ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ರಾಜ್ಯ ಕಂದಾಯ ಇಲಾಖೆಯಲ್ಲಿ ಭಾರಿ ವರ್ಗಾವಣೆ: 35 ತಹಶೀಲ್ದಾರ್‌ಗಳಿಗೆ ಹೊಸ ಜವಾಬ್ದಾರಿಏಳು ಮಂದಿಯ ಭೀಕರ ಹತ್ಯೆ ಪ್ರಕರಣ ಶಿರಾಡಿಘಾಟ್ ಕಂದಕದಲ್ಲಿ – ಬೆಚ್ಚಿ ಬೀಳಿಸುವ ಸಂಗತಿE20 ಪೆಟ್ರೋಲ್ ವಿವಾದಕ್ಕೆ ಮತ್ತೊಂದು ತಿರುವು: 20% ಎಥನಾಲ್ ಎಂದ BPCL ಪೋಸ್ಟ್‌ನಲ್ಲಿ ಕಂಡಿದ್ದು 33%; ತಕ್ಷಣವೇ ಟ್ವಿಟ್ ಡಿಲೀಟ್ಟರ್ಕಿಯ ಉಕ್ಕಿನ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 16 ಕಾರ್ಮಿಕರು ಸಾವು, ಹಲವರಿಗೆ ಗಾಯಐಫೋನ್ ಬಿಡಿಭಾಗಗಳ ತಯಾರಿಕಾ ಘಟಕದಲ್ಲಿ ದುರಂತ; ವಿಷಕಾರಿ ಅನಿಲ ಸೇವಿಸಿ ಮೂವರು ಕಾರ್ಮಿಕರು ಸಾವು!ಹಾಸನ DC ಹುದ್ದೆಯಲ್ಲಿ ಮುಂದುವರಿಯಲು ₹75 ಲಕ್ಷ ಲಂಚ – ತನಿಖೆಗೆ HDK ಒತ್ತಾಯದೀಪಾವಳಿ ಪಟಾಕಿ ಹಾವಳಿ; ದೆಹಲಿ ವಾಯುಮಾಲಿನ್ಯದ ನಂತರ ಬೆಂಗಳೂರಿನ ಗಾಳಿ ಕಲುಷಿತ!ಮಾಲಿನ್ಯದಲ್ಲಿ ಶೇ.25ರಷ್ಟು ಏರಿಕೆLPG ಕೆ.ಜಿಗೆ 11 ರೂ ಹೆಚ್ಚಳ ಆಟೋ ಚಾಲಕರಿಗೆ – ಗಾಯದ ಮೇಲೆ ಬರೆಐದು ದಶಕಗಳ ಭಾರತದ ಇತಿಹಾಸಕ್ಕೆ ಸಾಕ್ಷಿಯಾದ ಸೋನಿಯಾ ಗಾಂಧಿ ಆತ್ಮಕಥೆ ಬಿಡುಗಡೆ; ಪುಸ್ತಕ ಮಳಿಗೆಗಳಲ್ಲಿ ಓದುಗರ ಆಸಕ್ತಿ!ಅಗತ್ಯ ವಸ್ತುಗಳ ದರ ಏರಿಕೆಗೆ ಸರ್ಕಾರದ ವಿರುದ್ದ – ಹೈಕೋರ್ಟ್ ಗರಂಕಲಬುರ್ಗಿ, ಗೌರಿ ಲಂಕೇಶ್ ಹತ್ಯೆಯ ಹಿಂದೆ ಸಂಘ ಪರಿವಾರ ಕೈವಾಡ – ಪ್ರಿಯಾಂಕ್ ಖರ್ಗೆಎಐ ಯುಗದಲ್ಲಿ ನಕಲಿ ಚಾಟ್ ಸೃಷ್ಟಿಸಿ ಮಾನಹಾನಿ ಮಾಡುವುದು ಕುಮಾರಸ್ವಾಮಿಯವರಿಗೆ ಶೋಭೆಯಲ್ಲ: ಕೆ. ಎಂ. ಶಿವಲಿಂಗೇಗೌಡ44,250 ಸಜೀವ ಗುಂಡುಗಳ ವಶ: ಆರ್‌ಎಸ್‌ಎಸ್‌–ಬಿಜೆಪಿಗೆ 5 ಪ್ರಶ್ನೆಗಳನ್ನು ಮುಂದಿಟ್ಟ ಪ್ರಿಯಾಂಕ್ ಖರ್ಗೆಬೆಂಗಳೂರಿನಲ್ಲಿ ಪಟಾಕಿ ಸಿಡಿತಕ್ಕೆ 50ಕ್ಕೂ ಹೆಚ್ಚು ಜನರ ಕಣ್ಣಿಗೆ ಗಾಯ; ಗಾಯಾಳುಗಳಲ್ಲಿ ಮಕ್ಕಳ ಸಂಖ್ಯೆಯೂ ಅಧಿಕಯಾವುದೇ ಭಿನ್ನಾಭಿಪ್ರಾಯವಿಲ್ಲ, ಸಿದ್ದರಾಮಯ್ಯ ನಮ್ಮ ನಾಯಕ: ಊಹಾಪೋಹಗಳಿಗೆ ಡಿ.ಕೆ. ಶಿವಕುಮಾರ್ ಸ್ಪಷ್ಟನೆಟಿಪ್ಪು ಜಯಂತಿಯನ್ನು ಜನರು, ಸಂಘ-ಸಂಸ್ಥೆಗಳು ಸ್ವಯಂ ಆಚರಿಸಬಹುದು; ಸರ್ಕಾರ ಅಗತ್ಯ ಸಹಕಾರ ಕೊಡಲಿದೆ: ಯು.ಟಿ. ಖಾದರ್2013ರ ಪ್ರತಿಭಟನೆ ಪ್ರಕರಣ: ಮಮತಾ ಬ್ಯಾನರ್ಜಿ ಹೇಳಿಕೆ ದಾಖಲಿಸಿಕೊಳ್ಳಲು ದೆಹಲಿ ಪೊಲೀಸರಿಂದ ನೋಟಿಸ್ರಸ್ತೆ ಮಧ್ಯೆ ಪಟಾಕಿ ಸಿಡಿಸುವುದನ್ನು ಪ್ರಶ್ನಿಸಿದ ಪೊಲೀಸ್ ಅಧಿಕಾರಿ ಸಾವು: ಆರು ಮಂದಿ ಬಂಧನದೀಪಾವಳಿ ಪಟಾಕಿ ಅಬ್ಬರ; ದೆಹಲಿಯಲ್ಲಿ ಉಸಿರುಗಟ್ಟುವ ಸ್ಥಿತಿ! ಹಲವು ಪ್ರದೇಶಗಳಲ್ಲಿ AQI 350 ದಾಟಿ ತೀವ್ರ ಮಾಲಿನ್ಯಸಂಸತ್‌ನಲ್ಲಿ ಮತ್ತೆ ಕ್ಷೇತ್ರ ಪುನರ್ವಿಂಗಡಣೆ ಮಸೂದೆ?: 2029ರ ಲೋಕಸಭೆ ಚುನಾವಣೆಗೂ ಮುನ್ನ ಅಂಗೀಕಾರಕ್ಕೆ ಕೇಂದ್ರದ ಬಿರುಸಿನ ಕಸರತ್ತು

