್ತಿಲ್ಲ. ಹೀಗಾಗಿ ಜನರ ಗಮನವನ್ನು ಬೇರೆ ಕಡೆ ತಿರುಗಿಸಲು ಈ ಸ್ಟಿಂಗ್ ಎನ್ನುವ ಯಕ್ಕಶ್ಚಿತ್ ವಿವಾದವನ್ನು ದೊಡ್ಡದು ಮಾಡುತ್ತಿದ್ದಾರೆ. ಪ್ರತಿ ದಿನ ಹೇಳಿಕೆಗಳನ್ನು ಕೊಡುತ್ತಾ ಜನರು ಹಾಗೂ ಮಾಧ್ಯಮಗಳ ಪೋಕಸ್ ಸ್ಟಿಂಗ್ ಮೇಲೆಯೇ ಇರುವಂತೆ ನೋಡಿಕೊಳ್ಳುತ್ತಿದ್ದಾರೆ.

ಇಂತಹ ಜನವಿರೋಧಿ ರಾಜಕೀಯ ನಿಜಕ್ಕೂ ಖಂಡನಾರ್ಹ. ಹೀಗೆ ಸಂಚು-ವಂಚನೆ, ಆರೋಪ- ಪ್ರತ್ಯಾರೋಪಗಳಿಂದ ಮತದಾರರನ್ನು ಒಡೆಯುವ ಹಾಗೂ ಸೆಳೆಯುವ ನೀಚ ಪ್ರಯತ್ನಗಳನ್ನು ಈ ರಾಜಕೀಯ ನಾಯಕರು ಪಕ್ಕಕ್ಕಿಟ್ಟು ಜನರ ಅಭ್ಯುದಯ ಮತ್ತು ರಾಜ್ಯದ ಅಭಿವೃದ್ದಿಯತ್ತ ಚಿತ್ತವನ್ನು ಹರಿಸಿದರೆ, ಆಳುವ ಸರಕಾರ ಜನರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರೆ, ವಿರೋಧ ಪಕ್ಷಗಳು ಅಭಿವೃದ್ದಿ ಪಥದಲ್ಲಿ ಸರಕಾರ ನಡೆಯುವಂತೆ ಜನರ ಪರವಾಗಿ ಪ್ರತಿರೋಧ ತೋರಿದರೆ ನಮ್ಮ ರಾಜ್ಯ ಮಾದರಿ ರಾಜ್ಯವಾಗಬಹುದಾಗಿದೆ. ಆದರೆ ಈಗಿನ ವಿಕ್ಷಿಪ್ತ ರಾಜಕೀಯ ಪರಿಸ್ಥಿತಿಯಲ್ಲಿ ಅದೆಲ್ಲಾ ಸಾಧ್ಯವಾ..?

PPeepal Media Desk

Peepal Media Desk

Peepal Media · ಅಂಕಣ ವಿಭಾಗ

ಸಂಬಂಧಿತ ಸುದ್ದಿಗಳು