ಏಳು ಮಂದಿಯ ಭೀಕರ ಹತ್ಯೆ ಪ್ರಕರಣ ಶಿರಾಡಿಘಾಟ್ ಕಂದಕದಲ್ಲಿ – ಬೆಚ್ಚಿ ಬೀಳಿಸುವ ಸಂಗತಿ

ಏಳು ಮಂದಿಯ ಭೀಕರ ಹತ್ಯೆ ಪ್ರಕರಣ ಶಿರಾಡಿಘಾಟ್ ಕಂದಕದಲ್ಲಿ – ಬೆಚ್ಚಿ ಬೀಳಿಸುವ ಸಂಗತಿ

ಹಾಸನ: ಬೆಂಗಳೂರಿನಲ್ಲಿ ಒಂದೇ ಕುಟುಂಬದ ಏಳು ಮಂದಿಯನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಶಿರಾಡಿಘಾಟ್‌ನ ಮಾರನಹಳ್ಳಿ ಸಮೀಪದ ಕಂದಕಕ್ಕೆ ಎಸೆಯಲಾಗಿದ್ದ ನಳಿನಿ ಹಾಗೂ ಶಂಕರ್ ಅವರ ಮೃತದೇಹಗಳನ್ನು ಪೊಲೀಸರು ಹೊರತೆಗೆದಿದ್ದಾರೆ.

ಕೊಲೆ ಪ್ರಕರಣದ ಆರೋಪಿ ಇಂದುಶೇಖರ್ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಶವಗಳಿಗಾಗಿ ಶೋಧ ಕಾರ್ಯಾಚರಣೆ ನಡೆಸಿದರು. ಆದರೆ, ಶವಗಳನ್ನು ಎಸೆದಿದ್ದ ನಿಖರ ಸ್ಥಳವನ್ನು ತೋರಿಸದೆ ಆರೋಪಿಯು ಪೊಲೀಸರನ್ನು ಹಲವು ಕಡೆ ಅಲೆದಾಡಿಸಿದ್ದಾನೆ. ಐದಾರು ಸ್ಥಳಗಳನ್ನು ತೋರಿಸಿ ತನಿಖಾಧಿಕಾರಿಗಳನ್ನು ದಾರಿ ತಪ್ಪಿಸಲು ಯತ್ನಿಸಿದ್ದಾನೆ ಎನ್ನಲಾಗಿದೆ. ಕೊನೆಗೆ ಶವಗಳನ್ನು ಎಸೆದಿದ್ದ ಸ್ಥಳವನ್ನು ತೋರಿಸಿದ್ದಾನೆ.

ಮಲ್ಲೇಶ್ವರಂ ಎಎಸ್ಪಿ ಪ್ರಭಾವತಿ ಅವರ ನೇತೃತ್ವದಲ್ಲಿ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮಾರನಹಳ್ಳಿ ಸಮೀಪ ಕಾರ್ಯಾಚರಣೆ ನಡೆಯಿತು. ಸುಮಾರು 100 ಅಡಿ ಆಳದ ಕಂದಕಕ್ಕೆ ಹಗ್ಗದ ಸಹಾಯದಿಂದ ಇಳಿದ ಪೊಲೀಸರು ನಳಿನಿ ಮತ್ತು ಶಂಕರ್ ಅವರ ಮೃತದೇಹಗಳನ್ನು ಹೊರತೆಗೆದರು. ನಂತರ ಮೃತದೇಹಗಳನ್ನು ಆಂಬ್ಯುಲೆನ್ಸ್ ಮೂಲಕ ಹಾಸನದ ಹಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಯಿತು. ಆರೋಪಿ ಇಂದುಶೇಖರ್‌ನನ್ನು ಪೊಲೀಸರು ಮೃತದೇಹಗಳನ್ನು ಹೊರತೆಗೆಯುವ ಕಾರ್ಯಾಚರಣೆ ಆರಂಭಕ್ಕೂ ಸುಮಾರು ಒಂದು ಗಂಟೆ ಮುಂಚಿತವಾಗಿಯೇ ಸ್ಥಳದಿಂದ ಕರೆದೊಯ್ದಿದ್ದರು. ಮೃತರ ಕುಟುಂಬಸ್ಥರು ಆಂಬ್ಯುಲೆನ್ಸ್ ಹಿಂಬಾಲಿಸಿ ತೆರಳಿದರು.

ಸ್ಥಳದಲ್ಲಿ ನಳಿನಿ ಅವರ ಕುಟುಂಬಸ್ಥರು ಉಪಸ್ಥಿತರಿದ್ದು, ಪೊಲೀಸರು ಮುಂದಿನ ಕಾನೂನು ಪ್ರಕ್ರಿಯೆ ಕೈಗೊಂಡಿದ್ದಾರೆ.

ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌

Peepal Media · ಬ್ರೇಕಿಂಗ್ ಸುದ್ದಿ ವಿಭಾಗ

ಸಂಬಂಧಿತ ಸುದ್ದಿಗಳು